ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಕಾರುಗಳನ್ನು ನಿಲ್ಲಿಸಿದ ನಂತರ ಅವು ಮುಂದಕ್ಕೆ ಚಲಿಸದಂತೆ ತಡೆಯಲು ಹ್ಯಾಂಡ್ ಬ್ರೇಕ್ ಅನ್ನು ಬಳಸಲಾಗುತ್ತದೆ. ಅದರಲ್ಲೂ ಕಡಿದಾದ ಇಳಿಜಾರು ಪ್ರದೇಶ ಹಾಗೂ ಪರ್ವತ ಪ್ರದೇಶಗಳಲ್ಲಿ ಸ್ಥಿರವಾಗಿ ನಿಲ್ಲಿಸುವ ಸಲುವಾಗಿ ಹ್ಯಾಂಡ್ ಬ್ರೇಕ್'ಗಳನ್ನು ಬಳಸಲಾಗುತ್ತದೆ. ಇದರ ಜೊತೆಯಲ್ಲಿ ಕೆಲವೊಮ್ಮೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಹ್ಯಾಂಡ್ ಬ್ರೇಕ್ ಗಳನ್ನು ಬಳಸಲಾಗುತ್ತದೆ.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಕಾರುಗಳ ಪ್ರಮುಖ ಬಿಡಿ ಭಾಗಗಳಲ್ಲಿ ಒಂದಾದ ಹ್ಯಾಂಡ್‌ಬ್ರೇಕ್ ಗಳನ್ನು ಸರಿಯಾಗಿ ನಿರ್ವಹಿಸುವುದು ಅತಿ ಅವಶ್ಯಕವಾಗಿದೆ. ಆದರೆ ಬಹುತೇಕ ಜನರು ಹ್ಯಾಂಡ್ ಬ್ರೇಕ್ ಗಳ ನಿರ್ವಹಣೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕಾರುಗಳನ್ನು ಸರ್ವೀಸ್ ಮಾಡಿಸುವ ಸಂದರ್ಭದಲ್ಲಿ ಅವುಗಳ ಬ್ರೇಕಿಂಗ್ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಇದರಿಂದ ಹ್ಯಾಂಡ್ ಬ್ರೇಕ್'ಗಳು ವೈಫಲ್ಯ ಕಾಣುವ ಸಾಧ್ಯತೆಗಳಿರುತ್ತವೆ.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಇದು ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸುವ ಸಾಧ್ಯತೆಗಳಿರುತ್ತವೆ. ಹ್ಯಾಂಡ್ ಬ್ರೇಕ್'ಗಳು ವಿಫಲವಾಗುವ ಮುನ್ನ ಕೆಲವು ಸಂಕೇತಗಳನ್ನು ನೀಡುತ್ತವೆ. ಈ ಸಂಕೇತಗಳನ್ನು ಪರಿಗಣಿಸಿ ಅನಗತ್ಯ ತೊಂದರೆಗಳಾಗುವುದನ್ನು ತಪ್ಪಿಸಬಹುದು. ಈ ಲೇಖನದಲ್ಲಿ ಹ್ಯಾಂಡ್ ಬ್ರೇಕ್ ವಿಫಲವಾಗುವ ಮುನ್ನ ಕಂಡು ಬರುವ ಸಂಕೇತಗಳು ಯಾವುವು ಎಂಬುದನ್ನು ನೋಡೋಣ.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಬಿಗಿಯಾದ ಹ್ಯಾಂಡ್‌ಬ್ರೇಕ್

ಹ್ಯಾಂಡ್ ಬ್ರೇಕ್ ಅಸಹಜವಾಗಿದ್ದರೆ, ಅದರಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ. ಇದು ಬ್ರೇಕ್ ವೈರ್ ನಲ್ಲಿ ಅಸಮರ್ಪಕ ಕಾರ್ಯವನ್ನು ಸೂಚಿಸುತ್ತದೆ. ತುಂಬಾಬಿಗಿಯಾಗಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ಹ್ಯಾಂಡ್ ಬ್ರೇಕ್'ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಇದರಿಂದ ಅನಗತ್ಯ ತೊಂದರೆಗಳು ಉಂಟಾಗಬಹುದು.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಈ ಕಾರಣಕ್ಕೆ ಕಾರಿನಲ್ಲಿರುವ ಹ್ಯಾಂಡ್ ಬ್ರೇಕ್ ತುಂಬಾ ಬಿಗಿಯಾಗಿದ್ದರೆ ತಕ್ಷಣವೇ ಮೆಕ್ಯಾನಿಕ್ ಅನ್ನು ಸಂಪರ್ಕಿಸುವುದು ಒಳ್ಳೆಯದು. ಬಿಗಿಯಾಗಿರುವ ಹ್ಯಾಂಡ್‌ಬ್ರೇಕ್ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅನಾಹುತವಾಗುವುದು ಖಚಿತ. ಇದರ ಜೊತೆಗೆ ಹ್ಯಾಂಡ್ ಬ್ರೇಕ್‌ಗಳು ತೀರಾ ಸಡಿಲವಾಗಿಯೂ ಕಾರ್ಯನಿರ್ವಹಿಸಬಾರದು.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಹ್ಯಾಂಡ್ ಬ್ರೇಕ್'ಗಳು ತೀರಾ ಸಡಿಲವಾಗಿದ್ದರೆ ವೈರ್ ಗಳು ಜೋಡಣೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಇದರಿಂದ ಕೆಲವೊಮ್ಮೆ ಹ್ಯಾಂಡ್ ಬ್ರೇಕ್ ಗಳು ನಿಷ್ಕ್ರಿಯವಾಗುತ್ತವೆ. ಈ ಕಾರಣಕ್ಕೆ ಹ್ಯಾಂಡ್ ಬ್ರೇಕ್ ಅಸಹಜವಾಗಿ ಹಗುರವಾಗಿ ಕೆಲಸ ಮಾಡಿದರೂ ಸಹ ತಕ್ಷಣವೇ ಅದನ್ನು ಸರಿ ಪಡಿಸುವುದು ಉತ್ತಮ.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಹಿಲ್ ಟೆಸ್ಟ್:

ಕಾರಿನಲ್ಲಿರುವ ಹ್ಯಾಂಡ್‌ಬ್ರೇಕ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಕಾರನ್ನು ಕಡಿದಾದ ಅಥವಾ ಇಳಿಜಾರು ಪ್ರದೇಶಗಳಲ್ಲಿ ಹ್ಯಾಂಡ್‌ಬ್ರೇಕ್‌ ಹಾಕಿ ನಿಲ್ಲಿಸಬೇಕು. ಕಾರು ಸ್ವಲ್ಪವೂ ಚಲಿಸದಿದ್ದರೆ ಕಾರಿನ ಹ್ಯಾಂಡ್ ಬ್ರೇಕ್ ಉತ್ತಮ ಸ್ಥಿತಿಯಲ್ಲಿದೆ ಎಂದರ್ಥ. ವಿರುದ್ಧವಾಗಿ ಕಾರು ಸ್ವಲ್ಪ ಚಲಿಸಿದರೂ ಹ್ಯಾಂಡ್ ಬ್ರೇಕ್ ನಿಷ್ಕ್ರಿಯವಾಗಿದೆ ಎಂದರ್ಥ.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಪ್ರತಿರೋಧ ಕಂಡು ಬರದಿರುವುದು

ಆಕಸ್ಮಿಕವಾಗಿ ಹ್ಯಾಂಡ್ ಬ್ರೇಕ್‌ನಲ್ಲಿರುವ ಕಾರ್ ಅನ್ನು ಚಲಿಸಿದರೆ ಕೆಲವು ಅಡೆ ತಡೆಗಳು ಎದುರಾಗುತ್ತವೆ. ಒಂದು ವೇಳೆ ಹ್ಯಾಂಡ್ ಬ್ರೇಕ್ ಹಾಕಿ ಕಾರ್ ಅನ್ನು ಮುಂದಕ್ಕೆ ಚಲಿಸಿಯೂ ಯಾವುದೇ ಪ್ರತಿರೋಧ ಕಂಡು ಬರದಿದ್ದರೆ ಹ್ಯಾಂಡ್ ಬ್ರೇಕ್‌ನಲ್ಲಿ ಏನೋ ತಪ್ಪಾಗಿದೆ ಎಂದರ್ಥ.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಇದೇ ವೇಳೆ ಹ್ಯಾಂಡ್‌ಬ್ರೇಕ್ ಹಾಕಿರುವಾಗ ಕಾರ್ ಅನ್ನು ಬಳಸುವುದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು. ಕಾರು ಒತ್ತಡವಿಲ್ಲದೆ ಪ್ರಯಾಣಿಸುತ್ತಿದ್ದರೆ ಯಾವುದೇ ಸಮಯದಲ್ಲಿಯೂ ಹ್ಯಾಂಡ್ ಬ್ರೇಕ್ ಅನ್ನು ಬಳಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ನಿಷ್ಕ್ರಿಯ ಸ್ಥಿತಿ

ಕೆಲವೊಮ್ಮೆ ಹ್ಯಾಂಡ್‌ಬ್ರೇಕ್ ಅನ್ನು ಹಾಕಿದ ನಂತರವೂ ಕಾರು ಒತ್ತಡದಲ್ಲಿ ಚಲಿಸುತ್ತದೆ. ಇದು ಹ್ಯಾಂಡ್ ಬ್ರೇಕ್ ಚಕ್ರಗಳ ಸ್ಥಾನವನ್ನು ಬಿಡುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಇದು ಸಹ ಹ್ಯಾಂಡ್ ಬ್ರೇಕ್ ನಿಷ್ಕ್ರಿಯವಾಗಿರುವ ಸಂಕೇತವಾಗಿದೆ. ಹ್ಯಾಂಡ್‌ ಬ್ರೇಕ್‌ನ ಅಸಮರ್ಪಕ ಕಾರ್ಯ ನಿರ್ವಹಣೆ ಇದಕ್ಕೆ ಕಾರಣ.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಕಾರ್ ಅನ್ನು ದೀರ್ಘಕಾಲ ನಿಲ್ಲಿಸಿದಾಗ ಹ್ಯಾಂಡ್ ಬ್ರೇಕ್ ಬಳಸುವುದರಿಂದ ಈ ಸ್ಥಿತಿ ಉಂಟಾಗಬಹುದು. ಅದಕ್ಕಾಗಿಯೇ ಆಟೋ ಮೋಟಿವ್ ಪರಿಣಿತರು ದೀರ್ಘಾವಧಿಯವರೆಗೆ ಪಾರ್ಕಿಂಗ್ ಮಾಡುವ ಸಂದರ್ಭ ಎದುರಾದಾಗ ಆಗಾಗ ಕಾರ್ ಅನ್ನು ಚಲಿಸುವಂತೆ ಸಲಹೆ ನೀಡುತ್ತಾರೆ.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಹ್ಯಾಂಡ್ ಬ್ರೇಕ್ ನಂತೆ ಕ್ಲಚ್ ಸಹ ಕಾರಿನ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಆದರೆ ಕೆಲವರು ಕ್ಲಚ್ ಬಳಸುವಾಗ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಆದರೆ ಕೆಲವು ಸರಳ ವಿಧಾನಗಳ ಮೂಲಕ ಕ್ಲಚ್'ನ ಜೀವಿತಾವಧಿಯನ್ನು ಹೆಚ್ಚಿಸಬಹುದು. ಹಲವು ಕಾರು ಚಾಲಕರು ತಮ್ಮ ಪಾದಗಳನ್ನು ಕ್ಲಚ್ ಪೆಡಲ್ ಮೇಲೆ ಇಟ್ಟು ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಇದು ನಿಜಕ್ಕೂ ಕೆಟ್ಟ ಅಭ್ಯಾಸ ಎಂದು ಹಲವರಿಗೆ ತಿಳಿದಿಲ್ಲ. ಕ್ಲಚ್ ಮೇಲೆ ಅನಗತ್ಯವಾಗಿ ಪಾದಗಳನ್ನು ಇರಿಸಿದರೆ, ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಹಾಗಾಗಿ ಕ್ಲಚ್ ಬಳಸುವಾಗ ಮಾತ್ರ ಪಾದವನ್ನು ಕ್ಲಚ್ ಮೇಲೆ ಇಟ್ಟರೆ ಒಳ್ಳೆಯದು.

ಕಾರಿನ ಹ್ಯಾಂಡ್ ಬ್ರೇಕ್ ಸಮರ್ಪಕವಾಗಿಲ್ಲವೆಂದು ಸೂಚಿಸುವ ಲಕ್ಷಣಗಳಿವು

ಬಳಕೆಯಲ್ಲಿಲ್ಲದಿದ್ದಾಗ ಅನಗತ್ಯವಾಗಿ ಕ್ಲಚ್ ಮೇಲೆ ಪಾದ ಇಡುವುದನ್ನು ತಪ್ಪಿಸಿ. ಅಗತ್ಯವಿದ್ದಾಗ ಕ್ಲಚ್ ಪೆಡಲ್ ಅನ್ನು ಸಂಪೂರ್ಣವಾಗಿ ಒತ್ತಿರಿ. ಅಗತ್ಯವಿಲ್ಲದಿದ್ದಾಗ ನಿಮ್ಮ ಪಾದವನ್ನು ಅದರ ಮೇಲೆ ಇಡಬೇಡಿ. ಕಾರ್ ಕ್ಲಚ್‌ನ ಜೀವಿತಾವಧಿಯನ್ನು ಹೆಚ್ಚಿಸುವ ಸರಳ ಮಾರ್ಗಗಳಲ್ಲಿ ಇದು ಸಹ ಒಂದು.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Symptoms which says about handbrake failure details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X