ಚಾಲನೆಯಾದ ದಿನವೇ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದ ವಿಸ್ಟಾಡೋಮ್ ರೈಲು

ಮಂಗಳೂರು - ಬೆಂಗಳೂರು ನಡುವಿನ ರೈಲು ಮಾರ್ಗದಲ್ಲಿ ಕಂಡು ಬರುವ ಪ್ರಕೃತಿಯ ರಮಣೀಯ ದೃಶ್ಯಗಳನ್ನು ವೀಕ್ಷಿಸಲು ಸಾಧ್ಯವಾಗುವ ವಿಸ್ಟಾಡೋಮ್‌ ರೈಲು ಸಂಚಾರಕ್ಕೆ ನಿನ್ನೆ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ.

ಚಾಲನೆಯಾದ ದಿನವೇ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದ ವಿಸ್ಟಾಡೋಮ್ ರೈಲು

ವಿಸ್ಟಾಡೋಮ್ ಬೋಗಿಗಳ ಮೂಲಕ ಭಾರತೀಯ ರೈಲ್ವೆ ಪ್ರಕೃತಿ ಪ್ರಿಯರಿಗೆ ಪ್ರಕೃತಿಯ ಸೊಬಗನ್ನು ಸವಿಯುವ ಅವಕಾಶ ಮಾಡಿ ಕೊಟ್ಟಿದೆ. ಈ ಮಾರ್ಗದಲ್ಲಿರುವ ಪರ್ವತಗಳು, ಕಣಿವೆಗಳು ಹಾಗೂ ಹಚ್ಚ ಹಸಿರು ನೋಡುಗರನ್ನು ಬೆರಗುಗೊಳಿಸುತ್ತವೆ.

ಚಾಲನೆಯಾದ ದಿನವೇ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದ ವಿಸ್ಟಾಡೋಮ್ ರೈಲು

ಈ ರೈಲು ಮಂಗಳೂರು ಜಂಕ್ಷನ್'ನಿಂದ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದವರೆಗೆ ಚಲಿಸುತ್ತದೆ. ವಿಸ್ಟಾಡೋಮ್ ಬೋಗಿಗಳಲ್ಲಿ ಗ್ಲಾಸ್ ರೂಫ್, 360 ಡಿಗ್ರಿಯಲ್ಲಿ ಪ್ರಕೃತಿ ಸೌಂದರ್ಯವನ್ನು ಕಾಣುವಂತಹ ಫೀಚರ್'ಗಳನ್ನು ಅಳವಡಿಸಲಾಗಿದೆ.

ಚಾಲನೆಯಾದ ದಿನವೇ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದ ವಿಸ್ಟಾಡೋಮ್ ರೈಲು

ಭಾರತೀಯ ರೈಲ್ವೆ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ರೈಲಿನಲ್ಲಿ ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸಿದೆ. ಬೆಳಿಗ್ಗೆ 11.30ಕ್ಕೆ ಮಂಗಳೂರು ಜಂಕ್ಷನ್'ನಿಂದ ಹೊರಡುವ ಟ್ರೈ ವೀಕ್ಲಿ ರೈಲು ರಾತ್ರಿ 8.20ಕ್ಕೆ ಯಶವಂತಪುರ ರೈಲ್ವೇ ನಿಲ್ದಾಣವನ್ನು ತಲುಪಿದರೆ, ಯಶವಂತಪುರದಿಂದ ಬೆಳಿಗ್ಗೆ 7 ಗಂಟೆಗೆ ಹೊರಡುವ ಟ್ರೈ ವೀಕ್ಲಿ ರೈಲು ಸಂಜೆ 5 ಗಂಟೆಗೆ ಮಂಗಳೂರು ಜಂಕ್ಷನ್ ತಲುಪುತ್ತದೆ.

