ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

2020 ರ ಟೋಕಿಯೊ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಕಳೆದುಕೊಂಡ ಎಲ್ಲ ಭಾರತೀಯ ಕ್ರೀಡಾಪಟುಗಳಿಗೆ ಆಲ್ಟ್ರೋಜ್ ಕಾರನ್ನು ಬಹುಮಾನವಾಗಿ ನೀಡಲಾಗುವುದು ಎಂದು ಟಾಟಾ ಮೋಟಾರ್ಸ್ ಕಂಪನಿ ಘೋಷಿಸಿದೆ. ಟಾಟಾ ಮೋಟಾರ್ಸ್ ಕಂಪನಿಯ ಈ ಘೋಷಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಈ ಆಟಗಾರರು ಭಾರತದ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ ಆಟಗಾರರ ಶ್ರಮ ಹಾಗೂ ಸಮರ್ಪಣೆಯನ್ನು ಗುರುತಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಟಾಟಾ ಆಲ್ಟ್ರೋಜ್ ಕಾರನ್ನು ಶೀಘ್ರದಲ್ಲಿಯೇ ಈ ಆಟಗಾರರಿಗೆ ನೀಡಲಾಗುವುದು ಎಂದು ಕಂಪನಿಯ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಈ ಆಟಗಾರರು ಕಂಚಿನ ಪದಕವನ್ನು ಕಳೆದುಕೊಂಡಿದ್ದರೂ ಅವರು ಲಕ್ಷಾಂತರ ಭಾರತೀಯರ ಮನ ಗೆದ್ದಿದ್ದಾರೆ. ಹಾಗಾಗಿ ಅವರನ್ನು ಪ್ರೋತ್ಸಾಹಿಸಲು ಟಾಟಾ ಮೋಟಾರ್ಸ್ ಕಂಪನಿಯು ತೆಗೆದುಕೊಂಡ ಈ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಈಗಾಗಲೇ ಹಲವಾರು ಕಂಪನಿಗಳು ಹಾಗೂ ಸರ್ಕಾರಗಳು ಟೋಕಿಯೊ ಒಲಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾ ಪಟುಗಳಿಗೆ ಕಾರು ಸೇರಿದಂತೆ ವಿವಿಧ ಉಡುಗೊರೆಗಳನ್ನು ನೀಡುತ್ತಿವೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಟೋಕಿಯೊ ಒಲಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರಿಗೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಎಕ್ಸ್‌ಯು‌ವಿ 700 ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಈ ಬಗ್ಗೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ರವರು ಇತ್ತೀಚೆಗೆ ಘೋಷಿಸಿದ್ದಾರೆ. ಆದರೆ ಟಾಟಾ ಮೋಟಾರ್ಸ್ ಕಂಪನಿಯು ಕಂಚಿನ ಪದಕ ಗೆಲ್ಲುವುದಕ್ಕೆ ವಿಫಲರಾದ ಕ್ರೀಡಾ ಪಟುಗಳಿಗೆ ಬಹುಮಾನ ನೀಡಲು ಮುಂದಾಗಿದೆ. ಈ ಕಾರಣಕ್ಕೆ ಟಾಟಾ ಮೋಟಾರ್ಸ್ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಆಲ್ಟ್ರೋಜ್, ಟಾಟಾ ಮೋಟಾರ್ಸ್ ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೋಜ್ ಕಾರು, ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾಂಜಾ, ಹ್ಯುಂಡೈ ಐ 20 ಸೇರಿದಂತೆ ಹಲವು ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಟಾಟಾ ಆಲ್ಟ್ರೋಜ್ ಪ್ರತಿ ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿಯೇ ಮಾರಾಟವಾಗುತ್ತಿದೆ ಎಂಬುದು ಗಮನಾರ್ಹ. ಆಲ್ಟ್ರೋಜ್ ಕಾರಿನ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ಸುರಕ್ಷತೆಯೇ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ಪ್ರಮುಖ ಕಾರಣವಾಗಿದೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಅದರಲ್ಲೂ ಈ ಕಾರಿನಲ್ಲಿರುವ ಸುರಕ್ಷತಾ ಫೀಚರ್ ಗಳನ್ನು ಈ ಕಾರಿನ ಜನಪ್ರಿಯತೆಗೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಟಾಟಾ ಆಲ್ಟ್ರೋಜ್ ಈ ಸೆಗ್ ಮೆಂಟಿನಲ್ಲಿರುವ ಸುರಕ್ಷಿತ ಕಾರ್ ಆಗಿದೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಸಾಮಾನ್ಯವಾಗಿ ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳನ್ನು ತೀರಾ ಸುರಕ್ಷಿತ ಕಾರುಗಳೆಂದು ಪರಿಗಣಿಸಲಾಗುತ್ತದೆ. ಆ ಅರ್ಥದಲ್ಲಿ ಟಾಟಾ ಆಲ್ಟ್ರೋಜ್ ಸುರಕ್ಷತೆಯಲ್ಲಿ ಅತ್ಯುತ್ತಮವಾದ ಕಾರು. ಜಾಗತಿಕ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಟಾಟಾ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜಾಹೀರಾತುಗಳಲ್ಲಿ ಈ ಬಗ್ಗೆ ಒತ್ತಿ ಹೇಳಿದೆ. ಈ ಕಾರಣದಿಂದಾಗಿಯೂ ಟಾಟಾ ಆಲ್ಟ್ರೋಜ್ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಆಲ್ಟ್ರೋಜ್ ಕಾರಿನ ಸುರಕ್ಷತೆಗೆ ಮಾತ್ರವಲ್ಲದೆ ವಿನ್ಯಾಸ ಹಾಗೂ ಕಾರ್ಯಕ್ಷಮತೆಗೂ ಆದ್ಯತೆ ನೀಡಿದೆ. ಇವೆಲ್ಲವೂ ಒಟ್ಟಾಗಿ ಟಾಟಾ ಆಲ್ಟ್ರೋಜ್ ಕಾರನ್ನು ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಖರೀದಿಸ ಬಯಸುವ ಗ್ರಾಹಕರ ಮೊದಲ ಆಯ್ಕೆಯ ಕಾರುಗಳಲ್ಲಿ ಒಂದಾಗಿಸಿವೆ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಮುಂಬರುವ ದಿನಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಆಲ್ಟ್ರೋಜ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯ ಎಲೆಕ್ಟ್ರಿಕ್ ಆವೃತ್ತಿಯನ್ನು ಮಾರಾಟ ಮಾಡುತ್ತಿದೆ ಎಂಬುದು ಗಮನಾರ್ಹ.

ಕಂಚಿನ ಪದಕ ಕಳೆದುಕೊಂಡ ಕ್ರೀಡಾ ಪಟುಗಳಿಗೂ ಹೊಸ ಕಾರು ಉಡುಗೊರೆಯಾಗಿ ನೀಡಲು ಮುಂದಾದ ಟಾಟಾ ಮೋಟಾರ್ಸ್

ಟಾಟಾ ಆಲ್ಟ್ರೋಜ್ ಎಲೆಕ್ಟ್ರಿಕ್ ಆವೃತ್ತಿಯು ಸದ್ಯದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಭಾರತೀಯ ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಟಾಟಾ ಆಲ್ಟ್ರೋಜ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಐಸಿ ಎಂಜಿನ್ ಮಾದರಿಯಂತೆ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ನಿರೀಕ್ಷೆಗಳಿವೆ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೇರೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ.

Most Read Articles

Kannada
English summary
Tata motors to give altroz car to indian athletes who missed bronze at tokyo olympics details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X