ಪಟ್ಟು ಬಿಡದೇ ಆಂಬ್ಯುಲೆನ್ಸ್‌ನಲ್ಲೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ
ವಿದ್ಯಾರ್ಥಿನಿಯೊಬ್ಬಳು ಅಪಘಾತಕ್ಕೆ ಸಿಲುಕಿದ ಕಾರಣ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಲಾಗದ ಪರಿಸ್ಥಿತಿಯಲ್ಲಿ ಆಂಬುಲನ್ಸ್‌ನಲ್ಲೇ ಪರೀಕ್ಷೆ ಬರೆದಿದ್ದಾಳೆ. ಈ ಪರೀಕ್ಷೆಗೂ ಮೂರು ದಿನಗಳ ಹಿಂದೆ ಇನ್ನೊಂದು ಪರೀಕ್ಷೆ ಬರೆದು ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತವಾಗಿತ್ತು. ಪರೀಕ್ಷಾ ಕೇಂದ್ರಕ್ಕೆ ಆಗಮಿಲಾಗದ ಕಾರಣ ಶಾಲಾ ಆಡಳಿತವು ಈ ಸೌಲಭ್ಯ ಕಲ್ಪಿಸಿದೆ.
ಭಾರತದಲ್ಲಿ ವಿದೇಶಗಳಂತಲ್ಲದೇ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗಿರುತ್ತದೆ. ಅದು ಅಲ್ಲದೇ 10 ನೇ ತರಗತಿ ಶಾಲಾ ಪರೀಕ್ಷೆಗಳು ದೇಶದ ಬಹುತೇಕ ರಾಜ್ಯಗಳಲ್ಲಿ ಬೆಳಗ್ಗೆ 9 ರಿಂದ ಆರಂಭವಾಗುತ್ತವೆ. ವಿದ್ಯಾರ್ಥಿಗಳು ದೂರದ ಸ್ಥಳಗಳಿಂದ ಬರುವವರಾಗಿದ್ದರೇ ಟ್ರಾಫಿಕ್ ಜಾಮ್ ಭಯದಲ್ಲೇ ಮನೆಯಿಂದ ಹೊರಡಬೇಕಾಗುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇನ್ನು ಇತ್ತೀಚೆಗೆ ನಡೆದ ಘಟನೆಯಲ್ಲಿ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವಿದ್ಯಾರ್ಥಿನಿ ಒಬ್ಬಳಿಗೆ ಅಪಘಾತ ಆಗಿರುವುದು ಮುಂಬೈನಲ್ಲಿ ವರದಿಯಾಗಿದೆ.

ಮುಂಬೈನ 10 ನೇ ತರಗತಿಯ 15 ವರ್ಷದ ಮುಬಾಶ್ಶಿರಾ ಸಯ್ಯದ್ ಎಂಬ ವಿದ್ಯಾರ್ಥಿನಿಗೆ ಇಲ್ಲಿನ ಬಾಂದ್ರಾದ ಅಂಜುಮನ್-ಐ-ಇಸ್ಲಾಂನ ಡಾ ಎಂಐಜೆ ಗರ್ಲ್ಸ್ ಹೈಸ್ಕೂಲ್ ಪರೀಕ್ಷಾ ಕೇಂದ್ರಾವಾಗಿತ್ತು. ಈ ಹಿಂದೆ (ಮೂರು ದಿನಗಳ ಹಿಂದೆ) ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ರಸ್ತೆ ದಾಟುವಾಗ ಆಕೆಯ ಎಡ ಪಾದದ ಮೇಲೆ ಕಾರು ಹರಿದಿದೆ. ಅಪಘಾತದ ನಂತರ ವಿದ್ಯಾರ್ಥಿನಿಯನ್ನು ಡಿಕ್ಕಿ ಹೊಡೆದ ಚಾಲಕ ಮತ್ತು ಮುಬಾಶ್ಶಿರಾ ಸಹಪಾಠಿಗಳು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು.
ವೈದ್ಯರು ಎರಡು ವಾರಗಳ ಕಾಲ ಸಂಪೂರ್ಣ ಬೆಡ್ ರೆಸ್ಟ್ ಅನ್ನು ಶಿಫಾರಸು ಮಾಡಿದರೂ, ಮುಬಾಶ್ಶಿರಾ ತನ್ನ ಉಳಿದ ಪರೀಕ್ಷೆಗಳನ್ನು ಬರೆಯಲು ನಿರ್ಧರಿಸಿದ್ದಳು. ವಿದ್ಯಾರ್ಥಿನಿಯ ಶಾಲೆ ಮತ್ತು ಪರೀಕ್ಷಾ ಕೇಂದ್ರವು ಆಕೆಯ ಪರೀಕ್ಷಾ ಸ್ಥಳಕ್ಕೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಸಹಕರಿಸಿತು, ಹಾಗೆಯೇ ತರಗತಿಯ ಶಿಕ್ಷಕ ಡಾ. ಸನಮ್ ಶೇಖ್ ಬೆನ್ನೆಲುಬಾಗಿ ನಿಂತರು. ಕೊನೆಗೆ ತಾನು ಅಂದುಕೊಂಡಂತೆ ಮುಬಾಶ್ಶಿರಾ ಆಂಬ್ಯುಲೆನ್ಸ್‌ನಲ್ಲಿಯೇ ತನ್ನ ಎರಡು ಗಂಟೆಗಳ ವಿಜ್ಞಾನ (ಜೀವಶಾಸ್ತ್ರ) ಪರೀಕ್ಷೆಯನ್ನು ಬರೆದಳು.
ವಿದ್ಯಾರ್ಥಿನಿಗೆ ಪರೀಕ್ಷೆ ಬರಿಯಲು ಸೌಲಭ್ಯವೇನೋ ಒದಗಿಸಿದರು, ಆದರೆ ಸಾಮಾನ್ಯ ಪರೀಕ್ಷಾ ಕೇಂದ್ರಕ್ಕಿಂತ ತುಂಬಾ ಕಟ್ಟುನಿಟ್ಟಿನ ಭದ್ರತೆಯಲ್ಲಿ ವಿದ್ಯಾರ್ಥಿನಿಗೆ ಪರೀಕ್ಷೆ ನೀಡಲಾಯಿತು. ಅದೇ ಶಾಲೆಯ 9 ವರ್ಷದ ವಿದ್ಯಾರ್ಥಿನಿ ನೂರ್ಸಾಬ ಅನ್ಸಾರಿ ಬರಹಗಾರ್ತಿಯಾಗಿ ಪರೀಕ್ಷೆ ಬರೆದಿದ್ದಾಳೆ. ಸೇಂಟ್ ಸ್ಟಾನಿಸ್ಲಾಸ್ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಆರೋಕಿಯಮ್ಮಲ್ ಆಂಟೋನಿ ಅವರು ಆಂಬ್ಯುಲೆನ್ಸ್ ಒಳಗೆ ನಿಗಾವಹಿಸಲು ಒಪ್ಪಿಕೊಂಡರು, ಹಾಗೆಯೇ ಪೊಲೀಸ್ ಅಧಿಕಾರಿ ಮತ್ತು ಪ್ಯೂನ್ ಆಂಬ್ಯುಲೆನ್ಸ್ ಕಾವಲುಗಾರರಾಗಿ ನೋಡಿಕೊಂಡರು.
ತನಗೆ ಬೇರೆಯವರು ಉತ್ತರ ಬರೆಯುವಾಗ ಸತತ ಎರಡು ಗಂಟೆಗಳ ಕಾಲ ಪ್ರಶ್ನೆ ಪತ್ರಿಕೆಯನ್ನು ಹಿಡಿದಿಟ್ಟುಕೊಂಡು ಪ್ರಶ್ನೆಗಳಿಗೆ ಉತ್ತರ ಹೇಳಿದ್ದಾಳೆ. ಸವಾಲುಗಳ ಹೊರತಾಗಿಯೂ ಮುಂದುವರಿಯುವ ಆಕೆಯ ದೃಢಸಂಕಲ್ಪವು ಧೈರ್ಯ ಮತ್ತು ಶಕ್ತಿಗೆ ಸಾಕ್ಷಿಯಾಗಿದೆ. ಶಾಲಾ ಆಡಳಿತ ಮತ್ತು ಸಿಬ್ಬಂದಿ ಮುಬಾಶ್ಶಿರಾ ಅವರ ವೈದ್ಯಕೀಯ ವೆಚ್ಚಗಳಿಗೆ ಕೊಡುಗೆ ನೀಡಿದರು. ಆಕೆಯ ಅಗತ್ಯದ ಸಮಯದಲ್ಲಿ ಸದಾ ಬೆಂಬಲಿಸುವುದಾಗಿ ಹೇಳಿದರು. ಈ ಸ್ಪೂರ್ತಿದಾಯಕ ಕಥೆಯು "ಎಂದಿಗೂ ಬಿಟ್ಟುಕೊಡುವುದಿಲ್ಲ" ಎಂಬ ಮನೋಭಾವಕ್ಕೆ ಪ್ರಬಲ ಉದಾಹರಣೆಯಾಗಿದೆ.
ಮೇಲೆ ಹೇಳಿದಂತೆ ಇತ್ತೀಚೆಗೆ ವೈರಲ್ ಆಗಿರುವ ಹಲವು ವಿಡಿಯೋಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ತಡವಾಗುತ್ತದೆ ಎಂದು ರಸ್ತೆಗಳಲ್ಲಿ ಓಡುವುದನ್ನು ನೋಡಬಹುದು. ಕೆಲವರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದರೆ ವಾಹನಕ್ಕಿಂತ ನಡಿಗೆಯೇ ಉತ್ತಮ ಎಂದು ವಾಹನಗಳನ್ನು ಇಳಿದು ಪರೀಕ್ಷಾ ಕೇಂದ್ರಗಳಿಗೆ ಓಡಿರುವ ಸಂದರ್ಭಗಳು ಕೂಡ ಇವೆ. ಈ ವೇಳೆ ಆತುರದಲ್ಲಿರುವ ವಿದ್ಯಾರ್ಥಿಗಳಿಗೆ ಅಪಘಾತಗಳು ನಡೆಯುವ ಸಂಭವಗಳು ಕೂಡ ಹೆಚ್ಚಾಗಿರುತ್ತವೆ. ಹಾಗಾಗಿ ಸರ್ಕಾರಗಳು ಪರಿಕ್ಷಾ ಸಂದರ್ಭಗಳಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications