ಮಮತಾಗೆ ಮುಖಭಂಗ, ಕೊನೆಗೂ ಗೆದ್ದ ಟಾಟಾ ಮೋಟಾರ್ಸ್‌ಗೆ 766 ಕೋಟಿ ರೂ. ಪರಿಹಾರ: ಏನಿದು ಪ್ರಕರಣ?
ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ತನ್ನ ಟಾಟಾ ನ್ಯಾನೊ (Tata Nano) ಕಾರು ಯೋಜನೆಯನ್ನು ಸ್ಥಗಿತಗೊಳಿಸಬೇಕಾಗಿ ಬಂದಿದ್ದರಿಂದ ಉಂಟಾದ ನಷ್ಟಕ್ಕೆ ಟಾಟಾ ಮೋಟಾರ್ಸ್‌ಗೆ ಇದೀಗ ಪರಿಹಾರ ಸಿಕ್ಕಿದೆ. ನ್ಯಾನೋ ಪ್ಲ್ಯಾಂಟ್‌ಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ (Mamata Banerjee) ಮುಖಭಂಗವಾಗಿದೆ.
ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿ ದೇಶದ ಹೆಮ್ಮೆಯ ಟಾಟಾ ಮೋಟಾರ್ಸ್ ಕಂಪನಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ತಾನು ಹೂಡಿದ್ದ ದಾವೆಯನ್ನು ಗೆದ್ದುಕೊಂಡಿದೆ. ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲಿನ ನ್ಯಾನೋ ಕಾರುಗಳ ಫ್ಯಾಕ್ಟರಿ ಸ್ಥಾಪಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ದೊಡ್ಡ ಮಟ್ಟದ ಹೂಡಿಕೆ ಮಾಡಿತ್ತು. ನ್ಯಾನೋ ಕಾರುಗಳ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಸಿಂಗೂರ್ ಪ್ಲ್ಯಾಂಟ್‌ನಲ್ಲಿ ಟಾಟಾ ಮೋಟಾರ್ಸ್ ಅಂದು 766 ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನ ಪ್ರತಿಭಟನೆ ಮಾಡಿದರು. ಅದರಲ್ಲೂ ಮುಖ್ಯವಾಗಿ ಹಾಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಿಂದಾಗಿ ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ತನ್ನ ನ್ಯಾನೊ ಕಾರು ಯೋಜನೆಯನ್ನು ಟಾಟಾ ಮೋಟಾರ್ಸ್ ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ಇದರಿಂದ ಟಾಟಾದ ಕಂಪನಿಗೆ ದೊಡ್ಡ ನಷ್ಟ ಉಂಟಾಗಿತ್ತು.
ಭಾರೀ ವಿರೋಧ ವ್ಯಕ್ತವಾಗಿ ಬಳಿಕ ಟಾಟಾ ಮೋಟಾರ್ಸ್ ಈ ಪ್ಲ್ಯಾಂಟ್‌ಅನ್ನು ಗುಜರಾತ್‌ಗೆ ಶಿಫ್ಟ್ ಮಾಡಿತ್ತು. ಆದರೆ ಸಿಂಗೂರ್‌ನಲ್ಲಿ ಹೂಡಿಕೆ ಮಾಡಿದ್ದ 766 ಕೋಟಿ ರೂಪಾಯಿ ಪಡೆಯುವ ನಿಟ್ಟಿನಲ್ಲಿ ಆರ್ಬಿಟ್ರಲ್ ಟ್ರಿಬ್ಯೂನಲ್‌ನಲ್ಲಿ ದಾವೆ ಹೂಡಿತ್ತು. ಸೋಮವಾರ ಈ ಪ್ರಕರಣದ ತೀರ್ಪು ಬಂದಿತ್ತು. ಮೂವರು ಸದಸ್ಯರ ಟ್ರಿಬ್ಯೂನಲ್ ಟಾಟಾ ಮೋಟಾರ್ಸ್ ಪರವಾಗಿ ಅವಿರೋಧ ತೀರ್ಪು ನೀಡಿದೆ.

ಪಶ್ಚಿಮ ಬಂಗಾಳ ಸರ್ಕಾರದ ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮಗಳ ಇಲಾಖೆಯ ನೋಡಲ್ ಏಜೆನ್ಸಿಯಾದ ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (WBIDC) ವಿರುದ್ಧದ ವಿಚಾರಣೆಯ ಅಂತ್ಯವನ್ನು ಸೂಚಿಸಿದೆ. ಈ ಸಂಬಂಧ ಈಗ ಟಾಟಾ ಮೋಟಾರ್ಸ್‌ಗೆ ಶೇ. 11ರ ಬಡ್ಡಿಯೊಂದಿಗೆ 766 ಕೋಟಿ ರೂ.ಗಳ ನಷ್ಟ ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳ ಸರಕಾರಕ್ಕೆ ಮಧ್ಯಸ್ಥಿಕೆ ನ್ಯಾಯಮಂಡಳಿಯು ನಿರ್ದೇಶನ ನೀಡಿದೆ.
