ಮಹಿಳಾ ಆಟೋ ಡ್ರೈವರ್‌ಗೆ ಡಿಜೈರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ನಟಿ

ಸಮಂತಾ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು ತಮಿಳು, ತೆಲುಗು ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿ ಸಮಂತಾ ಈಗ ವಿಶೇಷ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಮಹಿಳಾ ಆಟೋ ಡ್ರೈವರ್‌ಗೆ ಡಿಜೈರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ನಟಿ

ನಟಿ ಸಮಂತಾ ಆಂಧ್ರಪ್ರದೇಶದ ಕವಿತಾ ಎಂಬ ಮಹಿಳಾ ಆಟೋ ಡ್ರೈವರ್‌ಗೆ ಹೊಸ ಮಾರುತಿ ಡಿಜೈರ್ ಕಾರನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ. ಏಳು ಜನ ಸಹೋದರಿಯರೊಂದಿಗೆ ವಾಸಿಸುತ್ತಿರುವ ಕವಿತಾ ಕುಟುಂಬ ನಿರ್ವಹಣೆಗಾಗಿ ಹಗಲು ರಾತ್ರಿಯೆನ್ನದೇ ಆಟೋ ಚಾಲನೆ ಮಾಡುತ್ತಾರೆ.

ಮಹಿಳಾ ಆಟೋ ಡ್ರೈವರ್‌ಗೆ ಡಿಜೈರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ನಟಿ

ಆದರೆ ಅವರ ಆದಾಯ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ. ಈ ವಿಷಯ ತಿಳಿದ ನಟಿ ಸಮಂತಾ ಕವಿತಾರವರಿಗೆ ಕಾರು ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ಹೊಸ ಮಾರುತಿ ಡಿಜೈರ್ ಟೂರ್ ಕಾರನ್ನು ಖರೀದಿಸಿ ಅದನ್ನು ಕವಿತಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಹಿಳಾ ಆಟೋ ಡ್ರೈವರ್‌ಗೆ ಡಿಜೈರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ನಟಿ

ಆಟೋ ಡ್ರೈವರ್ ಕವಿತಾರವರಿಗೆ ನೀಡಿರುವ ಮಾರುತಿ ಡಿಜೈರ್ ಟೂರ್ ಕಾರಿನ ಬೆಲೆ ರೂ.7.50 ಲಕ್ಷಗಳಾಗಿದೆ. ಈಗ ಹೊಸ ತಲೆಮಾರಿನ ಡಿಜೈರ್ ಕಾರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಹಳೆಯ ತಲೆಮಾರಿನ ಡಿಜೈರ್ ಟೂರ್ ಕಾರ್ ಅನ್ನು ಹೆಚ್ಚಾಗಿ ಕ್ಯಾಬ್'ಗಳಲ್ಲಿ ಬಳಸಲಾಗುತ್ತದೆ.

ಮಹಿಳಾ ಆಟೋ ಡ್ರೈವರ್‌ಗೆ ಡಿಜೈರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ನಟಿ

ಆಟೋ ಡ್ರೈವರ್ ಕವಿತಾ ಈ ಕಾರಿನ ಮೂಲಕ ಮೂಲಕ ತಮ್ಮದೇ ಆದ ಕ್ಯಾಬ್ ಸೇವೆಯನ್ನು ನೀಡಲು ನಿರ್ಧರಿಸಿದ್ದಾರೆ. ಸಮಂತಾರವರು ಕವಿತಾ ಅವರಿಗೆ ಡಿಜೈರ್ ಟೂರ್ ಕಾರ್ ಅನ್ನು ನೀಡಿರುವ ಬಗ್ಗೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿತ್ತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಹಿಳಾ ಆಟೋ ಡ್ರೈವರ್‌ಗೆ ಡಿಜೈರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ನಟಿ

ನಾವು ಸಂಬಂಧಪಟ್ಟ ಮಾರುತಿ ಸುಜುಕಿ ಡೀಲರ್ ಜೊತೆ ಮಾತನಾಡಿದಾಗ ಅವರು ಈ ಸುದ್ದಿ ನಿಜವೆಂದು ದೃಢಪಡಿಸಿದ್ದಾರೆ. ಜೊತೆಗೆ ಆಟೋ ಡ್ರೈವರ್ ಕವಿತಾರವರಿಗೆ ಮಾರುತಿ ಡಿಜೈರ್ ಟೂರ್ ಕಾರ್ ಅನ್ನು ವಿತರಿಸುತ್ತಿರುವ ಚಿತ್ರವನ್ನೂ ಅವರು ಶೇರ್ ಮಾಡಿದ್ದಾರೆ.

ಮಹಿಳಾ ಆಟೋ ಡ್ರೈವರ್‌ಗೆ ಡಿಜೈರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ನಟಿ

ಕೆಲವು ಚಿತ್ರ ತಾರೆಯರು ತಾವು ಯಾರಿಗಾದರೂ ನೆರವು ನೀಡಿದರೆ ಅವುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ. ಈ ಮೂಲಕ ಇತರರಿಗೆ ಮಾದರಿಯಾಗ ಬಯಸುತ್ತಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಹಿಳಾ ಆಟೋ ಡ್ರೈವರ್‌ಗೆ ಡಿಜೈರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ನಟಿ

ಆದರೆ ನಟಿ ಸಮಂತಾ ತಾವು ಮಹಿಳಾ ಆಟೋ ಡ್ರೈವರ್‌ಗೆ ಕಾರ್ ಅನ್ನು ಉಡುಗೊರೆಯಾಗಿ ನೀಡಿರುವ ವಿಷಯವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಆಟೋ ಡ್ರೈವರ್ ಕವಿತಾರವರಿಗೆ ನೀಡಲಾಗಿರುವ ಮಾರುತಿ ಡಿಜೈರ್ ಟೂರ್ ಕಾರು ಹಲವಾರು ಫೀಚರ್'ಗಳನ್ನು ಹೊಂದಿದೆ.

ಮಹಿಳಾ ಆಟೋ ಡ್ರೈವರ್‌ಗೆ ಡಿಜೈರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ನಟಿ

ಈ ಕಾರಿನಲ್ಲಿ ಎಸಿ ಸಿಸ್ಟಂ, ಪವರ್ ವಿಂಡೋ ಹೊಂದಿರುವ ಫ್ರಂಟ್ ಡೋರ್, ಸೆಂಟ್ರಲ್ ಲಾಕಿಂಗ್ ಸಿಸ್ಟಂ, ರಿಮೋಟ್ ಕೀ ಲೆಸ್ ಎಂಟ್ರಿ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಹಿಳಾ ಆಟೋ ಡ್ರೈವರ್‌ಗೆ ಡಿಜೈರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ನಟಿ

ಇದರ ಜೊತೆಗೆ ಈ ಕಾರಿನಲ್ಲಿ ರೇರ್ ಪಾರ್ಕಿಂಗ್ ಸೆನ್ಸಾರ್, ಚಾಲಕನಿಗೆ ಏರ್‌ಬ್ಯಾಗ್‌, ಎಬಿಎಸ್ ಬ್ರೇಕಿಂಗ್ ಸಿಸ್ಟಂಗಳನ್ನು ಸಹ ನೀಡಲಾಗಿದೆ. ಈ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಮಹಿಳಾ ಆಟೋ ಡ್ರೈವರ್‌ಗೆ ಡಿಜೈರ್ ಕಾರ್ ಅನ್ನು ಉಡುಗೊರೆಯಾಗಿ ನೀಡಿದ ನಟಿ

ಈ ಎಂಜಿನ್ 82 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಈ ಕಾರು ಪೆಟ್ರೋಲ್ ಎಂಜಿನ್ ಮಾತ್ರವಲ್ಲದೆ ಸಿಎನ್‌ಜಿಯೊಂದಿಗೂ ಲಭ್ಯವಿದೆ.

Most Read Articles

Kannada
English summary
South Indian actress Samantha gifts Dzire tour car to woman auto driver. Read in Kannada.
Story first published: Tuesday, April 20, 2021, 19:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X