ಮೊದಲ ಬಾರಿಗೆ ವಿಮಾನ ಹತ್ತಿಸಿದ ಮಗನಿಗೆ ಷಾಕ್ ನೀಡಿದ ಅಮಾಯಕ ತಂದೆ
ಅದೆಷ್ಟೋ ಮಂದಿ ಯುವಕ, ಯುವತಿಯರಿಗೆ ತಮ್ಮ ಪೋಷಕರನ್ನು ವಿಮಾನದಲ್ಲಿ ಕರೆದೊಯ್ಯಬೇಕೆಂಬ ಕನಸಿರುತ್ತದೆ. ಆದ್ರೆ ಹಲವರಿಗೆ ಪ್ರಯಾಣದ ವೆಚ್ಚ ಭರಿಸಲಾಗದೇ ಹಿಂದೇಟು ಹಾಕುತ್ತಾರೆ. ನಿಜಕ್ಕೆ ಈಗ ವಿಮಾನ ಪ್ರಯಾಣ ಮೊದಲಿನಂತಲ್ಲದೇ ಆಫರ್ ಇದ್ದಾಗ ಅಗ್ಗದ ಬೆಲೆಗೆ ಪ್ರಯಾಣಿಸಬಹುದು.
ವಿಷಯಕ್ಕೆ ಬಂದರೆ ಯುವಕನೊಬ್ಬ ತಂದೆಯನ್ನು ಮೊದಲಬಾರಿಗೆ ವಿಮಾನದಲ್ಲಿ ಕರೆದೊಯ್ದ ವಿಡಿಯೋ ವೈರಲ್ ಆಗಿದೆ. ನೆಟ್ಟಗರು ವಿಡಿಯೋಗೆ ಫಿದಾ ಆಗಿದ್ದು, ಇಂತಹ ಅದ್ಬುತ ಕ್ಷಣಗಳನ್ನು ನಮ್ಮ ಪೋಷಕರೊಂದಿಗೆ ನಾವು ಹಂಚಿಕೊಳ್ಳಬೇಕಿದೆ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಂತಹದ್ದೇನಿದೆ ಆ ವಿಡಿಯೋದಲ್ಲಿ ಎಂಬುದನ್ನು ನೋಡುವುದಾದರೆ, ತಂದೆಯ ಅಮಾಯಕ ಛೇಷ್ಟೆಗಳು ಎಂಥವರ ಮನವನ್ನು ಕರಗಿಸುತ್ತದೆ.

ಏಪ್ರಿಲ್ 10 ರಂದು ಹಂಚಿಕೊಂಡ ಈ ವಿಡಿಯೋ ಕ್ಲಿಪ್ Instagram ನಲ್ಲಿ ಸಖತ್ ವೈರಲ್ ಆಗುತ್ತಿದೆ. ಅತಿ ಹೆಚ್ಚು ವೀಕ್ಷಣೆಗಳನ್ನು ಪಡೆಯುತ್ತಿರುವುದನ್ನು ಕಂಡು ಮಗನೇ ಷಾಕ್ ಆಗಿದ್ದಾನೆ. ಮಕ್ಕಳು ಬೆಳೆದು ದೊಡ್ಡವರಾದಾಗ ಹೊಸ ಅನುಭವವನ್ನು ಪಡೆಯುವುದು ನಿಜಕ್ಕೂ ವಿಶೇಷವಾಗಿರುತ್ತದೆ. ವಿಡಿಯೋ ಆರಂಭವಾಗುತ್ತಿದ್ದಂತೆ ತನ್ನ ತಂದೆಯ ಪಕ್ಕದಲ್ಲಿ ಕುಳಿತು ಪ್ರಯಾಣ ಸಾಗುವ ತಂದೆ ಮಗನ ವಿಡಿಯೋ ನೋಡುಗರಿಗೆ ಏನೋ ಖುಷಿ ನೀಡುವಂತಾಗುತ್ತದೆ.
ಜೊತೆಗೆ ವಿಮಾನದ ಬಗ್ಗೆ ಏನೂ ತಿಳಿಯದ ತಂದೆಯ ಮುಗ್ದ ನೋಟ, ಛೇಷ್ಟೆಗಳು ವಿಡಿಯೋವನ್ನು ನೋಡುವ ತವಕವನ್ನು ಹೆಚ್ಚಿಸುತ್ತದೆ. ತಂದೆ ಬರ್ಗರ್ ತಿನ್ನುವುದು, ವಿಮಾನ ಮೊದಲಬಾರಿಗೆ ಹತ್ತಿದ ಖುಷಿಯನ್ನು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ನೋಡಬಹುದು ಅವರ ಮುಗ್ದ ನಗುವನ್ನು ಈ ವಿಡಿಯೋದಲ್ಲಿ ಕಾಣಬಹುದು. ಬಳಿಕ ವಿಮಾನದ ಹೊರಗಿನ ರಮಣೀಯ ನೋಟವನ್ನು ಸಹ ನೋಡಿ ಅವರು ಆನಂದಿಸುವುದನ್ನು ನೋಡಿದರೆ ನಮ್ಮ ಮನಸ್ಸಿಗೆ ಏನೋ ಮುದ ನೀಡುತ್ತದೆ.
ನಂತರ ಇಬ್ಬರೂ ತಮ್ಮ ಅಪಾರ್ಟ್ ಮೆಂಟ್‌ನಲ್ಲಿ ಒಟ್ಟಿಗೆ ತಮ್ಮ ಸಮಯವನ್ನು ಕಳೆಯುವುದನ್ನು ತೋರಿಸುವ ಮೂಲಕ ವಿಡಿಯೋ ಮುಕ್ತಾಯಗೊಳ್ಳುತ್ತದೆ. ವಿಡಿಯೋವನ್ನು ಹಂಚಿಕೊಂಡಿರುವ ಯುವಕ "POV (ದೃಷ್ಟಿಕೋನ): ನೀವು ನಿಮ್ಮ ತಂದೆಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಏರುವಂತೆ ಮಾಡಿ ಅವರನ್ನು ಮುಂಬೈಗೆ ಕರೆತಂದರೇ" ಎಂದು ವಿಡಿಯೋ ಕೆಳಗೆ ಶೀರ್ಷಿಕೆ ನೀಡಲಾಗಿದೆ.
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಮೂವರು ಮಕ್ಕಳು ತಮ್ಮ ತಾಯಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ವಿಡಿಯೋ ಕೂಡ ಈ ಹಿಂದೆ ಸಖತ್ ವೈರಲ್ ಆಗಿತ್ತು. ಆದರೆ ಈ ವಿಡಿಯೋದಲ್ಲಿನ ಮಕ್ಕಳ ತಾಯಿಯ ಕಥೆಯುವ ಕರಣಾಜನಕವಾಗಿತ್ತು. ಮದ್ಯವ್ಯಸನಿ ಗಂಡನನ್ನು ಕಳೆದುಕೊಂಡು ಮೂವರು ಮಕ್ಕಳನ್ನು ಕಷ್ಟಪಟ್ಟು ಓದಿಸಿ ಉತ್ತಮ ಸ್ಥಾನಕ್ಕೇರಿಸಿದ ಕಥೆಯದು.
ಆಕೆಯ ಪತಿಗೆ ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಆಕೆ ಮನೆಗೆಲಸ ಮಾಡಿ ಮಕ್ಕಳನ್ನು ಬೆಳೆಸಿದ್ದರು. ಏಕಾಂಗಿಯಾಗಿ ತನ್ನ ಮೂರು ಮಕ್ಕಳನ್ನು ಬೆಳೆಸಿದ ಆಕೆಯ ಕಷ್ಟವನ್ನು ಮರೆಯದ ಮಕ್ಕಳು ಬೆಳೆದು ದೊಡ್ಡವರಾದ ಬಳಿಕ ವಿಮಾನ ಹತ್ತಿಸಿದ್ದ ವಿಡಿಯೋ ತುಂಬಾ ವೈರಲ್ ಆಗಿ ಮಕ್ಕಳಿಗೆ ಮತ್ತು ತಾಯಿಗೆ ಪ್ರಶಂಸೆ ವ್ಯಕ್ತವಾಗಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಡ್ರೈವ್ ಸ್ಪಾರ್ಕ್ ಕನ್ನಡ ವೆಬ್ ಸೈಟ್‌ನಲ್ಲಿ ಪ್ರಚಾರವಾಗಿರುವ ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications