ಕೊಡಿಟ್ಟ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿದ ಬಾಲಕನಿಗೆ ಸೈಕಲ್ ಗಿಫ್ಟ್ ನೀಡಿದ ಸಿಎಂ

ದೇಶದಲ್ಲಿ ಕೊರೋನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸಿದೆ. ಕೊರೋನಾ ಸೋಂಕುವಿನ ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ದಾಖಲೆಯ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದೆ.

ಕೊಡಿಟ್ಟ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿದ ಬಾಲಕನಿಗೆ ಸೈಕಲ್ ಗಿಫ್ಟ್ ನೀಡಿದ ಸಿಎಂ

ಕೊರೋನಾ ಎರಡನೇ ಅಲೆಗೆ ದೇಶವೆ ನಲುಗಿದೆ ಎಂದು ಹೇಳಬಹುದು. ಹೀಗಿರುವಾಗ ಅನೇಕರು ಅವರವರ ರಾಜ್ಯಗಳ ಕರೊನಾ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಸೋಂಕಿತರ ಸಹಾಯಕ್ಕೆ ನೆರವಾಗುತ್ತಿದ್ದಾರೆ. ಆದರೆ ಇತ್ತೀಚೆಗೆ ತಮಿಳುನಾಡಿನ ಮಧುರೈನ ಏಳು ವರ್ಷದ ಬಾಲಕನೊಬ್ಬ ತಾನು ಕೂಡಿಟ್ಟಿದ್ದ ಹಣವನ್ನು ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ಕೊಟ್ಟಿದ್ದಾನೆ. ಈ ಏಳು ವರ್ಷದ ಬಾಲಕನಿಗೆ ಸಿಎಂ ಸ್ಟಾಲಿನ್‍ರವರು ಸೈಕಲ್ ಗಿಫ್ಟ್ ನೀಡಿದ್ದಾರೆ.

ಕೊಡಿಟ್ಟ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿದ ಬಾಲಕನಿಗೆ ಸೈಕಲ್ ಗಿಫ್ಟ್ ನೀಡಿದ ಸಿಎಂ

ಏಳು ವರ್ಷದ ಬಾಲಕ ಸೈಕಲ್ ತನ್ನ ಕನಸ್ಸಿನ ಸೈಕಲ್ ಅನ್ನು ಖರೀದಿಸಬೇಕೆಂಬ ಆಸೆಯಿಂದ ಹಣವನ್ನು ಕೊಡಿಟ್ಟದ್ದ, ಆದರೆ ಕರೋನಾ ಅಟ್ಟಹಾಸ ಹೆಚ್ಚಾಗಿ ಜನರು ಕಷ್ಟದಿಂದ ಬಳಲುತ್ತಿರುವುದನ್ನು ಕಂಡು ಬೇಸರಗೊಂಡ ಮಧುರೈನ ಎಲೆಕ್ಟ್ರಿಷಿಯನ್ ಪುತ್ರನಾಗಿರುವ ಹರೀಶ್ ವರ್ಮನ್ ಎಂಬ ಏಳು ವರ್ಷದ ಬಾಲಕ ತಾನು ಕೊಡಿಟ್ಟ ರೂ.1 ಸಾವಿರ ಹಣವನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ ಕಳುಹಿಸಲು ನಿರ್ಧರಿಸುತ್ತಾನೆ.

ಕೊಡಿಟ್ಟ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿದ ಬಾಲಕನಿಗೆ ಸೈಕಲ್ ಗಿಫ್ಟ್ ನೀಡಿದ ಸಿಎಂ

ಇದರ ಜೊತೆಗೆ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಪತ್ರ ಬರೆದು ಕೊರೋನಾದಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವಂತೆ ಕೋರಿದ್ದಾನೆ. ಭಾನುವಾರ ಸಂಜೆ ಮಧುರೈ ಶಾಸಕ ಕೆ.ಥಳಪತಿ ಮತ್ತು ಪಕ್ಷದ ಕಾರ್ಯಕರ್ತರು ಆ ಬಾಲಕನ ಮನೆಗೆ ತೆರಳಿ ಸೈಕಲ್ ಗಿಫ್ಟ್ ನೀಡುವ ಮೂಲಕ ಸರ್ಪೈಸ್ ನೀಡಿದ್ದಾರೆ.

ಕೊಡಿಟ್ಟ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿದ ಬಾಲಕನಿಗೆ ಸೈಕಲ್ ಗಿಫ್ಟ್ ನೀಡಿದ ಸಿಎಂ

ಇಷ್ಟೇ ಅಲ್ಲದೇ ಮುಖ್ಯಮಂತ್ರಿ ಸ್ಟಾಲಿನ್ ಬಾಲಕನೊಟ್ಟಿಗೆ ಕಾಲ್ ಮಾಡಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಚೆನ್ನಾಗಿ ಓದು, ಕೊರೋನಾವಿರುವುದರಿಂದ ಸೈಕಲ್ ಅನ್ನು ಹೊರಗೆ ತುಳಿಯ ಬೇಡ ಎಂದರು. ಜೊತೆಗೆ ದೇಣಿಗೆ ನೀಡಿದ್ದಕ್ಕಾಗಿ ಧನ್ಯವಾದ ಸಹ ತಿಳಿಸಿದ್ದಾರೆ.

ಕೊಡಿಟ್ಟ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿದ ಬಾಲಕನಿಗೆ ಸೈಕಲ್ ಗಿಫ್ಟ್ ನೀಡಿದ ಸಿಎಂ

ಈ ಬಗ್ಗೆ ಮುಖ್ಯಮಂತ್ರಿ ಸ್ಟಾಲಿನ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ, ಬಾಲಕ ಹರೀಶ್ ವರ್ಮಾನ್ ಕೋವಿಡ್-19 ತಡೆಗಟ್ಟುವಿಕೆಗಾಗಿ ಬೈಸಿಕಲ್ ಖರೀದಿಸಲು ಸಂಗ್ರಹಿಸಲು ಹಣವನ್ನು ಮುಖ್ಯಮಂತ್ರಿ ಸಂಗ್ರಹ ನಿಧಿಗೆ ಕಳುಹಿಸಿದ್ದಾನೆ ಎಂಬ ಸುದ್ದಿ ಮಾಧ್ಯಮಗಳ ಮೂಲಕ ತಿಳಿದುಕೊಂಡೆ.

ಕೊಡಿಟ್ಟ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿದ ಬಾಲಕನಿಗೆ ಸೈಕಲ್ ಗಿಫ್ಟ್ ನೀಡಿದ ಸಿಎಂ

ಆ ಬಾಲಕನಿಗಾಗಿ ನಾನು ಒಂದು ಸೈಕಲ್ ಅನ್ನು ಉಡುಗೊರೆಯಾಗಿ ಧನ್ಯವಾದ ತಿಳಿಸಿರುವುದುದಾಗಿ ಸಿಎಂ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ. ಈ ಪುಟ್ಟ ಬಾಲಕ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಜನರು ಬಾಲಕನಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಕೊಡಿಟ್ಟ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿದ ಬಾಲಕನಿಗೆ ಸೈಕಲ್ ಗಿಫ್ಟ್ ನೀಡಿದ ಸಿಎಂ

ಇನ್ನು ಕೆಲವರು ಮುಖ್ಯಮಂತ್ರಿ ಸ್ಟಾಲಿನ್ ಅವರು ಆ ಬಾಲಕನನ್ನು ಗುರುತಿಸಿ ಆತನ ಕನಸ್ಸಿನ ಸೈಕಲ್ ಗಿಫ್ಟ್ ನೀಡಿರುವುದಕ್ಕೆ ಸಿಎಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಒಟ್ಟಾರೆಯಾಗಿ ಈ ಪುಟ್ಟ ಬಾಲಕನು ಸೈಕಲ್ ಖರೀದಿಸಲು ಕೊಡಿಟ್ಟ ಹಣವನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ ನೀಡಿರುವುದು ಹಲವರಿಗೆ ಪ್ರೇರಣೆಯಾಗುತ್ತದೆ.

Most Read Articles

Kannada
English summary
Stalin Gifts Cycle To Madurai Boy Who Sent Savings To CM Relief Fund. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X