ಕರೋನಾ ಭೀತಿಯ ನಡುವೆಯೂ ಬುದ್ದಿ ಕಲಿಯದ ಕುತಂತ್ರಿ ಚೀನಾ

ಯಾವುದೇ ವಸ್ತುಗಳನ್ನು ನಕಲು ಮಾಡುವುದರಲ್ಲಿ ಚೀನಾ ದೇಶದವರನ್ನು ಮೀರಿಸುವವರಿಲ್ಲ. ಚೀನಾ ದೇಶದ ಕಂಪನಿಗಳು ತಯಾರಿಸಿರುವ ನಕಲಿ ಕಾರುಗಳಿಗೆ ಲೆಕ್ಕವಿಲ್ಲ. ಚೀನಾದ ಆಟೋ ಮೊಬೈಲ್ ಕಂಪನಿಗಳು ಜಗತ್ತಿನ ಜನಪ್ರಿಯ ಕಾರುಗಳು ನಕಲು ಮಾಡಿ ಮಾರಾಟ ಮಾಡುತ್ತವೆ.

ಕರೋನಾ ಭೀತಿಯ ನಡುವೆಯೂ ಬುದ್ದಿ ಕಲಿಯದ ಕುತಂತ್ರಿ ಚೀನಾ

ಕೆಲ ದಿನಗಳ ಹಿಂದಷ್ಟೇ ಚೀನಾದ ಕಂಪನಿಯೊಂದು ಟೊಯೊಟಾದ ಎಸ್‌ಯುವಿಯನ್ನು ನಕಲು ಮಾಡಿತ್ತು. ಈಗ ಭಾರತದ ಜನಪ್ರಿಯ ಕಂಪನಿಯ ಕಾರ್ ಅನ್ನೇ ನಕಲು ಮಾಡಿದೆ. ಟಾಟಾ ಮೋಟಾರ್ಸ್‌ನ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ನಕಲು ಮಾಡಿದೆ. ಚೀನಾದ ಫೆಂಗ್‌ಶೆಂಗ್ ಕಂಪನಿಯು ಟಾಟಾ ನೆಕ್ಸಾನ್‌ನಂತಿರುವ ಮ್ಯಾಪಲ್ 30 ಎಕ್ಸ್ ಕಾರ್ ಅನ್ನು ಬಿಡುಗಡೆಗೊಳಿಸಿದೆ.

ಕರೋನಾ ಭೀತಿಯ ನಡುವೆಯೂ ಬುದ್ದಿ ಕಲಿಯದ ಕುತಂತ್ರಿ ಚೀನಾ

ಈ ಮ್ಯಾಪಲ್ 30 ಎಕ್ಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಚೀನಾದ ಮಾರುಕಟ್ಟೆಯಲ್ಲಿ ಸುಮಾರು ರೂ.7.5 ಲಕ್ಷಗಳಾಗುತ್ತದೆ. ಬೆಲೆ ಮುಖ್ಯವಲ್ಲದಿದ್ದರೂ ಈ ಕಾರಿನ ವಿನ್ಯಾಸವು ನೆಕ್ಸಾನ್‌ ಕಾರಿನ ಫೇಸ್‌ಲಿಫ್ಟ್‌ನಂತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ಭೀತಿಯ ನಡುವೆಯೂ ಬುದ್ದಿ ಕಲಿಯದ ಕುತಂತ್ರಿ ಚೀನಾ

ನೆಕ್ಸಾನ್‌ ಇವಿ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಮ್ಯಾಪಲ್ 30 ಎಕ್ಸ್‌ ಕಾರಿನಲ್ಲಿ ನೆಕ್ಸಾನ್ ಕಾರಿನಲ್ಲಿರುವಂತಹ ಗ್ರಿಲ್ ಹಾಗೂ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿರುವ ಬಾನೆಟ್ ಸಹ ನೆಕ್ಸಾನ್ ಕಾರಿನಲ್ಲಿರುವಂತಿದೆ.

ಕರೋನಾ ಭೀತಿಯ ನಡುವೆಯೂ ಬುದ್ದಿ ಕಲಿಯದ ಕುತಂತ್ರಿ ಚೀನಾ

ಸೈಡಿನಿಂದ ನೋಡಿದರೆ, ಮ್ಯಾಪಲ್ 30 ಎಕ್ಸ್‌ ಕಾರು ನೆಕ್ಸಾನ್ ಕಾರಿನ ಫೇಸ್‌ಲಿಫ್ಟ್‌ನಂತೆ ಕಾಣುತ್ತದೆ. ಕಂಪನಿಯು ಮ್ಯಾಪಲ್ 30 ಎಕ್ಸ್ ಕಾರು ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿದೆ. ಈ ಕಾರಿನಲ್ಲಿರುವ ಸಿ ಪಿಲ್ಲರ್ ಸ್ವಲ್ಪ ವಿಭಿನ್ನವಾಗಿದ್ದರೂ, ನೋಡಿದ ತಕ್ಷಣ ನೆಕ್ಸಾನ್ ಕಾರಿನಂತೆಯೇ ಕಾಣುತ್ತದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ಭೀತಿಯ ನಡುವೆಯೂ ಬುದ್ದಿ ಕಲಿಯದ ಕುತಂತ್ರಿ ಚೀನಾ

ಈ ಎಲೆಕ್ಟ್ರಿಕ್ ಕಾರಿನಲ್ಲಿ 70 ಕಿ.ವ್ಯಾ ಮೋಟರ್‌ ಅಳವಡಿಸಲಾಗಿದ್ದು, ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 306 ಕಿ.ಮೀ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಬ್ಯಾಟರಿಯನ್ನು ಫಾಸ್ಟ್ ಚಾರ್ಜರ್‌ನಲ್ಲಿ ಕೇವಲ 30 ನಿಮಿಷಗಳಲ್ಲಿ 80%ವರೆಗೂ ಚಾರ್ಜ್ ಮಾಡಬಹುದು. ಸಾಮಾನ್ಯ ಚಾರ್ಜರ್‌ನಲ್ಲಿ ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಕರೋನಾ ಭೀತಿಯ ನಡುವೆಯೂ ಬುದ್ದಿ ಕಲಿಯದ ಕುತಂತ್ರಿ ಚೀನಾ

ಮ್ಯಾಪಲ್ 30 ಎಕ್ಸ್ ಕಾರಿನಲ್ಲಿ ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ಹಾಗೂ ಇಂಟೆಲಿಜೆಂಟ್ ಇನ್ಫೋನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಶೀಘ್ರದಲ್ಲೇ ಈ ಕಾರಿನ ಮಾರಾಟವು ಚೀನಾದ ಮಾರುಕಟ್ಟೆಯಲ್ಲಿ ಆರಂಭವಾಗಲಿದೆ. ಟಾಟಾ ನೆಕ್ಸಾನ್ ಇವಿ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ಭೀತಿಯ ನಡುವೆಯೂ ಬುದ್ದಿ ಕಲಿಯದ ಕುತಂತ್ರಿ ಚೀನಾ

ಮಾರ್ಚ್ ತಿಂಗಳಿನಲ್ಲಿ ಟಾಟಾ ನೆಕ್ಸಾನ್‌ನ 198 ಯೂನಿಟ್‌ಗಳು ಮಾರಾಟವಾಗಿವೆ. ಟಾಟಾ ನೆಕ್ಸಾನ್ ಇವಿ, ಟಾಟಾ ಮೋಟಾರ್ಸ್ ಹೊಸ ಜಿಪ್‌ಟ್ರಾನ್ ಟೆಕ್ನಾಲಜಿಯೊಂದಿಗೆ ಬಿಡುಗಡೆಗೊಳಿಸಿದ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಚೀನಾ ಮಾರುಕಟ್ಟೆಯಲ್ಲಿ ಈ ಕಾರು ಮಾತ್ರವಲ್ಲದೇ ಅನೇಕ ಜನಪ್ರಿಯ ಕಾರುಗಳನ್ನು ನಕಲು ಮಾಡಿ ಮಾರಾಟ ಮಾಡಲಾಗುತ್ತದೆ.

More from DriveSpark

Article Published On: Friday, April 24, 2020, 18:56 [IST]
English summary
Tata Nexon Chinese copycat fake model. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+