ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ರಸ್ತೆಗಳಲ್ಲಿ ಸಂಚರಿಸುವ ವೇಳೆ ಸರ್ಕಾರಿ ವಾಹನವೆಂದು ಅಥವಾ ಮಾನವ ಹಕ್ಕುಗಳು ಎಂದು ಬೋರ್ಡ್ ಹೊಂದಿರುವ ಕೆಲವು ವಾಹನಗಳನ್ನು ಗಮನಿಸಬಹುದು. ಆದರೆ ಈ ವಾಹನಗಳು ನಿಜಕ್ಕೂ ಸರ್ಕಾರಿ ವಾಹನಗಳಾಗಿರುವುದಿಲ್ಲ. ಬದಲಿಗೆ ನಕಲಿ ಬೋರ್ಡ್ ಹೊಂದಿರುವ ಖಾಸಗಿ ವಾಹನಗಳಾಗಿರುತ್ತವೆ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ಈ ರೀತಿ ನಕಲಿ ಬೋರ್ಡ್ ಹೊಂದಿರುವ ವಾಹನಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಮಿಳುನಾಡಿನ ಎಲ್ಲ ಚೆಕ್‌ಪೋಸ್ಟ್ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಎಲ್ಲಾ ರಾಜ್ಯಗಳಲ್ಲಿಯೂ ಇರುವಂತೆ ತಮಿಳುನಾಡಿನಲ್ಲಿಯೂ ಜಿ ಎಂಬ ಅಕ್ಷರವನ್ನು ಸರ್ಕಾರಿ ವಾಹನಗಳಿಗೆ ನೀಡಲಾಗುತ್ತದೆ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ಕೆಲವರು ತಮ್ಮ ಸ್ವಂತ ವಾಹನಗಳಲ್ಲಿ ಪ್ರತಿಷ್ಟೆಗಾಗಿ ಮಾನವ ಹಕ್ಕುಗಳು, ಪೊಲೀಸ್, ಆನ್ ಡ್ಯೂಟಿ, ಪ್ರೆಸ್, ವಕೀಲ ಎಂಬ ಸ್ಟಿಕರ್ ಅಥವಾ ಬೋರ್ಡ್‌ಗಳನ್ನು ಅಳವಡಿಸಿರುತ್ತಾರೆ. ಅಂತಹ ವಾಹನಗಳನ್ನು ಗಣ್ಯ ವ್ಯಕ್ತಿಗಳು ಅಥವಾ ಪ್ರಭಾವ ಶಾಲಿಗಳು ಹೆಚ್ಚಾಗಿ ಬಳಸುವುದರಿಂದ ವಾಹನ ತಪಾಸಣೆಯ ಸಮಯದಲ್ಲಿ ಅವರು ಪೊಲೀಸರೊಂದಿಗೆ ಸರಿಯಾಗಿ ಸಹಕರಿಸುವುದಿಲ್ಲ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ಇದನ್ನು ನಾವು ವೈಯಕ್ತಿಕವಾಗಿ ನೋಡ ಬಹುದು. ಇನ್ನೂ ಕೆಲವರು ಈ ದೃಶ್ಯಗಳನ್ನು ವೀಡಿಯೊ ಅಥವಾ ಸಿನಿಮಾಗಳಲ್ಲಿ ನೋಡಿರಬಹುದು. ಅಂತಹ ಸ್ಟಿಕ್ಕರ್‌ಗಳು ಅಥವಾ ಬೋರ್ಡ್‌ಗಳನ್ನು ಹೊಂದಿರುವ ವಾಹನಗಳನ್ನು ಪೊಲೀಸರು ಪರಿಶೀಲಿಸದೆ ಬಿಡುತ್ತಾರೆ. ಕೆಲವು ಚೆಕ್‌ಪೋಸ್ಟ್‌ಗಳಲ್ಲಿಯೂ ಸಹ ವಾಹನಗಳ ಮೇಲೆ ಈ ರೀತಿಯ ಬೋರ್ಡ್ ಗಳಿದ್ದರೆ ಪರಿಶೀಲಿಸದೇ ಹಾಗೆಯೇ ಕಳುಹಿಸಲಾಗುತ್ತದೆ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ಈ ಕಾರಣಕ್ಕಾಗಿಯೇ ಕೆಲವರು ತಮ್ಮ ವಾಹನಗಳಲ್ಲಿ ಇಂತಹ ಬೋರ್ಡ್‌ಗಳನ್ನು ಅಳವಡಿಸುವ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ದೂರುಗಳು ನಿರಂತರವಾಗಿ ಕೇಳಿ ಬರುತ್ತಿದ್ದವು. ಈ ವಾಹನಗಳ ಮೂಲಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬುದು ಪೊಲೀಸರಿಗೂ ಚೆನ್ನಾಗಿ ತಿಳಿದಿದೆ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ಆದರೆ ಈ ವಾಹನಗಳಲ್ಲಿ ಯಾರಾದರೂ ಗಣ್ಯ ವ್ಯಕ್ತಿಗಳು ಅಥವಾ ಹಿರಿಯ ಸರ್ಕಾರಿ ಅಧಿಕಾರಿಗಳು ಇರ ಬಹುದು ಎಂಬ ಕಾರಣಕ್ಕೆ ಪೊಲೀಸರು ಈ ವಾಹನಗಳ ತಪಾಸಣೆ ಮಾಡಲು ಹಿಂಜರಿಯುತ್ತಿದ್ದರು. ಆದರೆ ಇನ್ನು ಮುಂದೆ ಈ ಹಿಂಜರಿಕೆ ಇರುವುದಿಲ್ಲ. ಅಂತಹ ಬೋರ್ಡ್ ಹೊಂದಿರುವ ನಂಬರ್ ಪ್ಲೇಟ್ ಇರುವ ವಾಹನಗಳನ್ನು ನಿಲ್ಲಿಸಿ ಪರಿಶೀಲಿಸುವಂತೆ ಸರ್ಕಾರವು ಪೊಲೀಸರಿಗೆ ಆದೇಶ ನೀಡಿದೆ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ತಮಿಳುನಾಡಿನಾದ್ಯಂತವಿರುವ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಈ ಬಗ್ಗೆ ಸುತ್ತೋಲೆ ಕಳುಹಿಸಲಾಗಿದೆ. ಆ ಸುತ್ತೋಲೆಯಲ್ಲಿ ಸರ್ಕಾರಿ ವಾಹನ, ಮಾನವ ಹಕ್ಕುಗಳು, ಪೊಲೀಸ್, ಆನ್ ಡ್ಯೂಟಿ, ಪ್ರೆಸ್, ವಕೀಲರಂತಹ ಸ್ಟಿಕ್ಕರ್‌ಗಳನ್ನು ಹೊಂದಿರುವ ವಾಹನಗಳನ್ನು ತಡೆದು ಪರಿಶೀಲಿಸಬೇಕೆಂದು ತಿಳಿಸಲಾಗಿದೆ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ಈ ವಾಹನಗಳನ್ನು ಪರಿಶೀಲಿಸಿದ ನಂತರ ವರದಿಯಲ್ಲಿ ಅದರ ವಿವರಗಳನ್ನು ನಮೂದಿಸಬೇಕೆಂದು ತಿಳಿಸಲಾಗಿದೆ. ಆ ವರದಿಯಲ್ಲಿ ವಾಹನದಲ್ಲಿರುವ ಸ್ಟಿಕರ್ ಅಥವಾ ಬೋರ್ಡ್ ವಿವರಗಳಿರಬೇಕು. ಜೊತೆಗೆ ಕ್ರಮ ಸಂಖ್ಯೆ, ಸಮಯ, ದಿನಾಂಕ, ವಾಹನ ನೋಂದಣಿ, ವಾಹನ ಬಳಕೆದಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಕಚೇರಿ ವಿಳಾಸ ಹಾಗೂ ವಾಹನದ ಇತರ ವಿವರಗಳನ್ನು ನಮೂದಿಸಬೇಕೆಂದು ಸೂಚನೆ ನೀಡಲಾಗಿದೆ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ಆದರೆ ಸರ್ಕಾರದ ಈ ಸುತ್ತೋಲೆಯು ನಿಜವಾಗಿಯೂ ಪೊಲೀಸರಿಗೆ ಸವಾಲಿನ ವಿಷಯವಾಗಿದೆ. ಎಲ್ಲಾ ಸರ್ಕಾರಿ ಅಧಿಕಾರಿಗಳು, ವ್ಯಕ್ತಿಗಳು ಪೊಲೀಸರ ಕಾರ್ಯಕ್ಕೆ ಬೆಂಬಲ ನೀಡುತ್ತಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಕೆಲವು ಸ್ಥಳಗಳಲ್ಲಿ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ಈ ಹಿನ್ನೆಲೆಯಲ್ಲಿ ಉನ್ನತಾಧಿಕಾರಿಗಳು ಪರಿಶೀಲನೆ ವೇಳೆ ಸಹಕರಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚೆಕ್‌ಪೋಸ್ಟ್‌ಗಳಲ್ಲಿರುವ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಕಾರಣಕ್ಕೆ ಸಾರ್ವಜನಿಕ ವಲಯದಲ್ಲಿ ಉನ್ನತ ಸ್ಥಾನದಲ್ಲಿರುವವರು ಸಹ ವಾಹನ ತಪಾಸಣೆ ವೇಳೆ ಅವರ ವಾಹನವನ್ನು ನಿಲ್ಲಿಸಿ, ಪೊಲೀಸರಿಗೆ ತಮ್ಮ ಗುರುತನ್ನು ತೋರಿಸುವುದು ಅಗತ್ಯವಾಗಿದೆ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ಈ ರೀತಿಯ ವಾಹನ ತಪಾಸಣೆಯು ಎಂದಿಗೂ ಸರ್ಕಾರಿ ಅಧಿಕಾರಿಗಳ ಹಾಗೂ ಗಣ್ಯರ ಹೆಸರು ಕೆಡಿಸುವ ಉದ್ದೇಶವನ್ನು ಹೊಂದಿಲ್ಲ. ಇಂತಹ ಸ್ಟಿಕ್ಕರ್ ಹಾಗೂ ಬೋರ್ಡ್ ಗಳನ್ನು ಅಳವಡಿಸಿಕೊಂಡು ಸಮಾಜ ಘಾತುಕ ಕಾರ್ಯಗಳಲ್ಲಿ ಭಾಗಿಯಾಗಿರುವವರ ಸಂಚನ್ನು ವಿಫಲಗೊಳಿಸುವ ಸಲುವಾಗಿ ತಮಿಳುನಾಡು ಸರ್ಕಾರವು ಈ ಸುತ್ತೋಲೆಯನ್ನು ಹೊರಡಿಸಿದೆ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ಈ ಸುತ್ತೋಲೆಯ ಮೂಲಕ ತಮಿಳುನಾಡು ಸರ್ಕಾರವು ವಾಹನಗಳ ಪರಿಶೀಲನೆಯಲ್ಲಿ ದೇಶಕ್ಕೆ ಮಾದರಿಯಾಗಿ ನಿಲ್ಲುತ್ತಿದೆ. ತಮಿಳುನಾಡಿನಂತೆ ನಮ್ಮ ರಾಜ್ಯದಲ್ಲಿಯೂ ಈ ರೀತಿಯ ಸ್ಟಿಕ್ಕರ್ ಹಾಗೂ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವ ಅಗತ್ಯವಿದೆ.

ನಕಲಿ ಬೋರ್ಡ್ ಹೊಂದಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ

ಕರ್ನಾಟಕದಲ್ಲಿ ವಾಹನಗಳ ನೋಂದಣಿ ಶುಲ್ಕ ಹೆಚ್ಚಾಗಿರುವುದರಿಂದ ಇಲ್ಲಿನ ಜನರು ತಮ್ಮ ವಾಹನವನ್ನು ಹೊರ ರಾಜ್ಯಗಳಲ್ಲಿ ನೋಂದಾಯಿಸುತ್ತಿದ್ದಾರೆ. ಹೊರ ರಾಜ್ಯಗಳಲ್ಲಿ ನೋಂದಣಿಯಾಗಿ ಕರ್ನಾಟಕದಲ್ಲಿ ಸಂಚರಿಸುತ್ತಿರುವ ವಾಹನಗಳ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Tamilnadu government issues circular to take action against vehicles with g stickers details
Story first published: Tuesday, August 24, 2021, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X