ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

Tata Motors ಕಂಪನಿಯ ಕಾರುಗಳನ್ನು ಸಾಮಾನ್ಯವಾಗಿ ಸುರಕ್ಷಿತ ಕಾರುಗಳೆಂದು ಪರಿಗಣಿಸಲಾಗುತ್ತದೆ. Tata Motors ಕಂಪನಿಯ ಬಹುತೇಕ ಕಾರುಗಳು ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಒಳ್ಳೆಯ ರೇಟಿಂಗ್ ಪಡೆದಿವೆ. Tata ಕಾರುಗಳು ಈ ಟೆಸ್ಟ್ ನಲ್ಲಿ ನಾಲ್ಕು ಸ್ಟಾರ್ ಹಾಗೂ ಪೂರ್ಣ ಐದು ಸ್ಟಾರ್ ರೇಟಿಂಗ್ ಗಳನ್ನು ಪಡೆದಿವೆ.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

ವಿಶ್ವದಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಸಹ ಸೇರಿದೆ. ಇಲ್ಲಿನ ರಸ್ತೆ ಅಪಘಾತಗಳುನ್ನು ಗಮನದಲ್ಲಿಟ್ಟುಕೊಂಡು Tata Motors ಕಂಪನಿಯು ಗುಣಮಟ್ಟದ ಕಾರುಗಳನ್ನು ದೇಶಿಯವಾಗಿ ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಈ ಕಾರುಗಳು ಅಪಘಾತದ ತೀವ್ರತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

Tata ಕಂಪನಿಯ ಕಾರುಗಳು ರಸ್ತೆ ಅಪಘಾತಗಳಲ್ಲಿ ಪ್ರಯಾಣಿಕರ ಜೀವವನ್ನು ಉಳಿಸಿರುವ ಹಲವು ಘಟನೆಗಳು ವರದಿಯಾಗಿವೆ. ಈಗ ಇದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ Tata Altroz ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಪಾರಾದ ಕಾರು ಮಾಲೀಕರು ಈ ಕಾರ್ ಅನ್ನು ಪ್ರಶಂಸಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

ಅಸ್ಸಾಂನ Tata Altroz ಕಾರು ಮಾಲೀಕರು ಅಪಘಾತದಲ್ಲಿ ಹಾನಿಗೊಳಗಾದ Altroz ಕಾರಿನ ಚಿತ್ರವನ್ನು ಶೇರ್ ಮಾಡಿದ್ದಾರೆ. ಜೊತೆಗೆ ತಮ್ಮ ಪ್ರಾಣ ಉಳಿಸಿದ ಕಾರ್ ಅನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದು ಬೆಳಿಗ್ಗೆ Altroz XZ ಕಾರು ಅಪಘಾತಕ್ಕೀಡಾಯಿತು. ಈ ಕಾರಿನಲ್ಲಿ ಮೂವರು ವಯಸ್ಕರು, ಮೂವರು ಅಪ್ರಾಪ್ತ ವಯಸ್ಕರು ಸೇರಿದಂತೆ ಒಟ್ಟು ಆರು ಜನ ಪ್ರಯಾಣಿಸುತ್ತಿದ್ದೆವು.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

ಈ ಅಪಘಾತದಲ್ಲಿ ನಮಗೆ ಯಾವುದೇ ಸಣ್ಣ ಪ್ರಮಾಣದ ಗಾಯವೂ ಸಹ ಆಗಿಲ್ಲ. ನಾವು ಸುರಕ್ಷಿತವಾಗಿದ್ದೇವೆ. ನನ್ನ ಹಾಗೂ ನನ್ನ ಕುಟುಂಬದವರ ಜೀವ ಉಳಿಸಿದ್ದಕ್ಕಾಗಿ ನಾನು Tata Altroz ಕಾರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ಕಾರು ಮಾಲೀಕರು ಈ ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ಬಹಿರಂಗಪಡಿಸಿಲ್ಲ.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

ಅವರು ಪೋಸ್ಟ್ ಮಾಡಿರುವ ಚಿತ್ರದಲ್ಲಿ, Altroz ಕಾರಿನ ಮುಂಭಾಗದ ಎಡಭಾಗವು ಸ್ವಲ್ಪ ಪ್ರಮಾಣದಲ್ಲಿ ಹಾನಿಗೀಡಾಗಿದೆ. ಅಪಘಾತದಲ್ಲಿ ಕಾರಿನೊಳಗಿದ್ದ ಎರಡು ಫ್ರಂಟ್ ಏರ್‌ಬ್ಯಾಗ್‌ಗಳು ಹೊರ ಬಂದಿವೆ. ಮುಂಭಾಗದಲ್ಲಿ ಡಿಕ್ಕಿ ಹೊಡೆದಿರುವುದರಿಂದ ಎಡಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

ಅಪಘಾತದ ಸಮಯದಲ್ಲಿ ಕಾರಿನೊಳಗಿದ್ದ ಎಲ್ಲರೂ ಸೀಟ್ ಬೆಲ್ಟ್ ಧರಿಸಿದ್ದರು. ಇದರಿಂದ ಯಾರಿಗೂ ದೊಡ್ಡ ಪ್ರಮಾಣದಲ್ಲಿ ಗಾಯಗಳಾಗಿಲ್ಲ. ಇಷ್ಟು ದೊಡ್ಡ ಅಪಘಾತದಿಂದ ಪಾರಾಗಲು ಕಾರಿನ ಬಾಡಿ ಸಹ ಮುಖ್ಯವಾಗುತ್ತದೆ. ಜೊತೆಗೆ ಪ್ರಯಾಣದ ವೇಳೆ ಎಲ್ಲಾ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿರಬೇಕು.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

ಕಾರು ಸುರಕ್ಷಿತವಾಗಿದ್ದರೂ ಸೀಟ್ ಬೆಲ್ಟ್ ಧರಿಸದೇ ಪ್ರಯಾಣಿಸುವುದರಿಂದ ಅಪಘಾತದಲ್ಲಿ ಪ್ರಾಣಾಪಾಯ ಸಂಭವಿಸಬಹುದು. Tata Motors ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್ ಆದ Altroz ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಪೂರ್ಣ ಐದು ಸ್ಟಾರ್ ರೇಟಿಂಗ್ ಪಡೆದಿದೆ. ಈ ಟೆಸ್ಟ್ ಅನ್ನು ಸರಾಸರಿ ಪ್ರತಿ ಗಂಟೆಗೆ 64 ಕಿ.ಮೀ ವೇಗದಲ್ಲಿ ನಡೆಸಲಾಗಿತ್ತು.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

ವಯಸ್ಕರ ರಕ್ಷಣೆಗಾಗಿ Altroz ಕಾರು 17 ಅಂಕಗಳಿಗೆ 16.13 ಅಂಕ ಗಳಿಸಿದೆ. ಮಕ್ಕಳ ಸುರಕ್ಷತೆಗಾಗಿ ಈ ಕಾರು 49 ಅಂಕಗಳಿಗೆ 49 ಅಂಕಗಳನ್ನು ಪಡೆದಿದೆ. Altroz ಕಾರುಗಳ ಎಲ್ಲಾ ಮಾದರಿಗಳಲ್ಲಿ ಕನಿಷ್ಠ 2 ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಚಾಲಕರು ಹಾಗೂ ಸಹ ಪ್ರಯಾಣಿಕರ ತಲೆ, ಕುತ್ತಿಗೆ ಹಾಗೂ ಮೊಣಕಾಲುಗಳು ಹೆಚ್ಚು ಸುರಕ್ಷಿತವಾಗಿರುವುದು ಕಂಡು ಬಂದಿದೆ. ಜೊತೆಗೆ ಪ್ರಯಾಣಿಕರ ಎದೆ ಭಾಗವೂ ಸಹ ಸುರಕ್ಷಿತವಾಗಿದೆ. ಇವುಗಳನ್ನು ಪರೀಕ್ಷಿಸಲು Altroz ಕಾರಿನ ಮುಂಭಾಗಕ್ಕೆ ಪಾರ್ಶ್ವವಾಗಿ ಡಿಕ್ಕಿ ಹೊಡೆಸಲಾಗಿದೆ.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

Tata Altroz ಕಾರಿನ ಎಲ್ಲಾ ಮಾದರಿಗಳು ಎಬಿಎಸ್, ಇಬಿಡಿ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಪ್ಯಾಸೆಂಜರ್ ಸೀಟ್ ಬೆಲ್ಟ್ ಅಲಾರಂ, ಹೈ ಸ್ಪೀಡ್ ಅಲಾರಂ ಹಾಗೂ ಐಸೋಫಿಕ್ಸ್ ಬೇಬಿ ಸೀಟ್ ಹ್ಯಾಂಗರ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ ಗಳನ್ನು ಹೊಂದಿವೆ.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

Altroz ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು Tata Motors ಕಂಪನಿಯ ಆಲ್ಫಾ ಪ್ಲಾಟ್ ಫಾರಂನಲ್ಲಿ ಉತ್ಪಾದನೆಯಾದ ಮೊದಲ ವಾಹನವಾಗಿದೆ. ಈ ಕಾರು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ ಮೆಂಟಿನಲ್ಲಿ Hyundai i 20 ಹಾಗೂ Maruti Suzuki Baleno ಕಾರುಗಳಿಗೆ ಪೈಪೋಟಿ ನೀಡುತ್ತದೆ.

ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ Tata Altroz ಕಾರು

Altroz ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 9 ಲಕ್ಷಗಳಿಂದ ರೂ. 9.59 ಲಕ್ಷಗಳಾಗಿದೆ. ತನ್ನ ಸುರಕ್ಷತಾ ಫೀಚರ್ ಗಳ ಮೂಲಕ ಪ್ರಯಾಣಿಕರನ್ನು ಸಾವಿನ ದವಡೆಯಿಂದ ಕಾಪಾಡಿದ Altroz ಕಾರು ದೇಶಿಯವಾಗಿ ನಿರ್ಮಿತವಾಗಿದೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ.

ಗಮನಿಸಿ: ಈ ಲೇಖನದಲ್ಲಿ ಮೊದಲ ಮೂರು ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Tata altroz saves passengers life in road accident details
Story first published: Saturday, September 18, 2021, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X