ಅಪ್ಪನಿಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಮಗ

ಪೋಷಕರು ತಮ್ಮ ಮಕ್ಕಳಿಗೆ ಬೈಕ್ ಅಥವಾ ಕಾರ್ ಅನ್ನು ಗಿಫ್ಟ್ ನೀಡುವುದು ಮಾಮೂಲಿ. ಹಾಗೆಯೇ, ಮಕ್ಕಳು ಸಹ ತಮ್ಮ ಪೋಷಕರಿಗೆ ಬೈಕ್ ಅಥವಾ ಕಾರುಗಳನ್ನು ಉಡುಗೊರೆಯಾಗಿ ನೀಡುವ ಸುದ್ದಿಗಳು ವರದಿಯಾಗುತ್ತಿರುತ್ತವೆ. ಈಗ ಇದೇ ಸಾಲಿಗೆ ಸೇರುವ ಮತ್ತೊಂದು ವೀಡಿಯೊವನ್ನು ಬಿಡುಗಡೆಗೊಳಿಸಲಾಗಿದೆ.

ಅಪ್ಪನಿಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಮಗ

ಈ ವೀಡಿಯೋದಲ್ಲಿ ಮಗನೊಬ್ಬ ತನ್ನ ತಂದೆಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ. ಮಗನಿಂದ ಉಡುಗೊರೆಯನ್ನು ಪಡೆದ ನಂತರ ತಂದೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ವೀಡಿಯೊವನ್ನು ಮೆಷಿನ್ ಡೈರೀಸ್ ಎಂಬ ಯೂ ಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ.

ಅಪ್ಪನಿಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಮಗ

ತನ್ನ ತಂದೆಗೆ ಏನು ಉಡುಗೊರೆ ನೀಡಲಿದ್ದೇನೆ ಎಂದು ಮಗ ಹೇಳುವುದರೊಂದಿಗೆ ವೀಡಿಯೊ ಆರಂಭವಾಗುತ್ತದೆ. ತನ್ನ ತಂದೆಗೆ ಉಡುಗೊರೆ ನೀಡಲು ಬೆಂಗಳೂರಿನ ಇಂದಿರಾ ನಗರದಲ್ಲಿರುವ ಶೋ ರೂಂನಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಬುಕ್ ಮಾಡಿದ್ದರು.

ಅಪ್ಪನಿಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಮಗ

ಈ ವೀಡಿಯೊದಲ್ಲಿ ಬೈಕ್ ಅನ್ನು ತಲುಪಿಸುವ ದೃಶ್ಯಗಳನ್ನು ಕಾಣಬಹುದು. ಅವರ ತಂದೆ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ಶೋರೂಂನಿಂದ ಬೈಕ್ ಅನ್ನು ತಲುಪೀಸಲು ಸುಮಾರು 4 ಗಂಟೆಗಳು ಬೇಕಾಗುತ್ತವೆ.

ಅಪ್ಪನಿಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಮಗ

ಬೈಕ್ ತಲುಪಿಸಿದ ನಂತರ ಮಗ ಸಹ ಮೈಸೂರಿಗೆ ತೆರಳಿದರು. ಅವರು ಮೈಸೂರು ತಲುಪಿದಾಗ ರಾತ್ರಿಯಾಗಿತ್ತು. ಅಲ್ಲಿ ತಲುಪಿದ ನಂತರ ತನ್ನ ತಂದೆಯನ್ನು ಪಾರ್ಕಿಂಗ್ ಸ್ಥಳಕ್ಕೆ ಬರಲು ಹೇಳುತ್ತಾರೆ. ತಂದೆ ಕೆಳಗೆ ಬರುವಷ್ಟರಲ್ಲಿ ಬೈಕ್ ಆನ್ನು ಅವರ ಕಾರಿನ ಮುಂದೆ ನಿಲ್ಲಿಸಲಾಗಿತ್ತು.

ಅಪ್ಪನಿಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಮಗ

ತಂದೆಯ ಪ್ರತಿಕ್ರಿಯೆಯನ್ನು ನೋಡಲು ಪಿಲ್ಲರ್ ನ ಹಿಂದೆ ಅವಿತು ಕೊಳ್ಳುತ್ತಾರೆ. ಹೊಸ ಬೈಕ್ ಅನ್ನು ನೋಡುತ್ತಿದ್ದಂತೆ ಅವರ ತಂದೆ ಸಂತೋಷದಿಂದ ನಗುತ್ತಾರೆ. ನಂತರ ಹೊಸ ಬೈಕಿಗೆ ಮುತ್ತಿಡುತ್ತಾರೆ. ನಂತರ ಮಗನ ಬಳಿ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿ ಕೇಳುತ್ತಾರೆ.

ತನ್ನ ಮಗ ಕೆಲವು ದಿನಗಳ ಹಿಂದೆ ತನ್ನ ಬೈಕ ಅನ್ನು ಬುಕ್ಕಿಂಗ್ ಮಾಡಿದ್ದನು. ಶೋರೂಂನಿಂದ ಇಲ್ಲಿಗೆ ತಂದಿದ್ದಾನೆ ಎಂದು ಹೇಳಿ ಹೊಸ ಬೈಕಿನಲ್ಲಿ ರೈಡಿಗೆ ತೆರಳುತ್ತಾರೆ. ಇದರಿಂದ ಅವರು ರಾಯಲ್ ಎನ್‌ಫೀಲ್ಡ್ ಬೈಕ್‌ಗಾಗಿ ಕಾದಿದ್ದರು ಎಂಬುದನ್ನು ತಿಳಿಯಬಹುದು.

ಅಪ್ಪನಿಗೆ ನೆಚ್ಚಿನ ಬೈಕ್ ಗಿಫ್ಟ್ ನೀಡಿದ ಮಗ

ಬಿಎಸ್ -6 ಎಂಜಿನ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ ಅನ್ನು ಆವರಿಗೆ ಉಡುಗೊರೆಯಾಗಿ ನೀಡಲಾಗಿದೆ. ಇದು ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್, ಕಾರ್ಬನ್ ಸೆನ್ಸರ್ ಗಳನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್ ತನ್ನ ಬಳಿಯಿದ್ದ ಬಿಎಸ್ -4ನ ಎಲ್ಲಾ ವಾಹನಗಳನ್ನು ಮಾರಾಟ ಮಾಡಿದೆ. ಈ ಮೂಲಕ ಈ ಮೈಲಿಗಲ್ಲು ತಲುಪಿದ ಮೊದಲ ದ್ವಿಚಕ್ರ ವಾಹನ ಕಂಪನಿಯಾಗಿದೆ.

Article Published On: Monday, March 23, 2020, 12:58 [IST]
English summary
Son gifts father a Royal Enfield Classic 350 BS6. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+