'ದಾದಾ' ಸೌರವ್ ಗಂಗೂಲಿ ಖರೀದಿಸಿದ ಹೊಸ ಬೈಕ್ ಯಾವುದು ಗೊತ್ತಾ.?

ಇಂಡಿಯನ್ ಕ್ರಿಕೆಟ್ ತಂಡಕ್ಕೆ ಮೊಹಮ್ಮದ್ ಅಝರುದ್ದೀನ್‍‍ರವರ ನಂತರ ನಾಯಕರಾಗಿ ದಾದಾ ಎಂದೇ ಪ್ರಸಿದ್ದರಾದ ಸೌರವ್ ಗಂಗೂಲಿಯವರು ಹೊಸ ಬೈಕ್ ಒಂದನ್ನು ಖರೀದಿಸಿದ್ದು, ಹಲವರು ಕಾರು ಮತ್ತು ಬೈಕ್ ಕಲೆಕ್ಷನ್ ಹೊಂದಿರುವ ಇವರು ಇದೀಗ ಬಿಎಂಡಬ್ಲ್ಯೂ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿದ ಜಿ310ಜಿಎಸ್ ಆಫ್ ರೋಡ್ ಬೈಕ್ ಅನ್ನು ಡೆಲಿವರಿ ಪಡೆದಿದ್ದಾರೆ.

ದಾದಾ ಸೌರವ್ ಗಂಗೂಲಿ ಡೆಲಿವರಿ ಪಡೆದ ಹೊಸ ಬೈಕ್ ಯಾವುದು ಗೊತ್ತಾ.?

ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಇದೇ ಮೊದಲ ಬಾರಿಗೆ ಮೆಡ್ ಇನ್ ಇಂಡಿಯಾ ಅಭಿಯಾನದಡಿ ಅಗ್ಗದ ಬೆಲೆಯಲ್ಲಿ ತನ್ನ ಅಡ್ವೆಂಚರ್ ಬೈಕ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಐಷಾರಾಮಿ ಸೌಲಭ್ಯಗಳನ್ನು ಹೊತ್ತುಬಂದಿರುವ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳಿಗೆ ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕಂಡುಬರುತ್ತಿದೆ.

ದೆಹಲಿ ಎಕ್ಸ್‌ಶೋರಂ ಪ್ರಕಾರ ಜಿ 310 ಆರ್ ಬೈಕ್ ಮಾದರಿಯು ರೂ. 2.99 ಲಕ್ಷಕ್ಕೆ ಮತ್ತು ಜಿ 310 ಜಿಎಸ್ ಬೈಕ್ ಮಾದರಿಯು ರೂ.3.49 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಸೌರವ್ ಗಂಗೂಲಿಯವರು ಅಡ್ವೆಂಚರ್ ವೈಶಿಷ್ಟ್ಯತೆ ಹೊಂದಿರುವ ಜಿ 310 ಜಿಎಸ್ ಬೈಕ್ ಖರೀದಿಸಿದ್ದಾರೆ.

ಮೊದಲ ಬಾರಿಗೆ ಭಾರತದಲ್ಲೇ ತನ್ನ ಹೊಸ ಉತ್ಪನ್ನಗಳನ್ನ ಅಭಿವೃದ್ಧಿ ಮಾಡಿರುವ ಬಿಎಂಡಬ್ಲ್ಯು ಸಂಸ್ಥೆಯು ಬೈಕ್‌ಗಳ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಟಿವಿಎಸ್ ಜೊತೆ ಕೈಜೋಡಿಸಿದ್ದು, ತಮಿಳುನಾಡಿನ ಹೊಸೂರುನಲ್ಲಿರುವ ಟಿವಿಎಸ್ ಬೈಕ್ ಉತ್ಪಾದನಾ ಘಟಕದಲ್ಲೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನ ಉತ್ಪಾದನೆ ಮಾಡಿರುವುದು ಮತ್ತೊಂದು ವಿಶೇಷ.

ದಾದಾ ಸೌರವ್ ಗಂಗೂಲಿ ಡೆಲಿವರಿ ಪಡೆದ ಹೊಸ ಬೈಕ್ ಯಾವುದು ಗೊತ್ತಾ.?

ಜಿಎಸ್ ಅಂದ್ರೆ ಜರ್ಮನ್ ಭಾಷೆಯಲ್ಲಿ Gelände/Straße(ರೋಡ್ ಮತ್ತು ಆಪ್ ರೋಡ್) ಎಂಬುವುದಾಗಿದ್ದು, ಹೊಸದಾಗಿ ಭಾರತದಲ್ಲಿ ಬಿಡುಗಡೆಗೊಂಡಿರುವ ಜಿ 310 ಜಿಎಸ್ ಬೈಕ್ ಸಹ ಇದೇ ಆಧಾರದ ಮೇಲೆ ಸಿದ್ದವಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್ ನಿರ್ಮಾಣ ಮಾಡಲಾಗಿದೆ

ಜಾಗತಿಕವಾಗಿ ಮಾರಾಟವಾಗುತ್ತಿರುವ ಆರ್‌ಎಸ್80 ಜಿಎಸ್ ಬೈಕ್‌ಗಳು 800ಸಿಸಿ ಎಂಜಿನ್ ಪ್ರೇರಣೆ ಹೊಂದಿದ್ದು, ಭಾರತದಲ್ಲಿ ಆಪ್ ರೋಡ್ ಬೈಕ್ ಮಾರಾಟ ವಿಭಾಗದಲ್ಲಿ ಹೊಸ ಬದಲಾವಣೆ ತರುವ ಉದ್ದೇಶದಿಂದ ಜಿ 310 ಜಿಎಸ್ ಬೈಕ್‌ಗಳನ್ನು 313ಸಿಸಿ ಎಂಜಿನ್ ಮಾದರಿಯೊಂದಿಗೆ ನಿರ್ಮಾಣ ಮಾಡಲಾಗಿದೆ.

ಡಿಸೈನ್ ಮತ್ತು ಸ್ಟೈಲ್
ಮೊದಲ ನೋಟದಲ್ಲೇ ಆಪ್ ರೋಡ್ ಬೈಕ್ ಸವಾರರನ್ನು ಸೆಳೆಯಬಲ್ಲ ಗುಣಹೊಂದಿರುವ ಜಿ 310 ಜಿಎಸ್ ಬೈಕ್‌ಗಳನ್ನು ಬೆಬಿ ಜಿಎಸ್ ಎಂದೇ ಜನಪ್ರಿಯವಾಗಿದ್ದು, ಮೇಲೆ ಹೇಳಿದ ಹಾಗೆ ಫ್ಯಾಗ್‌ಶಿಫ್ ಬೈಕ್ ಮಾದರಿಯಾದ ಆರ್ 1200 ಜಿಎಸ್ ಬೈಕ್‌ನಂತೆ ಸಿದ್ದವಾಗಿರುವುದು ಬೈಕ್ ಸವಾರರ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದೆ.

ದಾದಾ ಸೌರವ್ ಗಂಗೂಲಿ ಡೆಲಿವರಿ ಪಡೆದ ಹೊಸ ಬೈಕ್ ಯಾವುದು ಗೊತ್ತಾ.?

ಜೊತೆಗೆ ಬಿಎಂಡಬ್ಲ್ಯು ಸಂಸ್ಥೆಯು ಬಿಡುಗಡೆಗೊಳಿಸಿರುವ ಜಿ 310 ಜಿಎಸ್ ಬೈಕ್‌ಗಳು ಸಿಂಗಲ್ ಸಿಲಿಂಡರ್ ಅಡ್ವೆಂಚರ್ ಪ್ರಿಮಿಯಂ ಬೈಕ್ ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಬೈಕ್ ಆವೃತ್ತಿಯಾಗಿದ್ದು, ಆಪ್ ರೋಡ್ ಮೋಟಾರ್ ಸೈಕಲ್ ಪ್ರೇಮಿಗಳಿಗೆ ಇದೊಂದು ಹಬ್ಬ ಅಂದ್ರೆ ತಪ್ಪಾಗುವುದಿಲ್ಲ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಟಿವಿಎಸ್ ಅಪಾಚೆ 310 ಆರ್‌ಆರ್ ಮತ್ತು ಕವಾಸಕಿ ನಿಂಜಾ 300 ಬೈಕಿಗೆ ಸಮನಾದ ಎಂಜಿನ್ ಹೊಂದಿದ್ದರೂ ಪ್ರೀಮಿಯಂ ವೈಶಿಷ್ಟ್ಯತೆಗಳಲ್ಲಿ ವಿಶೇಷ ಎನ್ನಿಸುವ ಜಿ 310 ಜಿಎಸ್ ಬೈಕ್‌ಗಳು ಬ್ರಾಂಡ್ ಆಧರಿತವಾಗಿ ಲೆಕ್ಕಾಚಾರ ಹಾಕಿದಾಗ ಬೆಲೆಗೆ ತಕ್ಕ ಬೈಕ್ ಮಾದರಿಯಾಗಿರುವುದನ್ನು ನಾವು ಗಮನಿಸಬಹುದಾಗಿದೆ.

