ಅಳಿಯನಿಗೆ ಹಿಡಿದಿದ್ದ ಭೂತವನ್ನು ಓಡಿಸಿದ ಮಾವ... ಚಪ್ಪಲಿ ಏಟಿನ ಹಿಂದಿದೆ ಸರಿಯಾದ ಕಾರಣ!

ವರದಕ್ಷಿಣೆಯಾಗಿ ಬೈಕ್ ಕೇಳಿದ ಅಳಿಯನಿಗೆ ಮಾವನಿಂದ ಧರ್ಮದೇಟು ಬಿದ್ದಿದೆ. ಈ ಕುರಿತ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಅಳಿಯನನ್ನು ಎಲ್ಲರೆದುರು ಚಪ್ಪಲಿಯಲ್ಲಿ ಮನಬಂದಂತೆ ಥಳಿಸುವುದನ್ನು ಕಾಣಬಹುದು. ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ತಿಳಿದುಬಂದಿಲ್ಲ.

ದೇಶದಲ್ಲಿ ವರದಕ್ಷಿಣೆ ಕಾನೂನುಬಾಹಿರವಾಗಿದ್ದರೂ, ಈ ಅಭ್ಯಾಸವು ಭಾರತದ ಅನೇಕ ಭಾಗಗಳಲ್ಲಿ ಇನ್ನೂ ಚಾಲ್ತಿಯಲ್ಲಿದೆ. ವರದಕ್ಷಿಣೆ ಪದ್ಧತಿಯನ್ನು ಸಮಾಜದಿಂದ ತೊಲಗಿಸುವುದು ಹೇಗೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ ಆಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ಘಟನೆ ಉತ್ತರ ಭಾರತದಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿದ್ದು, ಇನ್ನೂ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Son-in-law slapped

ಅಳಿಯ ವರದಕ್ಷಿಣೆಯಲ್ಲಿ ಮೋಟಾರ್‌ಸೈಕಲ್ ಕೇಳಿದ, ಮಾವ ಎಲ್ಲರ ಮುಂದೆ ಚಪ್ಪಲಿಯಿಂದ ಥಳಿಸಿದ, ವರದಕ್ಷಿಣೆ ಪದ್ಧತಿಯನ್ನು ಬಹಿಷ್ಕರಿಸಲು ಇದು ಉತ್ತಮ ಮಾರ್ಗವಾಗಿದೆ ಎಂಬ ಶೀರ್ಷಿಕೆಯೊಂದಿಗೆ ಶಕೀರ್ ನದೀಮ್ ಎಂಬಾತ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಈ ವಿಡಿಯೋಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. 21ನೇ ಶತಮಾನದಲ್ಲಿದ್ದರೂ ಈ ವರದಕ್ಷಿಣೆ ಭೂತವನ್ನು ಹೋಗಲಾಡಿಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ವರದಕ್ಷಿಣೆಯನ್ನು ಆಗಾಗ್ಗೆ ವಿನಂತಿಸಲಾಗುತ್ತದೆ, ಮಾಡಿಕೊಂಡ ಒಪ್ಪಂದದಂತೆ ಮದುವೆಯ ದಿನದೊಳಗೆ ಕೊಡುವಂತೆ ಗಂಡಿನ ಕಡೆಯವರು ಬಯಸುತ್ತಾರೆ. ಆದರೆ ಈ ಘಟನೆಯಲ್ಲಿ ಹಾಗಾಗಿಲ್ಲ ಎಂದು ಕಾಣುತ್ತಿದೆ, ಮೊದಲೇ ಒಪ್ಪಿದ್ದರೇ ಮದುವೆ ಗಂಡಿಗೆ ಚಪ್ಪಲಿ ಏಟು ಏಕೆ ಬೀಳುತ್ತಿತ್ತು ಎಂಬುದು ಪ್ರಶ್ನೆ? ಇಲ್ಲಿ ಗಂಡು ಇದ್ದಕ್ಕಿದ್ದಂತೆ ಬೈಕನ್ನು ಕೇಳಿರಬಹುದು ಎಂದು ಹೇಳಲಾಗುತ್ತಿದೆ.

ಅಥವಾ ಮದುವೆ ಮುಂಚೆ ಯಾವುದೇ ವರದಕ್ಷಿಣೆಯನ್ನು ಕೇಳದೇ ಮದುವೆ ದಿನದಂದು ಕೇಳಿದ ಕಾರಣ ಹೀಗಾಗಿರಬಹುದು ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ವರದಕ್ಷಿಣೆ ಪೆಡಂಭೂತ ಯಾವುದೋ ಒಂದು ರೀತಿಯಲ್ಲಿ ಗಂಡಿಗೆ ಸಿಗುತ್ತದೆ. ಇದನ್ನು ಗಿಫ್ಟ್ ಎಂಬ ಹೆಸರಿನಲ್ಲಿ ಕಾರು, ಮನೆ, ಬೈಕ್ ಹೀಗೆ ಹೆಣ್ಣಿನ ಕಡೆಯವರಿಂದ ಸಿಗುತ್ತದೆ. ಇದರಲ್ಲಿ ಯಾವುದೇ ಅಪರಾದವಿಲ್ಲ.

ಅಂದರೇ ಗಂಡಿನ ಕಡೆಯವರು ಏನನ್ನೂ ಆಶಿಸದಿದ್ದಾಗ ಹೆಣ್ಣಿನ ಕಡೆಯವರು ಅಳಿಯನಿಗೆ ಅಭಿಮಾನದಿಂದ ಗಿಫ್ಟ್ ಹೆಸರಿನಲ್ಲಿ ಕೊಡುವುದನ್ನು ಸ್ವೀಕರಿಸುವುದು ಅವರಿಗೆ ಬಿಟ್ಟಿರುತ್ತದೆ. ಇದರಲ್ಲಿ ಎರಡೂ ಕಡೆ ಒಳ್ಳೆಯ ಅಭಿಮತದೊಂದಿಗೆ ಮುನ್ನಡೆದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಈ ಹಿಂದೆಯೂ ಹಲವರು ಅಳಿಯರಿಗೆ ದುಬಾರಿ ಕಾರು, ಬೈಕ್ ಗಳನ್ನು ಗಿಫ್ಟ್ ಹೆಸರಿನಲ್ಲಿ ನೀಡಿದ್ದಾರೆ.

ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಅದ್ದೂರಿ ಮದುವೆಯೊಂದರಲ್ಲಿ ಮಾವ ತನ್ನ ಅಳಿಯನಿಗೆ ತಿಳಿಯದಂತೆ ಮಹೀಂದ್ರಾ ಥಾರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದು ಭಾರೀ ವೈರಲ್ ಆಗಿತ್ತು. ಆ ವೇಳೆ ಗಂಡು ಇದನ್ನು ಪಡೆಯಲು ನಿರಾಕರಿಸಿದ್ದು, ವರದಕ್ಷಿಣೆಯಂತಾಗುತ್ತದೆ ಎಂದು ಹೇಳಿದ್ದರು. ಆದರೆ ಇದು ಉಡುಗೊರೆಯೆಂದು ಭಾವಿಸಲು ವಿನಂತಿಸಿದ ಬಳಿಕೆ ಕಾರನ್ನು ಪಡೆದಿದ್ದರು.

ಹೀಗೆ ಕಾರು, ಬೈಕ್‌ಗಳನ್ನು ತಾವಾಗಿಯೇ ನೀಡಿದರೆ ಪಡೆಯುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಆದರೆ ತಾವೇ ವರದಕ್ಷಿಣೆಯ ರೂಪದಲ್ಲಿ ವಾಹನಗಳನ್ನು ಕೇಲುವುದು ತಪ್ಪಾಗುತ್ತದೆ. ಈ ಘಟನೆ ಕುರಿತು ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ರೂಪದಲ್ಲಿ ತಿಳಿಸಿ. ಬೈಕ್, ಕಾರು ಹಾಗೂ ಸಂಪೂರ್ಣ ಆಟೋ ವಲಯದ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಡ್ರೈವ್‌ಸ್ಪಾರ್ಕ್ ಕನ್ನಡ ಸಾಮಾಜಿಕ ಮಾಧ್ಯಮಗಳೊಂದಿಗೆ ಸಂಪರ್ಕದಲ್ಲಿರಿ.

Article Published On: Friday, May 12, 2023, 13:03 [IST]
English summary
Son in law slapped by his father in law wedding day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+