ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂತು ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಪರಿಹರಿಸಲು ಪೊಲೀಸರು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಲವು ರಾಜ್ಯ ಸರ್ಕಾರಗಳೂ ಸಹ ಹೊಸ ಹೊಸ ಟೆಕ್ನಾಲಜಿಗಳನ್ನು ಅಳವಡಿಸುತ್ತಿವೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂತು ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ

ತಮಿಳುನಾಡು ಸರ್ಕಾರವು ಸಹ ಹೊಸ ಟೆಕ್ನಾಲಜಿಗಳನ್ನು ಅಳವಡಿಸುವಲ್ಲಿ ಹಿಂದೆ ಬಿದ್ದಿಲ್ಲ. ಈಗ ತಮಿಳುನಾಡಿನ ಥೇಣಿಯಲ್ಲಿ ಅಳವಡಿಸಲಾಗಿರುವ ಹೊಸ ತಂತ್ರಜ್ಞಾನವು ಎಲ್ಲರ ಗಮನ ಸೆಳೆಯುತ್ತಿದೆ. ಥೇಣಿ ತಮಿಳುನಾಡಿನ ಪ್ರಮುಖ ಸ್ಥಳಗಳಲ್ಲಿ ಒಂದಾಗಿದ್ದು, ಟ್ರೈ ಸರ್ಕಲ್ ಜಂಕ್ಷನ್ ಹೊಂದಿದೆ. ಈ ಜಂಕ್ಷನ್ ಮಧುರೈ ರಸ್ತೆ, ಕಂಬಂ ರಸ್ತೆ ಹಾಗೂ ಪೆರಿಯಕುಲಂ ರಸ್ತೆಗಳನ್ನು ಹೊಂದಿದೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂತು ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ

ಈ ರಸ್ತೆಯ ಬಳಿಯೇ ಹಳೆಯ ಬಸ್ ನಿಲ್ದಾಣವೂ ಇರುವುದರಿಂದ ಈ ಪ್ರದೇಶದಲ್ಲಿ ಯಾವಾಗಲೂ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಹಿಂದೆ ಇಲ್ಲಿ ಅಳವಡಿಸಲಾಗಿದ್ದ ಟ್ರಾಫಿಕ್ ಸಿಗ್ನಲ್ ಆಗಾಗ್ಗೆ ರಿಪೇರಿಯಾಗುತ್ತಿತ್ತು. ವಿಶೇಷವಾಗಿ ಮಳೆಗಾಲದಲ್ಲಿ ಈ ಟ್ರಾಫಿಕ್ ಸಿಗ್ನಲ್ ಹಲವಾರು ದಿನಗಳವರೆಗೆ ಕೆಟ್ಟು ಹೋಗುತ್ತಿತ್ತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂತು ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ

ಇದರಿಂದಾಗಿ ಮತ್ತಷ್ಟು ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಈ ಕಾರಣಕ್ಕೆ ಟ್ರಾಫಿಕ್ ಜಾಮ್ ನಿಂದ ರೋಸಿ ಹೋಗಿದ್ದ ಈ ಭಾಗದ ಜನರು ಹಲವು ದಿನಗಳಿಂದ ಈ ಟ್ರಾಫಿಕ್ ಸಿಗ್ನಲ್ ಬದಲಿಸಿ ಹೊಸ ಸಿಗ್ನಲ್ ಗಳನ್ನು ಅಳವಡಿಸುವಂತೆ ಒತ್ತಾಯಿಸುತ್ತಿದ್ದರು.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂತು ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ

ಈ ಭಾಗದ ಜನರ ಒತ್ತಾಯಕ್ಕೆ ಮಣಿದ ಸರ್ಕಾರವು ಕೊನೆಗೂ ಹಳೆಯ ಟ್ರಾಫಿಕ್ ಸಿಗ್ನಲ್ ಕಂಬವನ್ನು ಬದಲಿಸಿದೆ. ಇದರ ಬದಲಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹೊಸ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಈ ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯು ಡಿಜಿಟಲ್ ಸ್ಕ್ರೀನ್ ಅನ್ನು ಹೊಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂತು ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ

ಈ ಸ್ಕ್ರೀನ್ ವಾಹನ ಸವಾರರಿಗೆ ಸಿಗ್ನಲ್ ಬದಲಾವಣೆಯ ಸಮಯವನ್ನು ಸೆಕೆಂಡುಗಳಲ್ಲಿ ತೋರಿಸುತ್ತದೆ. ಈ ಸಿಗ್ನಲ್ ವ್ಯವಸ್ಥೆಯು ಸುತ್ತಮುತ್ತಲಿರುವ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಗಳಿಗಿಂತ ವಿಭಿನ್ನವಾಗಿದೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂತು ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ

ಈ ಕಂಬದಲ್ಲಿರುವ ಕೆಂಪು, ಹಸಿರು ಹಾಗೂ ಹಳದಿ ಬಣ್ಣಗಳ ಲೈಟ್ ಗಳು ಬದಲಾದಾಗ ಇಡೀ ಕಂಬವು ಆ ಲೈಟ್ ಗಳ ಬಣ್ಣಕ್ಕೆ ಬದಲಾಗುತ್ತದೆ. ತಮಿಳುನಾಡು ಸರ್ಕಾರವು ಇದೇ ರೀತಿಯ ಅತ್ಯಾಧುನಿಕ ಸಿಗ್ನಲ್ ಗಳನ್ನು ಚೆನ್ನೈನಲ್ಲಿ ಅಳವಡಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂತು ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ

ತಮಿಳುನಾಡಿನಲ್ಲಿ ಈ ರೀತಿಯ ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್ ಗಳನ್ನು ಹೊಂದಿರುವ ಎರಡನೇ ನಗರ ಥೇಣಿ. ಈ ಹೊಸ ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್ ಗಳನ್ನು ಥೇಣಿಯ 3 ಸ್ಥಳಗಳಲ್ಲಿ ಅಳವಡಿಸಲಾಗುತ್ತಿದೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂತು ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ

ಈ ಟ್ರಾಫಿಕ್ ಸಿಗ್ನಲ್ ಕಂಬಗಳ ಮೌಲ್ಯ ರೂ.7 ಲಕ್ಷಗಳಾಗಿದೆ. ಈ ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್ ಕಂಬಗಳನ್ನು ರಸ್ತೆ ಸುರಕ್ಷತಾ ನಿಧಿಯಿಂದ ಸ್ಥಾಪಿಸಲಾಗಿದೆ. ಹೊಸ ಸಿಗ್ನಲ್ ವ್ಯವಸ್ಥೆಯು ಥೇಣಿಯ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆಗಳಿವೆ. ಈ ಬಗ್ಗೆ ಪುಥಿಯಾತಲೈಮುರೈ ವರದಿ ಪ್ರಕಟಿಸಿದೆ.

Most Read Articles

Kannada
English summary
Tamilnadu government installs new high tech traffic signal in Theni. Read in Kannada.
Story first published: Tuesday, October 27, 2020, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X