ವಿವಾದಕ್ಕೆ ಕಾರಣವಾಯ್ತು ಈ ನಟ ಮತದಾನಕ್ಕೆ ಆಗಮಸಿದ ರೀತಿ

ತಮಿಳುನಾಡು ವಿಧಾನಸಭೆಗೆ ಇಂದು ಚುನಾವಣೆ ನಡೆದಿದೆ. ಹಲವಾರು ಜನರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನಟ, ನಟಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ವಿವಾದಕ್ಕೆ ಕಾರಣವಾಯ್ತು ಈ ನಟ ಮತದಾನಕ್ಕೆ ಆಗಮಸಿದ ರೀತಿ

ಈ ಇಳಯ ದಳಪತಿ ಖ್ಯಾತಿಯ ನಟ ವಿಜಯ್ ಸಹ ತಿರುವನ್ಮಿಯೂರ್ ಮನೆಯಿಂದ ನೀಲಂಗರೈ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದಾರೆ. ಅವರು ಸೈಕಲ್ ಚಾಲನೆ ಮಾಡಿಕೊಂಡು ಮತಗಟ್ಟೆಗೆ ತೆರಳಿದರು ಎಂಬುದು ವಿಶೇಷ. ಹೆಚ್ಚಿನ ಸೆಲೆಬ್ರಿಟಿಗಳು ಐಷಾರಾಮಿ ಕಾರಿನಲ್ಲಿ ತೆರಳಿ ಮತದಾನ ಮಾಡಿದರೆ, ವಿಜಯ್ ಮಾತ್ರ ಸೈಕಲ್‌ನಲ್ಲಿ ತೆರಳಿ ಮತ ಚಲಾಯಿಸಿದ್ದಾರೆ.

ವಿವಾದಕ್ಕೆ ಕಾರಣವಾಯ್ತು ಈ ನಟ ಮತದಾನಕ್ಕೆ ಆಗಮಸಿದ ರೀತಿ

ನಟ ವಿಜಯ್ ಅವರ ಈ ನಡೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಆಡಳಿತಾರೂಢ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸುವ ಸಲುವಾಗಿ ನಟ ವಿಜಯ್ ಸೈಕಲ್‌ ಮೂಲಕ ತೆರಳಿ ಮತ ಚಲಾಯಿಸಿದ್ದಾರೆ ಎಂದು ಹೇಳಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿವಾದಕ್ಕೆ ಕಾರಣವಾಯ್ತು ಈ ನಟ ಮತದಾನಕ್ಕೆ ಆಗಮಸಿದ ರೀತಿ

ಪೆಟ್ರೋಲ್, ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನರು ಪರದಾಡುವಂತಾಗಿದೆ. ವರದಿಗಳ ಪ್ರಕಾರ ನಟ ವಿಜಯ್ ಸೈಕಲ್'ನಲ್ಲಿ ಮತಗಟ್ಟೆಗೆ ತೆರಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಾದಕ್ಕೆ ಕಾರಣವಾಯ್ತು ಈ ನಟ ಮತದಾನಕ್ಕೆ ಆಗಮಸಿದ ರೀತಿ

ಆದರೆ ನಟ ವಿಜಯ್ ಮತಗಟ್ಟೆಗೆ ಸೈಕಲ್'ನಲ್ಲಿ ತೆರಳಲು ಬೇರೆ ಕಾರಣಗಳಿವೆ ಎಂದು ವಿಜಯ್ ಅವರ ಆಪ್ತ ಮೂಲಗಳು ತಿಳಿಸಿವೆ. ವಿಜಯ್ ಸಾಮಾಜಿಕ ಕಾರ್ಯಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿವಾದಕ್ಕೆ ಕಾರಣವಾಯ್ತು ಈ ನಟ ಮತದಾನಕ್ಕೆ ಆಗಮಸಿದ ರೀತಿ

ಈ ಹಿಂದೆ ಜಲ್ಲಿ ಕಟ್ಟು ಕ್ರೀಡೆಗೆ ಬೆಂಬಲ ಸೂಚಿಸಿದ್ದ ಅವರು, ನೀಟ್‌ ಪರೀಕ್ಷೆಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಅನಿತಾ ಅವರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದರು. ಈಗ ಸೈಕಲ್ ಸವಾರಿ ಮಾಡಿ ಪೆಟ್ರೋಲ್, ಡೀಸೆಲ್ ವಾಹನಗಳಿಂದ ಪರಿಸರದ ಮೇಲಾಗುವ ಪರಿಣಾಮಗಳ ಹೇಳಲು ಮುಂದಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ವಿವಾದಕ್ಕೆ ಕಾರಣವಾಯ್ತು ಈ ನಟ ಮತದಾನಕ್ಕೆ ಆಗಮಸಿದ ರೀತಿ

ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂಬುದು ಗಮನಾರ್ಹ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿವಾದಕ್ಕೆ ಕಾರಣವಾಯ್ತು ಈ ನಟ ಮತದಾನಕ್ಕೆ ಆಗಮಸಿದ ರೀತಿ

ಆದರೆ, ಈ ವಿವಾದದ ಬಗ್ಗೆ ನಟ ವಿಜಯ್ ಯಾವುದೇ ಅಧಿಕೃತ ಹೇಳಿಕೆ ಮಾಡಿಲ್ಲ. ಇದರ ನಡುವೆ ವಿಜಯ್ ಚಾಲನೆ ಮಾಡಿದ ಸೈಕಲ್'ನ ಬಣ್ಣವೂ ಸಹವಿವಾದಕ್ಕೆ ಕಾರಣವಾಗಿದೆ.

ವಿವಾದಕ್ಕೆ ಕಾರಣವಾಯ್ತು ಈ ನಟ ಮತದಾನಕ್ಕೆ ಆಗಮಸಿದ ರೀತಿ

ವಿಜಯ್ ಚಾಲನೆ ಮಾಡಿದ ಸೈಕಲ್ ರಾಜಕೀಯ ಪಕ್ಷವೊಂದರ ಸಂಕೇತದಂತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ನಟ ವಿಜಯ್ ರಾಜಕೀಯ ಪಕ್ಷವನ್ನು ಪರೋಕ್ಷವಾಗಿ ಬೆಂಬಲಿಸಲು ಸೈಕಲ್ ಬಳಸಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿವಾದಕ್ಕೆ ಕಾರಣವಾಯ್ತು ಈ ನಟ ಮತದಾನಕ್ಕೆ ಆಗಮಸಿದ ರೀತಿ

ವಿಜಯ್ ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ಅವರು ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ರೋಲ್ಸ್ ರಾಯ್ಸ್, ಬೆಂಝ್, ಬಿಎಂಡಬ್ಲ್ಯು ಮುಂತಾದ ವಿವಿಧ ಕಂಪನಿಗಳ ದುಬಾರಿ ಐಷಾರಾಮಿ ಕಾರುಗಳು ಅವರ ಬಳಿಯಿವೆ.

Most Read Articles

Kannada
English summary
Tamil actor Vijay goes to election booth through bicycle. Read in Kannada.
Story first published: Tuesday, April 6, 2021, 19:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X