ಟಾಟಾ ನ್ಯಾನೋ ಚಾಲಕ ಹೀಗಾ ಮಾಡೋದು: ಮುಂದೇನಾಯ್ತು?.. ಡ್ಯಾಶ್‌ಕ್ಯಾಮ್‌ನಲ್ಲಿ ವಿಡಿಯೋ ಸೆರೆ

ಕಳೆದ 10 ವರ್ಷಗಳಿಗೆ ಹೋಲಿಸಿದರೆ, ಭಾರತದ ರಸ್ತೆಗಳು ಸಾಕಷ್ಟು ಅಭಿವೃದ್ದಿಗೊಂಡಿವೆ. ಆದರೆ, ಹಲವು ವಾಹನ ಸವಾರರು ಬೇಗ ನಿರ್ದಿಷ್ಟ ಸ್ಥಳವನ್ನು ತಲುಪಬೇಕೆಂಬ ಭರಾಟೆಯಲ್ಲಿ ನಿಗದಿತ ವೇಗಮಿತಿ ಮೀರಿ ಕಾರು ಅಥವಾ ಬೈಕ್ ಚಲಾಯಿಸುತ್ತಾರೆ. ಇದು, ಅಪಘಾತಕ್ಕೂ ಕಾರಣವಾಗುತ್ತದೆ. ಸದ್ಯ, ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು, ಕಾರು ಮಾಲೀಕನ ಅಜಾಗರೂಕತೆಗೆ ಸ್ಪಷ್ಟ ಉದಾಹರಣೆಯಾಗಿದೆ. ತನ್ನ, ಆತುರದ ಚಾಲನೆಯಿಂದ ಟಾಟಾ ನ್ಯಾನೋ ಡ್ರೈವರ್ ಓವರ್‌ಟೇಕ್ ಮಾಡುವಾಗ ನಿಯಂತ್ರಣ ಕಳೆದುಕೊಂಡು, ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವಿಡಿಯೋ ಅದೇ ರಸ್ತೆಯಲ್ಲಿ ನ್ಯಾನೋ ಹಿಂದೆ, ಬರುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಿಡಿಯಲಾಗಿದೆ. ಆದರೆ, ನಿಖರವಾದ ಸ್ಥಳದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಟಾಟಾ ನ್ಯಾನೋ ಚಾಲಕನ ದಿವ್ಯ ನಿರ್ಲಕ್ಷ್ಯ: ಮುಂದೇನಾಯ್ತು?.. ಡ್ಯಾಶ್‌ಕ್ಯಾಮ್‌ನಲ್ಲಿ ವಿಡಿಯೋ ಸೆರೆ

ಈ ವಿಡಿಯೋದ ಸುತ್ತಲಿನ ಪರಿಸರವನ್ನು ಗಮನಿಸಿದಾಗ ಕರ್ನಾಟಕ ಅಥವಾ ಕೇರಳದ ಕರಾವಳಿ ಭಾಗದ ರಸ್ತೆಯಲ್ಲಿ ನಡೆದಿರಬಹುದು ಎಂದು ಹೇಳಲಾಗಿದೆ. ಡ್ಯಾಶ್‌ಕ್ಯಾಮ್‌ನಲ್ಲಿ ರೆಕಾರ್ಡ್ ಆಗಿರುವ 20 ಸೆಕೆಂಡುಗಳ ಈ ವಿಡಿಯೋದಲ್ಲಿ, ಇದೊಂದು ಸಣ್ಣ ಹಳ್ಳಿಯ ದ್ವಿಪಥ ರಸ್ತೆಯಾಗಿದ್ದು, ವಾಹನಗಳು ಎಂದಿನಂತೆ ಸಂಚರಿಸುವುದನ್ನು ಕಾಣಬಹುದು. ಅಲ್ಲಿ ಇದ್ದಕ್ಕಿದಂತೆ ಅತಿವೇಗದಲ್ಲಿ ಟಾಟಾ ನ್ಯಾನೋ ಬರುತ್ತದೆ. ಬೈಕಿಗೆ ಓವರ್‌ಟೇಕ್ ಮಾಡಲು ಹೋಗಿ, ರಸ್ತೆಯ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಂತೆ ತೋರುತ್ತದೆ.

ಬಳಿಕ, ಬೈಕಿಗೂ ಗುದ್ದಿದೆ. ಪರಿಣಾಮ, ಆ ದ್ವಿಚಕ್ರ ವಾಹನ ಸವಾರ ಕೆಳಗೆ ಬಿದ್ದಿದ್ದು, ಆತನ ಸಹಾಯಕ್ಕೆ ಸ್ಥಳೀಯರು ಬರುತ್ತಿರುವುದನ್ನು ಕಾಣಬಹುದು. ಕಾರಿನ ಮುಂಭಾಗಕ್ಕೂ ಹಾನಿಯಾಗಿರುವುದನ್ನು ನೋಡಬಹುದು. ಕೆಲವೇ ಸೆಕೆಂಡುಗಳಲ್ಲಿ ಇದೆಲ್ಲ ನಡೆದು ಹೋಗಿದೆ. ಈ ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ವಿಡಿಯೋವನ್ನು ನೋಡಿದಾಗ ಕಾರಿನ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೆಂದು ಹೇಳಬಹುದು.

ಟಾಟಾ ನ್ಯಾನೋ ಚಾಲಕನ ದಿವ್ಯ ನಿರ್ಲಕ್ಷ್ಯ: ಮುಂದೇನಾಯ್ತು?.. ಡ್ಯಾಶ್‌ಕ್ಯಾಮ್‌ನಲ್ಲಿ ವಿಡಿಯೋ ಸೆರೆ

ರಸ್ತೆ ಅಪಘಾತ ತಪ್ಪಿಸುವುದು ಹೇಗೆ?: ದೇಶದ ವಿವಿಧ ರಸ್ತೆಗಳಿಗೆ ಅನುಗುಣವಾಗಿ ಇಷ್ಟೇ ನಿಗದಿತ ವೇಗಮಿತಿಯಲ್ಲಿ ವಾಹನ ಚಾಲನೆ ಮಾಡಬೇಕೆಂಬ ಬೋರ್ಡ್ ಗಳನ್ನು ಅಳವಡಿಸಲಾಗಿರುತ್ತದೆ. ಅದನ್ನು ಮೀರಿ ವಾಹನಗಳನ್ನು ಓಡಿಸಿದರೆ, ಅಪಘಾತಕ್ಕೆ ಒಳಗಾಗಬಹುದು. ಆ ಕಾರಣಕ್ಕೆ ನಿಗದಿತ ವೇಗಮಿತಿಯಲ್ಲಿ ವಾಹನ ಚಲಾಯಿಸಿ. ಬೈಕ್, ಕಾರು ಓಡಿಸುವ ಮೊದಲು ಹೆಲ್ಮೆಟ್, ಸೀಟ್ ಬೆಲ್ಟ್ ಸೇರಿದಂತೆ ಇತರೆ ಸುರಕ್ಷತಾ ಸಾಧನ ಬಳಸಿರಿ.

ಮದ್ಯಪಾನ ಮಾಡಿ ಎಂದಿಗೂ ವಾಹನ ಚಲಾಯಿಸಬೇಡಿ. ಆಗ ಕಾರಿನ ಸ್ಟೇರಿಂಗ್ ವೀಲ್ ಅಥವಾ ಬೈಕ್ ಹ್ಯಾಂಡಲ್ ಅನ್ನು ಸರಿಯಾಗಿ ಹಿಡಿದುಕೊಳ್ಳಲು ಸಾಧ್ಯವಿಲ್ಲ. ಮುಖ್ಯವಾಗಿ ವಾಹನಗಳನ್ನು ಓಡಿಸುವಾಗ ಮೊಬೈಲ್ ಫೋನ್ ಅಥವಾ ಇಯರ್ ಫೋನ್ ಉಪಯೋಗಿಸಬೇಡಿ. ಇದರಿಂದ ರಸ್ತೆಯ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯವಿಲ್ಲ. ಕೊಂಚ ಯಾಮಾರಿದರೂ ಅಪಘಾತವಾಗಬಹುದು.

ಯಾವುದೇ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಎಲ್ಲ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿರಿ. ಇದರಿಂದ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಬಹುದು. ಜೊತೆಗೆ ಹೆದ್ದಾರಿಯಲ್ಲಿ ಓವರ್‌ಟೇಕ್ ಮಾಡುವಾಗ ಎಚ್ಚರವಿರಲಿ. ಪಥ ಶಿಸ್ತನ್ನು ತಪ್ಪದೆ ಕಾಯ್ದುಕೊಳ್ಳಿ. ದೂರದ ಪ್ರಯಾಣ ವೇಳೆ, ಪ್ರತಿ ಎರಡು ಗಂಟೆಗೊಮ್ಮೆ ವಿಶ್ರಾಂತಿ ಪಡೆಯಿರಿ. ಈ ಮೂಲಕ ಮುಂದಾಗಬಹುದಾದ ಅಪಘಾತವನ್ನು ತಪ್ಪಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, October 14, 2023, 10:48 [IST]
English summary
Tata nano loses control crashes into biker video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+