ಭಾವುಕರಾದ ತಂದೆ: ತುಕ್ಕು ಹಿಡಿದಿದ್ದ ಅಪ್ಪನ ಬೈಕಿಗೆ ಮರುಜೀವ ಕೊಟ್ಟ ಮಕ್ಕಳು!

ನಮ್ಮಲ್ಲಿ ಹಲವರು ಯಮಹಾ RX100, ಸುಜುಕಿ ಸಮುರಾಯ್, ಬಜಾಜ್ ಚೇತಕ್‌ನಂತಹ ಹಳೆಯ ಮಾದರಿಗಳನ್ನು ಇನ್ನೂ ಬಳಸುತ್ತಿದ್ದಾರೆ. ಇಂತಹ ಕ್ಲಾಸಿಕ್ ದ್ವಿಚಕ್ರ ವಾಹನಗಳಲ್ಲಿ ಕವಾಸಕಿ 4 ಎಸ್ ಚಾಂಪಿಯನ್ ಕೂಡ ಒಂದು, ಈ ವಾಹನಗಳು ಬಂದು ದಶಕಗಳೇ ಕಳೆದರೂ ಅವುಗಳ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.

ಅಂದಿನ ಕಾಲಕ್ಕೆ ಇಂತಹ ಮೋಟಾರ್‌ಸೈಕಲ್‌ಗಳನ್ನು ಮೊದಲು ಖರೀದಿಸಿದ ಬಹುತೇಕರು ಅವುಗಳನ್ನು ಮೂಲೆಗೆ ಬಿಡುವುದು ಅಥವಾ ಮಾರಾಟ ಮಾಡುವುದನ್ನು ಮಾಡುತ್ತಾರೆ. ಆದರೇ, ಕೆಲವರು ಮಾತ್ರ ಈ ವಾಹನಗಳ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ. ಇತ್ತೀಚೆಗೆ, ಅಂತಹ ವ್ಯಕ್ತಿಯೊಬ್ಬರು ತಮ್ಮ ತಂದೆಯ ಹಳೆಯ ಕವಾಸಕಿ ಮೋಟಾರ್ ಸೈಕಲ್ ಅನ್ನು ಸಂಪೂರ್ಣವಾಗಿ ಮಾಡಿಫೈಗೊಳಿಸಿ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಮೊದಲ ಮೋಟಾರ್‌ ಸೈಕಲ್ ಗತವೈಭವಕ್ಕೆ ಮರಳಿರುವುದನ್ನು ನೋಡಿದ ತಂದೆ ತುಂಬಾ ಭಾವುಕರಾದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ವೀಡಿಯೊವನ್ನು ಸೋನಾಲಿ ವೆಕರಿಯಾ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

son-modified-dads-first-kawasaki-4s-champion-motorcycle

ಬೈಕಿಗೆ ಮರುಜೀವ: ಇದು ಹಳೆಯ ಕವಾಸಕಿ 4ಎಸ್ ಚಾಂಪಿಯನ್ (Kawasaki 4S Champion) ಮೋಟಾರ್‌ಸೈಕಲ್ ಆಗಿದ್ದು, ತುಂಬಾ ಶಿಥಿಲಾವಸ್ಥೆಯಲ್ಲಿತ್ತು. ಇದು ತಂದೆಯ ಮೊದಲ ಬೈಕ್, ಇದರಲ್ಲೇ ಮಕ್ಕಳನ್ನು ಶಾಲೆಗೆ ಕರೆದೊಯ್ಯಲಾಗುತ್ತಿತ್ತು. ಬಹುತೇಕ ಬಾಲ್ಯವನ್ನು ಇದರಲ್ಲೇ ಕಳೆದಿದ್ದರು ಎಂದು ವಿಡಿಯೋ ಕೆಳಗೆ ಬರೆಯಲಾಗಿದೆ. ಇಷ್ಟೋಂದು ನೆನಪುಗಳನ್ನು ಹೊತ್ತಿರುವ ಈ ಬೈಕ್ ಅನ್ನು ಸಂಪೂರ್ಣವಾಗಿ ಮಾಡಿಫೈಗೊಳಿಸಿ ಉಡುಗೊರೆ ನೀಡುತ್ತಿದ್ದಂತೆ ತಂದೆ ತುಂಬಾ ಭಾವುಕರಾದರು.

ತುಕ್ಕು ಹಿಡಿದು ಮೂಲೆ ಸೇರಿತ್ತು: ಈ ನಿರ್ದಿಷ್ಟ ಕವಾಸಕಿ 4 ಎಸ್ ಚಾಂಪಿಯನ್ ಬೈಕ್ ಅದರ ಸಂಪೂರ್ಣ ಹೆಡ್ ಲೈಟ್ ಮುರಿದು, ಅದರ ಎಕ್ಸಾಸ್ಟ್ ತುಕ್ಕು ಹಿಡಿದಿತ್ತು. ಇವುಗಳ ಜೊತೆಗೆ, ಸ್ಪೋಕ್ಡ್ ವೀಲ್‌ಗಳು ಸಹ ತುಕ್ಕು ಹಿಡಿದಿದ್ದವು. ಬಣ್ಣವು ಸಂಪೂರ್ಣವಾಗಿ ಮಸುಕಾಗಿತ್ತು, ಇಡೀ ಬೈಕ್ ಗುಜರಿ ಸೇರುವ ಸ್ಥಿತಿಯಲ್ಲಿದ್ದು, ಎಂಜಿನ್ ಕೂಡ ಬಹುತೇಕ ಹಾಳಾಗಿತ್ತು.

son-modified-dads-first-kawasaki-4s-champion-motorcycle

90ರ ದಶಕದ ಜನಪ್ರಿಯ ಬೈಕ್: 1990ರ ದಶಕದಲ್ಲಿ ಕವಾಸಕಿ 4ಎಸ್ ಚಾಂಪಿಯನ್ ಬೈಕ್ ಭಾರತದಲ್ಲಿ ಜನಪ್ರಿಯ ಬೈಕ್ ಆಗಿತ್ತು. ಇದನ್ನು ಕವಾಸಕಿ ಹೆವಿ ಇಂಡಸ್ಟ್ರೀಸ್, ಬಜಾಜ್ ಆಟೋ ಸಹಯೋಗದೊಂದಿಗೆ ಭಾರತದಲ್ಲಿ ತಯಾರಿಸಲಾಗಿತ್ತು. ಈ ಬೈಕ್ ಮಧ್ಯಮ ವರ್ಗದ ಗ್ರಾಹಕರಿಗಾಗಿ ಬಿಡುಗಡೆ ಮಾಡಲಾಗಿತ್ತು. ಆ ಸಮಯದಲ್ಲಿ ಖರೀದಿದಾರರಿಗೆ ಒದಗಿಸಿದ ವಿಶ್ವಾಸಾರ್ಹತೆ, ದಕ್ಷತೆ ಮತ್ತು ಕೈಗೆಟುಕುವ ಬೆಲೆಯಿಂದ ಇದು ಖ್ಯಾತಿಯನ್ನು ಗಳಿಸಿತ್ತು. ಆರ್ಥಿಕ ಮತ್ತು ವಿಶ್ವಾಸಾರ್ಹ ಪ್ರಯಾಣದ ಆಯ್ಕೆಯನ್ನು ಹುಡುಕುತ್ತಿದ್ದ ಖರೀದಿದಾರರಿಗೆ ಇದು ಬೆಸ್ಟ್ ಆಯ್ಕೆಯಾಗಿತ್ತು. ಕಾಲ ಕಳೆದಂತೆ ಹೆಚ್ಚಿನ ತಂತ್ರಜ್ಞಾನದೊಂದಿಗೆ ಹೊಸ ವಾಹನಗಳ ಪೈಪೋಟಿಯಿಂದಾಗಿ ವಾಹನವನ್ನು ಸ್ಥಗಿತಗೊಳಿಸಲಾಯಿತು.

ಬೈಕಿನ ವಿಶೇಷತೆಗಳು: ಕವಾಸಕಿ 4ಎಸ್ ಚಾಂಪಿಯನ್ ಬೈಕಿನಲ್ಲಿ ಸಿಂಗಲ್ ಸಿಲಿಂಡರ್, 100 ಸಿಸಿ, 4 ಸ್ಟ್ರೋಕ್ ಎಂಜಿನ್ ಅಳವಡಿಸಲಾಗಿತ್ತು. ಈ ಸಣ್ಣ ಎಂಜಿನ್ ಸುಮಾರು 7.7 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಇದು ಸಾಧಾರಣ ಪವರ್ ಆಗಿದ್ದರೂ ದೈನಂದಿನ ಪ್ರಯಾಣದ ಅಗತ್ಯಗಳಿಗೆ ಉತ್ತಮವಾಗಿತ್ತು. ಈ ಏರ್ ಕೂಲ್ಡ್ ಎಂಜಿನ್ ಪ್ರತಿ ಲೀಟರ್‌ಗೆ 70 ರಿಂದ 80 ಕಿ.ಮೀ ಮೈಲೇಜ್ ನೀಡುತ್ತಿತ್ತು.

ಈ ಎಂಜಿನ್ ನೊಂದಿಗೆ 4-ಸ್ಪೀಡ್‌ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ನೀಡಲಾಗಿದೆ. ಸಸ್ಪೆಂಷನ್ ಬಗ್ಗೆ ಹೇಳುವುದಾದರೆ, ಇದು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ನೊಂದಿಗೆ ನೀಡಲಾಗಿದೆ. ನಿಮಗೂ ಈ ಕವಾಸಕಿ 4ಎಸ್ ಚಾಂಪಿಯನ್ ಬೈಕ್ ಬಗ್ಗೆ ತಿಳಿದಿದ್ದರೇ ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 20, 2024, 13:56 [IST]
English summary
Son modified dads first kawasaki 4s champion motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+