ಟಾಟಾ ಮೋಟಾರ್ಸ್ ಕಂಪನಿಗೆ ನೋಟಿಸ್ ನೀಡಿದ ಸಾರಿಗೆ ಇಲಾಖೆ

ಮೈಲೇಜ್'ಗೆ ಸಂಬಂಧಿಸಿದಂತೆ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಸಾರಿಗೆ ಇಲಾಖೆಯು ಟಾಟಾ ಮೋಟಾರ್ಸ್‌ ಕಂಪನಿಗೆ ನೋಟಿಸ್ ನೀಡಿದೆ.

ಟಾಟಾ ಮೋಟಾರ್ಸ್ ಕಂಪನಿಗೆ ನೋಟಿಸ್ ನೀಡಿದ ಸಾರಿಗೆ ಇಲಾಖೆ

ಟಾಟಾ ಮೋಟಾರ್ಸ್ ಕಂಪನಿಯು ತಿಳಿಸಿದಷ್ಟು ಮೈಲೇಜ್ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಲಭ್ಯವಿಲ್ಲವೆಂದು ಈ ಕಾರಿನ ಮಾಲೀಕರು ದೂರು ನೀಡಿದ್ದಾರೆ. ದೂರು ನೀಡಿರುವವರು ಈ ಎಲೆಕ್ಟ್ರಿಕ್ ಕಾರನ್ನು ದೆಹಲಿಯ ಸಫ್ದರ್ ಜಂಗ್ ಎನ್‌ಕ್ಲೇವ್ ಪ್ರದೇಶದಲ್ಲಿರುವ ಟಾಟಾ ಮೋಟಾರ್ಸ್ ಶೋರೂಂನಲ್ಲಿ ಖರೀದಿಸಿದ್ದಾರೆ. ಈ ಕಾರನ್ನು 2020ರ ಡಿಸೆಂಬರ್ 3ರಂದು ನೋಂದಾಯಿಸಲಾಗಿದೆ.

ಟಾಟಾ ಮೋಟಾರ್ಸ್ ಕಂಪನಿಗೆ ನೋಟಿಸ್ ನೀಡಿದ ಸಾರಿಗೆ ಇಲಾಖೆ

ಆದರೆ ಟಾಟಾ ಮೋಟಾರ್ಸ್ ತಿಳಿಸಿದಂತೆ ಈ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 312 ಕಿ.ಮೀಗಳವರೆಗೆ ಚಲಿಸಲು ವಿಫಲವಾಗಿದೆ ಎಂದು ಕಾರು ಮಾಲೀಕರು ಆರೋಪಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್‌ ಕಂಪನಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಹಿರಿಯ ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟಾಟಾ ಮೋಟಾರ್ಸ್ ಕಂಪನಿಗೆ ನೋಟಿಸ್ ನೀಡಿದ ಸಾರಿಗೆ ಇಲಾಖೆ

ಈ ವಿಷಯದ ಬಗ್ಗೆ ಇಟಿ ಆಟೋ ವರದಿ ಪ್ರಕಟಿಸಿದೆ. ಟಾಟಾ ಮೋಟಾರ್ಸ್‌ ವಿರುದ್ಧ ದೂರು ನೀಡಿರುವ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯ ಮಾಲೀಕರು ದೆಹಲಿಯ ನಜಾಫ್‌ಗಢಕ್ಕೆ ಸೇರಿದವರು.

ಟಾಟಾ ಮೋಟಾರ್ಸ್ ಕಂಪನಿಗೆ ನೋಟಿಸ್ ನೀಡಿದ ಸಾರಿಗೆ ಇಲಾಖೆ

ಟಾಟಾ ಮೋಟಾರ್ಸ್ ಡೀಲರ್ ಬಳಿ ಈ ಬಗ್ಗೆ ದೂರು ನೀಡಿದಾಗ, ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯ ಮೈಲೇಜ್ ಹೆಚ್ಚಿಸಲು ವಿವಿಧ ಸಲಹೆಗಳನ್ನು ನೀಡಿದ್ದಾರೆ. ಆದರೆ ಆ ಎಲ್ಲಾ ಸಲಹೆಗಳನ್ನು ಸರಿಯಾಗಿ ಪಾಲಿಸಿದ ನಂತರವೂ, ತಿಳಿಸಿದಷ್ಟು ಮೈಲೇಜ್ ಲಭ್ಯವಾಗಿಲ್ಲವೆಂದು ಅವರು ಹೇಳಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಟಾಟಾ ಮೋಟಾರ್ಸ್ ಕಂಪನಿಗೆ ನೋಟಿಸ್ ನೀಡಿದ ಸಾರಿಗೆ ಇಲಾಖೆ

ತಮ್ಮ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 200 ಕಿ.ಮೀಗಳವರೆಗೂ ಸಹ ಚಲಿಸಿಲ್ಲವೆಂದು ಅವರು ತಿಳಿಸಿದ್ದಾರೆ. ಟಾಟಾ ಮೋಟಾರ್ಸ್‌ಗೆ ನೀಡಿರುವ ನೋಟಿಸ್‌ನಲ್ಲಿ ಫೆಬ್ರವರಿ 15ರಂದು ಮಧ್ಯಾಹ್ನ 12 ಗಂಟೆಗೆ ಕಂಪನಿಯ ಪ್ರತಿನಿಧಿಯು ತಮ್ಮ ಮುಂದೆ ಹಾಜರಾಗುವಂತೆ ಸಾರಿಗೆ ಇಲಾಖೆ ಸೂಚಿಸಿದೆ.

ಟಾಟಾ ಮೋಟಾರ್ಸ್ ಕಂಪನಿಗೆ ನೋಟಿಸ್ ನೀಡಿದ ಸಾರಿಗೆ ಇಲಾಖೆ

ಟಾಟಾ ಮೋಟಾರ್ಸ್ ತನ್ನ ಪ್ರತಿನಿಧಿಯನ್ನು ಕಳುಹಿಸಲು ವಿಫಲವಾದರೆ ಸಾರಿಗೆ ಇಲಾಖೆ ಮುಂದಿನ ಕ್ರಮವನ್ನು ಕೈಗೊಳ್ಳಲಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅರ್ಹ ಎಲೆಕ್ಟ್ರಿಕ್ ವಾಹನಗಳ ಪಟ್ಟಿಯಿಂದ ತೆಗೆದುಹಾಕಲು ಸಾರಿಗೆ ಇಲಾಖೆಯು ಪರಿಗಣಿಸಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಟಾಟಾ ಮೋಟಾರ್ಸ್ ಕಂಪನಿಗೆ ನೋಟಿಸ್ ನೀಡಿದ ಸಾರಿಗೆ ಇಲಾಖೆ

ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನ ನೀತಿಯಡಿ ಸಹಾಯಧನ ನೀಡುತ್ತಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯು ಸಬ್ಸಿಡಿ ಅಡಿಯಲ್ಲಿ ಬರುವ ಅರ್ಹ ವಾಹನಗಳಲ್ಲಿ ಒಂದಾಗಿದೆ.

ಟಾಟಾ ಮೋಟಾರ್ಸ್ ಕಂಪನಿಗೆ ನೋಟಿಸ್ ನೀಡಿದ ಸಾರಿಗೆ ಇಲಾಖೆ

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ. ದೆಹಲಿಯಸಾರಿಗೆ ಇಲಾಖೆ ನೀಡಿರುವ ನೋಟಿಸಿಗೆ ಟಾಟಾ ಮೋಟಾರ್ಸ್‌ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಕಾದು ನೋಡಬೇಕಿದೆ.

Most Read Articles

Kannada
English summary
Tata Motors gets notice from Delhi transport department. Read in Kannada.
Story first published: Wednesday, February 10, 2021, 20:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X