ಉಡುಪಿ ಹೆದ್ದಾರಿಯಲ್ಲಿ ಹಿರೋಯಿಸಂ ತೋರಿಸಲು ಹೋದ ಪುಂಡರು: ಮುಂದೇನಾಯ್ತು?.. Video Viral

ದೇಶದ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ವಾಹನಗಳಲ್ಲಿ ಸ್ಟಂಟ್ ಮಾಡುವುದು ಅಪರಾಧವಾಗಿದೆ. ಇದರ ಬಗ್ಗೆ ಅರಿವಿದ್ದರೂ ಇಂತಹ ದುರ್ವರ್ತನೆ ತೋರಿ, ಅನೇಕರು ತೊಂದರೆಗೆ ಸಿಲುಕುತ್ತಾರೆ. ಕೆಲವೊಮ್ಮೆ ತಮ್ಮ ಪ್ರಾಣಕ್ಕೂ ಹಾನಿ ಮಾಡಿಕೊಳ್ಳಬಹುದು. ಇಲ್ಲವೇ ಬೇರೆಯವರ ಜೀವಕ್ಕೂ ಎರವಾಗಬಹುದು. ಆದರೂ, ಈ ರೀತಿಯ ಹುಚ್ಚು ಸಾಹಸ ಮಾಡುವ ಪ್ರವೃತ್ತಿಯನ್ನು ಬಿಡುವುದೇ ಇಲ್ಲ.

ಸದ್ಯ, ಅಂತಹದ್ದೇ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅದು ಬೇರೆ ಯಾವುದೇ ರಾಜ್ಯದಲ್ಲಿ ನಡೆದಿಲ್ಲ. ನಮ್ಮ ಕರ್ನಾಟಕದಲ್ಲಿಯೇ ಜರುಗಿದೆ. ಉಡುಪಿಯ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಯುವಕರು ಹುಚ್ಚಾಟ ನಡೆಸಿದ್ದು, ಮಾಡಿದ ತಪ್ಪಿಗೆ ಅಲ್ಲಿನ ಪೊಲೀಸರು ಸರಿಯಾಗಿ ಬುದ್ದಿ ಕಲಿಸಿದ್ದಾರೆ.

ಉಡುಪಿ ಹೆದ್ದಾರಿಯಲ್ಲಿ ಹಿರೋಯಿಸಂ ತೋರಿಸಲು ಹೋದ ಪುಂಡರು: ಮುಂದೇನಾಯ್ತು?.. Video Viral

ರಾಷ್ಟ್ರೀಯ ಹೆದ್ದಾರಿ ಎಂದು ಗೊತ್ತಿದ್ದರೂ, ರೋಡ್ ಡಿವೈಡರ್ ಮೇಲೆ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವಕರ ಗುಂಪೊಂದು, ಈ ಅಪಾಯಕಾರಿ ಜಾಲಿರೈಡ್ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಇದು ಎಲ್ಲೆಡೆ ವೈರಲ್ ಆಗಿತ್ತು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆ, ಪೊಲೀಸರು ತಕ್ಷಣ ಕಾರ್ಯಪ್ರವೃತರಾಗಿದ್ದು, ಆ ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ಜೊತೆಗೆ ಅವರು, ಓಡಿಸುತ್ತಿದ್ದ ಮಹೀಂದ್ರಾ ಥಾರ್, ಟೊಯೊಟಾ ಫಾರ್ಚುನರ್, ಮಾರುತಿ ಸುಜುಕಿ ಬಲೆನೊ ಮತ್ತು ಹುಂಡೈ ಕ್ರೆಟಾ ಕಾರುಗಳನ್ನು ಸೀಜ್ ಮಾಡಿದ್ದಾರೆ. ವಾಹನ ಚಾಲಕರನ್ನು ಉಡುಪಿಯ ಶಾನೂನ್ ಡಿಸೋಜ (25), ಉಡುಪಿಯ ಕೊಡಂತೂರಿನ ವಿವೇಕ್ (23), ಉದ್ಯಾವರ ಗುಡ್ಡೆ ಅಂಗಡಿ ನಿವಾಸಿ, ಅಯಾನ್ (24) ಹಾಗೂ ಕುಂಜಿಬೆಟ್ಟು ನಿವಾಸಿ ವಿಶಾಲುದ್ದೀನ್ (23) ಎಂದು ಗುರುತಿಸಲಾಗಿದೆ.

ಇದೇ ರೀತಿಯ ಹಲವು ಘಟನೆಗಳು ವಿವಿಧ ರಾಜ್ಯದಲ್ಲಿ ವರದಿಯಾಗುತ್ತಲೇ ಇರುತ್ತವೆ. ಅದರಲ್ಲೂ ಇತ್ತೀಚೆಗೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ವಿದ್ಯಾರ್ಥಿಯೊಬ್ಬ ರಸ್ತೆಯಲ್ಲಿ ಸ್ಟಂಟ್ ಮಾಡಿದ್ದರಿಂದ ದೊಡ್ಡ ಮೊತ್ತದ ದಂಡ ವಿಧಿಸಿ, ಆತ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಕೆಲವೇ ದಿನಗಳ ಹಿಂದೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ಧ ವಿಡಿಯೋದಲ್ಲಿ ಬೈಕ್‌ನಲ್ಲಿ ಸ್ಟಂಟ್ ಮಾಡುತ್ತಿದ್ದ ಇಬ್ಬರು ಯುವತಿಯರು ಸ್ವಲ್ಪವು ನಾಚಿಕೆ ಇಲ್ಲದಂತೆ ಚುಂಬಿಸಿಕೊಂಡಿದ್ದರು.

ಆದರೆ, ಈ ಯುವತಿಯರು ಎಲ್ಲಿ ದುರ್ವರ್ತನೆ ತೋರಿದ್ದಾರೆ ಎಂಬುದು ಗೊತ್ತಾಗಿಲ್ಲ. ಇನ್ನು, ದೇಶದ ಸಾರ್ವಜನಿಕ ರಸ್ತೆ ಅಥವಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನ/ ಕಾರುಗಳನ್ನು ಬಳಸಿ, ಸಾಹಸ ಪ್ರದರ್ಶನ ಮಾಡಲು ಅವಕಾಶವೇ ಇಲ್ಲ. ಈ ರೀತಿಯ ಕೆಲಸ ಮಾಡಲು ಹೋಗಿ, ಎಷ್ಟೋ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಪೊಲೀಸರು ಇಂತಹ ಸ್ಟಂಟ್ ಮಾಡಬೇಡಿ ಎಂದು ಹೇಳಿದರೂ ಕೇಳುವುದೇ ಇಲ್ಲ.

ಹಲವರು ತಮ್ಮ ಮೇಲೆ ಪ್ರಕರಣ ದಾಖಲಾಗಿ, ದಂಡ ಕಟ್ಟಿದರೂ ಈ ಚಾಳಿಯನ್ನು ಬಿಡುವುದಿಲ್ಲ. ಆದರೂ, ಸ್ಟಂಟ್ ಮಾಡಬೇಕು ಅಂದುಕೊಂಡರೇ ರೇಸ್ ಟ್ರ್ಯಾಕ್ ಅಥವಾ ನಿಮ್ಮ ಖಾಸಗಿ ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡು ನಡೆಸಬಹುದು. ಮೊದಲೇ ರಾಷ್ಟ್ರಿಯ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಇರುತ್ತವೆ. ಅಂತಹದರಲ್ಲಿ ಉಡುಪಿಯ ಈ ಯುವಕರು ಅಲ್ಲಿಯೇ ಪುಂಡಾಟ ನಡೆಸಲು ಹೋಗಿ, ಪೊಲೀಸರಿಂದ ಸರಿಯಾಗಿ ಬುದ್ದಿ ಕಲಿತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Saturday, May 27, 2023, 16:25 [IST]
English summary
Stunting on public road car seized video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+