ಹಲವು ಬಾರಿ ಪಲ್ಟಿ ಹೊಡೆದರೂ ಒಳಗಿದ್ದವರ ಪ್ರಾಣ ಉಳಿಸಿದ ಟಾಟಾ ಕಾರು

ಎಲ್ಲರಿಗೂ ತಿಳಿದಿರುವಂತೆ ಟಾಟಾ ಮೋಟಾರ್ಸ್ ಕಾರುಗಳು ಸುರಕ್ಷತೆಗೆ ಹೆಸರುವಾಸಿಯಾಗಿವೆ. ಈ ಹಿಂದೆ ನಡೆದ ಹಲವಾರು ಅಪಘಾತಗಳಿಂದ ಇದು ಸಾಬೀತಾಗಿದೆ. ಟಾಟಾ ಮೋಟಾರ್ಸ್ ಕಂಪನಿಯ ಕಾರು ಅತ್ಯಂತ ಸುರಕ್ಷಿತವೆಂದು ಸಾಬೀತುಪಡಿಸುವ ಮತ್ತೊಂದು ಘಟನೆಯ ಇತ್ತೀಚಿಗೆ ನಡೆದಿದೆ.

ಹಲವು ಬಾರಿ ಪಲ್ಟಿ ಹೊಡೆದರೂ ಒಳಗಿದ್ದವರ ಪ್ರಾಣ ಉಳಿಸಿದ ಟಾಟಾ ಕಾರು

ಈ ಘಟನೆ ಅಪಘಾತಕ್ಕೆ ಸಂಬಂಧಿಸಿದೆ. ಈ ಬಾರಿ ಅಪಘಾತದಲ್ಲಿ ಭಾಗಿಯಾಗಿರುವುದು ಟಾಟಾ ಮೋಟಾರ್ಸ್'ನ ಜನಪ್ರಿಯ ಎಸ್‌ಯುವಿಯಾದ ಹ್ಯಾರಿಯರ್. ಆಶ್ಚರ್ಯಕರ ಸಂಗತಿಯೆಂದರೆ ಈ ಎಸ್‌ಯುವಿಯು ಹಲವು ಬಾರಿ ಪಲ್ಟಿ ಹೊಡೆದರೂ ಒಳಗಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಲವು ಬಾರಿ ಪಲ್ಟಿ ಹೊಡೆದರೂ ಒಳಗಿದ್ದವರ ಪ್ರಾಣ ಉಳಿಸಿದ ಟಾಟಾ ಕಾರು

ಟಾಟಾ ಹ್ಯಾರಿಯರ್ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಪ್ರಾಣ ಉಳಿಸಿದೆ ಎಂದು ಕಾರಿನ ಮಾಲೀಕ ಸಜೀವ್ ಪಾಲ್ಕುನ್ ಹೇಳಿದ್ದಾರೆ. ಅವರು ನೀಡಿರುವ ಮಾಹಿತಿಯ ಮೇಲೆ ಈ ಹ್ಯಾರಿಯರ್ ಕಾರಿನ ಅಪಘಾತದ ಮಾಹಿತಿ ಹೊರ ಬಂದಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹಲವು ಬಾರಿ ಪಲ್ಟಿ ಹೊಡೆದರೂ ಒಳಗಿದ್ದವರ ಪ್ರಾಣ ಉಳಿಸಿದ ಟಾಟಾ ಕಾರು

ಈ ಅಪಘಾತಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಆದರೆ ಅಪಘಾತದಿಂದಾಗಿ ಕಾರಿನ ರೂಫ್ ಸಂಪೂರ್ಣವಾಗಿ ಚೂರುಚೂರಾಗಿರುವುದನ್ನು ಚಿತ್ರಗಳಲ್ಲಿ ಕಾಣಬಹುದು. ಕಾರನ್ನು ಹೆಚ್ಚಿನ ವೇಗದಲ್ಲಿ ತಿರುಗಿಸಿರುವುದರಿಂದ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗಿದೆ.

ಹಲವು ಬಾರಿ ಪಲ್ಟಿ ಹೊಡೆದರೂ ಒಳಗಿದ್ದವರ ಪ್ರಾಣ ಉಳಿಸಿದ ಟಾಟಾ ಕಾರು

ಈ ಹ್ಯಾರಿಯರ್ ಎಸ್‌ಯುವಿಯು ಸುಮಾರು 5 ಅಡಿ ಆಳದ ಕಂದಕಕ್ಕೆ ಬಿದ್ದಿರುವುದು ಫೋಟೋಗಳಿಂದ ತಿಳಿದು ಬಂದಿದೆ. ಸಾರ್ವಜನಿಕರು ಕ್ರೇನ್ ಸಹಾಯದಿಂದ ಅಪಘಾತಕ್ಕೀಡಾದ ಕಾರನ್ನು ಮೇಲಕ್ಕೆತ್ತಿದ್ದಾರೆ. ಈ ಚಿತ್ರಗಳನ್ನು ಸಜೀವ್ ಪಾಲ್ಕುನ್'ರವರ ಫೇಸ್ ಬುಕ್ ಖಾತೆಯಿಂದ ಪಡೆಯಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹಲವು ಬಾರಿ ಪಲ್ಟಿ ಹೊಡೆದರೂ ಒಳಗಿದ್ದವರ ಪ್ರಾಣ ಉಳಿಸಿದ ಟಾಟಾ ಕಾರು

ಹ್ಯಾರಿಯರ್ ಎಸ್‌ಯುವಿಯಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ ಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಆರು ಏರ್‌ಬ್ಯಾಗ್‌, ಎಬಿಎಸ್, ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ಮಲ್ಟಿಪಲ್ ಡ್ರೈವ್ ಮೋಡ್, ಕ್ರೂಸ್ ಕಂಟ್ರೋಲ್, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮ್ಯಾಂಡರ್'ಗಳು ಸೇರಿವೆ.

ಹಲವು ಬಾರಿ ಪಲ್ಟಿ ಹೊಡೆದರೂ ಒಳಗಿದ್ದವರ ಪ್ರಾಣ ಉಳಿಸಿದ ಟಾಟಾ ಕಾರು

ಈ ಫೀಚರ್ ಗಳು ಎಸ್‌ಯುವಿಯಲ್ಲಿದ್ದವರನ್ನು ಪ್ರಾಣಾಪಾಯದಿಂದ ಪಾರು ಮಾಡಿವೆ. ಹ್ಯಾರಿಯರ್ ಎಸ್‌ಯುವಿಯನ್ನು ಸದ್ಯಕ್ಕೆ ಒಂದು ಎಂಜಿನ್ ಆಯ್ಕೆಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹಲವು ಬಾರಿ ಪಲ್ಟಿ ಹೊಡೆದರೂ ಒಳಗಿದ್ದವರ ಪ್ರಾಣ ಉಳಿಸಿದ ಟಾಟಾ ಕಾರು

ಹ್ಯಾರಿಯರ್ ಎಸ್‌ಯುವಿಯಲ್ಲಿರುವ 2 ಲೀಟರಿನ 4 ಸಿಲಿಂಡರ್ ಫಿಯೆಟ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್ 170 ಬಿಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗಿದೆ.

ಹಲವು ಬಾರಿ ಪಲ್ಟಿ ಹೊಡೆದರೂ ಒಳಗಿದ್ದವರ ಪ್ರಾಣ ಉಳಿಸಿದ ಟಾಟಾ ಕಾರು

ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಟಾಟಾ ಸಫಾರಿ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಟಾಟಾ ಹ್ಯಾರಿಯರ್ ಎಸ್‌ಯುವಿಯನ್ನು ಸಫಾರಿಯ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ.

Most Read Articles

Kannada
English summary
Tata Harrier saves life of passengers even after rolling several times. Read in Kannada.
Story first published: Sunday, January 10, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X