ವಿಧಾನಸಭೆಗೆ ಆಯ್ಕೆಯಾದ ಈ ಪಕ್ಷದ ಶಾಸಕರಿಗೆ ಉಡುಗೊರೆಯಾಗಿ ಸಿಗಲಿದೆ ಇನೋವಾ ಕಾರು

ಕರೋನಾ ವೈರಸ್ ಸಾಂಕ್ರಾಮಿಕದ ನಡುವೆಯೂ ಕಳೆದ ತಿಂಗಳು ತಮಿಳುನಾಡು ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಈ ಚುನಾವಣೆಗಳ ಫಲಿತಾಂಶವು ಮೇ 2ರಂದು ಹೊರ ಬಂದಿತು.

ವಿಧಾನಸಭೆಗೆ ಆಯ್ಕೆಯಾದ ಈ ಪಕ್ಷದ ಶಾಸಕರಿಗೆ ಉಡುಗೊರೆಯಾಗಿ ಸಿಗಲಿದೆ ಇನೋವಾ ಕಾರು

ಈ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ - ಬಿಜೆಪಿ ಹಾಗೂ ಡಿಎಂಕೆ - ಕಾಂಗ್ರೆಸ್ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ಚುನಾವಣೆಯಲ್ಲಿ ಬಹುಮತ ಪಡೆದ ಡಿಎಂಕೆ 10 ವರ್ಷಗಳ ನಂತರ ಅಧಿಕಾರದ ಗದ್ದುಗೆ ಏರಿದೆ.

ವಿಧಾನಸಭೆಗೆ ಆಯ್ಕೆಯಾದ ಈ ಪಕ್ಷದ ಶಾಸಕರಿಗೆ ಉಡುಗೊರೆಯಾಗಿ ಸಿಗಲಿದೆ ಇನೋವಾ ಕಾರು

ಮೊದಲ ಬಾರಿಗೆ ಎಂ.ಕೆ.ಸ್ಟಾಲಿನ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೇ ವೇಳೆ ಈ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 20 ವರ್ಷಗಳ ನಂತರ ಬಿಜೆಪಿಯ ನಾಲ್ವರು ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ವಿಧಾನಸಭೆಗೆ ಆಯ್ಕೆಯಾದ ಈ ಪಕ್ಷದ ಶಾಸಕರಿಗೆ ಉಡುಗೊರೆಯಾಗಿ ಸಿಗಲಿದೆ ಇನೋವಾ ಕಾರು

ಬಿಜೆಪಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಂಡಿಲ್ಲವಾದರೂ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಹೆಣಗಾಡುತ್ತಿರುವ ಬಿಜೆಪಿಗೆ ಇದು ದೊಡ್ಡಸಾಧನೆಯಾಗಿದೆ.

ವಿಧಾನಸಭೆಗೆ ಆಯ್ಕೆಯಾದ ಈ ಪಕ್ಷದ ಶಾಸಕರಿಗೆ ಉಡುಗೊರೆಯಾಗಿ ಸಿಗಲಿದೆ ಇನೋವಾ ಕಾರು

ಈ ವಿಜಯವನ್ನು ಆಚರಿಸಲು ವಿಧಾನಸಭೆಗೆ ಆಯ್ಕೆಯಾಗಿರುವ ಎಲ್ಲಾ ನಾಲ್ಕು ಬಿಜೆಪಿ ಶಾಸಕರಿಗೆ ಟೊಯೊಟಾ ಇನೋವಾ ಕಾರುಗಳನ್ನು ನೀಡಲಾಗುವುದು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್.ಮುರುಗನ್ ಹೇಳಿದ್ದಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ವಿಧಾನಸಭೆಗೆ ಆಯ್ಕೆಯಾದ ಈ ಪಕ್ಷದ ಶಾಸಕರಿಗೆ ಉಡುಗೊರೆಯಾಗಿ ಸಿಗಲಿದೆ ಇನೋವಾ ಕಾರು

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಇನೋವಾ ಕಾರನ್ನು ನೀಡಲಾಗುವುದು ಎಂದು ಅವರು ಚುನಾವಣೆಗೂ ಮುನ್ನ ಹೇಳಿದ್ದರು. ಅದರಂತೆ ಎಲ್.ಮುರುಗನ್ ತಾವು ನೀಡಿದ್ದ ಭರವಸೆಯನ್ನು ಈಡೇರಿಸಲು ಮುಂದಾಗಿದ್ದಾರೆ.

ವಿಧಾನಸಭೆಗೆ ಆಯ್ಕೆಯಾದ ಈ ಪಕ್ಷದ ಶಾಸಕರಿಗೆ ಉಡುಗೊರೆಯಾಗಿ ಸಿಗಲಿದೆ ಇನೋವಾ ಕಾರು

ಕೊಯಮತ್ತೂರು ದಕ್ಷಿಣದಿಂದ ವನತಿ ಶ್ರೀನಿವಾಸನ್, ನಾಗರ್‌ಕೋಯಿಲ್'ನಿಂದ ಎಂ.ಆರ್ ಗಾಂಧಿ, ತಿರುನೆಲ್ವೇಲಿಯಿಂದ ನೈನಾರ್ ನಾಗೇಂದ್ರನ್, ಮೊಡಕುರಿಚಿಯಿಂದ ಸಿ.ಸಾರಸ್ವತಿ ಬಿಜೆಪಿಯಿಂದ ಆಯ್ಕೆಯಾದ ಶಾಸಕರಾಗಿದ್ದಾರೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ವಿಧಾನಸಭೆಗೆ ಆಯ್ಕೆಯಾದ ಈ ಪಕ್ಷದ ಶಾಸಕರಿಗೆ ಉಡುಗೊರೆಯಾಗಿ ಸಿಗಲಿದೆ ಇನೋವಾ ಕಾರು

ಈ ಕುರಿತು ಮಾತನಾಡಿರುವ ಎಲ್. ಮುರುಗನ್, ತಮಿಳುನಾಡಿನಲ್ಲಿ ಕಮಲ ಅರಳುವುದಿಲ್ಲ ಎಂದು ಹೇಳಲಾಗಿತ್ತು. ತಮಿಳುನಾಡು, ಪುದುಚೇರಿಯಲ್ಲಿ ಬಿಜೆಪಿ ಬೆಳೆದಿದೆ. ವಿಧಾನಸಭಾ ಚುನಾವಣೆಯಲ್ಲಿ ಉಲ್ಲೇಖಿಸಿ ಬಿಜೆಪಿಯಿಂದ ತಮಿಳುನಾಡು ಶಾಸಕರಾಗಿ ಆಯ್ಕೆಯಾದವರಿಗೆ ಇನೋವಾ ಕಾರು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ವಿಧಾನಸಭೆಗೆ ಆಯ್ಕೆಯಾದ ಈ ಪಕ್ಷದ ಶಾಸಕರಿಗೆ ಉಡುಗೊರೆಯಾಗಿ ಸಿಗಲಿದೆ ಇನೋವಾ ಕಾರು

ಟೊಯೊಟಾ ಕಂಪನಿಯು ಕಳೆದ ವರ್ಷವಷ್ಟೇ ಫೇಸ್‌ಲಿಫ್ಟ್ ಇನೋವಾ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಫೇಸ್‌ಲಿಫ್ಟ್ ಇನೋವಾ ಕಾರಿನ ಮುಂಭಾಗವನ್ನು ಸಾಕಷ್ಟು ಪ್ರಮಾಣದಲ್ಲಿ ಮಾರ್ಪಡಿಸಲಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ವಿಧಾನಸಭೆಗೆ ಆಯ್ಕೆಯಾದ ಈ ಪಕ್ಷದ ಶಾಸಕರಿಗೆ ಉಡುಗೊರೆಯಾಗಿ ಸಿಗಲಿದೆ ಇನೋವಾ ಕಾರು

ಟೊಯೊಟಾ ಕಂಪನಿಯು ಕಳೆದ ತಿಂಗಳು ಇನೋವಾ ಕಾರಿನ ಎಲ್ಲಾ ಮಾದರಿಗಳ ರೂ.26,000ಗಳಷ್ಟು ಹೆಚ್ಚಿಸಿದೆ. ಬೆಲೆ ಏರಿಕೆಯ ನಂತರ ಭಾರತದಲ್ಲಿ ಟೊಯೊಟಾ ಕಾರುಗಳ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.16.52 ಲಕ್ಷಗಳಾಗಿದೆ.

ವಿಧಾನಸಭೆಗೆ ಆಯ್ಕೆಯಾದ ಈ ಪಕ್ಷದ ಶಾಸಕರಿಗೆ ಉಡುಗೊರೆಯಾಗಿ ಸಿಗಲಿದೆ ಇನೋವಾ ಕಾರು

ಇನ್ನು ಇನೋವಾ ಕಾರಿನ ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.24.59 ಲಕ್ಷಗಳಾಗಿದೆ. ಇನೋವಾ ಕ್ರಿಸ್ಟಾ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Tamil Nadu BJP MLA's to get Toyota Innova car as gift. Read in Kannada.
Story first published: Wednesday, May 12, 2021, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X