ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಎಲೆಕ್ಟ್ರಿಕ್ ವಾಹನಗಳು ದೂರದ ಪ್ರಯಾಣಕ್ಕೆ ಸೂಕ್ತವಲ್ಲ ಎಂದು ಅನೇಕ ಜನರು ಭಾವಿಸುತ್ತಾರೆ. ಯಾಕೆಂದರೆ ಎಲೆಕ್ಟ್ರಿಕ್ ವಾಹನಗಳು ಒಮ್ಮೆ ಚಾರ್ಜ್ ಮಾಡಿದರೆ ಕಡಿಮೆ ರೇಂಜ್ ಅನ್ನು ಹೊಂದಿರುತ್ತದೆ. ಆದರೆ ಇತ್ತೀಚೆಗೆ ಹೆಚ್ಚಿನ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗುತ್ತಿದೆ.

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಅಲ್ಲದೇ ಎಲೆಕ್ಟ್ರಿಕ್ ವಾಹನಗಳಿಗಾಗಿ ಚಾರ್ಜಿಂಗ್ ಕೇಂದ್ರಗಳನ್ನು ಭಾರತದಲ್ಲಿ ಕ್ರಮೇಣ ಹೆಚ್ಚಿಸಲಾಗುತ್ತಿದೆ. ಮೊದಲು ಚಾರ್ಜಿಂಗ್ ಕೇಂದ್ರಗಳನ್ನು ನೋಡುವುದು ಬಹಳ ಅಪರೂಪ. ಆದರೆ ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ. ಮುಂದಿನ ವರ್ಷಗಳಲ್ಲಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯು ಪೆಟ್ರೋಲ್ ಬಂಕ್‍ಗಳ ರೀತಿಯಲ್ಲೇ ಹೆಚ್ಚಾಗಬಹುದು. ಇದರ ನಡುವೆ ಅಂಜನೇ ಸೈನಿ ಅವರು ತನ್ನ ಟಾಟಾ ನೆಕ್ಸನ್ ಎಲೆಕ್ಟ್ರಿಕ್ ಕಾರಿನಲ್ಲಿ ದೆಹಲಿಯಿಂದ ಹಿಮಾಚಲ ಪ್ರದೇಶದ ಕಾಜಾಕ್ಕೆ ಪ್ರಯಾಣಿಸಿದ್ದಾರೆ.

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಅಂಜನೇ ಸೈನಿ ತನ್ನ 2 ಸ್ನೇಹಿತರೊಂದಿಗೆ ಕಾಜಾ ಪ್ರದೇಶಕ್ಕೆ ಪ್ರಯಾಣವನ್ನು ಆರಂಭಿಸಿದರು. ಈ ಪ್ರವಾಸವು ಪ್ರಸ್ತುತ ಎಲ್ಲರ ಗಮನ ಸೆಳೆದಿದೆ. ಅವರು ಕರ್ನಾಲ್, ನಾರ್ಕಂಡ, ಜಾಬ್ಲಿ, ರೆಕಾಂಗ್ ಪಿಯೋ ಮತ್ತು ಚಾಂಗೋ ಮುಂತಾದ ಕೆಲವು ಸ್ಥಳಗಳಲ್ಲಿ ತಮ್ಮ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಚಾರ್ಜ್ ಮಾಡಿದ್ದರು.

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಸೈನಿ ಮತ್ತು ಅವರ ಸ್ನೇಹಿತರು ಈ ಸುದೀರ್ಘ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದಕ್ಕೆ ಕಾರಣ, ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ ಹೆಚ್ಚಾಗಿರುವುದಾಗಿದೆ. ಇವರು ಒಟ್ಟು 1,900 ಕಿಮೀ ಪ್ರಯಾಣಿಸಿದ್ದಾರೆ. ಪ್ರಯಾಣ ವೆಚ್ಚವು ಇನ್ನಷ್ಟು ಆಶ್ಚರ್ಯಕರವಾಗಿದೆ.

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಪ್ರವಾಸದುದ್ದಕ್ಕೂ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಚಾರ್ಜ್ ಮಾಡಲು ಕೇವಲ ರೂ.2,000 ವೆಚ್ಚವಾಗಿದೆ. ವಾಸ್ತವವಾಗಿ, ಅವರು ಪ್ರತಿ ಕಿಲೋಮೀಟರಿಗೆ ಕೇವಲ 1 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಇದು ಎಲೆಕ್ಟ್ರಿಕ್ ವಾಹನಗಳ ವಿಶೇಷವಾಗಿದೆ.

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಇದು ಪೆಟ್ರೋಲ್, ಡೀಸೆಲ್ ಕಾರ್ ಆಗಿದ್ದರೆ 1,900 ಕಿಲೋಮೀಟರ್ ಪ್ರಯಾಣಿಸಲು ದೊಡ್ಡ ವೆಚ್ಚವಾಗುತ್ತಿತ್ತು. ಈ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಸೈನಿ ಮತ್ತು ಅವರ ಸ್ನೇಹಿತರು ಸಂಪೂರ್ಣವಾಗಿ ಸಿದ್ಧರಾಗಿದ್ದರು. ಅವರು ತಂಗಿರುವ ಹೋಟೆಲ್‌ಗಳಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಚಾರ್ಜ್ ಮಾಡುವ ಸೌಲಭ್ಯವಿದೆಯೇ? ಅವರು ವಿಚಾರಿಸಿದ್ದರು.

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಕಾರನ್ನು ಬೇರೆಲ್ಲಿ ಚಾರ್ಜ್ ಮಾಡಬಹುದು? ಅವರು ಅದನ್ನು ಮುಂಚಿತವಾಗಿ ಯೋಜಿಸಿದ್ದರು ಮತ್ತು ಆ ಸ್ಥಳವನ್ನು ವಿಶ್ರಾಂತಿ ಸ್ಥಳವಾಗಿ ಪರಿವರ್ತಿಸಿದರು. ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳು ಎಲ್ಲಿವೆ? ಎಂಬ ಮಾಹಿತಿ ನೀಡುವ ಅಪ್ಲಿಕೇಶನ್‌ಗಳನ್ನು ಬಳಿಸಿದ್ದಾರೆ,

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಈ ರೀತಿಯಾಗಿ ಅವರು ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು. ಟಾಟಾ ನೆಕ್ಸಾನ್ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಾಟಾ ಈಗಾಗಲೇ ಐಸಿ ಎಂಜಿನ್ ಹೊಂದಿದ ನೆಕ್ಸಾನ್ ಕಾರನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಈ ಕಾರು ಅದರ ಎಲೆಕ್ಟ್ರಿಕ್ ಆವೃತ್ತಿಯಾಗಿದೆ.

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಜನಪ್ರಿಯ ಟಾಟಾ ನೆಕ್ಸನ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ, ಈ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಹೆಚ್ಚು ಮಾರಾಟವಾದ ಪ್ರಯಾಣಿಕರ ಎಲೆಕ್ಟ್ರಿಕ್ ಕಾರು ಆಗಿದೆ. ಅಲ್ಲದೇ ಇದು ಜಿಪ್ಟ್ರಾನ್ ತಂತ್ರಜ್ಞಾನವನ್ನು ಆಧರಿಸಿದ ಮೊದಲ ವಾಹನವಾಗಿದ್ದು, ಮುಂಬರುವ ಟಾಟಾ ಇವಿಗಳಿಗೆ ಕಾರಣವಾಗಿದೆ. ಭಾರತದಲ್ಲಿ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನೆಕ್ಸಾನ್ ಇವಿ ಶೇ.6.8 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಗಳಿಸಿದೆ.

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಸನ್‌ರೂಫ್, ರೈನ್ ಸೆನ್ಸಾಸಿಂಗ್, ಇಂಟಿಗ್ರೇಟೆಡ್ ಟರ್ನ್ ಇಂಡೀಕೇಟರ್, ಎಲ್ಲಾ ಪವರ್ ವಿಂಡೋಸ್, ಕೀಲೆಸ್ ಎಂಟ್ರಿ ಅಂಡ್ ಗೋ, ಕೂಲ್ಡ್ ಗ್ಲೋವ್ ಬಾಕ್ಸ್, ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ,

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದ್ದು, ಇದಕ್ಕಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಅನ್ನು ನೀಡಿದ್ದಾರೆ.

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಈ ಎಲೆಕ್ಟ್ರಿಕ್ ಕಾರಿನಲ್ಲಿ ಸಿಂಕ್ರೊನಸ್ ಮೋಟರ್ ಅನ್ನು ಹೊಂದಿದೆ. ಇದರಲ್ಲಿ 30.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಇವಿ ಮಾದರಿಯು ಒಟ್ಟು 127 ಬಿಹೆಚ್‌ಪಿ ಮತ್ತು 245 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಕಾರು ಕೇವಲ 9.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಆರ್ಎಐ ಪ್ರಕಾರ ಈ ನೆಕ್ಸಾನ್ ಇವಿ ಮಾದರಿಯು 312 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ನೆಕ್ಸಾನ್ ಎಲೆಕ್ಟ್ರಿಕ್ ಕಾರು ಸಾಮಾನ್ಯ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯಿಂದ ಸ್ಟೈಲಿಂಗ್ ಅನ್ನು ಪಡೆದುಕೊಂಡಿದೆ. ಆದರೆ ಎಲೆಕ್ಟ್ರಿಕ್ ವಾಹನವಾಗಿರುವುದರಿಂದ ಅದಕ್ಕೆ ಅನುಗುಣವಾಗಿ ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಕೂಡ ನಡೆಸಿದ್ದಾರೆ. 2020ರ ಜನವರಿಯಲ್ಲಿ ಮೊದಲ ಬಾರಿಗೆ ಭಾರತದಲ್ಲಿ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದರು.

ಟಾಟಾ ನೆಕ್ಸಾನ್ ಕಾಜಾ ತಲುಪಿದ ಮೊದಲ ಎಲೆಕ್ಟ್ರಿಕ್ ಕಾರು: 1,900 ಕಿ.ಮೀ ಪ್ರಯಾಣ ವೆಚ್ಚ ಕೇವಲ ರೂ.2,000

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‍ಯುವಿಯು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ಎಂಜಿ ಝಡ್ ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಕೈಗೆಟುಕುವ ದರ, ಹೆಚ್ಚಿನ ರೇಂಜ್ ಮತ್ತು ಆಕರ್ಷಕ ವಿನ್ಯಾಸದಿಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

Most Read Articles

Kannada
English summary
Tata nexon ev attains record of first electric car to reach kaza details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X