Tata: ದೋಷಪೂರಿತ ನೆಕ್ಸಾನ್ ವಿತರಿಸಿದ ಡೀಲರ್: ನೇರವಾಗಿ ಮಾಲೀಕರನ್ನು ಸಂಪರ್ಕಿಸಿದ ಟಾಟಾ

ಹೊಸ ವಾಹನವನ್ನು ಖರೀದಿಸುವಾಗ ಡೆಲಿವರಿಗೂ ಮುನ್ನ ತಪಾಸಣೆ ಮಾಡುವುದು ಎಷ್ಟು ಮುಖ್ಯ ಎಂಬುದರ ಕುರಿತು ಈ ಪ್ರಕರಣವು ಸ್ವಲ್ಪ ಬೆಳಕು ಚೆಲ್ಲುತ್ತದೆ. ಲಕ್ಷಾಂತರ ರೂ. ಖರ್ಚು ಮಾಡಿ ಖರೀದಿಸಿದ ಕಾರು ದೋಷಪೂರಿತವಾಗಿದ್ದರೆ ಯಾರೇ ಆಗಲಿ ಹೀಗೆ ಮಾಡುತ್ತಾರೆ. ಅಷ್ಟಕ್ಕೂ ಈ ಕಾರು ಮಾಲೀಕ ಮಾಡಿದ್ದೇನು ಇಲ್ಲಿ ನೋಡೋಣ.

ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ತಾನು ಖರೀದಿಸಿದ ಟಾಟಾ ನೆಕ್ಸಾನ್ ಕಾರು ದೋಷಪೂರಿತವಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಶರತ್ ಕುಮಾರ್ ಎಂಬವರು 18.5 ಲಕ್ಷ ರೂ. ಖರ್ಚು ಮಾಡಿ ಹೊಚ್ಚ ಹೊಸ ಟಾಟಾ ನೆಕ್ಸಾನ್ ಖರೀದಿಸಿದ್ದಾರೆ. ವಾಹನವನ್ನು ಡೆಲಿವರಿ ನೀಡುವಾಗ ಕಂಡುಹಿಡಿದ ಸಮಸ್ಯೆಗಳನ್ನು ಪ್ರಸ್ತಾಪಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದರು.

tata-dealer-delivered-defective-nexon-company-issues-apology

ಹೆಡ್‌ಲೈಟ್‌ಗಳಲ್ಲಿ ನೀರು, ಮುಂಭಾಗದ ಬಂಪರ್ ಮತ್ತು ಕ್ವಾರ್ಟರ್ ಪ್ಯಾನಲ್ ಫ್ರೇಮ್‌ನಲ್ಲಿ ಗೀರುಗಳು, ಸರಿಯಾಗಿ ಅಳವಡಿಸದ ಬಾಗಿಲಿನ ರಬ್ಬರ್ ಬೀಡಿಂಗ್, ಬಾಗಿಲಿನ ಸ್ಕಫ್ ಪ್ಲೇಟ್‌ನಲ್ಲಿ ದೋಷಯುಕ್ತ ವೆಲ್ಡಿಂಗ್ ಮತ್ತು ಟೈಲ್‌ಗೇಟ್ ಫ್ರೇಮ್‌ನಲ್ಲಿ ಗೀರುಗಳಂತಹ ಸಮಸ್ಯೆಗಳನ್ನು ಹೈಲೈಟ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕುಟುಂಬದೊಂದಿಗೆ ಹೋಗಿ ಕಾರಿನ ಡೆಲಿವರಿಗೆ ಕಾಯುತ್ತಿದ್ದವರಿಗೆ ಇದು ದೊಡ್ಡ ಆಘಾತವಾಗಿತ್ತು ಎಂದು ಮಾಲೀಕ ಹೇಳಿಕೊಂಡಿದ್ದಾರೆ.

ಇಷ್ಟಾದ ಬಳಿಕವೂ ಸಮಸ್ಯೆಯನ್ನು ಪರಿಹರಿಸಲು ಅಥವಾ ಮರುಪಾವತಿಯನ್ನು ನೀಡಲು ಡೀಲರ್ ಅಥವಾ ಟಾಟಾ ಯಾವುದೇ ಆಸಕ್ತಿಯನ್ನು ತೋರಿಸಿಲ್ಲ. 2 ವರ್ಷಗಳ ವಿಸ್ತೃತ ವಾರಂಟಿಯೊಂದಿಗೆ ದುರಸ್ತಿ ಮಾಡಿದ ನಂತರ ವಾಹನವನ್ನು ಸ್ವೀಕರಿಸಬೇಕೆಂದು ಟಾಟಾ ಬಯಸುತ್ತಿರುವುದಾಗಿ ಕಾರು ಮಾಲೀಕ ಶರತ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

tata-dealer-delivered-defective-nexon-company-issues-apology

ಅಂದರೆ ಟಾಟಾ ಮೋಟಾರ್ಸ್ ಕಾರನ್ನು ಬದಲಿಸುವ ಬದಲು ರಿಪೇರಿ ಮಾಡಿದ ಕಾರನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಜೊತೆಗೆ ಟಾಟಾ ಮೋಟಾರ್ಸ್ ವಾಹನದ ವಾರಂಟಿಯನ್ನು 2 ವರ್ಷಗಳವರೆಗೆ ವಿಸ್ತರಿಸುವುದಾಗಿ ಹೇಳಿದೆ. ಆದರೆ ಮಾಲೀಕ ಇದಕ್ಕೆ ಸಿದ್ಧರಾಗಿಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಕಳವಳವನ್ನು ಹಂಚಿಕೊಂಡಿದ್ದಾರೆ. ದೋಷಪೂರಿತ ಟಾಟಾ ನೆಕ್ಸಾನ್ ಅನ್ನು ಸ್ವೀಕರಿಸಿ ನಿರಾಸೆಗೊಂಡಿದ್ದ ಗ್ರಾಹಕನಿಗೆ ಈಗ ಟಾಟಾ ಮೋಟಾರ್ಸ್ ಕ್ಷಮೆಯಾಚಿಸಿದೆ.

ಮಾಲೀಕರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಟಾಟಾ ನೆಕ್ಸನ್ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದೆ. ಹೆಚ್ಚಿನ ಸಹಾಯಕ್ಕಾಗಿ ಮಾಲೀಕರ ಇ-ಮೇಲ್ ಐಡಿಯನ್ನು ವಿನಂತಿಸಿದೆ. ಆದ್ರೆ ಮಾಲೀಕ ಪ್ರತಿಕ್ರಿಯಿಸಿ, ತಾನು ಈಗಾಗಲೇ ಪ್ರೇರಣಾ ಸಿಇಒ ಪೃಥ್ವಿ ಮತ್ತು ಟಾಟಾ ಕರ್ನಾಟಕ ವಲಯ ವ್ಯವಸ್ಥಾಪಕ ಮೊಹಮ್ಮದ್ ಅಹ್ಮದ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

tata-dealer-delivered-defective-nexon-company-issues-apology

ನೀವೇ PDI ಮಾಡಿ: ಕೆಲವೊಮ್ಮೆ ಯಾವುದೇ ಕಾರ್ ಡೀಲರ್‌ಶಿಪ್‌ಗಳಾಗಲಿ ಕೆಲವು ಸಮಸ್ಯೆಗಳನ್ನು ಹೊಂದಿರುವ ವಾಹನಗಳನ್ನು ಗ್ರಾಹಕರಿಗೆ ಹಸ್ತಾಂತರಿಸುತ್ತವೆ. ಇದು ಅಸಾಮಾನ್ಯ ವಿಷಯವಲ್ಲ, ಇಂತಹ ಸಂದರ್ಭಗಳನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಪ್ರೀ ಡೆಲಿವರಿ ತಪಾಸಣೆ ಅಥವಾ PDI (Pre - Delivery Inspection) ಮಾಡುವುದು.

ನಿಮ್ಮ ಹೊಸ ಕಾರಿನ ಡೆಲಿವರಿಗೂ ಮುನ್ನ ಸಂಪೂರ್ಣ PDI ಮಾಡುವುದು ಬಹಳ ಮುಖ್ಯ. ಉತ್ಪಾದನಾ ತಿಂಗಳಿನಿಂದಲೇ ನೀವು ವಾಹನದ ಪ್ರತಿಯೊಂದು ಮೂಲೆಯನ್ನು ಪರಿಶೀಲಿಸಬೇಕು, ಅದನ್ನು ನೀವು ಚಾಸಿಸ್ ಸಂಖ್ಯೆಯಿಂದ ಕಂಡುಹಿಡಿಯಬಹುದು. ಅದಲ್ಲದೆ, ಯಾವುದೇ ವಿಲಕ್ಷಣ ಗುರುತುಗಳು, ಪುನಃ ಬಣ್ಣ ಬಳಿದಿರುವುದು ಅಥವಾ ದೋಷವಿದೆಯೇ ಎಂದು ಸಂಪೂರ್ಣವಾಗಿ ಪರೀಕ್ಷಿಸುವುದು ಬಹಳ ಮುಖ್ಯ.

ಬಾನೆಟ್ ಅನ್ನು ತೆರೆದು ಎಂಜಿನ್ ವಿಭಾಗವನ್ನು ಚೆನ್ನಾಗಿ ನೋಡಿ. ಯಾವುದೇ ಸವೆದ ಭಾಗಗಳು, ಹಳೆಯ ವೈರಿಂಗ್ ಅಥವಾ ಭಾರೀ ಬಳಕೆಯ ಚಿಹ್ನೆಗಳಿವೆಯೇ ಎಂದು ನೋಡಿ. ಒಂದು ವೇಳೆ ಸಮಸ್ಯೆ ಇದ್ದರೇ ಯಾವುದರ ಬಗ್ಗೆಯಾದರೂ ಡೀಲರ್‌ಶಿಪ್ ಅನ್ನು ಕೇಳಲು ಹಿಂಜರಿಯಬೇಡಿ. ಲಕ್ಷಾಂತರ ರೂ. ಹಣ ವ್ಯಯಿಸಿರುವುದರಿಂದ ಧೈರ್ಯವಾಗಿ ಪ್ರಶ್ನಿಸುವ ಹಕ್ಕು ನಿಮಗಿರುತ್ತದೆ.

Source: Shras007/Instagram

Link: https://www.instagram.com/shras007/

Article Published On: Sunday, December 17, 2023, 13:00 [IST]
English summary
Tata dealer delivered defective nexon company issues apology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+