Sonu Gowda: ಬಿಚ್ಚಿಬಿದ್ದ ಗಂಡು ಹೈಕಳು.. ಸೋನು ಗೌಡ ಜಬರ್ದಸ್ತ್ ಜಾಲಿ ರೈಡ್, ಈ ದುಬಾರಿ ಬೈಕ್ ಯಾವುದು ಗೊತ್ತಾ?
ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚು ಚಿರಪರಿಚಿತರಾದ ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸಾವಿರಾರು ಸಂಖ್ಯೆಯಲ್ಲಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ಕನ್ನಡ ಬಿಗ್ ಬಾಸ್ನ ಮೊದಲ ಒಟಿಟಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಸೋನು ಗೌಡ, ಆ ಬಳಿಕ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದ್ದರು. ಇತ್ತೀಚೆಗೆ ತಮ್ಮೂರಿನಲ್ಲಿ 15 ಕಂಬಗಳ ಮನೆ ಕಟ್ಟಿಸಿ, ಗೃಹ ಪ್ರವೇಶ ಮಾಡಿ ಸಂಭ್ರಮಿಸಿದ್ದರು. ಅದಕ್ಕೆ ಸಂಬಂಧಿಸಿದ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಫುಲ್ ವೈರಲ್ ಆಗಿದ್ದವು. ಸ್ನೇಹಿತರು ಹಾಗೂ ಅಭಿಮಾನಿಗಳು ಕೂಡ ಸೋನು ಗೌಡ ಅವರಿಗೆ ಶುಭ ಕೋರಿದ್ದರು.
ವಿವಾಹದ ಬಗ್ಗೆಯೂ ಸೋನು ಗೌಡ ಮಾತನಾಡಿದ್ದರು. ಶೀಘ್ರ ನನ್ನ ಮದುವೆ ಕುರಿತು ಹೇಳುವೆ. ಎಲ್ಲರನ್ನು ನೋಡಿ ನನಗೂ ಮದುವೆ ಮಾಡಿಕೊಳ್ಳಬೇಕು ಅನ್ನಿಸಿದೆ. ಹುಡುಗ ಯಾರು ಅಂತ ತಿಳಿದುಕೊಳ್ಲಬೇಕೆ.. ಕಾಮೆಂಟ್ ಮಾಡಿ ಎಂದು ಹೇಳಿದ್ದರು. ಸದ್ಯ, ಸೋನು ಗೌಡರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ಹೆಚ್ಚಾಗಿದೆ. ಕೆಲ ತಿಂಗಳ ಹಿಂದೆ, ಸೋನು ಗೌಡ ಬೈಕ್ ರೈಡ್ ಮಾಡಿದ್ದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

ಸೋನು ಗೌಡ ದುಬಾರಿ ಬೆಲೆಯ ಐಷಾರಾಮಿ ಯಮಹಾ ಆರ್ 15 ವಿ4 (Yamaha R15 V4) ಮೋಟಾರ್‌ಸೈಕಲ್ ಮೇಲೆ ಕುಳಿತುಕೊಂಡು ಪೋಸ್ ನೀಡಿದ್ದು, ಆ ಬಳಿಕ ಸ್ವಲ್ಪ ದೂರ ಓಡಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಪೋಸ್ಟ್ 43 ಸಾವಿರಕ್ಕೂ ಅಧಿಕ ಲೈಕ್ ಪಡೆದುಕೊಂಡಿದೆ.
ಯಮಹಾ ಆರ್ 15 ವಿ4 ವಿಶೇಷತೆಗಳೇನು: ಈ ಬೈಕ್ ರೂ.1.83 ಲಕ್ಷದಿಂದ ರೂ.2.09 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 155 ಸಿಸಿ ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 18.4 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 14.2 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ನೂತನ ಯಮಹಾ ಆರ್ 15 ವಿ4 ಮೋಟಾರ್‌ಸೈಕಲ್ 55.20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಮೆಟಾಲಿಕ್ ಗ್ರೇ, ಡಾರ್ಕ್ ನೈಟ್, ಮೆಟಾಲಿಕ್ ರೆಡ್, ರೇಸಿಂಗ್ ಬ್ಲೂ & ಇಂಟೆನ್ಸಿಟಿ ವೈಟ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯವಿದೆ. ಕೇವಲ 13.25 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಈ ಬೈಕ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲೈಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್, ಕ್ವಿಕ್ ಶಿಫ್ಟರ್, ಡುಯಲ್ - ಚಾನಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೊಚ್ಚ ಹೊಸ ಯಮಹಾ ಆರ್ 15 ವಿ4 ಮೋಟಾರ್‌ಸೈಕಲ್ ಸವಾರರ ಸುರಕ್ಷತೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. 141 ಕೆಜಿ ತೂಕವಿರುವ ಈ ಬೈಕ್ 11 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ. ಇದರಲ್ಲಿ 2 ಆಸನ ಆಯ್ಕೆ ವ್ಯವಸ್ಥೆಯಿದೆ. ಜೊತೆಗೆ ಈ ನೂತನ ಮೋಟಾರ್‌ಸೈಕಲ್‌ಗೆ ಕೆಟಿಎಂ ಆರ್‌ಸಿ125 ಬೈಕ್ ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications