ಸೇತುವೆಯಿಂದ ಉರುಳಿದ ಗಟ್ಟಿಮುಟ್ಟಾದ ಟಾಟಾ ಕಾರು: ಓಡಿಸುತ್ತಿದ್ದವರು ಯಾರೆಂದು ಗೊತ್ತಾದರೆ ಕೋಪ ತರಿಸುತ್ತದೆ!

ದೇಶದಲ್ಲಿ ಹಲವರು ವಾಹನ ಚಾಲನಾ ಪರವಾನಿಗೆ (Driving Licence) ಪಡೆಯುವ ವಯಸ್ಸನ್ನು ತಲುಪುವ ಮುನ್ನವೇ ದ್ವಿಚಕ್ರ ಅಥವಾ ಕಾರುಗಳನ್ನು ಓಡಿಸಲು ಪ್ರಾರಂಭಿಸುತ್ತಾರೆ. ಇದರಿಂದ ರಸ್ತೆ ಅಪಘಾತಗಳು ಸಂಭವಿಸಿ, ದೊಡ್ಡ ಅಪಾಯವನ್ನು ಮೈಮೇಲೆ ಎಳೆದುಕೊಳ್ಳವ ಸಾಧ್ಯತೆಯಿದೆ. ಎಷ್ಟೇ ಅರಿವು ಮೂಡಿಸಿದರೂ ಅಪ್ರಾಪ್ತರು ವಾಹನ ಚಲಾಯಿಸುವುದನ್ನು ಬಿಡುವುದೇ ಇಲ್ಲ.

ಜಾರ್ಖಂಡ್‌ನ ರಾಷ್ಟ್ರೀಯ ಹೆದ್ದಾರಿ 18 (NH18) ರಲ್ಲಿ ಇಂತದದ್ದೇ ಘಟನೆಯೊಂದು ನಡೆದಿದೆ. 12ನೇ ತರಗತಿ ವಿದ್ಯಾರ್ಥಿಯೊಬ್ಬ ಓಡಿಸುತ್ತಿದ್ದ ಟಾಟಾ ಹ್ಯಾರಿಯರ್ (Tata Harrier) ಎಸ್‌ಯುವಿ, ಆತನ ನಿಯಂತ್ರಣ ಕಳೆದುಕೊಂಡು ಸೇತುವೆಯಿಂದ ಉರುಳಿ ಬಿದ್ದಿದೆ. ಕಾರನ್ನು ವಿದ್ಯಾರ್ಥಿ ಅತಿವೇಗದಲ್ಲಿ ಚಲಾಯಿಸುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.

Tata Harrier Suv Accident, Drive By 12th Class Student

ಈ ಟಾಟಾ ಹ್ಯಾರಿಯರ್ (Tata Harrier)ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ವಿದ್ಯಾರ್ಥಿಯು ಮದ್ಯಪಾನ ಮಾಡಿ ಕಾರನ್ನು ಚಲಾಯಿಸುತ್ತಿದ್ದನು ಎನ್ನಲಾಗಿದೆ. ಆದರೆ ಖಚಿತ ವಿವರಗಳಿಲ್ಲ. ಸರಿಯಾದ ಸಮಯಕ್ಕೆ ಏರ್ ಬ್ಯಾಗ್ ತೆರೆದುಕೊಂಡಿದ್ದು, ಕಾರು ಓಡಿಸುತ್ತಿದ್ದ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇತರೂ ಸಹ ಸುರಕ್ಷಿತವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟಾಟಾ ಹ್ಯಾರಿಯರ್ ಉರುಳಿ ಬಿದ್ದ ರಭಸಕ್ಕೆ ಕಾರಿನ ಎಡಭಾಗದ ಬಾಗಿಲುಗಳು (ಡೋರ್), ಮುಂಭಾಗ (ಫ್ರಂಟ್) ಬಂಪರ್, ಬಾನೆಟ್ ಮತ್ತು ರೂಫ್ (ಮೇಲ್ಚಾವಣೆ) ಭಾಗಕ್ಕೆ ಹೆಚ್ಚಿನ ಹಾನಿಯಾಗಿದೆ. ಈ ಕಾರಿನ ನಿರ್ಮಾಣ ಗುಣಮಟ್ಟದಿಂದಲೇ ವಿದ್ಯಾರ್ಥಿ ಹಾಗೂ ಆತನ ಸಂಗಡಿಗರ ಜೀವ ಉಳಿಸಿದೆ. ಭಾರತದಲ್ಲಿ ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡುವುದು ಕಾನೂನು ಬಾಹಿರವಾಗಿದೆ.

Tata Harrier Suv Accident, Drive By 12th Class Student

ಇಂತಹ ಪ್ರಕರಣಗಳಲ್ಲಿ ಪೊಲೀಸರು, ಅಪ್ರಾಪ್ತ ಮಕ್ಕಳ ಪೋಷಕರ ವಿರುದ್ಧ ಕ್ರಮಕೈಗೊಳ್ಳಬಹುದು. ಜೊತೆಗೆ ವಾಹನವನ್ನು ತಮ್ಮ ವಶಕ್ಕೆ ಪಡೆಯಬಹುದು. ಪೋಷಕರು ಕೂಡ ತಮ್ಮ ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದು ಸಾರಿಗೆ ಇಲಾಖೆ ಗೊತ್ತುಪಡಿಸುವ ಪರೀಕ್ಷೆಗಳನ್ನು ಉತ್ತೀರ್ಣರಾಗಿ ಚಾಲನಾ ಪರವಾನಿಗೆ (Driving Licence) ಪಡೆದ ಬಳಿಕವೇ ವಾಹನಗಳನ್ನು ನೀಡಬೇಕು. ಜೊತೆಗೆ ಸಂಚಾರಿ ನಿಯಮ ಪಾಲಿಸುತ್ತ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ತಿಳಿಹೇಳಬೇಕು.

ಇವೆರಲ್ಲರೂ ಪ್ರಾಣಾಪಾಯದಿಂದ ಪಾರಾಗಲು ಕಾರಣರಾಗಿರುವ ಟಾಟಾ ಹ್ಯಾರಿಯರ್ (Tata Harrier) ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರಕಟವಾದ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ' (ಭಾರತ್ ಎನ್‌ಸಿಎಪಿ - Bharat NCAP) ಪರೀಕ್ಷೆ ಫಲಿತಾಂಶದಲ್ಲಿ ಹ್ಯಾರಿಯರ್ ಫೇಸ್‌ಲಿಫ್ಟ್, ಸುರಕ್ಷಿತ ಕಾರಾಗಿ ಹೊರಹೊಮ್ಮಿದೆ. ವಯಸ್ಕರ ರಕ್ಷಣೆ (Adult Occupant Protection) ಹಾಗೂ ಮಕ್ಕಳ ರಕ್ಷಣೆ (Child Occupant Protection) ವಿಭಾಗದಲ್ಲಿ 5-ಸ್ಟಾರ್ ರೇಟಿಂಗ್ ಗಳಿಸಿದೆ.

ಈ ಟಾಟಾ ಹ್ಯಾರಿಯರ್ (Tata Harrier) ಕಾರು 7-ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಸೆಕೆಂಡ್ ರೋ ISOFIX ಚೈಲ್ಡ್ ಸೀಟ್ ಆಂಕಾರೇಜ್‌, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌) ಸೇರಿದಂತೆ ಹತ್ತಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, February 5, 2024, 16:38 [IST]
English summary
Tata harrier suv accident drive by 12th class student
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+