ಹೆದ್ದಾರಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ದಾರುಣ ಸಾವು: ಗಸ್ತಿನಲ್ಲಿದ್ದವರಿಗೆ ಡಿಕ್ಕಿ ಹೊಡೆದು ಪರಾರಿ
ಹೆದ್ದಾರಿಯಲ್ಲಿ ಕರ್ತವ್ಯನಿರತ ಸಬ್ ಇನ್ಸ್‌ಪೆಕ್ಟರ್ ಒಬ್ಬರು ದಾರುಣ ಅಂತ್ಯವನ್ನು ಕಂಡಿದ್ದಾರೆ. ಗಸ್ತು ತಿರುಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾದ ಪರಿಣಾಮ ಈ ಅವಘಡ ಸಮಭವಿಸಿದೆ ಎಂದು ಮೂಲಗಳು ತಿಳಿಸಿವೆ. ಡಿಕ್ಕಿ ಹೊಡೆದ ಕಾರು ಚಾಲಕ ಪರಾರಿಯಾಗಿದ್ದು, ಅಪರಾಧಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಳೆದ ಮಂಗಳವಾರ ಮುಂಜಾನೆ ಗಸ್ತು ತಿರುಗುತ್ತಿದ್ದ ವೇಳೆ ದೆಹಲಿಯ 54 ವರ್ಷದ ಸಬ್‌ಇನ್‌ಸ್ಪೆಕ್ಟರ್ ರಾಷ್ಟ್ರೀಯ ಹೆದ್ದಾರಿ-9ರಲ್ಲಿ ಮೃತಪಟ್ಟಿದ್ದಾರೆ. ಪೊಲೀಸರ ಪ್ರಕಾರ, ಸಬ್ ಇನ್ಸ್‌ಪೆಕ್ಟರ್ ಗಂಗಾಸರಣ್ ಬೊಲೆರೋ ಪಿಕಪ್ ಟ್ರಕ್ ಅನ್ನು ಪರಿಶೀಲಿಸುತ್ತಿದ್ದಾಗ ವೇಗವಾಗಿ ಬಂದ ಹೋಂಡಾ ಅಮೇಜ್ ಕಾರು ಅವರಿಗೆ ಮತ್ತು ಪೊಲಿಸ್ ಜಿಪ್ಸಿ ಚಾಲಕನಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ.

ಪ್ರಾಥಮಿಕ ತನಿಖೆಯಲ್ಲಿ, ಮೃತ ಎಸ್‌ಐ ಗಂಗಾಸರಣ್ ಮತ್ತು ಸಹಾಯಕ ಪೊಲೀಸ್ ಉಪನಿರೀಕ್ಷಕ ಅಜಯ್ ತೋಮರ್ ಅವರು ತುರ್ತು ಪ್ರತಿಕ್ರಿಯೆ ವಾಹನ (ಇಆರ್‌ವಿ) ಜಿಪ್ಸಿಯಲ್ಲಿ ಗಸ್ತು ಕರ್ತವ್ಯದಲ್ಲಿದ್ದರು. ಎಸ್‌ಐ ಗಂಗಾಸರಣ್ ಹಾಗೂ ಚಾಲಕ ಜಿಪ್ಸಿಯಿಂದ ಹೊರಬಂದು ವಾಹನ ಪರಿಶೀಲನೆ ನಡೆಸುತ್ತಿದ್ದರೇ, ಎಎಸ್‌ಐ ತೋಮರ್ ಕಾರಿನ ಒಳಗೆ ಕುಳಿತಿದ್ದರು.
ಅಧಿಕಾರಿಯು ಹೊರಬಂದು ತಪಾಸಣೆ ಮಾಡುವಾಗ, ಘಾಜಿಯಾಬಾದ್‌ನಿಂದ ಸರಾಯ್ ಕಾಲೇ ಖಾನ್ ಕಡೆಗೆ ವೇಗವಾಗಿ ಬಂದ ಹೋಂಡಾ ಅಮೇಜ್ ಕಾರು, ಹಿಂದಿನಿಂದ ಎಸ್‌ಐ ಮತ್ತು ಡ್ರೈವರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂನಿಂದ ಪೊಲೀಸರಿಗೆ ಕರೆ ಬಂದ ನಂತರ, ಸ್ಥಳೀಯ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಘಟನೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ರಾಮಗೋಪಾಲ್, ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೊಲೀಸ್ ತಂಡವು ದೆಹಲಿಯ ಪಾಂಡವ್ ನಗರ ಪ್ರದೇಶದಲ್ಲಿ ನಿತ್ಯವೂ ಗಸ್ತು ತಿರುಗುವ ಕರ್ತವ್ಯದಲ್ಲಿದ್ದರು. ಅಪಘಾತ ಮಾಡಿ ಪರಾರಿಯಾದವನ ಮೇಲೆ ಸೆಕ್ಷನ್ 636, 279, 337 ಮತ್ತು 304 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಾಲಕನ ಪತ್ತೆಗಾಗಿ ಪೊಲೀಸರ ತನಿಖೆ ಚುರುಕುಗೊಂಡಿದ್ದು, ಶೀಘ್ರದಲ್ಲೇ ಸೆರೆಯಿಡಿಯುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಅಪಘಾತದ ಬಳಿಕ ಎಲ್ಲಾ ಗಡಿ ಭಾಗಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾನಿಗೊಂಡಿರುವ ಹೋಂಡಾ ಅಮೇಜ್ ಕಾರಿನ ಕುರಿತು ಹುಡುಕಾಟ ಹೆಚ್ಚಾಗಿದೆ. ಅನುಮಾನ ಬಂದ ಎಲ್ಲಾ ವಹನಗಳನ್ನು ಪರಿಶೀಲಿಸುತ್ತಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕಾರಣ ಏನಿರಬಹುದು?: ಹೋಂಡಾ ಅಮೇಜ್ ಕಾರು ಚಾಲಕ ಮದ್ಯ ಕುಡಿದು ವಾಹನ ಚಾಲನೆ ಮಾಡಿರಬಹುದು. ಇಲ್ಲವೇ ನಿಯಂತ್ರಣ ಕಳೆದುಕೊಂಡು ಡಿಕ್ಕಿಯಾಗಿರಬಹುದು ಅಥವಾ ಕಾರಿನಲ್ಲಿ ಅಕ್ರಮವಾಗಿ ಏನನ್ನಾದರು ಸಾಗಿಸುತ್ತಿರಬಹುದು ಎಂದು ಶಂಕಿಸಲಾಗಿದೆ. ಕುಡಿದು ಚಾಲನೆ ಮಾಡಿದರು ಅಥವಾ ನಿಯಂತ್ರಣ ಕಳೆದುಕೊಂಡು ಡಿಕ್ಕಿಯಾದಾಗ ಪರಾರಿಯಾಗುವುದಕ್ಕಿಂತ ಅಲ್ಲೇ ಇದ್ದು ಪೊಲೀಸರಿಗೆ ಸಹಕರಿಸುವುದು ಉತ್ತಮ.
ವಿನಾಕಾರಣ ಪರಾರಿಯಾಗಿ ಪೊಲೀಸರಿಗೆ ಸಿಕ್ಕಿಬಿದ್ದರೆ ಪರಿಣಾಮ ತೀವ್ರವಾಗಿರುತ್ತದೆ. ತಾವಾಗಿಯೇ ಪೊಲೀಸರಿಗೆ ಸಹಕರಿಸಿದರೆ ಶಿಕ್ಷೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ನಿಯಂತ್ರಣ ಕಳೆದುಕೊಂಡು ಹೀಗಾಗಿದ್ದರೆ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಂಡು ಶಿಕ್ಷೆಯನ್ನು ತಗ್ಗಿಸುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications