ವೃದ್ದ ತಾಯಿ ಜೊತೆ ಮಗನ 400 Km ಲಾಂಗ್‌ ರೈಡ್‌: ಈ ಬೈಕ್‌ರೈಡ್ ಮುಂದೆ ಯಾವ ಲವರ್‌ಗಳೂ ಸಾಟಿಯಲ್ಲ!

ಬಹಳಷ್ಟು ಜನ ಮೋಟಾರ್‌ ಸೈಕಲ್‌ ರೈಡರ್‌ಗಳಿಗೆ ಅವರ ಬೈಕ್‌ ತೆಗೆದುಕೊಂಡು ಲಾಂಗ್‌ ಟ್ರಿಪ್‌ ಹೋಗಬೇಕೆಂಬ ಆಸೆ ಇರುತ್ತದೆ. ದೇಶದುದ್ದಕ್ಕೂ ಇರುವ ಸುಂದರವಾದ ತಾಣಗಳನ್ನು ಕಣ್ಣಾರೆ ಕಣ್ಣು ತುಂಬಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಈ ದೃಷ್ಟಿಯಿಂದಲೇ ಸಾಕಷ್ಟು ಜನ ತಮ್ಮ ಬೈಕ್‌ಗಳಲ್ಲಿ ಲಾಂಗ್‌ ಡ್ರೈವ್‌ ಹೋಗುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗೆ ಲಾಂಗ್‌ ಡ್ರೈವ್‌ ಹೋಗುವಾಗ ಕೆಲವರು ಪಿಲಿಯನ್‌ ಅಥವಾ ಹಿಂಬದಿ ಸವಾರರನ್ನು ಕರೆದುಕೊಂಡು ಹೋಗುತ್ತಾರೆ. ಇದರಲ್ಲಿ ಅವರ ಪ್ರೇಯಸಿ, ಆಪ್ತರು ಅಥವಾ ಗೆಳೆಯರಿರುವುದು ವಾಡಿಕೆ. ಇದೊಂದು ಅಲಿಖಿತ ನಿಯಮ.

ಆದರೆ ಇಲ್ಲೊಂದು ಕಡೆ ಬೈಕ್‌ ಸವಾರನೊಬ್ಬ ತನ್ನ ಬೈಕ್‌ನಲ್ಲಿ ಲಾಂಗ್‌ ರೈಡ್‌ ಹೋಗಲು ನಿರ್ಧರಿಸಿದ. ಈ ಸಧರ್ಭದಲ್ಲಿ ತನ್ನ ಜೊತೆಯಾಗಿ ಪ್ರಯಾಣಿಸಲು ಆತ ಆಯ್ಕೆ ಮಾಡಿಕೊಂಡದ್ದು ಯಾರನ್ನು ಗೊತ್ತಾ? ನೀವು ಅಥವಾ ನಾವು ಅಂದುಕೊಂಡಂತೆ ಗೆಳೆಯರು ಅಥವಾ ಗೆಳತಿಯನ್ನಲ್ಲ. ಬದಲಾಗಿ ಆತ ಆಯ್ಕೆ ಮಾಡಿಕೊಂಡಿದ್ದು ತನ್ನ ತಾಯಿಯನ್ನು.

Son Takes Elderly Mom on a 400 km Ride on His Harley Davidson X440

ಹೌದು, ನೀವು ಓದಿದ್ದು ನಿಜ. ಸುಮಾರು 400 ಕಿಮೀ ರೋಡ್‌ ಟ್ರಿಪ್‌ಗೆ ಸ್ಯಾಂಡಿ ವೀರ್‌ ಎಂಬ ಮುಂಬೈ ಮೂಲದ ಯುವಕನೊಬ್ಬ ತನ್ನ ತಾಯಿಯನ್ನು ಕರೆದುಕೊಂಡು ಹೋಗಿ ಬಂದಿದ್ದಾನೆ. ಈತ ಹಂಚಿಕೊಂಡಿರುವ ಚಿತ್ರಗಳನ್ನು ನೋಡಿದರೆ, ಇಬ್ಬರೂ ಅಂದರೆ ತಾಯಿ ಮತ್ತು ಮಗ ರೈಡಿಂಗ್‌ ಗಿಯರ್‌ಗಳನ್ನು ಬಳಸಿಕೊಂಡು ಪ್ರಯಾಣ ಮಾಡಿದ್ದಾರೆ.

