ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ ನಾಗರಿಕರು ಇಂಧನದ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು, ಇತ್ತೀಚೆಗೆ ಶ್ರೀಲಂಕಾದ ಕ್ರಿಕೆಟಿಗ ಚಮಿಕಾ ಕರುಣಾರತ್ನೆ ಅವರು ತಮ್ಮ ಕಾರಿಗೆ ಇಂಧನ ತುಂಬಲು ಎರಡು ದಿನಗಳ ಕಾಲ ಪೆಟ್ರೋಲ್ ಪಂಪ್ ಕ್ಯೂನಲ್ಲಿ ನಿಲ್ಲಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ಯಾರನ್ನೂ ಬಾಧಿಸದೆ ಬಿಟ್ಟಿಲ್ಲ. ಸಾಮಾನ್ಯ ವ್ಯಕ್ತಿಯಾಗಲಿ ಅಥವಾ ಸೆಲೆಬ್ರಿಟಿಗಳಾಗಲಿ, ಪ್ರತಿಯೊಬ್ಬರೂ ದೇಶದ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ತೀರ್ವ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂಧನದ ಕೊರತೆಯು ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ.

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

ವಿದೇಶಗಳಿಂದ ಆಮದು ಮಾಡಿಕೊಂಡಿದ್ದ ತೈಲ ಖಾಲಿಯಾಗುತ್ತಿದ್ದಂತೆ ಇಂಧನವನ್ನು ಪಡೆಯುವುದು ಶ್ರೀಲಂಕಾ ಪ್ರಜೆಗಳಿಗೆ ಭಾರೀ ಕಷ್ಟವಾಗುತ್ತಿದೆ. ಯಾವ ಮಟ್ಟಿಗೆ ಅಂದರೆ ಕ್ರಿಕೆಟಿಗ ಚಾಮಿಕಾ ಕರುಣಾರತ್ನ ಕೂಡ ಇಂಧನವನ್ನು ಸುಲಭವಾಗಿ ಪಡೆಯಲಾಗದಿರುವುದು ಇದಕ್ಕೆ ಉದಾಹರಣೆಯಾಗಿದೆ. ಸದ್ಯ ಅಧಿಕಾರಿಗಳು ಶಾಲಾ, ಕಾಲೇಜುಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿದೆ. ದೇಶಕ್ಕೆ ಸ್ವಲ್ಪ ಇಂಧನ ಸಿಗುವವರೆಗೆ ಮನೆಯಿಂದ ಕೆಲಸ ಮಾಡಲು ಕಂಪನಿಗಳು ಉದ್ಯೋಗಿಗಳಿಗೆ ತಿಳಿಸಲಾಗಿದೆ.

ಇಂಧನ ಬಂದರೂ ಪೂರೈಕೆ ಸೀಮಿತವಾಗಿದ್ದು, ಜನರು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ಕರುಣಾರತ್ನ ಅವರು ಮುಂಬರುವ ಕ್ರಿಕೆಟ್ ಕಾರ್ಯಯೋಜನೆಗಳಿಗಾಗಿ ತಮ್ಮ ಕಾರಿಗೆ ಇಂಧನ ತುಂಬಲು ಪೆಟ್ರೋಲ್ ಪಂಪ್‌ಗೆ ಹೋದಾಗ ಬಂಕ್ ಅನ್ನು ನೋಡಿ ದಂಗಾಗಿದ್ದಾರೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ದೇಶಕ್ಕೆ ಸಹಾಯ ಹಸ್ತ ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

"ಕ್ಲಬ್ ಕ್ರಿಕೆಟ್ ಸೀಸನ್ ಇರುವುದರಿಂದ ನಾವು ಕೊಲಂಬೊದಲ್ಲಿ ಮತ್ತು ಇತರ ಸ್ಥಳಗಳಿಗೆ ಅಭ್ಯಾಸಕ್ಕಾಗಿ ಹೋಗಬೇಕಾಗಿದೆ. ಆದರೆ ನಾನು ಕಳೆದ 2 ದಿನಗಳಿಂದ ಇಂಧನಕ್ಕಾಗಿ ಸರದಿಯಲ್ಲಿ ನಿಂತಿದ್ದೇನೆ. ನಾನು 10,000 ರೂ.ಗೆ ಇಂಧನ ತುಂಬಿದ್ದೇನೆ, ಇದು 2-3 ದಿನಗಳವರೆಗೆ ಬರಬಹುದು."

