ತಂದೆಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್ ಮಾಲೀಕ

ಪ್ರತಿಯೊಬ್ಬ ಯುವಕರಿಗೆ ತಮ್ಮದೇ ಆದ ಕನಸುಗಳಿರುತ್ತವೆ. ಹೆಚ್ಚಿನವರಿಗೆ ಮನೆ ಹಾಗೂ ಕಾರನ್ನು ಹೊಂದುವುದು ದೊಡ್ಡ ಕನಸು. ಕೆಲವರು ವಯಸ್ಸಾದ ತಮ್ಮ ಪ್ರೀತಿ ಪಾತ್ರ ಪೋಷಕರಿಗೆ ಉಡುಗೊರೆ ನೀಡುವ ಬಗ್ಗೆ ಯೋಚಿಸುತ್ತಾರೆ.

ತಂದೆಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್ ಮಾಲೀಕ

ಯುವಕನೊಬ್ಬ ತನ್ನ ವಯಸ್ಸಾದ ತಂದೆಗೆ ಎಂಜಿ ಹೆಕ್ಟರ್ ಎಸ್ ಯುವಿಯ ಟಾಪ್ ಎಂಡ್ ಮಾದರಿಯನ್ನು ಗಿಫ್ಟ್ ನೀಡುವ ಮೂಲಕ ಸರ್ ಪ್ರೈಸ್ ನೀಡಿದ್ದಾನೆ. ಎಂಜಿ ಹೆಕ್ಟರ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಯುವಕ ತನ್ನ ತಂದೆಗೆ ಗಿಫ್ಟ್ ನೀಡಿರುವ ಕಾರ್ ಅನ್ನು ಹೇಗೆ ಖರೀದಿಸಿದನು ಎಂದು ತಿಳಿದರೆ ಆಶ್ಚರ್ಯವಾಗಬಹುದು.

ತಂದೆಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್ ಮಾಲೀಕ

ಈ ಯುವಕ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾನೆ. ಈ ಯುವಕನು ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ ಹೆಸರು ಬಿಯರ್ಡ್ ಬೈಕರ್. ಈ ಚಾನೆಲ್ ವಾಹನವನ್ನು ಹೇಗೆ ಖರೀದಿಸಬೇಕು ಹಾಗೂ ವಾಹನವನ್ನು ಯಾವುದಕ್ಕಾಗಿ ಬಳಸಲಾಗುತ್ತದೆ ಎಂಬ ವಾಹನ ಸಂಬಂಧಿತ ಮಾಹಿತಿಗಳನ್ನು ನೀಡುತ್ತದೆ.

ತಂದೆಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್ ಮಾಲೀಕ

ಹೀಗೆ ಬಿಡುಗಡೆಗೊಳಿಸಲಾದ ವೀಡಿಯೊಗಳ ಮೂಲಕ ಗಳಿಸಿದ ಹಣದ ಒಂದು ಭಾಗದಲ್ಲಿ ಎಂಜಿ ಹೆಕ್ಟರ್ ಎಸ್ ಯುವಿಯನ್ನು ಖರೀದಿಸಿದ್ದಾರೆ. ಈ ಕಾರ್ ಅನ್ನು ಅವರ ತಂದೆ ತಾಯಿಯ ಬಳಕೆಗಾಗಿ ಮಾತ್ರ ಖರೀದಿಸಲಾಗಿದೆ ಎಂದು ಹೇಳಲಾಗಿದೆ.

ತಂದೆಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್ ಮಾಲೀಕ

ಈ ಕಾರು ಎಂಜಿ ಹೆಕ್ಟರ್‌ನ ಹೈ ಎಂಡ್ ಮಾದರಿಯಾಗಿದ್ದು, ಹಲವಾರು ಐಷಾರಾಮಿ ಅಂಶಗಳನ್ನು ಹೊಂದಿದೆ. ಈ ಕಾರಿನಲ್ಲಿ ಪನೋರಮಿಕ್ ಸನ್ ರೂಫ್, ಸ್ಮಾರ್ಟ್ ಇಂಟರ್ನೆಟ್ ಕನೆಕ್ಟಿವಿಟಿ ಹೊಂದಿರುವ ಇನ್ಫೋಟೆನ್ ಮೆಂಟ್ ಸಿಸ್ಟಂ, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಸೇರಿದಂತೆ ಹಲವಾರು ಫೀಚರ್ ಗಳಿವೆ.

ತಂದೆಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್ ಮಾಲೀಕ

ಇದರ ಜೊತೆಗೆ, ಸ್ಮಾರ್ಟ್ ಫೋನ್ ಆನ್ ಅಥವಾ ಆಫ್ ಮಾಡುವುದು, ಲಾಕ್ ಮಾಡುವುದು, ಅನ್ ಲಾಕ್ ಮಾಡುವಂತಹ ಹಲವಾರು ಫೀಚರ್ ಗಳನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. ಆದ್ದರಿಂದ, ಈ ಕಾರ್ ಅನ್ನು ಕದಿಯುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಕದ್ದರೂ ಸಹ, ಕದ್ದ ವ್ಯಕ್ತಿ ಸುಲಭವಾಗಿ ಸಿಕ್ಕಿಹಾಕಿಕೊಳ್ಳುತ್ತಾನೆ.

ತಂದೆಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್ ಮಾಲೀಕ

ಎಂಜಿ ಹೆಕ್ಟರ್‌ನ ಹೈ-ಎಂಡ್ ಮಾದರಿಯೂ ನೂರಕ್ಕೂ ಹೆಚ್ಚು ಫೀಚರ್ ಗಳನ್ನು ಹೊಂದಿದೆ. ಪ್ರತಿಯೊಂದು ಫೀಚರ್ ವಿಶಿಷ್ಟವಾಗಿದೆ. ಇವುಗಳಲ್ಲಿ ವಾಯ್ಸ್ ಕಮಾಂಡ್ ಮೂಲಕಸನ್‌ರೂಫ್‌ ಆಕ್ಟಿವೇಟ್ ಮಾಡುವುದು ಹಾಗೂ ಕಾರ್ ಅನ್ನು ಆನ್ ಮಾಡುವುದು ಸೇರಿವೆ.

ತಂದೆಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್ ಮಾಲೀಕ

ಇಂತಹ ವಿಶಿಷ್ಟ ಫೀಚರ್ ಗಳನ್ನು ಹೊಂದಿರುವ ಹೆಕ್ಟರ್ ಎಸ್‌ಯುವಿಯು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಕಾರ್ ಅನ್ನು 1.4 ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹಾಗೂ 2.0 ಲೀಟರಿನ ಡೀಸೆಲ್ ಎಂಜಿನ್ ನಲ್ಲಿ ಮಾರಾಟ ಮಾಡಲಾಗುತ್ತದೆ.

ಪೆಟ್ರೋಲ್ ಎಂಜಿನ್ 141 ಬಿಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾಡಿಸುತ್ತದೆ. ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಈ ಎಂಜಿನ್ ಅನ್ನು ಎಂಜಿ 48 ವಿ ಮಾದರಿಯಲ್ಲಿ ಅಳವಡಿಸಲಾಗಿದೆ.

ತಂದೆಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಯೂಟ್ಯೂಬ್ ಚಾನೆಲ್ ಮಾಲೀಕ

ಈ ಕಾರು ಬೇರೆ ಕಾರುಗಳಿಗಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ. ಇನ್ನೂ ಡೀಸೆಲ್ ಎಂಜಿನ್ 168 ಬಿಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ನೀಡಲಾಗಿದೆ. ಹೆಕ್ಟರ್ ಭಾರತದಲ್ಲಿ ಎಂಜಿ ಕಂಪನಿಯು ಬಿಡುಗಡೆಗೊಳಿಸಿದ ಮೊದಲ ಕಾರು.

Article Published On: Friday, March 20, 2020, 13:01 [IST]
English summary
Youtube channel owner gifts Top End MG Hector to his parents. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+