ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ಬೆಂಗಳೂರಿನಲ್ಲಿ 15 ದಿನಗಳ ವರೆಗೆ ಟೋಯಿಂಗ್ ವ್ಯವಸ್ಥೆಯನ್ನು ರದ್ದು ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಕೊನೆಗೂ ರಾಜ್ಯ ಸರ್ಕಾರ ಜನಾಕ್ರೋಶಕ್ಕೆ ಮಣಿದು ಟೋಯಿಂಗ್ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್‌ ಹಾಕಿದೆ.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ನಗರದಲ್ಲಿ ಟೋಯಿಂಗ್‌ ವ್ಯವಸ್ಥೆ ಹೊಸ ನೀತಿ ಪರಿಷ್ಕರಣೆ ಸಲುವಾಗಿ ನಿನ್ನೆ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮುಂದಿನ ಹದಿನೈದು ದಿನಗಳಲ್ಲಿ ಹೊಸ ಟೋಯಿಂಗ್‌ ವ್ಯವಸ್ಥೆ ಜಾರಿಗೆ ಬರುವ ವಿಶ್ವಾಸವಿದೆ. ಹೊಸ ವ್ಯವಸ್ಥೆ ಘೋಷಣೆ ಮಾಡುವವರೆಗೆ ಟೋಯಿಂಗ್‌ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಆದರೆ ನೋ ಪಾರ್ಕಿಂಗ್‌ ಪ್ರದೇಶದಲ್ಲಿ ವಾಹನ ನಿಲ್ಲಿಸಿದರೆ ಗುರುವಾರದಿಂದ ಸಂಚಾರ ಪೊಲೀಸರು ದಂಡ ವಿಧಿಸಲಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ಪೊಲೀಸ್ ಅಧಿಕಾರಿಗಳು ಬಾಡಿ ಕ್ಯಾಮರಾ ಧರಿಸುತ್ತಾರೆ. ನೋ ಪಾರ್ಕಿಂಗ್‌ ವಿಚಾರವಾಗಿ ಗಲಾಟೆಗಳು ನಡೆದರೆ ಈ ಎಲ್ಲಾ ಘಟನೆಗಳು ಪೊಲೀಸರ ಕ್ಯಾಮೆರಾದಲ್ಲಿ ಸೆರೆಯಾಗಲಿದೆ. ಆಗ ಯಾರೂ ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ ಕೆಲವೇ ದಿನಗಳಲ್ಲಿ ಟೋಯಿಂಗ್‌ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ನೋ ಪಾರ್ಕಿಂಗ್‌ ಬೋರ್ಡ್‌ಗಳು ಸರಿಯಾಗಿ ಕಾಣುವುದಿಲ್ಲ ಎಂಬ ಸಾರ್ವಜನಿಕರ ಆಕ್ಷೇಪಗಳ ಹಿನ್ನೆಲೆಯಲ್ಲಿ ಬೋರ್ಡ್‌ಗಳ ಅಳವಡಿಕೆ ಕ್ರಮವನ್ನು ಕೂಡ ಬದಲಾಯಿಸಲಾಗಿದೆ. ಇದುವರೆಗೆ ನಗರದಲ್ಲಿ ನೋ ಪಾರ್ಕಿಂಗ್‌ ಪ್ರದೇಶದಲ್ಲಿ 50 ಮೀಟರ್‌ಗೆ ಒಂದರಂತೆ ಬೋರ್ಡ್‌ ಅಳವಡಿಸಲಾಗಿತ್ತು. ಇದೀಗ 25 ಮೀಟರ್‌ಗೆ ಬೋರ್ಡ್‌ ಹಾಕಲಾಗುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ಸಾರ್ವಜನಿಕರು ಸರಿಯಾಗಿ ಸಂಚಾರ ನಿಯಮ ಪಾಲನೆ ಮಾಡಿದರೆ ದಂಡ ವಿಧಿಸುವ ಅಗತ್ಯವಿಲ್ಲ. ಹೆಲ್ಮಟ್‌ ಧರಿಸದೆ ದ್ವಿಚಕ್ರ ವಾಹನ ಸವಾರರು ಚಾಲಾಯಿಸುತ್ತಿದ್ದಾರೆ. ಈ ರೀತಿ ಮಾಡಿದರೆ ಜನರ ಪ್ರಾಣ ಉಳಿಸುವುದು ಹೇಗೆ ಎಂದು ಸಚಿವರು ಪ್ರಶ್ನಿಸಿದರು. ಇನ್ನು ಟೋಯಿಂಗ್‌ ಗುತ್ತಿಗೆ ನಿಯಮಾವಳಿ ಸಹ ಪುನರ್‌ ಪರಿಶೀಲನೆ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ಬೇನಾಮಿ ಹೆಸರಿನಲ್ಲಿ ಪೊಲೀಸರು ಗುತ್ತಿಗೆ ಪಡೆದಿದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇನ್ನು ಟೋಯಿಂಗ್ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಎಎಸ್‌ಐ ಹಲ್ಲೆ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಟೋಯಿಂಗ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ಈ ನಿಟ್ಟಿನಲ್ಲಿ ಬುಧವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಕಾಸಸೌಧದಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದರು. ರಾಜ್ಯ ಪೋಲಿಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಸಂಚಾರಿ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಈ ಸಭೆಯಲ್ಲಿ ಭಾಗಿಯಾಗಿದ್ದರು.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ಸಭೆ ಬಳಿಕ ಜಂಟಿ‌ ಪೋಲಿಸ್ ಆಯುಕ್ತ ರವಿಕಾಂತೇಗೌಡ ಅವರು ಮಾತನಾಡಿ, ಟೋಯಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ಟೋಯಿಂಗ್ ಅನ್ನು ಒಂದು ಏಜೆನ್ಸಿಗೆ ಕೊಟ್ಟಿಲ್ಲ. ಫೀಡ್ ಬ್ಯಾಕ್ ಸಂಗ್ರಹಿಸಿ ಎಸ್ಓಪಿ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ಬೆಂಗಳೂರು ನಗರದಲ್ಲಿ 45 ಸಂಚಾರ ಪೊಲೀಸ್‌ ಠಾಣೆಗಳಿದ್ದರೆ, 100 ಟೋಯಿಂಗ್‌ ವಾಹನಗಳಿವೆ. ಇದರಲ್ಲಿ 80 ಜನ ಟೋಯಿಂಗ್‌ ಮಾಲಿಕರಿದ್ದಾರೆ. ಟೋಯಿಂಗ್‌ ವಾಹನಗಳ ಸಿಬ್ಬಂದಿಗಳ ನಡುವಳಿಗೆ ಬಗ್ಗೆ ಸಾರ್ವಜನಿಕರು ಹೆಚ್ಚು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ಇನ್ನು ನಗರದಲ್ಲಿ ಹಲವೆಡೆ ವಾಹನ ಪಾರ್ಕಿಂಗ್‌ಗೆ ಜಾಗವಿಲ್ಲ. ಫುಟ್‌ಪಾತ್‌ನಲ್ಲಿ ನಿಲ್ಲಿಸಿದರೆ ಪೊಲೀಸರು ಟೋಯಿಂಗ್‌ ಮಾಡುತ್ತಾರೆ. ಪಾರ್ಕಿಂಗ್‌ ಜಾಗವಿಲ್ಲದಿದ್ದಾಗ ವಾಹನವನ್ನು ಎಲ್ಲಿ ನಿಲ್ಲಿಸಬೇಕು. ನಗರದಲ್ಲಿ ಪಾರ್ಕಿಂಗ್‌ಗೆ ಸೂಕ್ತ ಜಾಗವನ್ನು ನಿಗದಿಪಡಿಸಲಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಫುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸಿದರೆ ಪಾದಚಾರಿಗಳು ಓಡಾಡುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಇದರಿಂದ ನಗರದಲ್ಲಿ ಸೂಕ್ತ ಪಾರ್ಕಿಂಗ್‌ಗೆ ವ್ಯವಸ್ಥೆ ಅಗತ್ಯವಿದೆ, ವಾಣಿಜ್ಯ ಪ್ರದೇಶಗಳಲ್ಲಿ ಕಪಾರ್ಕಿಂಗ್‌ಗೆ ಸ್ಥಳ ಇಲ್ಲದಿದ್ದರೆ ವಾಹನ ಸವಾರರಿಗೆ ಹೆಚ್ಚಿನ ತೊಂದರೆಯಾಗುತ್ತದೆ.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ವರದಿಗಳ ಪ್ರಕಾರ, 2018 ರಲ್ಲಿ ನೋ ಪಾರ್ಕಿಂಗ್‌ಗಾಗಿ ಒಟ್ಟು 11,44,778 ಕೇಸುಗಳು ದಾಖಲಾಗಿವೆ. ಇದರಲ್ಲಿ 33468 ಫುಟ್‌ಪಾತ್‌ ಮೇಲೆ ಪಾರ್ಕಿಂಗ್‌ ಮಾಡಿದ ಪ್ರಕರಣಗಳು, 18562 ಪ್ರಕರಣಗಳು ಬಿಎಂಟಿಸಿ ಬಸ್‌ಸ್ಟಾಂಡ್‌ನಲ್ಲಿ ಪಾರ್ಕಿಂಗ್‌ ಮಾಡಿದ್ದಾಗಿವೆ. 39555 ಪ್ರಕರಣಗಳು ಸುಗಮ ಸಂಚಾರಕ್ಕೆ ಅಡ್ಡಿ ಆಗುವಂತೆ ತಪ್ಪು ಪಾರ್ಕಿಂಗ್‌ ಮಾಡಿದ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ಟೋಯಿಂಗ್ ಮಾಡುವಾಗ ಅನುಸರಿಸಬೇಕಾದ ನಿಯಮಗಳು

ಸಂಚಾರ ಪೊಲೀಸ್ ಇಲಾಖೆಗೆ ಲೈವ್ ಮಾಹಿತಿ ನೀಡಬೇಕು, ಓರ್ವ ಎಎಸ್ಐ ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು. ವಾಹನಗಳ ಟೋಯಿಂಗ್ ಮಾಡುವ ಮುನ್ನ ಮೈಕ್ ಮೂಲಕ ಅನೌನ್ಸ್ ಮಾಡಬೇಕು. ವಾಹನದ ನಾಲ್ಕು ಭಾಗದಿಂದ ಫೋಟೋ ತೆಗೆಯಬೇಕು. ಟೋಯಿಂಗ್ ಮಾಡುವ ಮುನ್ನವೇ ವಾಹನದ ಮಾಲೀಕರು ಬಂದರೆ ನೋ ಪಾರ್ಕಿಂಗ್ ದಂಡವನ್ನು ವಿಧಿಸಬೇಕು. ಟೋಯಿಂಗ್ ವಾಹನಕ್ಕೆ ಹಾಕಿದ ಬಳಿಕ ಬಂದರೆ ಟೋಯಿಂಗ್ ಚಾರ್ಜ್ ಪಾವತಿಸಬೇಕು. ಟೋಯಿಂಗ್ ಮಾಡುವಾಗ ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ ಸಂಚಾರಿ ಸಿಬ್ಬಂದಿ ಇರಬೇಕು. ಈ ಎಲ್ಲಾ ನಿಯಮಾಗಳನ್ನು ಪಾಲಿಸದ ಟೋಯಿಂಗ್ ಸಿಬ್ಬಂದಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

ಬೆಂಗಳೂರಿನಲ್ಲಿ ಟೋಯಿಂಗ್‌ ತಾತ್ಕಾಲಿಕ ಸ್ಥಗಿತ: ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ

ವಾಹನ ಟೋಯಿಂಗ್ ಮಾಡುವ ಬದಲು ಸ್ಥಳದಲ್ಲೇ ದಂಡವನ್ನು ವಿಧಿಸಲಿ. ವಾಹನ ಟೋಯಿಂಗ್ ನಿಂದ ಕೆಲವು ಸಲ ಡ್ಯಾಮೇಜ್ ಆಗುತ್ತದೆ. ಇನ್ನು ವಾಹನ ಬಿಡಿಸಲು ಪೊಲೀಸ್ ಠಾಣೆ ತೆರಳುವುದರಿಂದ ಹೆಚ್ಚಿನ ಸಮಯ ವ್ಯರ್ಥ್ಯವಾಗುತ್ತಿದೆ ಎಂದು ಹಲವು ವಾಹನ ಸವಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Article Published On: Thursday, February 3, 2022, 15:09 [IST]
English summary
Suspends towing temporary in bengaluru new policy soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+