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

"ಭಾರತವು ಸಹೋದರ ರಾಷ್ಟ್ರದಂತಿದೆ, ನಮಗೆ ತುಂಬಾ ಸಹಾಯ ಮಾಡುತ್ತಿದ್ದಾರೆ. ನಾನು ಅವರಿಗೆ ಧನ್ಯವಾದ ತಿಳಿಸಲೇಬೇಕು. ನಮಗೆ ಸಮಸ್ಯೆಗಳಿವೆ. ನಾವು ಕಷ್ಟದಲ್ಲಿರುವಾಗ ಅವರು ನಮ್ಮಗೆ ಸಹಕರಿಸುತ್ತಿದ್ದಾರೆ. ಅದಕ್ಕಾಗಿ ತುಂಬಾ ಧನ್ಯವಾದಗಳು. ಎಲ್ಲದಕ್ಕೂ ಧನ್ಯವಾದಗಳು ಎಂದು ಅವರು ANI ಸುದ್ದಿ ಸಂಸ್ಥೆಗೆ ತಿಳಿಸಿದರು.

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ, ಶ್ರೀಲಂಕಾವು ಕ್ರಿಕೆಟ್ ಚಟುವಟಿಕೆಗಳನ್ನು ಮುಂದುವರಿಸಲು ಸಮರ್ಥವಾಗಿದೆ. ಇತ್ತೀಚೆಗೆ, ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಎಲ್ಲಾ ಮಾದರಿಯ ದ್ವಿಪಕ್ಷೀಯ ಸರಣಿಗಾಗಿ ಶ್ರೀಲಂಕಾಗೆ ಭೇಟಿ ನೀಡಿತ್ತು. ನಿಯೋಜನೆಯು ಯಶಸ್ವಿ ಮುಕ್ತಾಯವನ್ನು ಕಂಡಿತು. ಇಂತಹ ಆರ್ಥಿಕ ಅವ್ಯವಸ್ಥೆಯ ನಡುವೆ ಪ್ರವಾಸವನ್ನು ಕೈಬಿಡದಿದ್ದಕ್ಕಾಗಿ ಆಸ್ಟ್ರೇಲಿಯನ್ ಆಟಗಾರರಿಗೆ ಲಂಕಾದವರು ಧನ್ಯವಾದ ತಿಳಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

ಈ ಅವಧಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಕೂಡ ದ್ವಿಪಕ್ಷೀಯ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು. ಪಾಕಿಸ್ತಾನ-ಶ್ರೀಲಂಕಾ ಪ್ರವಾಸ ಮತ್ತು ಲಂಕಾ ಪ್ರೀಮಿಯರ್ ಲೀಗ್ ಸೇರಿದಂತೆ ಇನ್ನೂ ಕೆಲವು ಕ್ರಿಕೆಟ್ ಕಾರ್ಯಯೋಜನೆಗಳನ್ನು ಅನುಸರಿಸಬೇಕಾಗಿದೆ.

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

ಶ್ರೀಲಂಕಾ ಬಿಕ್ಕಟ್ಟಿನ ಕುರಿತು ನಾಳೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ

ನಾಳೆ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಶ್ರೀಲಂಕಾ ಬಿಕ್ಕಟ್ಟಿನ ಕುರಿತು ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ಮಾಹಿತಿ ನೀಡಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡು ಮೂಲದ ಡಿಎಂಕೆ ಮತ್ತು ಎಐಎಡಿಎಂಕೆ ದುರ್ಬಲ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ನೆರೆಯ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟನ್ನು ಸುಧಾರಿಸಲು ಭಾರತ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದವು.

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

ಈ ಕುರಿತು ಎಐಎಡಿಎಂಕೆ ನಾಯಕ ಎಂ ತಂಬಿದುರೈ ಮಾತನಾಡಿ, ಶ್ರೀಲಂಕಾದಲ್ಲಿನ ಬಿಕ್ಕಟ್ಟು ಪರಿಹರಿಸಲು ಭಾರತ ಮಧ್ಯಪ್ರವೇಶಿಸಬೇಕು. ಡಿಎಂಕೆ ನಾಯಕ ಟಿ.ಆರ್. ಬಾಲು ಅವರು ದ್ವೀಪ ರಾಷ್ಟ್ರವನ್ನು ಎದುರಿಸುತ್ತಿರುವ ಪರಿಸ್ಥಿತಿಯನ್ನು ಪರಿಹರಿಸಲು ಭಾರತದ ಮಧ್ಯಸ್ಥಿಕೆಗೆ ಒತ್ತಾಯಿಸಿದರು.

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಕೇಂದ್ರ ಸಚಿವರಾದ ಸೀತಾರಾಮನ್ ಮತ್ತು ಜೈಶಂಕರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಶ್ರೀಲಂಕಾ ಪರಿಸ್ಥಿತಿ ಕುರಿತು ಸರ್ಕಾರ ಸರ್ವಪಕ್ಷ ಸಭೆ ನಡೆಸಲಿದೆ. ಶ್ರೀಲಂಕಾವು ಏಳು ದಶಕಗಳಲ್ಲಿ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ, ತೀವ್ರ ವಿದೇಶಿ ವಿನಿಮಯ ಕೊರತೆಯು ಆಹಾರ, ಇಂಧನ ಮತ್ತು ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳ ಆಮದುಗೆ ಅಡ್ಡಿಯಾಗಿದೆ ಎಂದರು.

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಹಾಗೂ ಶ್ರೀಲಂಕಾ ನಾಯಕರನ್ನು ಭೇಟಿ ಮಾಡಿದ ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೆ, ರಾಜಕೀಯ ಬಿಕ್ಕಟ್ಟು ಮತ್ತು ಆರ್ಥಿಕ ಪ್ರಕ್ಷುಬ್ಧತೆಯ ನಡುವೆ ನಿರ್ಣಾಯಕ ಘಟ್ಟದಲ್ಲಿರುವ ದೇಶದಲ್ಲಿ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಬೆಂಬಲವನ್ನು ಮುಂದುವರಿಸುವುದಾಗಿ ಶ್ರೀಲಂಕಾಕ್ಕೆ ಭರವಸೆ ನೀಡಿದರು.

ಆರ್ಥಿಕ ಬಿಕ್ಕಟ್ಟು: ಪೆಟ್ರೋಲ್‌ಗಾಗಿ 2 ದಿನ ಕ್ಯೂನಲ್ಲಿ ನಿಂತ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬುಧವಾರ ಮಾಲ್ಡೀವ್ಸ್‌ಗೆ ಪರಾರಿಯಾಗಿ ಗುರುವಾರ ಸಿಂಗಾಪುರಕ್ಕೆ ಬಂದಿಳಿದ ರಾಜಪಕ್ಸೆ ಅವರು ಶುಕ್ರವಾರ ರಾಜೀನಾಮೆ ನೀಡಿದ್ದರು. ಇತ್ತ ದೇಶದಲ್ಲಿ ಪ್ರತಿಭಟನಾಕಾರರು ಅಧ್ಯಕ್ಷ ಮತ್ತು ಪ್ರಧಾನಿ ಸೇರಿದಂತೆ ಅನೇಕ ಸರ್ಕಾರಿ ಕಟ್ಟಡಗಳಿಗೆ ನುಗ್ಗಿದ್ದರು. ಪರಿಸ್ಥಿತಿ ಇನ್ನೂ ಹದಗೆಡುತ್ತಿದ್ದು, ಭಾರತದ ಮಧ್ಯಸ್ಥಿಕೆಯಿಂದ ಎಷ್ಟರ ಮಟ್ಟಿಗೆ ಪರಿಸ್ಥಿತಿ ಸುಧಾರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

Most Read Articles

Kannada
English summary
Sri Lankan cricketer Chamika Karunaratne stood in queue for 2 days for petrol
Story first published: Monday, July 18, 2022, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X