ಇದೇ ಕಾರಣಕ್ಕೆ ಪದೆ ಪದೇ ಟಾಟಾ ಕಾರುಗಳನ್ನು ಖರೀದಿಸುತ್ತಾರೆ!

ಟಾಟಾ ಕಾರುಗಳು ಗಟ್ಟಿಮುಟ್ಟಾದ ನಿರ್ಮಾಣ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಹೆಚ್ಚಿನ ಟಾಟಾ ಕಾರುಗಳು ಅಪಘಾತಗಳಲ್ಲಿ ಇದನ್ನು ಸಾಬೀತುಪಡಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಇತ್ತೀಚೆಗೆ ಟಾಟಾ ಹ್ಯಾರಿಯರ್ ಎಸ್‌ಯುವಿ ರಸ್ತೆಯ ಬದಿ ನಿಲ್ಲಿಸಿದ್ದ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರು ಬದುಕುಳಿದ ಮತ್ತೊಂದು ಉದಾಹರಣೆ ಇಲ್ಲಿದೆ. ಈ ವೀಡಿಯೊ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದೆ. ಇಲ್ಲಿ ಕಂಡುಬರುವ ವೀಡಿಯೊವನ್ನು ಇಂಡಿಯನ್ ಮೋಟಾರ್ ಹೆಡ್ಸ್ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ. ಘಟನೆ ಕುರಿತ ಹೆಚ್ಚಿ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಟಾಟಾ ವಾಹನವೊಂದು ತನ್ನ ಪ್ರಯಾಣಿಕರ ಜೀವವನ್ನು ಉಳಿಸುತ್ತಿರುವುದು ಇದೇ ಮೊದಲಲ್ಲ. ಟಾಟಾ ಕಾರುಗಳಿಗೆ ಸೇರಿದ ಹಲವು ಕಾರು ಅಪಘಾತದಲ್ಲಿ ಯಾವುದೇ ದೊಡ್ಡ ಗಾಯಗಳಿಲ್ಲದೆ ಹೊರನಡೆದಿರುವ ಉದಾಹರಣೆಗಳಿವೆ. ಅನೇಕ ಟಾಟಾ ಗ್ರಾಹಕರು ಇದೇ ಕಾರಣಕ್ಕಾಗಿ ಟಾಟಾ ಕಾರುಗಳನ್ನು ಮರಳಿ ಖರೀದಿಸುತ್ತಿದ್ದಾರೆ ಎಂದರೆ ಟಾಟಾ ಗುಣಮಟ್ಟದ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದು ತಿಳಿಯುತ್ತದೆ.

tata-harrier-accident-all-passengers-safe

ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳ ಪ್ರಸ್ತುತ ಆವೃತ್ತಿಗಳು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ 5-ಸ್ಟಾರ್ ರೇಟಿಂಗ್ ಗಳಿಸಿವೆ. ಈ ವೀಡಿಯೊದಲ್ಲಿ, ಟ್ರಕ್ ಅಡಿಯಲ್ಲಿ ಸಿಲುಕಿರುವ ಟಾಟಾ ಹ್ಯಾರಿಯರ್ ಅಪಘಾತ ಸಂಭವಿಸಿದ ನಿಖರವಾದ ಸ್ಥಳ ತಿಳಿದುಬಂದಿಲ್ಲ. ಇದು ಪ್ರಿ-ಫೇಸ್ ಲಿಫ್ಟ್ ಟಾಟಾ ಹ್ಯಾರಿಯರ್ ಡಾರ್ಕ್ ಆಗಿದ್ದು, ಟಾಟಾ ಇದನ್ನು ಕ್ರ್ಯಾಶ್ ಟೆಸ್ಟ್‌ಗೆ ಇದುವರೆಗೆ ಕಳುಹಿಸಲಿಲ್ಲ.

ಟಾಟಾ ಇದನ್ನು ಪರೀಕ್ಷೆಗಳಿಗೆ ಕಳುಹಿಸದಿದ್ದರೂ, ಜನರು ನಿರ್ಮಾಣ ಗುಣಮಟ್ಟದ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಚಾಲಕ ಚಾಲನೆ ಮಾಡುವಾಗ ವಿಚಲಿತನಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ ಅನ್ನು ನೋಡದೇ ಅದನ್ನು ಗಮನಿಸುವ ಹೊತ್ತಿಗೆ, ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ.

tata-harrier-accident-all-passengers-safe

ಚಾಲಕ ಬ್ರೇಕ್ ಹಾಕಿರಬಹುದು ಎಂದು ತೋರುತ್ತದೆ, ಆದರೆ ಎಸ್‌ಯುವಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಟ್ರಕ್‌ನ ಹಿಂಭಾಗದಲ್ಲಿ ಅಂಡರ್ ರೈಡ್ ಪ್ರೊಟೆಕ್ಷನ್ ಗಾರ್ಡ್ ಇದ್ದಂತೆ ಕಾಣುತ್ತಿಲ್ಲ. ಎಸ್‌ಯುವಿ ಬಂಪರ್ ಟ್ರಕ್ ಅಡಿಯಲ್ಲಿ ಸಿಲುಕಿ ತುಸು ಜಖಂ ಆಗಿದೆ. ಈ ವೀಡಿಯೊದಲ್ಲಿ, ಅಪಘಾತ ಸಂಭವಿಸಿದ ನಂತರದ ದೃಶ್ಯಗಳನ್ನು ನಾವು ನೋಡಬಹುದು.

ಟಾಟಾ ಹ್ಯಾರಿಯರ್ ಟ್ರಕ್ ಅಡಿಯಲ್ಲಿ ಸಿಲುಕಿಕೊಂಡು ಬಳಿಕ ಟೌ ಟ್ರಕ್ ಬಳಸಿ ಹೊರತೆಗೆಯಲಾಯಿತು. ಕಾರಿನಲ್ಲಿದ್ದವರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆಯಾದರೂ, ಈ ವೀಡಿಯೊದಲ್ಲಿ ಅವರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ವೀಡಿಯೊದಲ್ಲಿ ನೋಡಿದಂತೆ, ಹ್ಯಾರಿಯರ್‌ನ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡು ಬಾನೆಟ್ ಪುಡಿಪುಡಿಯಾಗಿದೆ.

tata-harrier-accident-all-passengers-safe

ಮುಂಭಾಗದ ಬಂಪರ್, ಹೆಡ್ ಲೈಟ್ ಗಳು, ರೇಡಿಯೇಟರ್ ಮತ್ತು ಬಾನೆಟ್ ಅಡಿಯಲ್ಲಿನ ಇತರ ಭಾಗಗಳು ಹಾನಿಗೊಳಗಾಗಿವೆ. ಮೇಲೆ ಹೇಳಿದಂತೆ, ಇದು ಹೈಸ್ಪೀಡ್ ಡಿಕ್ಕಿಯಂತೆ ಕಾಣುವುದಿಲ್ಲ. ಅಪಘಾತದಲ್ಲಿ ಮುಂಭಾಗದ ವಿಂಡ್‌ಶೀಲ್ಡ್ ಕೂಡ ಹಾನಿಯಾಗಿದೆ. ಅದರಲ್ಲಿದ್ದವರು ಬಾಗಿಲಿನ ಮೂಲಕ ತಪ್ಪಿಸಿಕೊಂಡಿರಬಹುದು ಎಂದು ತೋರುತ್ತದೆ. ಅಪಘಾತದ ಸಮಯದಲ್ಲಿ ಏರ್ ಬ್ಯಾಗ್ ಗಳು ತೆರೆದಿರುವುದು ತಿಳಿದುಬಂದಿದೆ.

ಈ ಘಟನೆಯಲ್ಲಿ ಟ್ರಕ್ ಅನ್ನು ರಸ್ತೆಬದಿಯಲ್ಲಿ ಅಕ್ರಮವಾಗಿ ನಿಲ್ಲಿಸಲಾಗಿದೆಯೇ ಅಥವಾ ಅಪಘಾತಕ್ಕೆ ಹ್ಯಾರಿಯರ್ ಚಾಲಕನ ತಪ್ಪು ಕಾರಣವೇ ಎಂದು ನಮಗೆ ಖಚಿತವಿಲ್ಲ. ಕಾರಣ ಏನೇ ಇರಲಿ, ಇಂತಹ ಘಟನೆಗಳನ್ನು ತಪ್ಪಿಸಲು ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ಯಾವಾಗಲೂ ಕಾನೂನುಬದ್ಧ ವೇಗದ ಮಿತಿಯೊಳಗೆ ಚಾಲನೆ ಮಾಡಿ, ಎಲ್ಲಾ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

Article Published On: Thursday, June 20, 2024, 8:30 [IST]
English summary
Tata harrier accident all passengers safe
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+