7 ವರ್ಷಗಳಲ್ಲಿ 11% ರಷ್ಟು ಎಂದು ಲೆಕ್ಕಾಚಾರ ಮಾಡಿದರೆ, 766 ಕೋಟಿ ರೂಪಾಯಿಗೆ 589.65 ಕೋಟಿ ರೂಪಾಯಿ ಬಡ್ಡಿ ಆಗುತ್ತದೆ. 2008ರ ಅಕ್ಟೋಬರ್‌ನಲ್ಲಿ ತೃಣಮೂಲ ಕಾಂಗ್ರೆಸ್‌ನ ಪ್ರತಿಭಟನೆಯಿಂದಾಗಿ ಟಾಟಾ ಮೋಟಾರ್ಸ್ ತನ್ನ ನ್ಯಾನೊ ಕಾರು ಉತ್ಪಾದಿಸುವ ಯೋಜನೆಯನ್ನು ಸಿಂಗೂರಿನಿಂದ ಗುಜರಾತ್‌ನ ಸನಂದ್‌ಗೆ ಸ್ಥಳಾಂತರಿಸಿತ್ತು. ನಷ್ಟವನ್ನು ಪಶ್ಚಿಮ ಸರಕಾರ ಭರಿಸಬೇಕು ಎಂದು ಟಾಟಾ ಮೋಟಾರ್ಸ್ ಕಾನೂನು ಸಮರ ನಡೆಸಿತ್ತು.

ಈ ಕಾನೂನು ಸಮರದಲ್ಲಿ ಟಾಟಾಗೆ ಜಯ ಸಿಕ್ಕಿದೆ. ಜನವರಿ 10, 2008 ರಂದು ಬಿಡುಗಡೆಯಾದ ದೇಶದ ಅತ್ಯಂತ ಕೈಗೆಟುಕುವ ಕಾರು ಉತ್ಪಾದನೆಯ ಹಿಂದಿನ ಸಂಕ್ಷಿಪ್ತ ಕಥೆಯನ್ನು ಹಂಚಿಕೊಂಡಿದ್ದಾರೆ. ಭಾರತದ ಮಧ್ಯಮ ವರ್ಗದ ಕುಟುಂಬಗಳು ಸ್ಕೂಟರ್ ಮೇಲೆ ಮಕ್ಕಳು, ಪತ್ನಿ ಜೊತೆ ಪ್ರಯಾಣ, ಹಾಳು, ಗುಂಡಿ ಬಿದ್ದ ರಸ್ತಗಳಲ್ಲಿನ ಪ್ರಯಾಣ ತಪ್ಪಿಸಲು ರತನ್ ಟಾಟಾ ನ್ಯಾನೋ ಕಾರನ್ನು ಪರಿಚಯಿಸಿದ್ದರು. 1 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ನ್ಯಾನೋ ಕಾರನ್ನು ಪರಿಚಚಯಿಸಲಾಗಿತ್ತು.
ಟಾಟಾ ಮೋಟಾರ್ಸ್ ಬೇಡಿಕೆಯ ಕುಸಿತದಿಂದಾಗಿ 2019 ರಲ್ಲಿ ನ್ಯಾನೋ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರೂ ಭಾರತದ ಆಟೋಮೊಬೈಲ್ ಉದ್ಯಮದ ಇತಿಹಾಸದಲ್ಲಿ ಈ ಕಾರು ವಿಶೇಷವಾಗಿ ಉಳಿದುಕೊಂಡಿದೆ. ಇನ್ನು ಗುಜರಾತ್‌ನ ಸಾನಂದ್ ಪ್ಲ್ಯಾಂಟ್‌ನಲ್ಲಿ ಕೇವಲ 1 ನ್ಯಾನೋ ಕಾರ್‌ಅನ್ನು ಉತ್ಪಾದನೆ ಮಾಡಿತ್ತು. ಪ್ರಸ್ತುತ ಗುಜರಾತ್‌ನಲ್ಲಿರುವ ಪ್ಲ್ಯಾಂಟ್ ಟಾಟಾ ಹ್ಯಾಚ್ ಬ್ಯಾಕ್ ಕಾರುಗಳನ್ನು ಉತ್ಪಾದನೆ ಮಾಡುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications