ಲಾಕ್‌ಡೌನ್ ಎಫೆಕ್ಟ್: ಮಗನನ್ನು ಕರೆತರಲು 1,400 ಕಿ.ಮೀ ಸ್ಕೂಟರ್ ಸವಾರಿ ಮಾಡಿದ ದಿವ್ಯಾಂಗ ಮಹಿಳೆ..!
ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿರುವ ಕಾರಣ ಸಾಕಷ್ಟು ಜನರು ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರನ್ನು ಕರೆತರಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ತಮ್ಮಿಂದ ದೂರವಿರುವ ಮಕ್ಕಳನ್ನು ಕರೆತರಲು ಪೋಷಕರು ಸಾಕಷ್ಟು ಶ್ರಮ ಪಡುತ್ತಿದ್ದಾರೆ.

ಲಾಕ್‌ಡೌನ್‌ನಿಂದ ಸಿಕ್ಕಿಬಿದ್ದ ತನ್ನ ಮಗನನ್ನು ಕರೆತರಲು ಪುಣೆಯ ದಿವ್ಯಾಂಗ ಮಹಿಳೆಯೊಬ್ಬರು 1400 ಕಿ.ಮೀ ದೂರ ಪ್ರಯಾಣ ಬೆಳೆಸಿದ್ದಾರೆ. ದೇಶದಲ್ಲಿ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸಿದ ಕಾರಣ ತಮ್ಮ ಮಗನನ್ನು ಕರೆತರಲು ನಿರ್ಧರಿಸಿದರು.

ಈ ದಿವ್ಯಾಂಗ ಮಹಿಳೆಯ ಹೆಸರು ಸೋನು ಖಂಡರೆ. 37 ವರ್ಷದ ಈ ಮಹಿಳೆ ವಿಶೇಷವಾಗಿ ತಯಾರಿಸಿದ ಹೋಂಡಾ ಆಕ್ಟಿವಾದಲ್ಲಿಯೇ ಬಹು ದೂರದಲ್ಲಿದ್ದ ತನ್ನ ಮಗನನ್ನು ಕರೆತಂದಿದ್ದಾರೆ. ಅವರ ಮಗ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿರುವ ಅವರ ಸಂಬಂಧಿಕರ ಮನೆಯಲ್ಲಿ ಸಿಕ್ಕಿಬಿದ್ದಿದ್ದ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಅವರ ಮಗ ಅನಾರೋಗ್ಯದಿಂದ ಬಳಲುತ್ತಿದ್ದ. ಇದರಿಂದ ಗಾಬರಿಗೊಂಡ ಮಹಿಳೆ ತಮ್ಮ ಮಗನನ್ನು ವಾಪಸ್ ಕರೆತರಲು ನಿರ್ಧರಿಸಿದ್ದಾರೆ. ಮಗನನ್ನು ಕರೆತರಲು ಸೋನು ಖಂಡರೆ ನೆರೆಹೊರೆಯವರ ಹಾಗೂ ಸಂಬಂಧಿಕರ ಸಹಾಯವನ್ನು ಕೋರಿದರು.

ಆದರೆ ಯಾರೂ ಅವರಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಈ ಕಾರಣಕ್ಕೆ ಸ್ವತಃ ತಾವೇ ತಮ್ಮ ಮಗನನ್ನು ಕರೆತರುವ ಉದ್ದೇಶದಿಂದ ವಿಶೇಷ ಪಾಸ್‌ಗಾಗಿ ಪೊಲೀಸರಿಗೆ ಅರ್ಜಿ ಸಲ್ಲಿಸಿದರು. ಪೊಲೀಸರು ಅವರಿಗೆ ಮೂರು ದಿನಗಳಲ್ಲಿ ಪಾಸ್ ನೀಡಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಬೇರೆ ಯಾವುದೇ ವಾಹನವನ್ನು ವ್ಯವಸ್ಥೆ ಮಾಡಲು ಆಕೆಗೆ ಸಾಧ್ಯವಾಗಲಿಲ್ಲ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಇದರಿಂದ ಅವರು ತಮ್ಮ ಹೋಂಡಾ ಆಕ್ಟಿವಾವನ್ನು ಬಳಸಲು ಮುಂದಾದರು. ಕಾರನ್ನು ಬಾಡಿಗೆಗೆ ಪಡೆದಿದ್ದರೆ, ರೂ.8000 ಪಾವತಿಸಬೇಕಾಗಿತ್ತು. ಸೋನುರವರು ತಮಗಾಗಿ ಊಟದ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಅವರನ್ನು ಪ್ರತಿಯೊಂದು ಪೊಲೀಸ್ ಪಾಯಿಂಟ್‌ನಲ್ಲಿ ನಿಲ್ಲಿಸಿ ತಪಾಸಣೆ ನಡೆಸಲಾಗಿತ್ತು.

ಈ ಪ್ರಯಾಣದಲ್ಲಿ ಒಮ್ಮೆ ಪೆಟ್ರೋಲ್ ಮುಗಿದು ಹೋದರೆ, ಮತ್ತೊಮ್ಮೆ ಟಯರ್ ಪಂಕ್ಚರ್ ಆಗಿತ್ತು. ವಿಶ್ರಾಂತಿ ಪಡೆಯಲು ಪೆಟ್ರೋಲ್ ಪಂಪ್ ಬಳಿಯ ಫುಟ್‌ಪಾತ್‌ನಲ್ಲಿ ಮಲಗಿದ್ದರು. ಸಿಸಿಟಿವಿ ಅಳವಡಿಸಿದ್ದ ಕಾರಣ ಅಲ್ಲಿಯೇ ಇರುವುದು ಸೂಕ್ತವೆಂದು ಭಾವಿಸಿದ್ದರು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಏಪ್ರಿಲ್ 25ರಂದು ಮಾತ್ರ ತಮ್ಮ ಸಂಬಂಧಿಕರ ಮನೆ ತಲುಪಿದ ಅವರು ಅಲ್ಲಿ ಹೆಚ್ಚು ಹೊತ್ತು ಕಳೆಯದೇ ಬೇಗನೆ ಹೊರಟರು. ಅವರ ಬಳಿಯಿದ್ದ ಪಾಸ್ ಅವಧಿ ಸಹ ಮುಕ್ತಾಯವಾಗುವುದರಲ್ಲಿತ್ತು. ಪಾಸ್ ಅವಧಿ ಮುಗಿಯುವ ಒಂದು ಗಂಟೆ ಮೊದಲು ತಾವು ಸುರಕ್ಷಿತವಾಗಿ ಮನೆಗೆ ತಲುಪಿದ್ದಾಗಿ ಅವರು ಹೇಳಿದರು.

ಮನೆಗೆ ಬಂದ ವಾಪಸ್ ಆದ ನಂತರ ಹತ್ತಿರದಲ್ಲಿದ್ದ ಆಸ್ಪತ್ರೆಯಲ್ಲಿ ತಪಾಸಣೆಗೊಳಗಾಗಿದ್ದಾರೆ. 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕೆಂದು ವೈದ್ಯರು ಇಬ್ಬರಿಗೂ ಸಲಹೆ ನೀಡಿದ್ದಾರೆ. ಇಬ್ಬರಲ್ಲೂ ಕರೋನಾದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಹಿಂದೆ ತೆಲಂಗಾಣದ ಮಹಿಳೆಯೊಬ್ಬರು ತಮ್ಮ ಮಗನನ್ನು ಕರೆತರಲು ಆಂಧ್ರಪ್ರದೇಶಕ್ಕೆ ತೆರಳಿದ್ದರು. ಅವರು ಸಹ ಸ್ಕೂಟರ್ ಮೂಲಕ ಪ್ರಯಾಣ ಬೆಳೆಸಿದ್ದರು ಎಂಬುದು ವಿಶೇಷ.
ಚಿತ್ರ ಕೃಪೆ: ಮುಂಬೈ ತಕ್ / ಯೂಟ್ಯೂಬ್


Click it and Unblock the Notifications








