ಸ್ಪೋರ್ಟಿ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಸುಜುಕಿ ಜಿಮ್ನಿ(Suzuki Jimny) ಮಿನಿ-ಎಸ್‍ಯುವಿಯು ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಪ್ರಸ್ತುತ ತಲೆಮಾರಿನ ಸುಜುಕಿ ಜಿಮ್ನಿ ಆಫ್-ರೋಡರ್ ಮಿನಿ-ಎಸ್‍ಯುವಿಯು 2018ರಲ್ಲಿ ಬಿಡುಗಡೆಗೊಂಡಿತು.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಇಂಡೋ-ಜಪಾನೀಸ್ ವಾಹನ ತಯಾರಕರಾದ ಮಾರುತಿ ಸುಜುಕಿ ಬೆಲೆ, ಎಸ್‍ಯುವಿಯ ನಿರ್ದಿಷ್ಟತೆ ಮತ್ತು ಬಿಡುಗಡೆ ದಿನಾಂಕದಂತಹ ನಿರ್ಣಾಯಕ ಅಂಶಗಳ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸುಜುಕಿ ಜಿಮ್ನಿ ಕಾಂಪ್ಯಾಕ್ಟ್ ಎಸ್‍ಯುವಿ ಆಗಿದ್ದರೂ (ಭಾರತೀಯ ಗ್ರಾಹಕರಲ್ಲಿ ನೆಚ್ಚಿನ ವಿಭಾಗ), ಸುಜುಕಿ ಜಿಮ್ನಿ ಆಫ್-ರೋಡ್ ಎಸ್‍ಯುವಿಯಾಗಿದ್ದು, ಇದು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಇತರ ಕಾಂಪ್ಯಾಕ್ಟ್ ಎಸ್‍ಯುವಿಗಳಿಗಿಂತ ಸ್ವಲ್ಪ ಕಡಿಮೆ ಪ್ರಾಯೋಗಿಕ ಮತ್ತು ಹೆಚ್ಚು ಉದ್ದೇಶಿತವಾಗಿದೆ. ಇದರ ನಡುವೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ಎಸ್‌ಯುವಿಯ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಈ ಸುಜುಕಿ ಜಿಮ್ನಿ ಕನ್ವರ್ಟಿಬಲ್ ಎಸ್‌ಯುವಿ ಬಗ್ಗೆ ಹೇಳುವುದಾದರೆ, ಈ ಮಾದರಿಯು ಜಪಾನೀಸ್ ವಾಹನ ತಯಾರಕರ ಅಧಿಕೃತ ಉತ್ಪನ್ನವಲ್ಲ. ಈ ಮಾದರಿಯನ್ನು ಚೀನಾದಲ್ಲಿ ಗ್ರಾಹಕೀಕರಣ ಸ್ಟುಡಿಯೋ YiChe ಗ್ಯಾರೇಜ್ ಮೂಲಕ ಕಸ್ಟಮೈಸ್ ಮಾಡಲಾಗಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಕಸ್ಟಮೈಸ್ ಮಾಡಿದ ಸುಜುಕಿ ಜಿಮ್ನಿ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಮಾದರಿಯಂತೆ ಸ್ಟಾಕ್ ಹೆಡ್‌ಲೈಟ್‌ಗಳು, ಫ್ರಂಟ್ ಗ್ರಿಲ್ ಮತ್ತು ಫ್ರಂಟ್ ಬಂಪರ್ ಅನ್ನು ಹೊಂದಿದೆ. ಈ ಹೊಸ ಮುಂಭಾಗದ ಗ್ರಿಲ್ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಹೊಂದಿರುವ ಸಿಂಗಲ್-ಪೀಸ್ ಯುನಿಟ್ ಆಗಿ ತೋರುತ್ತದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಇದರ ಜೊತೆಗೆ ಮುಂಭಾಗದ ಗ್ರಿಲ್ ಮಧ್ಯದಲ್ಲಿ ಆಯತಾಕಾರದ ಸ್ಲಾಟ್‌ಗಳನ್ನು ಸಹ ಹೊಂದಿದೆ. ಇದಲ್ಲದೆ, ವೃತ್ತಾಕಾರದ ಹೆಡ್‌ಲೈಟ್‌ಗಳನ್ನು ಎರಡು ಸಮಾನ ಭಾಗಗಳಾಗಿ ವಿಭಜಿಸುವ ಮೂಲಕ ಹೊರಕ್ಕೆ ವಿಸ್ತರಿಸುವ ಟರ್ನ್ ಇಂಡಿಕೇಟರ್ಸ್ ಅನ್ನು ಇರಿಸಲಾಗಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಈ ಎಸ್‍ಯುವಿಯನ್ನು ಇನ್ನಷ್ಟು ಆಸಕ್ತಿದಾಯಕವಾಗಿ ಕಾಣುವಂತೆ ಮಾಡಲು, ಕಸ್ಟಮ್ ಬಿಲ್ಡರ್ ಎಸ್‍ಯುವಿ ಅನ್ನು ದಪ್ಪ ಬ್ಲ್ಯಾಕ್ ಸ್ಕ್ವಾರಿಶ್ ವೀಲ್ ಆರ್ಚ್‌ಗಳು, ಬ್ಲ್ಯಾಕ್ 6-ಸ್ಪೋಕ್ ಅಲಾಯ್ ವ್ಹೀಲ್ ಗಳು, ಈ ಸೈಡ್ ಪ್ರೊಫೈಲ್‌ನೊಂದಿಗೆ ನಾಬಿ ಟೈರ್‌ಗಳು ಮತ್ತು ಆಕರ್ಷಕವಾಗಿ ಕಾಣುವ ಎಲ್ಇಡಿ ಟೈಲ್‌ಲ್ಯಾಂಪ್‌ನೊಂದಿಗೆ ಬರುತ್ತದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಇನ್ನು ಈ ಎಸ್‍ಯುವಿಯಲ್ಲಿ ದಪ್ಪನಾದ ಬಂಪರ್‌ಗಳು ಮತ್ತು ವ್ಹೀಲ್ ಅರ್ಚರ್ ಗಳನ್ನು ಹೊಂದಿವೆ. ಕನ್ವರ್ಟಿಬಲ್ ಸುಜುಕಿ ಜಿಮ್ನಿ ಎಸ್‌ಯುವಿಯು ಕ್ಯಾಬಿನ್ ಅನ್ನು ಹೆಚ್ಚು ಹಗುರವಾದ ಒಳಾಂಗಣ ಬಣ್ಣಗಳೊಂದಿಗೆ ಕಸ್ಟಮೈಸ್ ಮಾಡಿದ ಒಳಾಂಗಣದೊಂದಿಗೆ ಬರುತ್ತದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಸುಜುಕಿ ಜಿಮ್ನಿ ಎಸ್‌ಯುವಿ ಚೀನಾದಲ್ಲಿ ಮಾರಾಟವಾಗದ ಕಾರಣ, ಕಸ್ಟಮೈಸ್ ಕಂಪನಿಯು ಎಸ್‌ಯುವಿಯನ್ನು ಚೀನಾಕ್ಕೆ ಸಂಪೂರ್ಣವಾಗಿ ಆಮದು ಮಾಡಿಕೊಳ್ಳಬೇಕಾಗಿತ್ತು. ಜಿಮ್ನಿ ಎಸ್‍ಯುವಿಯ ಆಮದು ಕಂಪನಿಗೆ ಸುಮಾರು $60,000 ವೆಚ್ಚವಾಗುತ್ತದೆ ಮತ್ತು ಎಸ್‍ಯುವಿಯ ಕಸ್ಟಮೈಸೇಶನ್‌ಗಾಗಿ ಕಂಪನಿಯು ಹೆಚ್ಚುವರಿ $60,000 ಖರ್ಚು ಮಾಡಿದೆ ಎಂದು ವರದಿಗಳು ಸೂಚಿಸುತ್ತವೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಇನ್ನು 5-ಡೊರಿನ ಮಾರುತಿ ಜಿಮ್ನಿ ಎಸ್‍ಯುವಿಯು 2023ರ ಜನವರಿ ತಿಂಗಳಿನಲ್ಲಿ ನಡೆಯುವ ಆಟೋ ಎಕ್ಸ್‌ಪೋದಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ 5-ಡೋರಿನ ಮಾರುತಿ ಜಿಮ್ನಿ ಅದರ 3-ಡೋರಿನ ಆವೃತ್ತಿಗಿಂತ 300 ಎಂಎಂ ಉದ್ದವಾಗಿರುತ್ತದೆ. ಇದರ ವ್ಹೀಲ್‌ಬೇಸ್ ಕೂಡ 300 ಎಂಎಂ ವಿಸ್ತರಿಸಲಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಆಫ್-ರೋಡ್ ಎಸ್‍ಯುವಿ 3850 ಎಂಎಂ ಉದ್ದ, 1645 ಎಂಎಂ ಅಗಲ ಮತ್ತು 1730 ಎಂಎಂ ಎತ್ತರವನ್ನು 2550 ಎಂಎಂ ವ್ಹೀಲ್‌ಬೇಸ್‌ನೊಂದಿಗೆ ಹೊಂದಿದೆ. ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಗುರುಗ್ರಾಮ್ ಸ್ಥಾವರದಲ್ಲಿ ಮೂರು-ಡೋರಿನ ಜಿಮ್ನಿ ಎಸ್‍ಯುವಿಯನ್ನು ತಯಾರಿಸುತ್ತದೆ ಮತ್ತು ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಈ ಸುಜುಕಿ ಜಿಮ್ನಿ ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಇದು 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಜಿಮ್ನಿ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಈ ಎಂಜಿನ್ 6,000 ಆರ್‌ಪಿಎಂನಲ್ಲಿ 101 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 130 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಮಿನಿ ಎಸ್‍‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳು ಕಡಿಮೆಯಾಗಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಈ ಜಿಮ್ನಿ ಮಾದರಿಯು ಈ ಎಂಜಿನ್‌ನ ಟರ್ಬೋಚಾರ್ಜ್ಡ್ ಆವೃತ್ತಿಯನ್ನು ಪಡೆಯಬಹುದು; ಆದೆರೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಜಿಮ್ನಿ ಆಫ್-ರೋಡ್ ಎಸ್‍ಯುವಿಯಲ್ಲಿ 15 ಇಂಚಿನ ವ್ಹೀಲ್ ಅನ್ನು ಹೊಂದಿರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ 3-ಡೋರಿನ ಅಥವಾ 5-ಡೋರ್ ಜಿಮ್ನಿಯನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಒಂದು ವೇಳೆ ಭಾರತದಲ್ಲಿ ಜಿಮ್ನಿಯನ್ನು ಬಿಡುಗಡೆಗೊಳಿಸಿದರೆ, 5-ಡೋರ್ ಜಿಮ್ನಿ ಬಿಡುಗಡೆಯಾಗಬಹುದು. ಇದು ಐದು ಡೋರುಗಳ ಜಿಮ್ನಿ ಇನ್ನು ನಾಲ್ಕು ಮೀಟರ್ ಉದ್ದದ ಮಾದರಿಯಾಗಿದೆ. ಭಾರತದಲ್ಲಿ ಇದು ತೆರಿಗೆ ಪ್ರಯೋಜನಗಳನ್ನು ಪಡೆಯುತ್ತದೆ. 2,550 ಎಂಎಂ ವ್ಹೀಲ್ ಬೇಸ್ ಉದ್ದವು ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಹೆಚ್ಚಿನದಾಗಿರಲಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಈ ಆಫ್-ರೋಡ್ ಎಸ್‍ಯುವಿಯು ಸುಮಾರು 2,500 ಎಂಎಂ ವ್ಹೀಲ್‌ಬೇಸ್ ಹೊಂದಿದೆ ಆದರೆ ಮಧ್ಯಮ ಗಾತ್ರದ ಎಸ್‍ಯುವಿಗಿಂತ ಚಿಕ್ಕದಾಗಿದೆ. ಇದರಿಂದ 5-ಡೋರ್ ಜಿಮ್ನಿ ಮಾದರಿಯು ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಮಧ್ಯಮ ಗಾತ್ರದ ಎಸ್‍ಯುವಿಯ ನಡುವಿನ ವಿಭಾಗದಲ್ಲಿ ಇರಿಸಬಹುದು. ಒಟ್ಟಾರೆ ಜಿಮ್ನಿ ಆಫ್-ರೋಡ್ ಎಸ್‍ಯುವಿಯು ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ, ಅಗ್ರೇಸಿವ್ ಲುಕ್ ನೊಂದಿಗೆ ಸಾಟಿಯಿಲ್ಲದ ಆಫ್-ರೋಡ್ ಸಾಮರ್ಥ್ಯವನ್ನು ಕೂಡ ಹೊಂದಿರುತ್ತದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಈ ಸುಜುಕಿ ಜಿಮ್ನಿ ಎಸ್‍ಯುವಿಯು ಯುರೋಪಿಯನ್ ದೇಶಗಳಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿದೆ, ಅಲ್ಲದೇ ಸುಜುಕಿ ಜಿಮ್ನಿ ತವರು ಜಪಾನ್ ನಲ್ಲಿಯು ಬೇಡಿಕೆ ಹೆಚ್ಚಾಗಿದೆ. ಸುಜುಕಿ ಕಂಪನಿಯ ಜಪಾನ್ ನಲ್ಲಿರುವ ಕೊಸೈನ ಘಟಕದಲ್ಲಿ ಉತ್ಪಾದನೆಯನ್ನು ಗರಿಷ್ಠ ಪ್ರಮಾಣಕ್ಕೆ ಏರಿಸಿದೆ.ಆದರೂ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಐಕಾನಿಕ್ ಆಪ್-ರೋಡರ್ ಜಿಮ್ನಿ ಬೇಡಿಕೆಯು ಅಷ್ಟರ ಪ್ರಮಾಣಕ್ಕೆ ಇದೆ.

ಮಾಡಿಫೈಗೊಂಡು ಮಿಂಚುತ್ತಿದೆ ಸುಜುಕಿ ಜಿಮ್ನಿ ಕನ್ವರ್ಟಿಬಲ್ ವರ್ಷನ್

ಇದರಿಂದ ಭಾರತದಲ್ಲಿ ಮಾರುತಿ ಸುಜುಕಿಯ ಗುರುಗಾಂವ್‌ನಲ್ಲಿರುವ ಘಟಕದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿದ್ದಾರೆ. ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಮೂರು ಡೋರಿನ ಸುಜುಕಿ ಜಿಮ್ನಿ ಮಾದರಿಯನ್ನು ಭಾರತದಿಂದ ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿದೆ.

More from DriveSpark

Article Published On: Friday, October 28, 2022, 11:20 [IST]
English summary
Suzuki jimny suv looks fantastic in convertible version images goes viral details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+