ವಿದ್ಯೆ ಕಲಿಸಿದ ಗುರುವಿಗೆ ಮರೆಯಲಾಗದ ಉಡುಗೊರೆ ನೀಡಿದ ವಿದ್ಯಾರ್ಥಿಗಳು

ಸಾಧಾರಣವಾಗಿ ಯಾವುದಾದರೂ ವಸ್ತುವನ್ನು ಖರೀದಿಸಲು ಹಲವಾರು ಬಾರಿ ಯೋಚಿಸುತ್ತೇವೆ. ಆದ್ರೆ ಯಾವುದಾದರೂ ಒಂದು ವಸ್ತುವನ್ನು ಮತ್ತೊಬ್ಬರಿಗೆ ಉಡುಗೊರೆಯಾಗಿ ನೀಡಬೇಕಾದರೆ ಇನ್ನು ಹೆಚ್ಚು ಎಚ್ಚರಿಕೆಯಿಂದ ಮತ್ತು ನೀಡಿದ ಉಡುಗೊರೆ ಇಷ್ಟವಾಗುತ್ತೊ ಇಲ್ಲವೊ ಎಂದು ನೂರಾರು ಬಾರಿ ಯೋಚಿಸುತ್ತೇವೆ.

ವಿದ್ಯೆ ಕಲಿಸಿದ ಗುರುವಿಗೆ ಮರೆಯಲಾಗದ ಉಡುಗೊರೆ ನೀಡಿದ ವಿದ್ಯಾರ್ಥಿಗಳು

ಅದರಲ್ಲಿಯು ನಮ್ಮ ಮನಸ್ಸಿಗೆ ಹೆಚ್ಚು ಹತ್ತಿರವಾದ ವ್ಯಕ್ತಿಗಳಿಗಂತು ಎಷ್ಟು ಖರ್ಚಾದರು ಪರ್ವಾಗಿಲ್ಲ. ಗಿಫ್ಟ್ ಸ್ವೀಕರಿಸಿದವರ ಮನಸ್ಸಿಗೆ ನೋವಾಗದಿರುವ ಹಾಗೆ ಉಡುಗೊರೆಯನ್ನು ನೀಡುವುದು ಒಂದು ಜವಾಬ್ದಾರಿಯುತ ಕೆಲಸವಾಗಿರುತ್ತೆ ಎಂದರೆ ತಪ್ಪಾಗುವುದಿಲ್ಲ. ತಂದೆ-ತಾಯಿ ತಮ್ಮ ಮಕ್ಕಳಿಗೆ ನೀಡುವ ಉಡುಗೊರೆಯಾಗಲಿ ಅಥವಾ ಸ್ನೇಹಿತರು ನೀಡುವ ಉಡುಗೊರೆಯಲ್ಲಾಗಲಿ ಯಾವುದೇ ರೀತಿಯಾದ ನಿರೀಕ್ಷಣೆ ಇರುವುದಿಲ್ಲ.

ವಿದ್ಯೆ ಕಲಿಸಿದ ಗುರುವಿಗೆ ಮರೆಯಲಾಗದ ಉಡುಗೊರೆ ನೀಡಿದ ವಿದ್ಯಾರ್ಥಿಗಳು

ಇಂದು ನಾವು ಹೇಳಲಿರುವ ವಿಚಾರ ಏನಂದ್ರೆ ಶಿಕ್ಷಕರ ದಿನಾಚರಣೆಯಂದು ನಮಗೆ ವಿದ್ಯೆ ಕಲಿಸಿದ ಗುರುವಿಗೆ ಗುಲಾಬಿ ಹೂವೊಂದನ್ನು ನೀಡಿ ಅಭಿನಂದಿಸುವುದು ನಮ್ಮ ಸಣ್ಣ ವಯಸ್ಸಿನಿಂದ ಅಭ್ಯಾಸವಾಗಿ ಹೋಗಿರುತ್ತೆ ಅಲ್ಲವೇ. ಆದ್ರೆ ಈ ಶಾಲೆಯಲ್ಲಿನ ವಿದ್ಯಾರ್ಥಿಗಳು ತಮ್ಮ ಗುರುವಿಗೆ ಮರೆಯಲಾಗದ ಉಡುಗೊರೆಯೊಂದನ್ನು ನೀಡಿರುವುದು ಎಲ್ಲರ ಕಣ್ತುಂಬುವ ಹಾಗೆ ಮಾಡಿದೆ.

ವಿಧ್ಯೆ ಕಲಿಸಿದ ಗುರುವಿಗೆ ಮರೆಯಲಾಗದ ಉಡುಗೊರೆ ನೀಡಿದ ವಿಧ್ಯಾರ್ಥಿಗಳು

ಹೌದು, ತಮಿಳುನಾಡಿನ ಮಧುರೈ ನಗರದಲ್ಲಿರುವ ಸಿಎಸ್ಐ ಶಾಲೆಯ ವಿದ್ಯಾರ್ಥಿಗಳು ಅದೇ ಶಾಲೆಯಲ್ಲಿ ಹಲವಾರು ವರ್ಷ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದಶಿಕ್ಷಕರೊಬ್ಬರಿಗೆ ಬುಲೆಟ್ ನೀಡಿದ್ದಾರೆ.

ವಿಧ್ಯೆ ಕಲಿಸಿದ ಗುರುವಿಗೆ ಮರೆಯಲಾಗದ ಉಡುಗೊರೆ ನೀಡಿದ ವಿಧ್ಯಾರ್ಥಿಗಳು

1996ರಿಂದ ಸಿಎಸ್ಐ ಶಾಲೆಯಲ್ಲಿ ತಮ್ಮ ಕಾರ್ಯನಿರ್ವಹಿಸುತ್ತಿದ್ದ ವೀರಮುತ್ತುರವರು ತಮ್ಮ ವಿದ್ಯಾರ್ಥಿಗಳೊಡನೆ ಅತ್ಯಂತ ಸರಳವಾಗಿ ಒಬ್ಬ ಗುರುವಾಗಿ ಮತ್ತು ಒಬ್ಬ ಸ್ನೇಹಿತನಾಗಿ ಮಕ್ಕಳಿಗೆ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದ್ದು, ಅವರು ನಿವೃತ್ತಿಯಾಗುವ ಸಮಯದಲ್ಲಿ ವಿದ್ಯಾರ್ಥಿಗಳು ಬುಲೆಟ್ ಬೈಕ್ ಅನ್ನು ಅವರಿಗೆ ಸಮರ್ಪಿಸಿದ್ದಾರೆ.

ವಿಧ್ಯೆ ಕಲಿಸಿದ ಗುರುವಿಗೆ ಮರೆಯಲಾಗದ ಉಡುಗೊರೆ ನೀಡಿದ ವಿಧ್ಯಾರ್ಥಿಗಳು

ಜನ್ಮ ನೀಡಿದ ತಂದೆ-ತಾಯಿಯವರ ಸ್ಥಾನದಲ್ಲಿ ನಮಗೆ ವಿಧ್ಯೆ ಕಲಿಸಿದ ಗುರುವನ್ನು ಕೂಡಾ ಅದೇ ಸ್ಥಾನದಲ್ಲಿ ಗೌರವಿಸುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಕಾಣಲು ಸಾಧ್ಯ. ನಿವೃತ್ತಿಗೊಂಡು ತಾವು ಇಷ್ಟು ದಿನಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ಶಾಲೆಗೆ ಮತ್ತು ವಿದ್ಯಾರ್ಥಿಗಳಿಗೆ ವಿದಾಯ ಹೇಳುವ ಸಮಯ ಬಂದಾಗ ಅಲ್ಲಿನ ವಿಧ್ಯಾರ್ಥಿಗಳು ಕಣ್ಣೀರು ಹಾಕುತ್ತಾ ಅವರಿಗೆ ವಿದಾಯ ಹೇಳಿದ್ದಾರೆ.

ವಿಧ್ಯೆ ಕಲಿಸಿದ ಗುರುವಿಗೆ ಮರೆಯಲಾಗದ ಉಡುಗೊರೆ ನೀಡಿದ ವಿಧ್ಯಾರ್ಥಿಗಳು

ವೀರಮುತ್ತುರವರ ವೃತ್ತಿಜೀವನವನ್ನು ಮತ್ತು ಅವರ ಸರಳತೆಯನ್ನು ಕಣ್ಣಾರೆ ನೋಡಿದ ವಿದ್ಯಾರ್ಥಿಗಳೊಡನೆ, ವಿದ್ಯಾರ್ಥಿಗಳ ಪೋಷಕರು ಮತ್ತು ಅಲ್ಲಿನ ಸ್ಥಳೀಯರೆಲ್ಲ ಆಗಮಿಸಿ ಅವರಿಗೆ ಬೀಳ್ಕೊಡುಗೆಯನ್ನು ನೀಡುರುವ ಘಟನೆಯನ್ನು ನೆನೆದರೆ ನಮಗೆ ನಮ್ಮ ಬಾಲ್ಯದಲ್ಲಿ ಪಾಠ ಕಲಿಸಿದ ಗುರುಗಳು ನಮಗೆ ನೆನಪಾಗದೆಯೆ ಇರಲಾರರು.

MOST READ: ಒಂದು ಬಾರಿ ಚಾರ್ಜ್‍ಗೆ 312 ಕಿ.ಮೀ ಮೈಲೇಜ್ ನೀಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ.?

ವಿಧ್ಯೆ ಕಲಿಸಿದ ಗುರುವಿಗೆ ಮರೆಯಲಾಗದ ಉಡುಗೊರೆ ನೀಡಿದ ವಿಧ್ಯಾರ್ಥಿಗಳು

ಇನ್ನು ವಿಮುತ್ತುರವರು ತಮ್ಮ ವಿಧ್ಯಾರ್ಥಿಗಳಿಂದ ಉಡುಗೊರೆಯಾಗಿ ಪಡೆದ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕಿನ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಏಕೆಂದರೆ ಈ ಬೈಕಿನ ಬಗ್ಗೆ ತಿಳಿಯದಿರುವವರು ತುಂಬಾ ಕಡಿಮೆ ಅಂತಾನೇ ಹೇಳಬಹುದು.

ವಿಧ್ಯೆ ಕಲಿಸಿದ ಗುರುವಿಗೆ ಮರೆಯಲಾಗದ ಉಡುಗೊರೆ ನೀಡಿದ ವಿಧ್ಯಾರ್ಥಿಗಳು

ತನ್ನ ಕ್ಲಾಸಿಕ್ ಶೈಲಿನ ಬೈಕ್ ವಿನ್ಯಾಸಗಳಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿನ ಅತಿ ಹೆಚ್ಚು ಮಾರಾಟಗೊಂಡ ಬೈಕ್ ಬುಲೆಟ್ ಎಂದರೆ ತಪ್ಪಗಲಾರದು. ರಸ್ತೆಗೊಂದು ಬುಲೆಟ್ ಬೈಕ್ ಇರುವುದನ್ನು ನಾವೀಗ ಕಾಣುತ್ತಿದ್ದೇವೆ. ಅಷ್ಟರ ಮಟ್ಟಿಗೆ ಈ ಬೈಕ್ ಮಾರುಕಟ್ಟೆಯಲ್ಲಿ ಕ್ಲಿಕ್ ಆಗಿದೆ.

ವಿಧ್ಯೆ ಕಲಿಸಿದ ಗುರುವಿಗೆ ಮರೆಯಲಾಗದ ಉಡುಗೊರೆ ನೀಡಿದ ವಿಧ್ಯಾರ್ಥಿಗಳು

ತನ್ನ ವಿನ್ಯಾಸ, ತೂಕದ ದೇಹ ಮತ್ತು ಎಂಜಿನ್ ಸಾಮರ್ಥ್ಯದಿಂದ ರಾಯಲ್ ಎನ್‍ಫೀಲ್ಡ್ ಬೈಕ್‍ಗಳು ಕೇವಲ ಯುವಸಮುದಾಯಕ್ಕೆ ಮಾತ್ರವಲ್ಲದೇ, ವಯಸ್ಕರಿಗೆ ಹಾಗು ಮಹಿಳೆಯರಿಗೆ ಕೂಡಾ ಅಚ್ಚುಮೆಚ್ಚು. ಕೆಲ ಮಹಿಳೆಯರಿಗೆ ಬೈಕ್ ರೈಡ್ ಮಾಡಲು ಬಾರದಿದ್ದರು ತಮ್ಮ ದುಡಿಮೆಯಿಂದ ಬಂದ ಹಣದಿಂದ ತಮ್ಮ ತಂದೆಗೆ ಅಥವಾ ಪತಿಯರಿಗೆ ರಾಯಲ್ ಎನ್‍ಫೀಲ್ಡ್ ಬೈಕ್ ಅನ್ನು ಕೊಡಿಸಿರುವ ಘಟನೆಗಳ ಬಗ್ಗೆ ಕೂಡಾ ನಾವು ತಿಳಿದಿದ್ದೇವೆ.

Source: Tamil Asianet News

Article Published On: Wednesday, January 9, 2019, 12:19 [IST]
English summary
Students Gifted Their Headmaster A Bullet bike. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+