ಚಾಲನೆಯಾದ ದಿನವೇ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದ ವಿಸ್ಟಾಡೋಮ್ ರೈಲು

ಇನ್ನು ಶನಿವಾರ ಬೆಳಿಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಡುವ ವೀಕ್ಲಿ ರೈಲು ಸಂಜೆ 6 ಗಂಟೆಗೆ ಮಂಗಳೂರು ತಲುಪಿದರೆ, ಭಾನುವಾರದಂದು ಬೆಳಿಗ್ಗೆ 9.15ಕ್ಕೆ ಮಂಗಳೂರಿನಿಂದ ಹೊರಡುವ ವೀಕ್ಲಿ ರೈಲು ರಾತ್ರಿ 8.05ಕ್ಕೆ ಯಶವಂತಪುರ ರೈಲ್ವೇ ನಿಲ್ದಾಣವನ್ನು ತಲುಪುತ್ತದೆ.

ಚಾಲನೆಯಾದ ದಿನವೇ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದ ವಿಸ್ಟಾಡೋಮ್ ರೈಲು

ಈ ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸಲಾಗಿದೆ. ಪ್ರತಿ ಬೋಗಿಯಲ್ಲಿ 44 ಸೀಟುಗಳಿವೆ. ಪ್ರತಿ ಸೀಟಿನಲ್ಲೂ ಮೊಬೈಲ್ ಚಾರ್ಜರ್ ಸಾಕೆಟ್ ನೀಡಲಾಗಿದೆ. ಈ ಬೋಗಿಗಳಲ್ಲಿ ಅಗಲವಾಗಿರುವ ದೊಡ್ಡ ಕಿಟಕಿಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ಪ್ರಕೃತಿಯ ನೋಟವನ್ನು ಸ್ಪಷ್ಟವಾಗಿ ಕಾಣಬಹುದು.

ಚಾಲನೆಯಾದ ದಿನವೇ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದ ವಿಸ್ಟಾಡೋಮ್ ರೈಲು

ಈ ವಿಸ್ಟಾಡೋಮ್ ಬೋಗಿಗಳನ್ನು ಲಿಂಕ್ ಹಾಫ್ಮನ್ ಬುಶ್ ಪ್ಲಾಟ್‌ಫಾರಂ ಎಂಬ ಟೆಕ್ನಾಲಜಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಬೋಗಿಗಳನ್ನು ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗಿದೆ.

ಚಾಲನೆಯಾದ ದಿನವೇ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದ ವಿಸ್ಟಾಡೋಮ್ ರೈಲು

ಈ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರು ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಸುಮಾರು 60 ಕಿ.ಮೀಗಳವರೆಗೆ ಪ್ರಕೃತಿಯ ರಮಣೀಯ ದೃಶ್ಯವನ್ನು ಸವಿಯಬಹುದು. ಈ ರೈಲು ಸಾಗುವ ಮಾರ್ಗದಲ್ಲಿ 50ಕ್ಕೂ ಹೆಚ್ಚು ಸುರಂಗ ಮಾರ್ಗಗಳು ಹಾಗೂ ಹಲವು ಸೇತುವೆಗಳು ಸಿಗುತ್ತವೆ.

ವಿಸ್ಟಾಡೋಮ್ ಬೋಗಿಗಳಲ್ಲಿ ಪ್ರಯಾಣಿಸಲು ಪ್ರತೀ ಟಿಕೆಟ್'ಗೆ ರೂ.1395 ರೂಪಾಯಿ ಪಾವತಿಸಬೇಕಾಗುತ್ತದೆ. ಚಾಲನೆ ನೀಡಿದ ದಿನವೇ ಈ ವಿಸ್ಟಾಡೋಮ್ ಬೋಗಿಗಳಿಗೆ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದೆ.

ಚಾಲನೆಯಾದ ದಿನವೇ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದ ವಿಸ್ಟಾಡೋಮ್ ರೈಲು

ಕೆಲವು ದಿನಗಳ ಹಿಂದೆ ಈ ವಿಸ್ಟಾಡೋಮ್ ಬೋಗಿಗಳಿಗೆ ಬುಕ್ಕಿಂಗ್ ಆರಂಭಿಸಲಾಗಿತ್ತು. ಬುಕ್ಕಿಂಗ್ ಆರಂಭಗೊಂಡ ಕೆಲವೇ ದಿನಗಳಲ್ಲಿ ಎಲ್ಲಾ ಸೀಟುಗಳು ಭರ್ತಿಯಾಗಿದ್ದವು.

Most Read Articles

Kannada
English summary
South India's first Vistadome train started between Bengaluru - Mangaluru. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X