ದೆಹಲಿಯಲ್ಲಿ ಇನ್ಮುಂದೆ ಬಸ್‌ ಮಾರ್ಗದಲ್ಲಿ ಇತರ ವಾಹನಗಳು ಸಂಚರಿಸುವಂತಿಲ್ಲ: 10 ಸಾವಿರ ರೂ.ದಂಡ

ದೆಹಲಿ ಸಾರಿಗೆ ಇಲಾಖೆಯು ಏಪ್ರಿಲ್ 1 ರಿಂದ ಬಸ್ಸುಗಳು ಮತ್ತು ಸರಕು ಸಾಗಣೆದಾರರಿಗೆ ಪ್ರತ್ಯೇಕ ಲೇನ್ ಗುರ್ತಿಸಿದ್ದು, ಕಟ್ಟುನಿಟ್ಟಾಗಿ ಜಾರಿಗೆ ತರಲಿದೆ. ದೆಹಲಿಯ 15 ಆಯ್ದ ರಸ್ತೆಗಳಲ್ಲಿ ಬಸ್ಸುಗಳು ಮತ್ತು ಸರಕು ಸಾಗಣೆದಾರರಿಗೆ ಪ್ರತ್ಯೇಕ ಲೇನ್ ಇರುತ್ತದೆ. ಈ ವಿಶೇಷ ಲೇನ್‌ಗಳಲ್ಲಿ ಇತರೆ ವಾಹನಗಳು ಸಂಚರಿಸಲು ಅವಕಾಶವಿರುವುದಿಲ್ಲ.

ದೆಹಲಿಯಲ್ಲಿ ಇನ್ಮುಂದೆ ಬಸ್‌ ಮಾರ್ಗದಲ್ಲಿ ಇತರ ವಾಹನಗಳು ಸಂಚರಿಸುವಂತಿಲ್ಲ: 10 ಸಾವಿರ ರೂ.ದಂಡ

ನಿಯಮ ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 192-ಎ ಅಡಿಯಲ್ಲಿ ರೂ.10,000 ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಇಲಾಖೆ ಹೊರಡಿಸಿದ ಪ್ರಕಟಣೆಯ ಪ್ರಕಾರ, ಬಸ್‌ಗಳು ಮತ್ತು ಸರಕು ಸಾಗಣೆದಾರರು ಬಳಸಲು ಮೀಸಲಾದ ಲೇನ್‌ಗಳನ್ನು ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ನಿಗದಿಪಡಿಸಲಾಗಿದೆ. ಉಳಿದ ಸಮಯದಲ್ಲಿ, ಈ ಮೀಸಲಾದ ಲೇನ್‌ಗಳಲ್ಲಿ ಇತರ ವಾಹನಗಳನ್ನು ಓಡಿಸಲು ಅನುಮತಿಸಲಾಗುತ್ತದೆ.

 ದೆಹಲಿಯಲ್ಲಿ ಇನ್ಮುಂದೆ ಬಸ್‌ ಮಾರ್ಗದಲ್ಲಿ ಇತರ ವಾಹನಗಳು ಸಂಚರಿಸುವಂತಿಲ್ಲ: 10 ಸಾವಿರ ರೂ.ದಂಡ

ಮೊದಲ ಹಂತದಲ್ಲಿ ಆಯ್ಕೆಯಾದ 46 ಕಾರಿಡಾರ್‌ಗಳ ಪೈಕಿ 15ನ್ನು ಪ್ರಾಯೋಗಿಕ ಯೋಜನೆಯಡಿ ಆರಂಭಿಸಲಾಗುವುದು. ಇವುಗಳಲ್ಲಿ ದೆಹಲಿಯ ಅನುವ್ರತ್ ಮಾರ್ಗ ಟಿ-ಪಾಯಿಂಟ್‌ನಿಂದ ಪುಲ್ ಪ್ರಹ್ಲಾದ್ ಟಿ-ಪಾಯಿಂಟ್, ಆಶ್ರಮ ಚೌಕದಿಂದ ಬಾದರ್‌ಪುರ ಬಾರ್ಡರ್, ಜನಕ್‌ಪುರಿಯಿಂದ ಮಧುಬನ್ ಚೌಕ್, ಮೋತಿ ನಗರದಿಂದ ದ್ವಾರಕಾ ಮೋರ್, ಬ್ರಿಟಾನಿಯಾ ಚೌಕ್‌ನಿಂದ ಧೌಲಾ ಕ್ವಾನ್, ಕಾಶ್ಮೀರ್ ಗೇಟ್ ಐಎಸ್‌ಬಿಟಿಯಿಂದ ಅಪ್ಸರಾ ಬಾರ್ಡರ್, ಬಿಹೋಪುರ ಸೇತುವೆ, ಸಹಿ ಜಹಾಂಗೀರ್ಪುರಿ, ಮೆಟ್ರೋ ನಿಲ್ದಾಣ-ಕಾಶ್ಮೀರ್ ಗೇಟ್ ISBT ಮತ್ತು ITO-ಅಂಬೇಡ್ಕರ್ ನಗರ ಇತ್ಯಾದಿ.

ದೆಹಲಿಯಲ್ಲಿ ಇನ್ಮುಂದೆ ಬಸ್‌ ಮಾರ್ಗದಲ್ಲಿ ಇತರ ವಾಹನಗಳು ಸಂಚರಿಸುವಂತಿಲ್ಲ: 10 ಸಾವಿರ ರೂ.ದಂಡ

ರಸ್ತೆಗಳನ್ನು ಸುರಕ್ಷಿತವಾಗಿಸಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಜನದಟ್ಟಣೆಯನ್ನು ನಿಭಾಯಿಸಲು ದೆಹಲಿ ಸರ್ಕಾರವು ಬಸ್ ಲೇನ್ ಜಾರಿ ಅಭಿಯಾನವನ್ನು ಪ್ರಾರಂಭಿಸುತ್ತಿದೆ ಎಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಹೇಳಿದ್ದಾರೆ. ಕ್ಲಸ್ಟರ್ ಬಸ್, ಬಸ್ ಲೇನ್‌ಗಳು ಮತ್ತು ಸಾರಿಗೆ, ಪೊಲೀಸ್ ಜಾರಿ ತಂಡಗಳ DTC ಮತ್ತು ಚಾಲಕರಿಗೆ ತಿಳಿಸಲು ದೆಹಲಿ ಸರ್ಕಾರ PWD ಗೆ ಸೂಚನೆಗಳನ್ನು ನೀಡಿದೆ.

ದೆಹಲಿಯಲ್ಲಿ ಇನ್ಮುಂದೆ ಬಸ್‌ ಮಾರ್ಗದಲ್ಲಿ ಇತರ ವಾಹನಗಳು ಸಂಚರಿಸುವಂತಿಲ್ಲ: 10 ಸಾವಿರ ರೂ.ದಂಡ

ಕೈಲಾಶ್ ಗೆಹ್ಲೋಟ್ ಪ್ರಕಾರ, ವಿಶೇಷ ಲೇನ್ ಪ್ರಾರಂಭಿಸುವ ಮೊದಲು ನಾಗರಿಕರಿಗೆ ತಿಳಿಸಲು ಬೃಹತ್ ಅಭಿಯಾನವನ್ನು ಪ್ರಾರಂಭಿಸಲಾಗುವುದು. ರಸ್ತೆಗಳಲ್ಲಿನ ವಿಶೇಷ ಲೇನ್‌ಗಳನ್ನು ಸರಿಯಾಗಿ ಗುರುತಿಸಲು ಪಿಡಬ್ಲ್ಯುಡಿ ಇಲಾಖೆಗೆ ತಿಳಿಸಲಾಗಿದೆ ಎಂದು ಹೇಳಿದರು. ಸಾಮಾನ್ಯ ಮತ್ತು ವಿಶೇಷ ಲೇನ್‌ಗಳ ನಡುವಿನ ವ್ಯತ್ಯಾಸವನ್ನು ಜನರು ತಿಳಿದುಕೊಳ್ಳಲು ಸೂಕ್ತವಾದ ಸ್ಥಳಗಳಲ್ಲಿ ಎಚ್ಚರಿಕೆ ಅಥವಾ ಸೈನ್ ಬೋರ್ಡ್‌ಗಳನ್ನು ಸಹ ಹಾಕಲಾಗುತ್ತದೆ.

