Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೆಇಇ ಪರೀಕ್ಷೆಗೆ ಹಾಜರಾಗಲು ನಾನಾ ಸಂಕಷ್ಟಗಳನ್ನು ಎದುರಿಸಿದ ವಿದ್ಯಾರ್ಥಿ
ಇತ್ತೀಚೆಗೆ ಜೆಇಇ ಪರೀಕ್ಷೆಯನ್ನು ದೇಶಾದ್ಯಂತ ನಡೆಸಲಾಯಿತು. ಈ ಸಮಯದಲ್ಲಿ ವಿದ್ಯಾರ್ಥಿಗಳು ನಾನಾ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಕರೋನಾ ವೈರಸ್ ಅಬ್ಬರದಿಂದಾಗಿ ಸಾರ್ವಜನಿಕ ಸಾರಿಗೆಗಳು ಮೊದಲಿನಂತೆ ಕಾರ್ಯನಿರ್ವಹಿಸುತ್ತಿಲ್ಲ.

ಇದರಿಂದಾಗಿ ದೂರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದೇ ರೀತಿ ಪಶ್ಚಿಮ ಬಂಗಾಳದಲ್ಲಿ ತಂದೆ ಮಗ ಇಬ್ಬರು ಪರೀಕ್ಷಾ ಕೇಂದ್ರವನ್ನು ತಲುಪಲು ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ಆರು ಗಂಟೆಗಳ ಕಾಲ 75 ಕಿ.ಮೀಗಳಷ್ಟು ದೂರ ಸೈಕಲ್ ತುಳಿದ ಬಳಿಕ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾರೆ.

ದೇಶಾದ್ಯಂತ ಈ ಪರೀಕ್ಷೆ ನಡೆಸಬಾರದು ಎಂದು ಒತ್ತಾಯಿಸಲಾಗುತ್ತಿತ್ತು. ಆದರೆ ಅಂತಿಮವಾಗಿ ಪರೀಕ್ಷೆಗಳನ್ನು ನಡೆಸಲಾಯಿತು. 19 ವರ್ಷದ ವಿದ್ಯಾರ್ಥಿ ತನ್ನ ತಂದೆ ರಬಿಯವರೊಂದಿಗೆ ಮಂಗಳವಾರ ಸಂಜೆ 6 ಗಂಟೆಗೆ ಎರಡು ಸೈಕಲ್ ಗಳ ಮೂಲಕ ಪ್ರಯಾಣವನ್ನು ಆರಂಭಿಸಿದ್ದಾನೆ. ನಂತರ ಅವರಿಬ್ಬರು ದೋಣಿ ಮೂಲಕ ಬಿದ್ಯಾದರಿ ನದಿ ದಾಟಿದ್ದಾರೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ನಂತರ ಸತತ ನಾಲ್ಕು ಗಂಟೆಗಳ ಕಾಲ ಸೈಕಲ್ ಪ್ರಯಾಣದ ನಂತರ ಪಿಯಾಲಿ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆ ತಲುಪಿದ್ದಾರೆ. ಆ ರಾತ್ರಿ ಅಲ್ಲಿ ತಂಗಿದ್ದ ನಂತರ ಮರು ದಿನ ಒಂದು ಸೈಕಲ್ ನಲ್ಲಿ ಪ್ರಯಾಣ ಆರಂಭಿಸಿದ್ದಾರೆ.

ಈ ವೇಳೆ ತಂದೆ ರಬಿ ಸೈಕ್ಲಿಂಗ್ ಮಾಡುತ್ತಿದ್ದರೆ ಅವರ ಮಗ ಹಿಂದೆ ಕುಳಿತು ಓದುತ್ತಿದ್ದ. ಬೆಳಿಗ್ಗೆ 9 ಗಂಟೆ ಸುಮಾರಿಗೆ ಸೋನಾರ್‌ಪುರ ತಲುಪಿ ತಮ್ಮ ಸೈಕಲ್ ಅನ್ನು ಅಲ್ಲಿಯೇ ನಿಲ್ಲಿಸಿ ಆಟೋದಲ್ಲಿ ಪ್ರಯಾಣಿಸಿದ್ದಾರೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಎರಡು ಸಾರ್ವಜನಿಕ ಬಸ್ಸುಗಳನ್ನು ಬದಲಿಸಿ ಬೆಳಿಗ್ಗೆ 11 ಗಂಟೆ ವೇಳೆಗೆ ಕೋಲ್ಕತ್ತಾದ ಸಾಲ್ಟ್ ಲೇಕ್ ಸೆಕ್ಟರ್ 5 ತಲುಪಿದ್ದಾರೆ. ಮೂಲಗಳ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಪರೀಕ್ಷೆ ಆರಂಭವಾಗುವುದಕ್ಕೆ ಮುಂಚೆಯೇ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾರೆ.

ರೈಲುಗಳ ಸಂಚಾರವಿದ್ದರೆ ಪ್ರಯಾಣವು ಇಷ್ಟೊಂದು ತ್ರಾಸದಾಯಕವಾಗುತ್ತಿರಲಿಲ್ಲವೆಂದು ವಿದ್ಯಾರ್ಥಿ ದಿಗಂತಾ ಹೇಳಿದ್ದಾನೆ. ಕಳೆದ ಎರಡು ವರ್ಷಗಳಿಂದ ಈ ಪರೀಕ್ಷೆಗೆ ತಯಾರಿ ನಡೆಸಿದ್ದ ಕಾರಣ ಪರೀಕ್ಷೆಗೆ ಹಾಜರಾಗಲು ಬಯಸಿದ್ದೆ. ಯಾವುದೇ ಕಾರಣಕ್ಕೂ ಈ ಪರೀಕ್ಷೆಗೆ ತಪ್ಪಿಸಿಕೊಳ್ಳಲು ಸಿದ್ಧನಿರಲಿಲ್ಲವೆಂದು ಆತ ಹೇಳಿದ್ದಾನೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಈ ಪ್ರಯಾಣದ ಬಗ್ಗೆ ಮಾತನಾಡಿರುವ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ರಬಿರವರು ನನ್ನ ಮಗನ ಪರೀಕ್ಷಾ ಸಿದ್ದತೆಯು 75 ಕಿ.ಮೀ ಸೈಕಲ್ ತುಳಿಯಲು ನನಗೆ ಪ್ರೇರಣೆ ನೀಡಿತು. ಸೋಂಕು ಹರಡಬಹುದೆಂಬ ಭಯ ನನ್ನ ಮನಸ್ಸಿನಲ್ಲಿ ಮನೆ ಮಾಡಿತ್ತು ಎಂದು ಹೇಳಿದ್ದಾರೆ. ಜೆಇಇ ಪರೀಕ್ಷೆಗೆ ಸಿದ್ದತೆ ನಡೆಸುತ್ತಿರುವ ದಿಗಂತಾ 12ನೇ ತರಗತಿಯಲ್ಲಿ 85% ಅಂಕಗಳನ್ನು ಗಳಿಸಿದ್ದಾನೆ. ಆತನ ಭವಿಷ್ಯಕ್ಕೆ ಶುಭ ಹಾರೈಸೋಣ.