ಟಾಟಾ-ಮಹೀಂದ್ರಾ ಕಾರುಗಳು ಮುಖಾ-ಮುಖಿ ಡಿಕ್ಕಿ: ಗುಣಮಟ್ಟದಲ್ಲಿ ಅಚ್ಚರಿಗೊಳಿಸಿದೆ ಈ ಕಾರು!

ಇತ್ತೀಚೆಗೆ ಮಹೀಂದ್ರಾ ಸ್ಕಾರ್ಪಿಯೋ-ಎನ್ ಮತ್ತು ಟಾಟಾ ಹ್ಯಾರಿಯರ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಎರಡೂ ಕಾರುಗಳ ಹಾನಿಯನ್ನು ತೋರಿಸುವ ವೀಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೋವನ್ನು ಇಂಡಿಯನ್ ಮೋಟಾರ್ ಹೆಡ್ಸ್ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ. ಈ ಅಪಘಾತದ ನಿಖರವಾದ ಸ್ಥಳ ಹಾಗೂ ಕಾರಣ ತಿಳಿದಿಲ್ಲವಾದರೂ, ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಯಾರೋ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇಲ್ಲಿ ಕಂಡುಬರುವ ಟಾಟಾ ಹ್ಯಾರಿಯರ್ ಎಸ್‌ಯುವಿ ಪ್ರಿ - ಫೇಸ್ ಲಿಫ್ಟ್ ಆವೃತ್ತಿಯಾಗಿದ್ದು, ಮಹೀಂದ್ರಾ ಸ್ಕಾರ್ಪಿಯೋ - ಎನ್ ನಂತೆಯೇ ಹಾನಿಗೊಳಗಾಗಿದೆ.

ಈ ವಾಹನಗಳು ಅತಿಯಾದ ವೇಗದಿಂದಾಗಿ ನಿಯಂತ್ರಣ ಕಳೆದುಕೊಂಡು ಪರಸ್ಪರ ಡಿಕ್ಕಿ ಹೊಡೆದಿವೆಯೇ ಅಥವಾ ಬೇರೆ ಕಾರಣದಿಂದ ಡಿಕ್ಕಿ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಅಪಘಾತದಲ್ಲಿ ಎರಡೂ ವಾಹನಗಳು ಹಾನಿಗೊಳಗಾದರೂ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಸೇಫ್ಟಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ದೇಶಿಯ ಬ್ರಾಂಡ್‌ಗಳು ಯಶಸ್ವಿಯಾಗಿವೆ.

tata-harrier-and-mahindra-scorpio-n-collide-viral-video

ಟಾಟಾ ಹ್ಯಾರಿಯರ್ ಎಸ್‌ಯುವಿಯ ಬಾನೆಟ್, ಮುಂಭಾಗದ ಗ್ರಿಲ್ ಮತ್ತು ಬಂಪರ್ ಹಾನಿಗೊಳಗಾದರೇ, ಮಹೀಂದ್ರಾ ಸ್ಕಾರ್ಪಿಯೋ-ಎನ್ ಮುಂಭಾಗ ಬಹುತೇಕ ಹಾನಿಗೊಳಗಾಗಿದೆ. ಮುಂಭಾಗದ ಗ್ರಿಲ್, ಬಂಪರ್, ಬಾನೆಟ್ ಮತ್ತು ಬಲಭಾಗದ ಹೆಡ್ ಲ್ಯಾಂಪ್ ಹಾನಿಗೊಳಗಾಗಿದೆ. ಉಳಿದಂತೆ ವಾಹನದಲ್ಲಿ ಬೇರೆ ಯಾವುದೇ ದೊಡ್ಡ ಹಾನಿಯಾಗಿರುವುದು ಕಾಣಿಸಿಲ್ಲ.

ಸೇಫ್ಟಿ ರೇಟಿಂಗ್: ಮಹೀಂದ್ರಾ ಸ್ಕಾರ್ಪಿಯೋ-ಎನ್ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಅನೇಕ ಮಹೀಂದ್ರಾ ಕಾರುಗಳಂತೆಯೇ, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇನ್ನು ಟಾಟಾ ಹ್ಯಾರಿಯರ್ ವಿಷಯಕ್ಕೆ ಬಂದರೆ ಅಧಿಕೃತ ಕ್ರ್ಯಾಶ್ ಟೆಸ್ಟ್‌ಗೆ ಈ ಕಾರನ್ನು ಒಳಪಡಿಸಿಲ್ಲ. ಆದರೆ, ಟಾಟಾದ ಇತರ ಕಾರುಗಳಂತೆಯೇ ಪ್ರಬಲವಾಗಿದೆ ಎಂದು ಸಾಬೀತುಪಡಿಸಲು ಹಲವಾರು ನಿದರ್ಶನಗಳಿವೆ.

tata-harrier-and-mahindra-scorpio-n-collide-viral-video

ಎರಡೂ ಎಸ್‌ಯುವಿಗಳು ಸೇಫ್ಟಿ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿವೆ, ವಾಹನದಲ್ಲಿದ್ದ ಚಾಲಕ ಮತ್ತು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ನಿರ್ಮಾಣ ಗುಣಮಟ್ಟದ ದೃಷ್ಟಿಯಿಂದ ನೀವು ಎಷ್ಟೇ ಸುರಕ್ಷಿತ ವಾಹನವನ್ನು ಹೊಂದಿದ್ದರೂ, ಸಾರ್ವಜನಿಕ ರಸ್ತೆಗಳಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡುವುದು ತಪ್ಪು. ನೀವು ಸುರಕ್ಷಿತವಾಗಿದ್ದರೂ ಇತರ ಪ್ರಯಾಣಿಕರಿಗೆ ಇದು ಮಾರಣಾಂತಿಕವಾಗಬಹುದು ಎಂಬುದನ್ನು ಮರೆಯಬಾರದು.

ಹೊಸ ಕಾರು ಅಥವಾ ಎಸ್‌ಯುವಿಯನ್ನು ಖರೀದಿಸುವಾಗ ವಾಹನದ ಗುಣಮಟ್ಟವನ್ನು ಅನೇಕ ಖರೀದಿದಾರರು ಪರಿಗಣಿಸುತ್ತಾರೆ. ಇದಕ್ಕಾಗಿಯೇ ಪ್ರಮುಖ ವಾಹನ ತಯಾರಕರು ಭಾರತ್ ಎನ್‌ಸಿಎಪಿ ಮತ್ತು ಗ್ಲೋಬಲ್ ಎನ್‌ಸಿಎಪಿ ಏಜೆನ್ಸಿಗಳಿಗೆ ತಮ್ಮ ವಾಹನಗಳನ್ನು ಕಳುಹಿಸಿ ಗುಣಮಟ್ಟವನ್ನು ನಿರ್ಧರಿಸುತ್ತವೆ. ಆ ಬಳಿಕ ತಮ್ಮ ಕಾರುಗಳ ಗುಣಮಟ್ಟವನ್ನು ಗ್ರಾಹಕರಿಗೆ ತೋರಿಸಿ ಮಾರಾಟ ಮಾಡುತ್ತವೆ.

ನಿಯಮಗಳನ್ನು ಪಾಲಿಸಿ: ಯಾವಾಗಲೂ ಸಂಚಾರ ನಿಯಮಗಳನ್ನು ಅನುಸರಿಸಬೇಕು, ಇಲ್ಲದಿದ್ದರೇ ರಸ್ತೆಗಳಲ್ಲಿ ಅಪಘಾತಗಳಿಗೆ ಕಾರಣವಾಗಬಹುದು. ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡುವಾಗ ಸುತ್ತಮುತ್ತಲಿನ ಮತ್ತು ಇತರ ವಾಹನಗಳ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಯಾವಾಗಲೂ ವೇಗದ ಮಿತಿಯೊಳಗೆ ಚಾಲನೆ ಮಾಡಿದರೆ ಸಂಭವನೀಯ ಅವಗಡಗಳನ್ನು ಕೂಡ ತಪ್ಪಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 15, 2024, 16:34 [IST]
English summary
Tata harrier and mahindra scorpio n collide viral video
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+