ಎಂಜಿನ್ ಸಾಮರ್ಥ್ಯ
ಜಿ 310 ಜಿಎಸ್ ಬೈಕ್ ಮಾದರಿಯು ಲಿಕ್ವಿಡ್ ಕೂಲ್ಡ್ 313 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು ಜಿ 310 ಆರ್ ಬೈಕಿಗೆ ಸಮನಾಗಿರಲಿದೆ. ಇದೇ ಎಂಜಿನ್ ಸದ್ಯ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನಲ್ಲೂ ಇದ್ದರೂ ಸಹ ಜಿ 310 ಜಿಎಸ್ ಬೈಕ್‌ಗಳು ಗರಿಷ್ಠ ಎಂಜಿನ್ ದಕ್ಷತೆ ಪಡೆದುಕೊಂಡಿವೆ.

ದಾದಾ ಸೌರವ್ ಗಂಗೂಲಿ ಡೆಲಿವರಿ ಪಡೆದ ಹೊಸ ಬೈಕ್ ಯಾವುದು ಗೊತ್ತಾ.?

ಈ ಮೂಲಕ 33.6-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಹೊಸ ಜಿ 310 ಜಿಎಸ್ ಬೈಕ್‌ಗಳು ಕೇವಲ 4 ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗವನ್ನು ಹೊಂದುವ ಸಾಮರ್ಥ್ಯ ಹೊಂದಿವೆ.

ಇನ್ನು ಹೊಸ ಬೈಕ್ ಮಾದರಿಯು ಬರೋಬ್ಬರಿ 169.5 ಕೆ.ಜಿ ತೂಕ ಹೊಂದಿದ್ದು, ಡ್ಯುಯಲ್ ಚಾನೆಲ್ ಎಬಿಎಸ್, 140ಎಂಎಂ ಫ್ರಂಟ್ ಸಸ್ಷೆಷನ್, 131ಎಂಎಂ ರಿಯರ್ ಸಸ್ಷೆಷನ್, 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಅಳವಡಿಸಲಾಗಿದೆ.

ಒಟ್ಟಿನಲ್ಲಿ ಜಿ 310 ಜಿಎಸ್ ಬೈಕಿನಲ್ಲಿ ಲಭ್ಯವಿರುವ ಸೌಲಭ್ಯಗಳನ್ನೇ ಹೊಂದಿರುವ ಪ್ರಮುಖ ಬೈಕ್‌ಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ರು ಸಹ ಅವುಗಳಿಂತಲೂ ವಿಭಿನ್ನ ಎನ್ನಿಸುವ ಜಿ 310 ಜಿಎಸ್ ಬೈಕ್‌ಗಳು ಆಪ್ ರೋಡ್ ಕೌಶಲ್ಯ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಇದೇ ಕಾರಣಕ್ಕೆ ಆಪ್ ರೋಡ್ ಪ್ರಿಯರ ಪ್ರಮುಖ ಆಕರ್ಷಣೆಯಾಗಿವೆ ಎನ್ನಬಹುದು.

Source: RushLAne

More from DriveSpark

Article Published On: Friday, February 8, 2019, 10:09 [IST]
English summary
Sourav Ganguly takes delivery of BMW G310GS off-road motorcycle. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+