Just In
Don't Miss!
- Sports
ಐಪಿಎಲ್ 2021: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ, ದಿನಾಂಕ, ಸಮಯ ಹಾಗೂ ಸ್ಥಳ
- Movies
ರಘು ಗೌಡಗೆ ಬಿಗ್ ಗಿಫ್ಟ ಕೊಟ್ಟು ಮನೆಯಿಂದ ಹೊರಬಂದ ಧನುಶ್ರೀ
- News
"ಸಿಡಿ ಸ್ಫೋಟ" ದೂರಿನಿಂದ ದೂರ ಸರಿಯುವ ಕಲ್ಲಹಳ್ಳಿ ಮಾರ್ಗ ಬಂದ್?
- Finance
20 ತಿಂಗಳ ಬಳಿಕ ಗರಿಷ್ಠ ಮಟ್ಟ ತಲುಪಿದ ಕಚ್ಚಾ ತೈಲ ಬೆಲೆ
- Lifestyle
ಯಾವಾಗ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು?
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಂದೆಗೆ ನೆಚ್ಚಿನ ಕಾರನ್ನು ಉಡುಗೊರೆಯಾಗಿ ನೀಡಿದ ಮಗ
ಸ್ವಂತ ಕಾರು ಖರೀದಿಸುವುದು ಹಲವರ ಕನಸು. ಇನ್ನೂ ಕೆಲವರಿಗೆ ತಮ್ಮ ಪ್ರೀತಿ ಪಾತ್ರರಿಗೆ ಕಾರ್ ಅನ್ನು ಉಡುಗೊರೆಯಾಗಿ ನೀಡಬೇಕೆಂಬ ಕನಸಿರುತ್ತದೆ. ಮಗನೊಬ್ಬ ತನ್ನ ತಂದೆಗೆ ಹ್ಯುಂಡೈ ಕ್ರೆಟಾ ಕಾರ್ ಅನ್ನು ಉಡುಗೊರೆಯಾಗಿ ನೀಡಿ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾನೆ.

ತಂದೆಗೆ ಕಾರು ಉಡುಗೊರೆಯಾಗಿ ನೀಡುತ್ತಿರುವ ಮಗ ಈ ಎಲ್ಲಾ ಘಟನೆಗಳನ್ನು ವೀಡಿಯೊ ಮಾಡಿದ್ದಾನೆ. ಈ ವೀಡಿಯೊವನ್ನು ಧರ್ಮನ್ ಪುರೋಹಿತ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಪೋಸ್ಟ್ ಮಾಡಲಾಗಿದೆ. ಮಗ ತನ್ನ ತಂದೆಗೆ ಇಷ್ಟವಾಗುವ ಕಾರನ್ನು ಆರಿಸುವುದು ಸೇರಿದಂತೆ ಹಲವು ಘಟನೆಗಳನ್ನು ಈ ವೀಡಿಯೊ ತೋರಿಸುತ್ತದೆ.

ಕಾರುಗಳನ್ನು ಪ್ರೀತಿಸುವ ತನ್ನ ತಂದೆಗೆ ಕಾರನ್ನು ಉಡುಗೊರೆಯಾಗಿ ನೀಡಲು ಬಯಸುವ ಕನಸನ್ನು ಮಗ ವಿವರಿಸುವುದರೊಂದಿಗೆ ಈ ವೀಡಿಯೊ ಆರಂಭವಾಗುತ್ತದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ವೀಡಿಯೊದಲ್ಲಿರುವ ಮಾಹಿತಿಯ ಪ್ರಕಾರ ಆ ತಂದೆ ಹೊಸ ಕಾರುಗಳನ್ನು ತುಂಬಾ ಇಷ್ಟಪಡುತ್ತಾರೆ. ಅವರು ಹೊಸ ಕಾರುಗಳನ್ನು ನೋಡಿದ ತಕ್ಷಣ ಆ ಕಾರುಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ.

ಹೊಸ ಕಾರು ಖರೀದಿಸಬೇಕೆಂಬುದು ಅವರ ಕನಸು. ಆದರೆ ಹಣಕಾಸಿನ ತೊಂದರೆಯಿಂದಾಗಿ ಅವರ ಕನಸು ನೆರವೇರಲಿಲ್ಲ. ಈ ಕಾರಣಕ್ಕೆ ಅವರ ಮಗ ಅವರಿಗೆ ಹೊಸ ಕಾರ್ ಅನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾನೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ತಂದೆ, ಮಗ ಇಬ್ಬರೂ ತಮ್ಮ ಬಜೆಟ್‌ಗೆ ಸೂಕ್ತವಾದ ಕಾರನ್ನು ಹುಡುಕಲಾರಂಭಿಸಿದ್ದಾರೆ. ಮೊದಲು ಟಾಟಾ ಹ್ಯಾರಿಯರ್ ಕಾರ್ ಅನ್ನು ಆಯ್ಕೆ ಮಾಡಿಕೊಂಡರೂ, ತುಂಬಾ ದೊಡ್ಡ ಕಾರು ಎಂಬ ಕಾರಣಕ್ಕೆ ಟಾಟಾ ನೆಕ್ಸಾನ್ ಕಾರಿನತ್ತ ತೆರಳಿದ್ದಾರೆ.

ಕೊನೆಗೆ ಹ್ಯುಂಡೈ ಕ್ರೆಟಾ ಕಾರ್ ಅನ್ನು ಆಯ್ಕೆ ಮಾಡಿ, ಹ್ಯುಂಡೈ ಡೀಲರ್ ಬಳಿ ತೆರಳಿ ಕ್ರೆಟಾ ಕಾರ್ ಅನ್ನು ಬುಕ್ ಮಾಡಿದ್ದಾರೆ. ಕೆಲವು ದಿನಗಳ ನಂತರ ಅವರು ಬುಕ್ ಮಾಡಿದ್ದ ಕ್ರೆಟಾ ಕಾರು ಡೀಲರ್ ಬಳಿ ಬಂದಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ತಂದೆ ಮಗ ಇಬ್ಬರೂ ಡೀಲರ್ ಬಳಿ ತೆರಳಿ ಕಾರನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ. ಆ ವೇಳೆ ಆ ತಂದೆಯ ಮುಖದಲ್ಲಿ ಕಾಣಿಸಿಕೊಂಡ ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುವುದಿಲ್ಲ.

ಅವರು ಕಾರಿನ ಸುತ್ತಲೂ ಪರಿಶೀಲಿಸಿ, ಸ್ವಲ್ಪ ಹೊತ್ತು ಕಾರಿನಲ್ಲಿಯೇ ಕುಳಿತುಕೊಂಡಿದ್ದಾರೆ. ಅವರಿಗೆ ಮುಂದಿನ ವಾರ ಕಾರ್ ಅನ್ನು ವಿತರಿಸಲಾಗುವುದು ಎಂದು ಡೀಲರ್ ತಿಳಿಸಿದ್ದಾರೆ. ಕಾರಿನ ವಿತರಣೆ ಪಡೆಯುವ ದಿನ ಮಳೆಯಾಗುತ್ತಿತ್ತು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು
ಆದರೂ ಆ ಕುಟುಂಬದವರು ಆಟೋ ರಿಕ್ಷಾ ಮೂಲಕ ಶೋರೂಂಗೆ ಧಾವಿಸಿದ್ದಾರೆ. ಕಾರನ್ನು ಪಡೆಯುವ ಮುನ್ನ ಸಂಬಂಧಪಟ್ಟ ಎಲ್ಲಾ ದಾಖಲೆಗಳಿಗೆ ಸಹಿ ಮಾಡಿದ್ದಾರೆ. ಕಾರು ವಿತರಣೆ ಪಡೆದ ನಂತರ ಆ ಕುಟುಂಬದ ಸದಸ್ಯರ ಮುಖದಲ್ಲಿ ಕಾಣಿಸಿಕೊಂಡ ಸಂತೋಷವನ್ನು ವೀಡಿಯೊದಲ್ಲಿ ಕಾಣಬಹುದು.

ಕಾರಿನ ವಿತರಣೆ ಪಡೆದ ನಂತರ ಅವರು ಕಾರ್ ಅನ್ನು ದೇವಸ್ಥಾನಕ್ಕೆ ಕೊಂಡೊಯ್ದು ಕಾರಿಗೆ ಪೂಜೆ ಮಾಡಿಸಿದ್ದಾರೆ. ನಮ್ಮ ದೇಶದಲ್ಲಿ ಮಕ್ಕಳು ಈ ರೀತಿ ಕಾರುಗಳನ್ನು ತಮ್ಮ ಹೆತ್ತವರಿಗೆ ಉಡುಗೊರೆಯಾಗಿ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಈ ರೀತಿಯ ಹಲವಾರು ಘಟನೆಗಳು ನಡೆದಿವೆ.