ಬಲಗೈ ಡ್ರೈವ್ - ಎಡಗೈ ಡ್ರೈವ್ ನಡುವಿನ ವ್ಯತ್ಯಾಸ ತಿಳಿಯದೇ ತಬ್ಬಿಬ್ಬಾದ ನಟಿ

ನಟಿ ಸನ್ನಿ ಲಿಯೋನ್ ಶೆರೋ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಸ್ಕ್ರೀನ್ ರೆಕಾರ್ಡಿಂಗ್ ಕಾರ್ಯವು ಕೇರಳದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸನ್ನಿ ಲಿಯೋನ್ ಸದ್ಯಕ್ಕೆ ಕೇರಳದಲ್ಲಿ ಬೀಡು ಬಿಟ್ಟಿದ್ದಾರೆ.

ಬಲಗೈ ಡ್ರೈವ್ - ಎಡಗೈ ಡ್ರೈವ್ ನಡುವಿನ ವ್ಯತ್ಯಾಸ ತಿಳಿಯದೇ ತಬ್ಬಿಬ್ಬಾದ ನಟಿ

ಸ್ಕ್ರೀನ್ ರೆಕಾರ್ಡಿಂಗ್'ಗೆ ಹೋದಾಗ ಆದ ಅನುಭವವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಟಿ ಸನ್ನಿ ಲಿಯೋನ್ ಭಾರತೀಯಮೂಲದವರಾಗಿದ್ದರೂ, ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಅಮೆರಿಕಾದಲ್ಲಿಯೂ ನೆಲೆಸಿರುತ್ತಾರೆ.

ಬಲಗೈ ಡ್ರೈವ್ - ಎಡಗೈ ಡ್ರೈವ್ ನಡುವಿನ ವ್ಯತ್ಯಾಸ ತಿಳಿಯದೇ ತಬ್ಬಿಬ್ಬಾದ ನಟಿ

ವಿದೇಶದ ಹಾಗೂ ಭಾರತದ ನಡುವಿನ ವ್ಯತ್ಯಾಸದ ಬಗ್ಗೆ ಸನ್ನಿ ಲಿಯೋನ್ ಹೇಳಿದ್ದಾರೆ. ಅಮೆರಿಕಾ ಹಾಗೂ ಕೆನಡಾ ದೇಶಗಳು ಬಲಗೈ ಕಾರು ಚಾಲನೆ ನಿಯಮಗಳನ್ನು ಹೊಂದಿವೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಬಲಗೈ ಡ್ರೈವ್ - ಎಡಗೈ ಡ್ರೈವ್ ನಡುವಿನ ವ್ಯತ್ಯಾಸ ತಿಳಿಯದೇ ತಬ್ಬಿಬ್ಬಾದ ನಟಿ

ಭಾರತದಲ್ಲಿ ಎಡಗೈ ಚಾಲನೆ ನಿಯಮವನ್ನು ಅನುಸರಿಸಲಾಗುತ್ತದೆ. ಸನ್ನಿ ಲಿಯೋನ್'ರವರಿಗೆ ಕೆಟ್ಟ ಅನುಭವವಾಗಲು ಇದೇ ಕಾರಣವಾಗಿದೆ. ಅವರು ಅಮೆರಿಕಾ ಹಾಗೂ ಕೆನಡಾ ದೇಶಗಳ ರೀತಿಯಲ್ಲಿ ರಸ್ತೆಯ ಬಲಭಾಗದಲ್ಲಿ ಚಾಲನೆ ಮಾಡಿಕೊಂಡು ಹೋಗಿದ್ದಾರೆ.

ಬಲಗೈ ಡ್ರೈವ್ - ಎಡಗೈ ಡ್ರೈವ್ ನಡುವಿನ ವ್ಯತ್ಯಾಸ ತಿಳಿಯದೇ ತಬ್ಬಿಬ್ಬಾದ ನಟಿ

ತಾವು ಸಾಗುತ್ತಿರುವ ಮಾರ್ಗವೇ ಸರಿಯಾಗಿದೆಯೆಂದು ಭಾವಿಸಿದ್ದಾರೆ. ಆದರೆ ಭಾರತದ ನಿಯಮಗಳ ಪ್ರಕಾರ ಅದು ರಾಂಗ್ ಸೈಡ್ ಆಗಿದೆ. ಅವರ ಎದುರುಗಡೆಯಿಂದ ಬಂದ ವಾಹನ ಸವಾರರು ಅವರು ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಬಲಗೈ ಡ್ರೈವ್ - ಎಡಗೈ ಡ್ರೈವ್ ನಡುವಿನ ವ್ಯತ್ಯಾಸ ತಿಳಿಯದೇ ತಬ್ಬಿಬ್ಬಾದ ನಟಿ

ಅವರು ರಾಂಗ್ ಸೈಡಿನಲ್ಲಿದ್ದ ಕಾರಣ ಹಲವಾರು ವಾಹನ ಸವಾರರು ಅವರ ಕಾರಿಗೆ ಗುದ್ದಿದ್ದಾರೆ. ಸನ್ನಿ ಲಿಯೋನ್ ಅವರ ತಪ್ಪು ತಿಳುವಳಿಕೆಯೇ ಇದಕ್ಕೆ ಪ್ರಮುಖ ಕಾರಣ. ಅವರ ಕಾರಿಗೆ ಗುದ್ದಿದ್ದ ಎಲ್ಲಾ ವಾಹನ ಸವಾರರು ಸರಿಯಾದ ಮಾರ್ಗದಲ್ಲಿಯೇ ಸಾಗುತ್ತಿದ್ದರು.

ಬಲಗೈ ಡ್ರೈವ್ - ಎಡಗೈ ಡ್ರೈವ್ ನಡುವಿನ ವ್ಯತ್ಯಾಸ ತಿಳಿಯದೇ ತಬ್ಬಿಬ್ಬಾದ ನಟಿ

ಸನ್ನಿ ಲಿಯೋನ್ ವಿದೇಶಗಳ ಚಾಲನಾ ಅಭ್ಯಾಸವನ್ನು ಬದಲಿಸದೆ ಕಾರು ಚಾಲನೆ ಮಾಡಿದ್ದರಿಂದ ಈ ತೊಂದರೆ ಎದುರಾಗಿದೆ. ಸನ್ನಿ ಲಿಯೋನ್ ಪೋಸ್ಟ್ ಮಾಡಿರುವ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ ಅವರು ತಮ್ಮ ಎಡಗೈ ಬಳಸಿ ಕಾರಿನ ಸ್ಟೀಯರಿಂಗ್ ವ್ಹೀಲ್ ಕಂಟ್ರೋಲ್ ಮಾಡುತ್ತಿರುವುದನ್ನು ಗಮನಿಸಬಹುದು.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಈ ಮೂಲಕ ಅವರು ಭಾರತದ ರಸ್ತೆಗಳಿಗೆ ಹೊಂದಿ ಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಬಹುತೇಕ ಭಾರತೀಯರು ಕಾರು ಚಾಲನೆ ಮಾಡುವಾಗ ತಮ್ಮ ಎಡಗೈ ಮೂಲಕ ಗೇರ್ ಲಿವರ್ ಹಾಗೂ ಬಲಗೈ ಮೂಲಕ ಸ್ಟೀಯರಿಂಗ್ ವ್ಹೀಲ್ ಕಂಟ್ರೋಲ್ ಮಾಡುತ್ತಾರೆ.

ಬಲಗೈ ಡ್ರೈವ್ - ಎಡಗೈ ಡ್ರೈವ್ ನಡುವಿನ ವ್ಯತ್ಯಾಸ ತಿಳಿಯದೇ ತಬ್ಬಿಬ್ಬಾದ ನಟಿ

ಭಾರತ, ಭೂತಾನ್‌ ಸೇರಿದಂತೆ ಹಲವಾರು ದೇಶಗಳಲ್ಲಿ ಕಾರಿನ ಬಲ ಭಾಗದಲ್ಲಿ ಸ್ಟೀಯರಿಂಗ್ ವ್ಹೀಲ್ ಇದ್ದು, ರಸ್ತೆಯ ಎಡ ಭಾಗದಲ್ಲಿ ಚಲಿಸುವ ಕಾರಣಕ್ಕೆ ಎಡಗೈ ಡ್ರೈವ್ ಎಂದು ಕರೆಯಲಾಗುತ್ತದೆ. ಅಮೆರಿಕಾ, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಕಾರಿನ ಎಡ ಭಾಗದಲ್ಲಿ ಸ್ಟೀಯರಿಂಗ್ ವ್ಹೀಲ್ ಇದ್ದು, ರಸ್ತೆಯ ಬಲ ಭಾಗದಲ್ಲಿ ಚಲಿಸುವ ಕಾರಣಕ್ಕೆ ಬಲಗೈ ಡ್ರೈವ್ ಎಂದು ಕರೆಯಲಾಗುತ್ತದೆ.

Most Read Articles

Kannada
English summary
Sunny Leone faces confusion while driving car in kerala. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X