ಬ್ಯಾಟರಿ ಚಾರ್ಜ್'ಗಾಗಿ ಎಲೆಕ್ಟ್ರಿಕ್ ಕಾರಿನ ರೂಫ್ ಮೇಲೆ ಬಂತು ವಿಂಡ್‌ಮಿಲ್

ಭಾರತೀಯರು ತಮ್ಮ ಕ್ರಿಯಾಶೀಲತೆಗೆ ಹೆಸರುವಾಸಿಯಾಗಿದ್ದಾರೆ. ವಾಹನಗಳನ್ನೇ ಆಗಲಿ ಬೇರೆ ಯಾವುದೇ ವಸ್ತುಗಳನ್ನೇ ಆಗಲಿ ತಮಗೆ ಇಷ್ಟ ಬಂದ ರೀತಿಯಲ್ಲಿ ಸಿದ್ದಪಡಿಸಿಕೊಳ್ಳುವುದರಲ್ಲಿ ಭಾರತೀಯರು ಸದಾ ಮುಂದೆ.

ಬ್ಯಾಟರಿ ಚಾರ್ಜ್'ಗಾಗಿ ಎಲೆಕ್ಟ್ರಿಕ್ ಕಾರಿನ ರೂಫ್ ಮೇಲೆ ಬಂತು ವಿಂಡ್‌ಮಿಲ್

ಭಾರತದಲ್ಲಿ ಹೊಸತನ್ನು ಮಾಡುವ ಜನರಿಗೇನೂ ಕೊರತೆ ಇಲ್ಲ. ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊದಲ್ಲಿರುವ ಕಾರಿನ ರೂಫ್ ಮೇಲೆ ವಿಂಡ್‌ಮಿಲ್ ಅಳವಡಿಸಲಾಗಿದೆ. ವಿಂಡ್‌ಮಿಲ್ ಅಳವಡಿಸಲಾಗಿರುವ ಕಾರು ಎಲೆಕ್ಟ್ರಿಕ್ ಕಾರ್ ಆಗಿರುವ ಕಾರಣಕ್ಕೆ ಈ ವೀಡಿಯೊ ಬಗ್ಗೆ ಚರ್ಚೆಯಾಗುತ್ತಿದೆ.

ಬ್ಯಾಟರಿ ಚಾರ್ಜ್'ಗಾಗಿ ಎಲೆಕ್ಟ್ರಿಕ್ ಕಾರಿನ ರೂಫ್ ಮೇಲೆ ಬಂತು ವಿಂಡ್‌ಮಿಲ್

ಗುಜರಾತ್‌ನ ನೋಂದಣಿ ಸಂಖ್ಯೆ ಹೊಂದಿರುವ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಈ ವಿಂಡ್‌ಮಿಲ್ ಅಳವಡಿಸಲಾಗಿದೆ. ಎಲೆಕ್ಟ್ರಿಕ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ವಿಂಡ್‌ಮಿಲ್ ಅಳವಡಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬ್ಯಾಟರಿ ಚಾರ್ಜ್'ಗಾಗಿ ಎಲೆಕ್ಟ್ರಿಕ್ ಕಾರಿನ ರೂಫ್ ಮೇಲೆ ಬಂತು ವಿಂಡ್‌ಮಿಲ್

ಈ ಕಾರಿನಲ್ಲಿ ವಿಂಡ್‌ಮಿಲ್ ಅನ್ನು ಯಾವ ಕಾರಣಕ್ಕೆ ಅಳವಡಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ ಕಾರಿನಲ್ಲಿರುವ ಬ್ಯಾಟರಿಯನ್ನು ಚಾರ್ಜ್ ಮಾಡಲು ಕಾರಿನ ಮಾಲೀಕರು ರೂಫ್ ಮೇಲೆ ವಿಂಡ್‌ಮಿಲ್ ಅಳವಡಿಸಿದ್ದಾರೆ ಎಂದು ಹೇಳಲಾಗಿದೆ.

ಬ್ಯಾಟರಿ ಚಾರ್ಜ್'ಗಾಗಿ ಎಲೆಕ್ಟ್ರಿಕ್ ಕಾರಿನ ರೂಫ್ ಮೇಲೆ ಬಂತು ವಿಂಡ್‌ಮಿಲ್

ಇದರ ಹೊರತಾಗಿ ಕಾರಿನ ರೂಫ್ ಮೇಲೆ ವಿಂಡ್‌ಮಿಲ್ ಅಳವಡಿಸಲು ಬೇರೆ ಯಾವುದೇ ಕಾರಣಗಳಿಲ್ಲ. ಚಲಿಸುತ್ತಿರುವ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ರೂಫ್ ಮೇಲೆ ವಿಂಡ್‌ಮಿಲ್ ಅಳವಡಿಸಿರುವುದನ್ನು ಹಾಗೂ ಅದರಲ್ಲಿರುವ ರೆಕ್ಕೆಗಳು ತಿರುಗುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬ್ಯಾಟರಿ ಚಾರ್ಜ್'ಗಾಗಿ ಎಲೆಕ್ಟ್ರಿಕ್ ಕಾರಿನ ರೂಫ್ ಮೇಲೆ ಬಂತು ವಿಂಡ್‌ಮಿಲ್

ಕಾರು ಚಾಲನೆಯಲ್ಲಿರುವಾಗ ಈ ವಿಂಡ್‌ಮಿಲ್ ಫ್ಯಾನ್ ತಿರುಗುತ್ತಿದ್ದು ಬ್ಯಾಟರಿಗೆ ಅಗತ್ಯವಿರುವ ವಿದ್ಯುತ್ ಅನ್ನು ಉತ್ಪಾದಿಸುತ್ತಿದೆ. ಎಲೆಕ್ಟ್ರಿಕ್ ಕಾರಿನಲ್ಲಿರುವ ಬ್ಯಾಟರಿಯನ್ನು ಚಾರ್ಜ್ ಮಾಡುವ ಈ ತಂತ್ರವು ವಿಶಿಷ್ಟವಾಗಿದೆ.

ಬ್ಯಾಟರಿ ಚಾರ್ಜ್'ಗಾಗಿ ಎಲೆಕ್ಟ್ರಿಕ್ ಕಾರಿನ ರೂಫ್ ಮೇಲೆ ಬಂತು ವಿಂಡ್‌ಮಿಲ್

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಹಲವು ಗ್ರಾಹಕರು ತಮ್ಮ ಕಾರಿನ ರೂಫ್ ಮೇಲೆ ಸೋಲಾರ್ ಪ್ಯಾನೆಲ್'ಗಳನ್ನು ಅಳವಡಿಸುವುದರಿಂದ ಬ್ಯಾಟರಿಯು ಸೂರ್ಯನ ಬೆಳಕಿನಿಂದ ಚಾರ್ಜ್ ಆಗುತ್ತದೆ. ಈ ತಂತ್ರವು ಸುರಕ್ಷಿತವಾಗಿದೆ. ಜೊತೆಗೆ ಪರಿಣಾಮಕಾರಿಯಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬ್ಯಾಟರಿ ಚಾರ್ಜ್'ಗಾಗಿ ಎಲೆಕ್ಟ್ರಿಕ್ ಕಾರಿನ ರೂಫ್ ಮೇಲೆ ಬಂತು ವಿಂಡ್‌ಮಿಲ್

ಇನ್ನು ಕೆಲವು ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಗಳೇ ಕಾರಿನ ರೂಫ್ ಮೇಲೆ ಸೋಲಾರ್ ಪ್ಯಾನೆಲ್'ಗಳನ್ನು ಅಳವಡಿಸುತ್ತವೆ. ಆದರೆ ಕಾರಿನಲ್ಲಿರುವ ಬ್ಯಾಟರಿಯನ್ನು ಚಾರ್ಜ್ ಮಾಡಲು ಇದೇ ಮೊದಲ ಬಾರಿಗೆ ಕಾರಿನ ರೂಫ್ ಮೇಲೆ ವಿಂಡ್‌ಮಿಲ್ ಅಳವಡಿಸಲಾಗಿದೆ.

ಬ್ಯಾಟರಿ ಚಾರ್ಜ್'ಗಾಗಿ ಎಲೆಕ್ಟ್ರಿಕ್ ಕಾರಿನ ರೂಫ್ ಮೇಲೆ ಬಂತು ವಿಂಡ್‌ಮಿಲ್

ಇದರಿಂದ ಕಾರಿನಲ್ಲಿರುವ ಬ್ಯಾಟರಿಯು ಈ ವಿಂಡ್‌ಮಿಲ್ ಮೂಲಕ ಚಾರ್ಜ್ ಆಗಲಿದೆ. ಆದರೆ ಹೀಗೆ ಮಾಡುವುದರಿಂದ ಕಾರಿನ ವಿನ್ಯಾಸವು ಹಾಳಾಗುತ್ತದೆ. ಜೊತೆಗೆ ಈ ರೀತಿಯಾಗಿ ಯಾವುದೇ ಸಾಧನಗಳನ್ನು ಕಾರಿನ ರೂಫ್ ಮೇಲೆ ಅಳವಡಿಸುವುದು ಮೋಟಾರು ವಾಹನ ಕಾಯ್ದೆಯನ್ವಯ ಕಾನೂನುಬಾಹಿರವಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

19 ಸೆಕೆಂಡುಗಳಿರುವ ಈ ವೀಡಿಯೊ ಭಾರತೀಯರು ಯಾವ ರೀತಿಯಲ್ಲಿ ಕ್ರಿಯಾಶೀಲತೆಯನ್ನು ಹೊರತರುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು 2020ರ ಜನವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು. 2020ರ ಡಿಸೆಂಬರ್ ವೇಳೆಗೆ ಈ ಎಲೆಕ್ಟ್ರಿಕ್ ಕಾರಿನ 2,500ಕ್ಕೂ ಹೆಚ್ಚು ಯುನಿಟ್'ಗಳು ಮಾರಾಟವಾಗಿದ್ದವು.

ಬ್ಯಾಟರಿ ಚಾರ್ಜ್'ಗಾಗಿ ಎಲೆಕ್ಟ್ರಿಕ್ ಕಾರಿನ ರೂಫ್ ಮೇಲೆ ಬಂತು ವಿಂಡ್‌ಮಿಲ್

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್‌ ಕಾರಿನ ಆರಂಭಿಕ ಬೆಲೆ ರೂ.15 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ರೂ.17 ಲಕ್ಷಗಳಾಗಿದೆ. ಈ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರಗಳಾಗಿವೆ. ಈ ಕಾರು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 312 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Most Read Articles

Kannada
English summary
Tata Nexon EV gets windmill on its roof. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X