ದೆಹಲಿಯಲ್ಲಿ ಇನ್ಮುಂದೆ ಬಸ್‌ ಮಾರ್ಗದಲ್ಲಿ ಇತರ ವಾಹನಗಳು ಸಂಚರಿಸುವಂತಿಲ್ಲ: 10 ಸಾವಿರ ರೂ.ದಂಡ

ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ ಮತ್ತು ಮೋಟಾರು ವಾಹನಗಳ ಕಾಯ್ದೆ, 1988, ದೆಹಲಿ ನಿರ್ವಹಣೆ ಮತ್ತು ಪಾರ್ಕಿಂಗ್ ಸ್ಥಳದ ನಿಯಮಗಳ ನಿರ್ವಹಣೆ, 2019 ರ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ದೆಹಲಿ ಸಾರಿಗೆ ಇಲಾಖೆಯು ದೆಹಲಿ ಸಾರಿಗೆ ನಿಗಮ ಮತ್ತು ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮಾಡೆಲ್ ಟ್ರಾನ್ಸಿಟ್ ಸಿಸ್ಟಮ್ಸ್ ಲಿಮಿಟೆಡ್‌ಗೆ ತಮ್ಮ ಚಾಲಕರು ಹೊಸ ನಿಯಮಗಳ ಬಗ್ಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಲು ಸಲಹೆಯನ್ನು ನೀಡಿದೆ.

ದೆಹಲಿಯಲ್ಲಿ ಇನ್ಮುಂದೆ ಬಸ್‌ ಮಾರ್ಗದಲ್ಲಿ ಇತರ ವಾಹನಗಳು ಸಂಚರಿಸುವಂತಿಲ್ಲ: 10 ಸಾವಿರ ರೂ.ದಂಡ

ಈ ವಿಶೇಷ ಲೇನ್‌ನಲ್ಲಿ ಬಸ್‌ಗಳು ಮತ್ತು ಸರಕು ಸಾಗಣೆ ವಾಹನಗಳ ನಿಲುಗಡೆಯನ್ನು ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಸಂಬಂಧಪಟ್ಟ ವಾಹನದ ಮಾಲೀಕರಿಗೆ ದಂಡ ವಿಧಿಸಬಹುದು ಅಥವಾ ಪೊಲೀಸರು ವಾಹನವನ್ನು ಜಪ್ತಿ ಮಾಡಬಹುದು. ಈ ನಿಯಮಗಳು ಅನ್ವಯವಾಗುವ ನಿರ್ದಿಷ್ಟ ಕಾರಿಡಾರ್‌ಗಳನ್ನು ಗುರುತಿಸುವುದು ಮತ್ತು ಸೂಕ್ತವಾದ ಬೋರ್ಡ್‌ಗಳು ಮತ್ತು ಚಿಹ್ನೆಗಳನ್ನು ಸ್ಥಾಪಿಸುವುದು ಲೋಕೋಪಯೋಗಿ ಇಲಾಖೆ ಜವಾಬ್ದಾರಿಯಾಗಿದೆ.

ದೆಹಲಿಯಲ್ಲಿ ಇನ್ಮುಂದೆ ಬಸ್‌ ಮಾರ್ಗದಲ್ಲಿ ಇತರ ವಾಹನಗಳು ಸಂಚರಿಸುವಂತಿಲ್ಲ: 10 ಸಾವಿರ ರೂ.ದಂಡ

ಲೇನ್ ಶಿಸ್ತು ಜಾರಿಗೊಳಿಸಲು ಸಾರಿಗೆ ಇಲಾಖೆ ಎರಡು ಪಾಳಿಯಲ್ಲಿ ಎರಡು ತಂಡಗಳನ್ನು ನಿಯೋಜಿಸಲಿದೆ. ಬಸ್ ಮಾರ್ಗದಲ್ಲಿ ಅಡ್ಡಿಪಡಿಸುವ ವಾಹನಗಳನ್ನು ತೆರವುಗೊಳಿಸಲು ಕ್ರೇನ್ ಅನ್ನು ಬಳಸಲಾಗುವುದು. ಅಡ್ಡಿಪಡಿಸುವ ವಾಹನಗಳ ವಿಡಿಯೋ ಅಥವಾ ಛಾಯಾಚಿತ್ರಗಳನ್ನು ಸಾಕ್ಷ್ಯವಾಗಿ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೆಹಲಿಯಲ್ಲಿ ಇನ್ಮುಂದೆ ಬಸ್‌ ಮಾರ್ಗದಲ್ಲಿ ಇತರ ವಾಹನಗಳು ಸಂಚರಿಸುವಂತಿಲ್ಲ: 10 ಸಾವಿರ ರೂ.ದಂಡ

ಕಳೆದ ವರ್ಷ ಆಮ್ ಆದ್ಮಿ ಪಕ್ಷದ ಸರ್ಕಾರವು ಸಾರಿಗೆಗೆ ಅನುಕೂಲವಾಗುವಂತೆ ದೆಹಲಿಯಲ್ಲಿ ವಿಶೇಷ ಬಸ್ ಲೇನ್‌ಗಳನ್ನು ಸ್ಥಾಪಿಸಲು ನಿರ್ಧರಿಸಿತ್ತು. ಅಕ್ರಮ ನಿಲುಗಡೆ ಮತ್ತು ಬಸ್ ಮಾರ್ಗಗಳ ಅತಿಕ್ರಮಣವನ್ನು ತೆರೆವುಗೊಳಿಸಲು ಸರ್ಕಾರ ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಇದರ ಭಾಗವಾಗಿಯೇ ರಸ್ತೆಯ ಎಡಭಾಗವನ್ನು ಬಸ್‌ಗಳಿಗೆ ಮೀಸಲಿಟ್ಟಿದ್ದು, ಇತರ ವಾಹನಗಳು ಇದಕ್ಕೆ ಅಡ್ಡಿಪಡಿಸಿದಲ್ಲಿ ಕ್ರಮ ತೆಗೆದುಕೊಳ್ಳಲಿದೆ.

ದೆಹಲಿಯಲ್ಲಿ ಇನ್ಮುಂದೆ ಬಸ್‌ ಮಾರ್ಗದಲ್ಲಿ ಇತರ ವಾಹನಗಳು ಸಂಚರಿಸುವಂತಿಲ್ಲ: 10 ಸಾವಿರ ರೂ.ದಂಡ

ಈ ಹಿಂದೆ ದೆಹಲಿ BRTನಲ್ಲಿ ವಿಶೇಷ ಬಸ್ ಮಾರ್ಗವನ್ನು ಹೊಂದಿತ್ತು. ಆದರೆ ಇದನ್ನು ರಸ್ತೆಯ ಮಧ್ಯದಲ್ಲಿ ರಚಿಸಲಾದ ಕಾರಣ ಭಾರೀ ಟ್ರಾಫಿಕ್ ಜಾಮ್ ಮತ್ತು ಅಪಘಾತಗಳಿಗೆ ಕಾರಣವಾಗಿ ವಿಫಲಗೊಂಡಿತ್ತು. ಆದರೆ ಈ ಹೊಸ ವಿಶೇಷ ಲೇನ್‌ಗಳನ್ನು ಅಸ್ತಿತ್ವಕ್ಕೆ ತಂದು ಮೀಸಲಾದ ಬಸ್ ಲೇನ್‌ಗಳನ್ನು ವಿಸ್ತರಿಸಲಾಗಿದೆ. ಇದು ಮೇಲೆ ತಿಳಿಸಿರುವ ಯಾವುದೇ ಸಮಸ್ಯೆಗಳನ್ನು ತಂದೊಡ್ಡುವುದಿಲ್ಲ ಎಂದು ದೆಹಲಿ ಸರ್ಕಾರ ತಿಳಿಸಿದೆ.

Article Published On: Thursday, March 24, 2022, 18:11 [IST]
English summary
Special lanes for bus in delhi and new traffic rules from april 1st
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+