ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಯಾರಾದರೂ ಪ್ರಯಾಣಿಕರು ಅನಾರೋಗ್ಯಕ್ಕೆ ಒಳಗಾದರೆ, ಫ್ಲೈಟ್ ಅಟೆಂಡೆಂಟ್‌ಗಳು ತಕ್ಷಣವೇ ಅನಾರೋಗ್ಯಕ್ಕೆ ಒಳಗಾಗುವ ಪ್ರಯಾಣಿಕರಿಗೆ ಚಿಕಿತ್ಸೆ ನೀಡುತ್ತಾರೆ.

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ಈ ರೀತಿ ಚಿಕಿತ್ಸೆ ನೀಡಲು ಫ್ಲೈಟ್ ಅಟೆಂಡೆಂಟ್‌ಗಳಿಗೆ ತರಬೇತಿ ನೀಡಲಾಗಿರುತ್ತದೆ. ಹಾಗೆಯೇ ನಿಯಮಗಳ ಪ್ರಕಾರ ವಿಮಾನಗಳಲ್ಲಿ ಪ್ರಥಮ ಚಿಕಿತ್ಸೆ ನೀಡಲು ಬೇಕಾದ ಸಾಮಗ್ರಿಗಳನ್ನು ಇಡಲಾಗಿರುತ್ತದೆ. ಆದರೆ ವಿಮಾನಗಳಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲದ ಕಾರಣ, ಫ್ಲೈಟ್ ಅಟೆಂಡೆಂಟ್‌ಗಳು ಪ್ರಥಮ ಚಿಕಿತ್ಸೆ ನೀಡಲು ತೊಂದರೆ ಎದುರಿಸುತ್ತಾರೆ.

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ಇದು ಅಕ್ಕಪಕ್ಕದಲ್ಲಿರುವ ಪ್ರಯಾಣಿಕರಿಗೂ ಕಠಿಣ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಈ ತೊಂದರೆಗಳ ಹೊರತಾಗಿಯೂ, ಫ್ಲೈಟ್ ಅಟೆಂಡೆಂಟ್‌ಗಳು ಅನಾರೋಗ್ಯಕ್ಕೆಒಳಗಾಗುವ ಪ್ರಯಾಣಿಕರಿಗೆ ಚಿಕಿತ್ಸೆ ನೀಡುತ್ತಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ವಿಮಾನದಲ್ಲಿರುವ ಪ್ರಯಾಣಿಕರಲ್ಲಿ ಯಾರಾದರೂ ವೈದ್ಯರಿದ್ದರೆ ಅವರ ನೆರವು ಪಡೆಯಲಾಗುತ್ತದೆ. ಕೆಲವು ತುರ್ತು ಪರಿಸ್ಥಿತಿಗಳಲ್ಲಿ ಅನಾರೋಗ್ಯಕ್ಕೀಡಾಗುವ ಪ್ರಯಾಣಿಕರ ಪ್ರಾಣ ಉಳಿಸಲು ಪೈಲಟ್‌ಗಳು ಹತ್ತಿರದ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ಲ್ಯಾಂಡಿಂಗ್ ಮಾಡುತ್ತಾರೆ.

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ಆದರೆ ಅನಾರೋಗ್ಯಕ್ಕೀಡಾಗುವ ಪ್ರಯಾಣಿಕನು ವಿಮಾನ ಇಳಿಯುವ ಕೆಲವು ನಿಮಿಷಗಳ ಮೊದಲು ಸಾಯುವ ಸಾಧ್ಯತೆಗಳಿರುತ್ತವೆ. ಯಾರಾದರೂ ಹಾಗೆ ಮೃತರಾದರೆ ಅವರ ದೇಹವನ್ನು ಕಂಬಳಿಯಿಂದ ಮುಚ್ಚಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ನಂತರ ವಿಮಾನದಲ್ಲಿ ಯಾವುದಾದರೂ ಖಾಲಿ ಆಸನವಿದ್ದರೆ, ಆ ಆಸನದಲ್ಲಿ ಮೃತಪಟ್ಟವರ ದೇಹವನ್ನು ಇಡಲಾಗುತ್ತದೆ. ವಿಮಾನದಲ್ಲಿ ಯಾವುದೇ ಆಸನಗಳುಖಾಲಿಯಾಗಿಲ್ಲದಿದ್ದರೆ, ಮೃತ ದೇಹವನ್ನು ಶವಗಳನ್ನು ಹಿಡಿದಿಟ್ಟುಕೊಳ್ಳುವ ಬ್ಯಾಗ್'ಗಳಲ್ಲಿ ಇಡಲಾಗುತ್ತದೆ.

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ನಂತರ ಅವರ ದೇಹವನ್ನು ವಿಮಾನದ ಹಿಂಭಾಗದಲ್ಲಿರುವ ಅಡುಗೆಮನೆಯಲ್ಲಿ ಇಡಲಾಗುತ್ತದೆ. ಕೆಲವೊಮ್ಮೆ ಫ್ಲೈಟ್ ಅಟೆಂಡೆಂಟ್‌ಗಳು ಮೃತಪಟ್ಟವರ ದೇಹದ ಬಳಿ ಕುಳಿತು ಪ್ರಯಾಣಿಸಬೇಕಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ಕೆಲ ತಿಂಗಳುಗಳ ಹಿಂದೆ ವಿಮಾನ ಹಾರಾಟದ ಸಮಯದಲ್ಲಿ ವ್ಯಕ್ತಿಯೊಬ್ಬ ಮೃತನಾಗಿದ್ದ. ಕೆಲವು ಪ್ರಯಾಣಿಕರು ಆತನ ಮೃತ ದೇಹದೊಂದಿಗೆ ಸುಮಾರು 2 ಗಂಟೆಗಳ ಕಾಲ ಪ್ರಯಾಣಿಸಿದ್ದರು ಎಂಬುದು ಗಮನಾರ್ಹ.

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ಸಾಮಾನ್ಯವಾಗಿ ವಿಮಾನಗಳು ಮೃತಪಟ್ಟವರ ಶವಗಳನ್ನು ಇರಿಸಲು ವಿಶೇಷ ಸೌಲಭ್ಯಗಳನ್ನು ಹೊಂದಿರುವುದಿಲ್ಲ. ಮೃತರಾದವರ ದೇಹಗಳನ್ನು ಇರಿಸುವ ವಿಧಾನಗಳು ಒಂದು ವಿಮಾನಯಾನ ಸಂಸ್ಥೆಯಿಂದ ಇನ್ನೊಂದು ವಿಮಾನಯಾನ ಸಂಸ್ಥೆಗೆ ಬೇರೆ ಬೇರೆಯಾಗಿರುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ಆದರೆ ಮೃತರಾದವರ ದೇಹಗಳನ್ನು ಗೌರವದಿಂದ ನೋಡಿಕೊಳ್ಳುವುದು ಫ್ಲೈಟ್ ಅಟೆಂಡೆಂಟ್‌ಗಳು ಸೇರಿದಂತೆ ವಿಮಾನ ಸಿಬ್ಬಂದಿಗಳ ಜವಾಬ್ದಾರಿಯಾಗಿದೆ.ವಿಮಾನವು ಲ್ಯಾಂಡಿಂಗ್ ಆದ ನಂತರ ಎಲ್ಲಾ ಪ್ರಯಾಣಿಕರಿಗೆ ಕೆಳಕ್ಕೆ ಇಳಿಯಲು ಅವಕಾಶ ನೀಡಲಾಗುತ್ತದೆ.

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ಎಲ್ಲಾ ಪ್ರಯಾಣಿಕರು ಕೆಳಗಿಳಿದ ನಂತರ, ವೈದ್ಯರು ಬಂದು ಮೃತ ದೇಹವನ್ನು ಪರೀಕ್ಷಿಸಿದ ನಂತರ ಮೃತ ದೇಹವನ್ನು ಹೊರಗೆ ತರಲಾಗುತ್ತದೆ. ಬಹುಶಃ ಮೃತ ವ್ಯಕ್ತಿಯು ಏಕಾಂಗಿಯಾಗಿ ಪ್ರಯಾಣಿಸಿದ್ದರೆ, ವಿಮಾನಯಾನ ಸಂಸ್ಥೆಗಳು ಅವರ ಸಂಬಂಧಿಕರನ್ನು ಸಂಪರ್ಕಿಸುತ್ತವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ಸಂಬಂಧಿಕರಿಗೆ ವಿಮಾನದಲ್ಲಿ ಏನಾಯಿತು ಎಂಬುದನ್ನು ಸಂಪೂರ್ಣವಾಗಿ ವಿವರಿಸಲಾಗುತ್ತದೆ. ಯಾವುದೇ ಪ್ರಯಾಣಿಕರಿಗೆ ತುರ್ತು ವೈದ್ಯಕೀಯ ನೆರವು ಬೇಕಾದರೆ ವಿಮಾನವನ್ನು ಹತ್ತಿರದ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಗುತ್ತದೆ.

ವಿಮಾನದಲ್ಲಿ ಪ್ರಯಾಣಿಕರು ಮೃತಪಟ್ಟ ಸಂದರ್ಭದಲ್ಲಿ ಅನುಸರಿಸುವ ವಿಧಾನಗಳಿವು

ಆದರೆ ವಿಮಾನದಲ್ಲಿ ಯಾರಾದರೂ ಸತ್ತರೆ, ವಿಮಾನವನ್ನು ಲ್ಯಾಂಡಿಂಗ್ ಮಾಡುವ ಸಂದರ್ಭಗಳು ತೀರಾ ಕಡಿಮೆ. ಒಮ್ಮೊಮ್ಮೆ ವಿಮಾನಗಳನ್ನು ಕೆಳಕ್ಕೆ ಇಳಿಸುವುದೇ ಇಲ್ಲ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Steps followed when a passenger dies during a flight journey. Read in Kannada.
Story first published: Wednesday, March 17, 2021, 20:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X