ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಲವು ವಿಧದ ಕಾರುಗಳಿವೆ. ಆದರೆ ಮಧ್ಯಮ ಮತ್ತು ಕೆಳ ವರ್ಗದ ಜನರಿಗೆ ಕಾರು ಖರೀದಿಸುವುದು ದೊಡ್ಡ ಸವಾಲಾಗಿದೆ. ತಾವು ಕೂಡಿಟ್ಟ ಹಣದಲ್ಲಿ ಒಂದು ಕಾರು ಖರೀದಿಸಬೇಕೆಂಬ ಕನಸನ್ನು ಹೊಂದಿರುತ್ತಾರೆ.

ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ಅದೇ ರೀತಿ ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ಮಧ್ಯಮ ವರ್ಗದ ಕುಟುಂಬದ ಮಗ ಗಿಫ್ಟ್ ನೀಡುವ ವೀಡಿಯೊವೊಂದು ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಫೋಟೊವಾಲ್ಲಾ ಅಪ್‌ಲೋಡ್ ಮಾಡಿದ್ದಾರೆ. ಬಿಳಿ ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ತಮ್ಮ ಕುಟುಂಬವು ಸ್ಕೋಡಾ ಡೀಲರ್‌ಶಿಪ್‌ಗೆ ಆಗಮಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಈ ಕುಟುಂಬವು ಅವರ ಹೊಸ ಕುಶಾಕ್ ಎಸ್‍ಯುವಿ ಕಾರನ್ನು ಬಹಿರಂಗಪಡಿಸುತ್ತದೆ. ನಂತರ ಕೇಕ್ ಅನ್ನು ಕತ್ತರಿಸುತ್ತಾರೆ.

ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ನಂತರ ತಂದೆ ತನ್ನ ಮಗನನ್ನು ತಬ್ಬಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅವರು ತುಂಬಾ ಭಾವುಕರಾಗುತ್ತಾರೆ. ನಂತರ ಮಗ ತನ್ನ ತಂದೆ ಮತ್ತು ತಾಯಿಗಾಗಿ ಕಾರನ್ನು ಖರೀದಿಸುವುದು ತನ್ನ ಕನಸಾಗಿತ್ತು ಎಂದು ವಿವರಿಸುತ್ತಾರೆ. ಮೊದಲಿಗೆ, ಅವರು ಕಾರನ್ನು ಬುಕ್ ಮಾಡಲು ಕಷ್ಟಪಡುತ್ತಾರೆ.

ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ಅಂತಿಮವಾಗಿ, ಅವರು ಕುಶಾಕ್ ಅನ್ನು ಬುಕ್ ಮಾಡಿದರು ಮತ್ತು ವಿತರಣೆಗಾಗಿ ಕಾಯುತ್ತಿದ್ದರು. ಇದೀಗ ಅವರ ಕುಟುಂಬದ ಸದಸ್ಯರೆಲ್ಲರೂ ತೆರಳಿ ಸ್ಖೋಡಾ ಕುಶಾಕ್ ಎಸ್‍ಯುವಿಯ ವಿತರಣೆಯನ್ನು ಪಡೆದಿದ್ದಾರೆ. ನಂತರ ತಂದೆ ತನ್ನ ಕುಟುಂಬದೊಂದಿಗೆ ಕುಶಾಕ್ ಎಸ್‍ಯುವಿ ಕಾರನ್ನು ಚಲಾಯಿಸುತ್ತಾರೆ. ಇವರು ಸ್ಕೋಡಾ ಕುಶಾಕ್ ಎಸ್‍ಯುವಿಯ ಲೋ-ಸ್ಪೆಕ್ ರೂಪಾಂತರವಾಗಿದೆ.

ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ಸ್ಕೋಡಾ ಕಂಪನಿಯು ತನ್ನ ಬಹುನೀರಿಕ್ಷಿತ ಕುಶಾಕ್ ಎಸ್‍ಯುವಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಸ್ಕೋಡಾ ಕುಶಾಕ್ ಎಸ್‌ಯುವಿ ಭಾರತದಲ್ಲಿ ಹೆಚ್ಚು ಸ್ಪರ್ಧಾತ್ಮಕ ಮಿಡ್ ಸೈಜ್ ಎಸ್‍ಯುವಿ ವಿಭಾಗವನ್ನು ಪ್ರವೇಶಿಸಿದೆ. ಹೊಸ ಸ್ಕೋಡಾ ಕುಶಾಕ್ ಎಸ್‌ಯುವಿಯ ಆರಂಭಿಕ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.10.49 ಲಕ್ಷಗಳಾಗಿದೆ.

ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ಸ್ಕೋಡಾ ಕಾರುಗಳ ಬೆಲೆಯು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಅಧಿಕವಾಗಿರುತ್ತದೆ. ಆದರೆ ಈ ಬಾರಿ ಸ್ಕೋಡಾ ತನ್ನ ಕುಶಾಕ್ ಎಸ್‍ಯುವಿಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಪರಿಚಯಿಸಿದೆ. ಇದರಿಂದ ಈ ಹೊಸ ಕುಶಾಕ್ ಎಸ್‍ಯುವಿಯು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಫೋಕ್ಸ್‌ವ್ಯಾಗನ್ ಗ್ರೂಪ್ ಭಾರತದಲ್ಲಿ ತಯಾರಿಸಿದ ಮೊದಲ ಎಸ್‍ಯುವಿ ಸ್ಕೋಡಾ ಕುಶಾಕ್ ಕುಶಾಕ್ ಆಗಿ, ಇಂಡಿಯಾ 2.0 ಯೋಜನೆಯಡಿ ಉತ್ಪಾದಿಸಲ್ಪಟ್ಟ ಮೊದಲ ವಾಹನ ಇದಾಗಿದೆ.

ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ದೇಶಿಯ ಮಾರುಕಟ್ಟೆಯಲ್ಲಿ ಸ್ಕೋಡಾ ಪ್ರೀಮಿಯಂ ಮತ್ತು ಕೈಗೆಟುಕುವ ಕಾರು ಬ್ರ್ಯಾಂಡ್ ಆಗಿ ಮಾಡಲು ಕುಶಾಕ್ ಸಹಾಯ ಮಾಡುತ್ತದೆ.ಸ್ಕೋಡಾ ಕುಶಾಕ್ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಎಸ್‍ಯುವಿಯಾಗಿದೆ. ಈ ಎಸ್‍ಯುವಿಯ ಹೊರಭಾಗಾ ವಿನ್ಯಾಸವು ವಿಷನ್ ಇನ್ ಕೆನ್ಸೆಪ್ಟ್ ಅನ್ನು ಆಧರಿಸಿದೆ. ಇದನ್ನು ಕಳೆದ ವರ್ಷದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು.

ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ಈ ಸ್ಕೋಡಾ ಕುಶಾಕ್ ಎಸ್‍ಯುವಿಯು ಸ್ಪ್ಲೀಟ್ ಹೆಡ್‌ಲ್ಯಾಂಪ್‌ಗಳು, ಸ್ಕೋಡಾದ ಸಿಗ್ನೇಚರ್ ಫ್ರಂಟ್ ಗ್ರಿಲ್, ಅಗ್ರೇಸಿವ್ ಫ್ರಂಟ್ ಬಂಪರ್ ಮತ್ತು ಎಲ್-ಆಕಾರದ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿವೆ, ಇದು ಸಿಲ್ವರ್ ಫಿನಿಶಿಂಗ್ ಹೊಂದಿರುವ ರೂಫ್ ರೈಲ್ ಗಳನ್ನು ಹೊಂದಿವೆ. ಸುತ್ತಲೂ ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್ ಅನ್ನು ಹೊಂದಿದೆ ಈ ಎಸ್‍ಯುವಿಯು 2,651 ಎಂಎಂ ವ್ಹೀಲ್ ಬೇಸ್ ಹೊಂದಿದ್ದು, ಇದು ತನ್ನ ವಿಭಾಗದಲ್ಲಿ ದೊಡ್ಡದಾಗಿದೆ.

ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ಈ ಹೊಸ ಸ್ಕೋಡಾ ಎಸ್‍ಯುವಿಯು ಒಟ್ಟಾರೆ ಆಯಾಮಗಳ ದೃಷ್ಟಿಯಿಂದ ತನ್ನ ಪ್ರತಿಸ್ಪರ್ಧಿಗಳಿಗಿಂತ ಚಿಕ್ಕದಾಗಿದೆ; ಇದರ ಉದ್ದ 4,221 ಎಂಎಂ, ಅಗಲ 1,760 ಎಂಎಂ ಮತ್ತು 1,612 ಎಂಎಂ ಎತ್ತರವನ್ನು ಹೊದಿದೆ. ಇನ್ನು 188 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.ಸ್ಕೋಡಾ ಕುಶಾಕ್ ಎಸ್‍ಯುವಿಯು ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್, ಕಾರ್ಬನ್ ಸ್ಟೀಲ್, ಹನಿ ಆರೆಂಜ್ ಮತ್ತು ಟೊರೆಂಡ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಈ ಎಸ್‍ಯುವಿಯ ಇಂಟಿರಿಯರ್ ವಿನ್ಯಾಸವು ಕ್ಲಾಸಿಕ್ ಮತ್ತು ಪ್ರೀಮಿಯಂ ಆಗಿ ಕಾಣುತ್ತದೆ. ಡಾರ್ಕ್ ಇಂಟಿರಿಯರ್ ಥೀಮ್ ಆಕರ್ಷಕವಾಗಿದೆ. ಈ ಎಸ್‍ಯುವಿಯ ಕ್ಯಾಬಿನ್‌ನಲ್ಲಿ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಮತ್ತು ಎರಡು-ಸ್ಪೀಕ್ ಸ್ಟೀಯರಿಂಗ್ ವ್ಹೀಲ್ ಮತ್ತು ಮಧ್ಯದ ಕನ್ಸೋಲ್‌ನಲ್ಲಿ ಆಯತಾಕಾರದ ಎಸಿ ವೆಂಟ್ಸ್ ಅನ್ನು ಹೊಂದಿದೆ,

ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ಹೊಸ ಕುಶಾಕ್ ಎಸ್‍ಯುವಿಯಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಕನೆಕ್ಟಿವಿಟಿ ಕಾರ್ ಟೆಕ್, ಎಲೆಕ್ಟ್ರಿಕ್ ಚಾಲಿತ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಂತ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಒಳಗೊಂಡಿದೆ.

ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ಇದರೊಂದಿಗೆ ಪವರ್-ಆಪರೇಟೆಡ್ ಟೈಲ್‌ಗೇಟ್ (ಹ್ಯಾಂಡ್ಸ್-ಫ್ರೀ) ನಂತಹ ಸಾಕಷ್ಟು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಕೀ ಲೆಸ್ ಎಂಟ್ರಿ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಕೂಲ್ಡ್ ಗ್ಲೋವ್‌ಬಾಕ್ಸ್, ವೆಂಟಿಲೆಟಡ್ ಫ್ರಂಟ್ ಸೀಟ್ ಮತ್ತು ಇತರ ಫೀಚರ್ಸ್ ಗಳನ್ನು ಒಳಗೊಂಡಿವೆ.

ತಂದೆಯ ಕನಸಿನ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಮಗ

ಕುಶಾಕ್ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೊದಲನೆಯದು 1.0-ಲೀಟರ್ ಟರ್ಬೊ-ಪೆಟ್ರೋಲ್ ಮೋಟರ್ ಎಂಜಿನ್ ಆಗಿದೆ, ಈ ಎಂಜಿನ್ 108 ಬಿಎಚ್‌ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಎಂಟಿ ಮತ್ತು 6-ಸ್ಪೀಡ್ ಎಟಿಗೆ ಜೋಡಿಸಲಾಗಿದೆ. ಇದರೊಂದಿಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

Most Read Articles

Kannada
English summary
Son gifted skoda kushaq suv to his dad details
Story first published: Friday, October 15, 2021, 20:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X