ಒಂದು ಮುಕ್ಕಾಲು ಗಂಟೆಯಲ್ಲಿ 190 ಕಿ.ಮೀ ಸಾಗಿದ ಆಂಬ್ಯುಲೆನ್ಸ್ ಚಾಲಕ

ಅಂಗಾಂಗಗಳನ್ನು ದಾನ ಮಾಡುವವರ ಸಂಖ್ಯೆಯು ಭಾರತದಲ್ಲಿ ಹೆಚ್ಚಾಗುತ್ತಿದೆ. ಈಗ ತಮಿಳುನಾಡಿನಲ್ಲಿ ನಡೆದಿರುವ ಘಟನೆಯೊಂದು ಅದನ್ನು ಮತ್ತೆ ಸಾಬೀತು ಪಡಿಸಿದೆ. ಅಪಘಾತದಲ್ಲಿ ಮೃತಪಟ್ಟ ಯುವತಿಯ ಲಿವರ್ ಅನ್ನು ಮತ್ತೊಬ್ಬ ವ್ಯಕ್ತಿಗೆ ಕಸಿ ಮಾಡಲಾಗಿದೆ.

ಒಂದು ಮುಕ್ಕಾಲು ಗಂಟೆಯಲ್ಲಿ 190 ಕಿ.ಮೀ ಸಾಗಿದ ಆಂಬ್ಯುಲೆನ್ಸ್ ಚಾಲಕ

ಆಂಬ್ಯುಲೆನ್ಸ್ ಚಾಲಕನು ವೇಗವಾಗಿ ಆಂಬ್ಯುಲೆನ್ಸ್ ಚಾಲನೆ ಮಾಡಿದ್ದರಿಂದ ಇದು ಸಾಧ್ಯವಾಗಿದೆ. ಭಾರತದಲ್ಲಿರುವ ಜನರು ಆಂಬ್ಯುಲೆನ್ಸ್ ಹಾಗೂ ಫೈರ್ ಟ್ರಕ್‍‍ನಂತಹ ತುರ್ತು ವಾಹನಗಳಿಗೆ ದಾರಿ ಕೊಡುವುದಿಲ್ಲ. ಹಲವು ಬಾರಿ ವಾಹನ ಸವಾರರು ಹಾಗೂ ಸಾರ್ವಜನಿಕರು ತುರ್ತು ವಾಹನಗಳಿಗೆ ಅಡ್ಡಿ ಪಡಿಸುತ್ತಾರೆ.

ಒಂದು ಮುಕ್ಕಾಲು ಗಂಟೆಯಲ್ಲಿ 190 ಕಿ.ಮೀ ಸಾಗಿದ ಆಂಬ್ಯುಲೆನ್ಸ್ ಚಾಲಕ

ಆದರೆ ಈ ಘಟನೆಯಲ್ಲಿ ಸಾರ್ವಜನಿಕರು ಸಹ ಬೆಂಬಲ ನೀಡಿದ್ದಾರೆ. ಇದರ ಜೊತೆಗೆ ಸಂಚಾರಿ ಪೊಲೀಸರೂ ಸಹ ಕೈಜೋಡಿಸಿದ್ದಾರೆ. ಸಂಚಾರಿ ಪೊಲೀಸರು ಸರಿಯಾದ ವ್ಯವಸ್ಥೆಯನ್ನು ಮಾಡಿದ್ದರಿಂದ ಆಂಬ್ಯುಲೆನ್ಸ್ ವೇಗವಾಗಿ ಚಲಿಸಿ ಲಿವರ್ ಅನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ಒಂದು ಮುಕ್ಕಾಲು ಗಂಟೆಯಲ್ಲಿ 190 ಕಿ.ಮೀ ಸಾಗಿದ ಆಂಬ್ಯುಲೆನ್ಸ್ ಚಾಲಕ

ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 25 ವರ್ಷ ವಯಸ್ಸಿನ ಯುವತಿಯನ್ನು ತಂಜಾವೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದರು. ಇದರ ಮಧ್ಯೆಯೂ ಆಕೆಯ ಪೋಷಕರು ಆಕೆಯ ಅಂಗಾಂಗಳನ್ನು ದಾನ ಮಾಡಲು ಮುಂದಾದರು.

ಒಂದು ಮುಕ್ಕಾಲು ಗಂಟೆಯಲ್ಲಿ 190 ಕಿ.ಮೀ ಸಾಗಿದ ಆಂಬ್ಯುಲೆನ್ಸ್ ಚಾಲಕ

ಮದುರೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿಗೆ ಲಿವರ್ ಕಸಿ ಮಾಡುವ ಅವಶ್ಯಕತೆ ಎದುರಾಗಿತ್ತು. ಇದಕ್ಕಾಗಿ ಮೃತ ಯುವತಿಯ ಲಿವರ್ ಅನ್ನು ರಸ್ತೆ ಮೂಲಕ ಆಂಬ್ಯುಲೆನ್ಸ್ ನಲ್ಲಿ ತಂಜಾವೂರಿನಿಂದ ಮಧುರೈಗೆ ಸಾಗಿಸಲಾಯಿತು.

ಒಂದು ಮುಕ್ಕಾಲು ಗಂಟೆಯಲ್ಲಿ 190 ಕಿ.ಮೀ ಸಾಗಿದ ಆಂಬ್ಯುಲೆನ್ಸ್ ಚಾಲಕ

ಇದಕ್ಕೆ ಸಹಕರಿಸಿದ ಟ್ರಾಫಿಕ್ ಪೊಲೀಸರು ಸಂಬಂಧಪಟ್ಟ ವ್ಯವಸ್ಥೆಗಳನ್ನು ಮಾಡಿದರು. ಇದರಿಂದಾಗಿ ಆಂಬ್ಯುಲೆನ್ಸ್ 1 ಗಂಟೆ 50 ನಿಮಿಷದಲ್ಲಿ 190 ಕಿ.ಮೀ ದೂರ ಚಲಿಸಿತು. ನಂತರ ಈ ಲಿವರ್ ಅನ್ನು ಯಶಸ್ವಿಯಾಗಿ ಕಸಿ ಮಾಡಲಾಯಿತು. ಈ ಆಂಬ್ಯುಲೆನ್ಸ್ ಅನ್ನು ಸುಬ್ರಹ್ಮಣ್ಯಂ ಎಂಬ ಡ್ರೈವರ್ ಚಾಲನೆ ಮಾಡಿದರು.

ಒಂದು ಮುಕ್ಕಾಲು ಗಂಟೆಯಲ್ಲಿ 190 ಕಿ.ಮೀ ಸಾಗಿದ ಆಂಬ್ಯುಲೆನ್ಸ್ ಚಾಲಕ

ಆಂಬ್ಯುಲೆನ್ಸ್ ಡ್ರೈವರ್‍‍ರವರ ಈ ಕಾರ್ಯವನ್ನು ಎಲ್ಲೆಡೆ ಶ್ಲಾಘಿಸಲಾಗುತ್ತಿದೆ. ಈ ಆಂಬ್ಯುಲೆನ್ಸ್ ಅನ್ನು ಪ್ರತಿ ಗಂಟೆಗೆ 140 ಕಿ.ಮೀ ವೇಗದಲ್ಲಿ ಚಾಲನೆ ಮಾಡಿದ್ದಾರೆ. ಇದರಿಂದಾಗಿ ಲಿವರ್ ಅನ್ನು ಯಶಸ್ವಿಯಾಗಿ ಕಸಿ ಮಾಡಲು ಸಾಧ್ಯವಾಗಿದೆ.

ಒಂದು ಮುಕ್ಕಾಲು ಗಂಟೆಯಲ್ಲಿ 190 ಕಿ.ಮೀ ಸಾಗಿದ ಆಂಬ್ಯುಲೆನ್ಸ್ ಚಾಲಕ

ಈ ಬಗ್ಗೆ ಮಾತನಾಡಿರುವ ಸುಬ್ರಹ್ಮಣ್ಯಂರವರು ಜೀವವನ್ನು ಉಳಿಸುವ ಕಾರಣಕ್ಕೆ ನಾನು ಆಂಬ್ಯುಲೆನ್ಸ್ ಅನ್ನು ಎಚ್ಚರಿಕೆಯಿಂದ ಚಾಲನೆ ಮಾಡಿದೆ ಎಂದು ಹೇಳಿದ್ದಾರೆ. ಆಂಬ್ಯುಲೆನ್ಸ್ ವೇಗವಾಗಿ ಚಲಿಸುತ್ತಿರುವ ಕಾರಣವನ್ನು ಅರ್ಥ ಮಾಡಿಕೊಂಡ ಸಾರ್ವಜನಿಕರೂ ಸಹ ಈ ಕಾರ್ಯದಲ್ಲಿ ನೆರವಾಗಿದ್ದಾರೆ.

ಒಂದು ಮುಕ್ಕಾಲು ಗಂಟೆಯಲ್ಲಿ 190 ಕಿ.ಮೀ ಸಾಗಿದ ಆಂಬ್ಯುಲೆನ್ಸ್ ಚಾಲಕ

ಇತ್ತೀಚಿಗೆ ಕರ್ನಾಟಕದಲ್ಲಿಯೂ ಸಹ ಇಬ್ಬರು ಆಂಬ್ಯುಲೆನ್ಸ್ ಚಾಲಕರು ವೇಗವಾಗಿ ಆಂಬ್ಯುಲೆನ್ಸ್ ಚಾಲನೆ ಮಾಡಿ ಸರಿಯಾದ ಸಮಯಕ್ಕೆ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ನೆರವಾಗಿದ್ದರು. ಯಾರೇ ಆಗಲಿ ಆಂಬ್ಯುಲೆನ್ಸ್ ಗಳಿಗೆ ದಾರಿ ಮಾಡಿಕೊಟ್ಟರೆ ಇನ್ನೊಬ್ಬರ ಜೀವ ಉಳಿಯಲು ಅನುಕೂಲವಾಗಲಿದೆ.

Most Read Articles

Kannada
English summary
Tamil Nadu Ambulance driver covered 190 kms in 1 hour 50 minutes to save a patients life. Read in Kannada.
Story first published: Wednesday, March 4, 2020, 14:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X