ಎಕ್ಸ್‌ಪ್ರೆಸ್ ಹೈವೇಯಲ್ಲಿ ಮಿತಿಮೀರುತ್ತಿದೆ ಸೂಪರ್ ಕಾರುಗಳ ವೇಗ: ಅಪಾಯಕಾರಿ 260 ಕಿಮೀ ವೇಗದಲ್ಲಿ ಆರ್ಭಟ
ಭಾರತ ಅಭಿವೃದ್ದಿಶೀಲ ರಾಷ್ಟ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ವಾಹನಗಳ ಕ್ಷೇತ್ರಕ್ಕೆ ಬಂದರೆ ಭಾರತ ಈಗಾಗಲೇ ಅಭಿವೃದ್ದಿ ಹೊಂದಿದೆ ಎಂದರೆ ತಪ್ಪಾಗಲಾರದು. ಕಾರಣ ಬಹುದೊಡ್ಡ ಕಂಪನಿಗಳು ಭಾರತವನ್ನೇ ದೊಡ್ಡ ಮಾರುಕಟ್ಟೆಯಾಗಿ ಒತ್ತು ನೀಡಿವೆ.
ಇನ್ನು ಭಾರತದಲ್ಲಿ ಸೂಪರ್ ಕಾರ್‌ಗಳಿಗೇನೂ ಕಮ್ಮಿಯಿಲ್ಲ. ಬಹುತೇಕ ದೊಡ್ಡ ದೊಡ್ಡ ನಗರಗಳ ಹೆದ್ದಾರಿಗಳಲ್ಲಿ ಲ್ಯಾಂಬೋರ್ಗಿನಿ, ಫೆರಾರಿ ಸೇರಿದಂತೆ ಬಹುತೇಕ ಎಲ್ಲಾ ರೀತಿಯ ಸೂಪರ್ ಕಾರುಗಳು ಕಾಣ ಸಿಗುತ್ತವೆ. ಹೆದ್ದಾರಿಗಳಲ್ಲಿ ಆಗಾಗ ಸದ್ದು ಮಾಡುವ ಸೂಪರ್ ಕಾರುಗಳ ಕುರಿತಾದ ಹೊಸದೊಂದು ಮಾಹಿತಿಯನ್ನು ಪೊಲೀಸ್ ಇಲಾಖೆ ಮುಂದಿಟ್ಟಿದೆ. ಆ ಮಾಹಿತಿಯೇನೆಂದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.

ಮಾಹಿತಿಗಳ ಪ್ರಕಾರ ದೆಹಲಿ - ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸೂಪರ್ ಕಾರುಗಳು ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿದೆ ಎಂಬ ಮಾಹಿತಿಯನ್ನು ಪೊಲೀಸರು ಹೊರ ಹಾಕಿದ್ದಾರೆ. ಅದರಲ್ಲೂ ರಾಜಸ್ಥಾನ್‌ನ ಗುರುಗಾವ್ - ದೌಸಾ ಹೆದ್ದಾರಿಯಂತೂ ಸೂಪರ್ ಕಾರುಗಳು / ಲಕ್ಷುರಿ ಕಾರುಗಳಿಗೆ ಆಟದ ಮೈದಾನದಂತಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇಲ್ಲಿ ಪೋರ್ಶಾ, ಲ್ಯಾಂಬೋರ್ಗಿನಿ, ಫೆರಾರಿ ಸೇರಿದಂತೆ ಹಲವು ಐಷಾರಾಮಿ ಕಾರುಗಳು ಮಿತಿ ಮೀರಿದ ವೇಗದಲ್ಲಿ ಹೆದ್ದಾರಿಗಳಲ್ಲಿ ಚಲಿಸುವುದರ ಮೂಲಕ ಇತರರ ಎದೆ ಬಡಿತವನ್ನು ತುತ್ತ ತುದಿಗೆ ಏರಿಸುತ್ತಿದ್ದಾರೆ. ಈ ಕಾರುಗಳು ಗಂಟೆಗೆ ಸುಮಾರು 200 ರಿಂದ 260 ಕಿಮೀ ವೇಗದಲ್ಲೂ ಕಾರುಗಳನ್ನು ಇಲ್ಲಿ ಓಡಿಸುತ್ತಿದ್ದಾರೆ ಎಂಬುದು ಪೊಲೀಸರ ವಾದ. ಇನ್ನು ಈ ಸೂಪರ್ ಕಾರುಗಳನ್ನು ಹಲವರು ಗ್ಯಾರೇಜ್‌ಗಳಲ್ಲಿ ಮಾಡಿಫೈ ಮಾಡಿಕೊಂಡು, ಅದರ ಪವರ್ ಎಷ್ಟಿದೆ ಎಂಬುದು ಈ ರಸ್ತೆಯಲ್ಲಿ ಪರೀಕ್ಷಿಸುತ್ತಾರೆ.

ಇನ್ನು ದೆಹಲಿ - ಮುಂಬೈ ಎಕ್ಸ್‌ಪ್ರೆಸ್ ಹೈವೇಯು, ಪ್ರಮುಖ ನಗರಗಳ ಸಂಪರ್ಕ ಒದಗಿಸುವ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆಗಳಲ್ಲಿ ಯಾವಾಗಲು ಸಹ ವಾಹನಗಳು ಓಡಾಡುತ್ತಲೇ ಇರುತ್ತವೆ. ಆದರೂ ಸಹ ಹಲವರು ಸೂಪರ್ ಕಾರುಗಳನ್ನು ಈ ರಸ್ತೆಗೆ ತಂದು ನಿಗದಿ ಮಾಡಿದ ವೇಗವನ್ನು ಮೀರಿ ಕಾರುಗಳನ್ನು ಚಲಾಯಿಸುತ್ತಿದ್ದು, ಇಂತಹ ಕಾರ ಮಾಲೀಕರ ಮೇಲೆ ತಕ್ಕ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಮಿತಿ ಮೀರಿದ ವೇಗದಿಂದ ಅಪಘಾತಗಳು ಸಹ ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಪೊಲೀಸ್ ಸಂಚಾರಿ ಇಲಾಖೆ ವೇಗಕ್ಕೆ ಬ್ರೇಕ್ ಹಾಕಲು ಸಂಚಾರದ ವೇಗವನ್ನು ಸುಮಾರು 120 ಕಿಲೋ ಮೀಟರ್ ಪ್ರತಿ ಗಂಟೆಗೆ ನಿಗದಿ ಪಡಿಸಿದ್ದರೂ ಐಷಾರಾಮಿ ಕಾರು ಮಾಲೀಕರು ಮಾತ್ರ ಈ ನಿಯಮಕ್ಕೆ ಮಣೆ ಹಾಕುತ್ತಿಲ್ಲ. ಅದಕ್ಕೆ ಬದಲಾಗಿ ಯಾವುದೇ ಮುಲಾಜಿಲ್ಲದೇ ತಮ್ಮ ವಾಹನದ ವೇಗವನ್ನು ಸುಮಾರು 200 ಕಿಮೀ ವೇಗಕ್ಕಿಂತಲೂ ಹೆಚ್ಚಾಗಿಯೇ ಚಲಾಯಿಸುತ್ತಿದ್ದಾರೆ.
ದಿ ವೆಹಿಕಲ್ ಸ್ಪೀಡ್ ಡಿಟೆಕ್ಷನ್ ಸಿಸ್ಟಂ ಅನ್ನು ಈ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಅಳವಡಿಸಲಾಗಿದ್ದು, ಇದನ್ನು ಪರಿಶೀಲಿಸಿ ನೋಡಿದಾಗ ಪೊಲೀಸರಿಗೆ ಈ ಶಾಕಿಂಗ್ ಮಾಹಿತಿ ತಿಳಿದು ಬಂದಿದೆ. ಇದರಲ್ಲಿ ತಿಳಿದು ಬಂದ ಮಾಹಿತಿಗಳ ಪ್ರಕಾರ ಪ್ರತಿದಿನ ಸುಮಾರು 500 ಐಷಾರಾಮಿ ಸೂಪರ್ ಎಕ್ಸ್‌ಪೆನ್ಸಿವ್ ಕಾರುಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದೆ ಎಂದು ತಿಳಿದು ಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications