ಜೀವ ಉಳಿಸಿದ ಮಧ್ಯಮ ವರ್ಗದವರ 'ರೇಂಜ್ ರೋವರ್' ಟಾಟಾ ಹ್ಯಾರಿಯರ್: ಅದೇ ಹೊಸ ಕಾರನ್ನು ಖರೀದಿಸಿದ ದಂಪತಿ!

ಟಾಟಾ (Tata) ಕಂಪನಿ ತಯಾರಿಸುವ ಕಾರುಗಳು ಸುರಕ್ಷತೆಗೆ ಹೆಸರುವಾಸಿಯಾಗಿವೆ. ದೊಡ್ಡ ಅಪಘಾತ ನಡೆದಾಗಲೂ ಕೂಡ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಹಲವು ಉದಾಹರಣೆಗಳಿವೆ. ಪುಣೆಯ ದಂಪತಿಗಳಿಗೂ ಇಂತಹದ್ದೇ ಸಂಕಷ್ಟ ಎದುರಾಗಿತ್ತು. ಅವರು, ತಮ್ಮ ಜೀವ ಉಳಿಸಿದ್ದಕ್ಕಾಗಿ ಮತ್ತೆ ಹೊಸ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಖರೀದಿಸಿದ್ದಾರೆ.

ಡಿಡಿಎಸ್ ಎಂಬ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ವಿಡಿಯೋವೊದನ್ನು ಹಂಚಿಕೊಳ್ಳಲಾಗಿದೆ. ಇಲ್ಲಿ ಅಪಘಾತದ ಸಂದರ್ಭದಲ್ಲಿ ಜೀವ ರಕ್ಷಕವಾದ ಟಾಟಾ ಹ್ಯಾರಿಯರ್ ಕಾರಿನ ಬಗ್ಗೆ ದಂಪತಿಗಳು ಮನಬಿಚ್ಚಿ ಮಾತನಾಡಿದ್ದಾರೆ. 'ನಾವು ಮೊದಲು ಪ್ರಿ-ಫೇಸ್‌ಲಿಫ್ಟ್ ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಕಾರನ್ನು ಬಳಕೆ ಮಾಡುತ್ತಿದ್ದೆವು. ಹೀಗೆ ಒಂದು ದಿನ ಹೊರಗಡೆ ಹೋದಾಗ ಅಪಘಾತವೊಂದು ಸಂಭವಿಸಿತು' ಎಂದು ದಂಪತಿಗಳು ಹೇಳಿದ್ದಾರೆ.

Tata Harrier Saves Couple Life They Buys Same New Car

'ಹಿಂಬದಿಯಿಂದ ಮತ್ತೊಂದು ಕಾರು ಬಂದು ನಮ್ಮ ಕಾರಿಗೆ ಡಿಕ್ಕಿಯೊಡೆಯಿತು. ಇದರ ರಭಸಕ್ಕೆ ಹ್ಯಾರಿಯರ್ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಗೆ ಹೋಗಿ ಗುದ್ದಿತು. ತಕ್ಷಣ ಏರ್‌ಬ್ಯಾಗ್‌ ತೆರೆದುಕೊಂಡು ನಾವು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ತಪ್ಪಿಸಿಕೊಂಡೆವು' ಎಂದು ದಂಪತಿಗಳು ತಿಳಿಸಿದ್ದಾರೆ. ಹಿಂದೆ ಬರುತ್ತಿದ್ದ ಕಾರಿನಲ್ಲಿದ್ದವರೂ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದಿದ್ದಾರೆ.

'ಅಪಘಾತದ ಪರಿಣಾಮ ನಮ್ಮ ಹ್ಯಾರಿಯರ್ ಕಾರಿಗೆ ಸಾಕಷ್ಟು ಹಾನಿಯಾಗಿತ್ತು. ರಿಪೇರಿಗೆ ರೂ.25 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಯಿತು. ಅದರಿಂದಾಗಿ ವಿಮೆ ಹಣವನ್ನು ಒಟ್ಟುಗೂಡಿಸಿ, ಹೊಸ ಕಾರನ್ನು ಖರೀದಿಸಲು ಹುಡುಕಾಟವನ್ನು ಶುರು ಮಾಡಿದೆವು. ಇತರೆ ಜನಪ್ರಿಯ ಕಂಪನಿಗಳ ಕಾರುಗಳನ್ನು ಸಹ ಟೆಸ್ಟ್ ಡ್ರೈವ್ ನಡೆಸಿದೆವು. ಆದರೆ, ನಿರೀಕ್ಷಿತ ಮಟ್ಟದಲ್ಲಿ ತೃಪ್ತಿ ಸಿಗಲ್ಲ' ಎಂದು ದಂಪತಿಗಳು ಹೇಳಿದ್ದಾರೆ.

Tata Harrier Saves Couple Life They Buys Same New Car

'ಅದೇ ಸಮಯಕ್ಕೆ ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಎಸ್‌ಯುವಿಗಳು ಮಾರುಕಟ್ಟೆಗೆ ಬಂದಿವು. ಅಂತಿಮವಾಗಿ ಹ್ಯಾರಿಯರ್ ಕಾರನ್ನು ಕೊಂಡುಕೊಂಡೆವು' ಎಂದು ದಂಪತಿಗಳು ತಿಳಿಸಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ (Tata Harrier Facelift) ಕಾರು, ರೂಪಾಂತರಗಳಿಗೆ ಅನುಗುಣವಾಗಿ ರೂ.15.49 ಲಕ್ಷದಿಂದ ರೂ.26.44 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಟಾಟಾ ಹ್ಯಾರಿಯರ್ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ 7 - ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್, 360 - ಡಿಗ್ರಿ ಕ್ಯಾಮೆರಾ, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಸೆಕೆಂಡ್ ರೋ ಐಎಸ್ಒಎಫ್ಐಎಕ್ಸ್ (ISOFIX) ಚೈಲ್ಡ್ ಸೀಟ್ ಆಂಕಾರೇಜ್‌, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌) ಒಳಗೊಂಡಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳಿವೆ.

Tata Harrier Saves Couple Life They Buys Same New Car

ಭಾರತ್ ಎನ್‌ಸಿಎಪಿ (Bharat NCAP) ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ ಕೂಡ ಟಾಟಾ ಹ್ಯಾರಿಯರ್ ಎಸ್‌ಯುವಿ 5 - ಸ್ಟಾರ್ ರೇಟಿಂಗ್ ಪಡೆದಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ ಗರಿಷ್ಠ 32ಕ್ಕೆ 30.08 ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 44.54 ಅಂಕಗಳನ್ನು ಗಳಿಸಿದೆ. ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸುವ ಪರೀಕ್ಷೆಯಲ್ಲಿಯೂ ಈ ಕಾರು, 5 - ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, April 12, 2024, 13:34 [IST]
English summary
Tata harrier saves couple life they buys same new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+