ರೈಡಿಂಗ್‌ ಜಾಕೆಟ್‌, ಹೆಲ್ಮೆಟ್‌ ಗ್ಲೌಸ್‌, ಶೂ ಮತ್ತು ಗ್ಲೌಸ್‌ಗಳನ್ನು ಉಪಯೋಗಿಸಿಕೊಂಡು ಈ ಟ್ರಿಪ್‌ ಅನ್ನು ಇಬ್ಬರೂ ಸಾಕಷ್ಟು ಎಂಜಾಯ್‌ ಮಾಡಿಕೊಂಡು ಬಂದಿದ್ದಾರೆ ಎಂದಯ ಆತ ಬರೆದುಕೊಂಡಿದ್ದಾನೆ. ಈತ ತಾನು ಹೊಸದಾಗಿ ಖರೀದಿಸಿದ ಹಾರ್ಲೆ ಡೇವಿಡ್ಸನ್‌ X440 ಎಂಬ ಬೈಕ್‌ನಲ್ಲಿ ಪ್ರಯಾಣ ಮಾಡಿದ್ದು, ತಮ್ಮ ಪ್ರಯಾಣದಲ್ಲಿ ಹಾರ್ಲೆಯನ್ನು ಸಹ ತಮ್ಮ ಸಾಥಿಯನ್ನಾಗಿ ಮಾಡಿಕೊಂಡಿದ್ದಾರೆ.

ಇನ್ನು ಇವರು ಪ್ರಯಾಣ ಮಾಡಿದ ಹಾರ್ಲೆ ಡೇವಿಡ್ಸನ್‌ ಎಕ್ಸ್‌ 440 (Harley Davidson X440) ಬಗ್ಗೆ ನೋಡುವುದಾದರೆ, ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್, 440cc ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಸರಿಸುಮಾರು 27 bhp ಪವರ್ ಮತ್ತು 38 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ಅನ್ನ್ನು ಜೋಡಿಸಲಾಗಿದೆ.

ಈ ಬೈಕ್‌ನ ಡಿಸೈನ್‌ ನೋಡುವುದಾದರೆ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ LED ಲೈಟಿಂಗ್, ಆಂಬಿಯೆಂಟ್ ಲೈಟ್ ಸೆನ್ಸರ್‌ನೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ. ಇತರ ಗಮನಾರ್ಹ ಫೀಚರ್ಸ್ ಗಳು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್, ಮ್ಯೂಸಿಕ್ ಕಂಟ್ರೋಲ್ ಮತ್ತು ಗೇರ್ ಸ್ಥಾನವನ್ನು ಒಳಗೊಂಡಿವೆ.

harley

ಹೊಸ ಹಾರ್ಲೆ-ಡೇವಿಡ್ಸನ್ X440 ಡೆನಿಮ್‌, ವಿವಿಡ್‌ ಮತ್ತು ಎಸ್‌ ಎಂಬ ಮೂರು ವೇರಿಯಂಟ್‌ನಲ್ಲಿ ಲಭ್ಯವಿದ್ದು, ಇದಕ್ಕೆ ಅನುಸಾರವಾಗಿ ಈ ಬೈಕ್‌ನ ಬೆಲೆ ನಿಗದಿಯಾಗಲಿದೆ. ಇನ್ನು ಇದರ ಬೆಲೆಯನ್ನು ನೋಡುವುದಾದರೆ ಎಕ್ಸ್‌ ಶೋ ರೂಮ್‌ 2.29 ಲಕ್ಷದಿಂದ - 2.69 ಲಕ್ಷದ ವರೆಗೆ ಈ ಬೈಕ್‌ನ ಬೆಲೆ ಇದೆ. ಈ ಕಾರಣದಿಂದಾಗಿಯೇ ಜನರ ನೆಚ್ಚಿನ ಬೈಕ್‌ ಇದಾಗಲಿದೆ ಎಂಬುದು ಎಲ್ಲರ ಅಭಿಪ್ರಾಯ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 21, 2024, 11:32 [IST]
English summary
Son takes elderly mom on a 400 km ride on his harley davidson x440
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+