Tata Nexon EV: ಪರಿಸರ ಹಾಳು ಮಾಡಲ್ಲ.. ಟಾಟಾ ನೆಕ್ಸಾನ್ ಇವಿ ಖರೀದಿಸಿದ ಯುವ ನಟಿ
'ಝಾನ್ಸಿ ಕಿ ರಾಣಿ' ಸೀರಿಯಲ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ, ಜನಪ್ರಿಯೆತೆ ಗಳಿಸಿರುವ ಯುವ ನಟಿ ಉಲ್ಕಾ ಗುಪ್ತಾ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ಹೊಸ ಟಾಟಾ ನೆಕ್ಸಾನ್ ಇವಿ ಪ್ರೈಮ್ ಖರೀದಿಸಿದ್ದು, ಆಪ್ತ ಸ್ನೇಹಿತರೊಂದಿಗೆ ಮುಂಬೈನಲ್ಲಿ ಖುಷಿಯಿಂದಲೇ ವಿತರಣೆ ಪಡೆದಿದ್ದಾರೆ.
ನೂತನ ನೆಕ್ಸಾನ್ ಇವಿಯನ್ನು ನಟಿ ಉಲ್ಕಾ ಗುಪ್ತಾ ಡೆಲಿವರಿ ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು 'ಕಾರ್ಸ್ ಫಾರ್ ಯೂ' ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಹಚ್ಚಿಕೊಳ್ಳಲಾಗಿದೆ. ಸ್ನೇಹಿತರೊಂದಿಗೆ ಟಾಟಾ ಡೀಲರ್‌ಶಿಪ್‌ಗೆ ಬರುವ ನಟಿ, ನೆಕ್ಸಾನ್ ಇವಿ ಮೇಲಿನ ಕವರ್ ಎಳೆಯುತ್ತಾರೆ. ಅಲ್ಲೇ ಕೇಕ್ ಕತ್ತರಿಸಿ, ಕಾರಿಗೆ ಪೂಜೆ ಸಲ್ಲಿಸಿ ಸಂಭ್ರಮಿಸುತ್ತಾರೆ. ನಂತರ, ಶೋರೊಂ ಸಿಬ್ಬಂದಿಯಿಂದ ಕೀ ಪಡೆದು, ನೆಕ್ಸಾನ್ ಇವಿ ಡ್ರೈವರ್ ಸೀಟಿನಲ್ಲಿ ಕುಳಿತುಕೊಂಡು ಒಂದಷ್ಟು ಮಾಹಿತಿ ಪಡೆದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಟಾಟಾ ನೆಕ್ಸಾನ್ ಇವಿ ಖರೀದಿಸಿರುವ ಬಗ್ಗೆ ಮಾತನಾಡಿರುವ ನಟಿ ಉಲ್ಕಾ ಗುಪ್ತಾ, 'ನಾನು ಮೌಲ್ಯಗಳಿಗೆ ಆಂಟಿಕೊಳ್ಳುವ ವ್ಯಕ್ತಿ. ಪರಿಸರವನ್ನು ಹಾಳು ಮಾಡಲು ಇಚ್ಚಿಸುವುದಿಲ್ಲ. ದೇವರ ದಯೆಯಿಂದ ಈ ಕಾರನ್ನು ಕೊಂಡುಕೊಂಡಿದ್ದು, ನನ್ನ ಆಯ್ಕೆ ಪ್ರಕೃತಿ ಪರವಾಗಿರಬೇಕೆಂದು ಬಯಸುತ್ತೇನೆ. ದಾನ ಮಾಡುವ ಗುಣ ಮನೆಯಿಂದಲೇ ಆರಂಭವಾಗುತ್ತದೆ. ಅದೇ ರೀತಿಯಲ್ಲಿ ಬದಲಾವಣೆ ನಮ್ಮಿಂದಲೇ ಆಗಬೇಕು. ಅದಕ್ಕಾಗಿ ಸಾಮಾನ್ಯ ಕಾರುಗಳ ಬದಲಾಗಿ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದೇನೆ' ಎಂದು ಹೇಳಿದ್ದಾರೆ.
ನಟಿ ಉಲ್ಕಾ ಗುಪ್ತಾ ಈ ಕಾರಿನಲ್ಲಿ ತಮ್ಮ ಕುಟುಂಬದೊಂದಿಗೆ ಕೆಲವೇ ದಿನಗಳಲ್ಲಿಯೇ ಲಾಂಗ್ ಡ್ರೈವ್ ಹೋಗಲು ಪ್ಲ್ಯಾನ್ ಮಾಡುತ್ತಿದ್ದಾರೆ. ಜೊತೆಗೆ ಇಸ್ಕಾನ್ ದೇಗುಲಕ್ಕೂ ಹೋಗುವ ಆಸೆಯನ್ನು ಹೊಂದಿದ್ದಾರೆ. 'ಇದೆಲ್ಲವೂ ಶ್ರೀಕೃಷ್ಣನ ಆಶೀರ್ವಾದ ಎಂದು ನಂಬಿರುವ ನಟಿ, ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ದೇವರ ಆಟವೇ ಆಗಿದೆ' ಎಂದು ಹೇಳಿದ್ದಾರೆ.
ನಟಿ ಖರೀದಿಸಿರುವ ಟಾಟಾ ನೆಕ್ಸಾನ್ ಇವಿ ಪ್ರೇಮ್ ಬಗ್ಗೆ ಮಾತನಾಡುವುದಾದರೆ, ಇದು ರೂ.14.49 ಲಕ್ಷದಿಂದ 16.99 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. 30.2 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, 129 PS ಗರಿಷ್ಠ ಪವರ್ ಹಾಗೂ 245 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜಿನಲ್ಲಿ 312 km ರೇಂಜ್ ನೀಡಲಿದೆ.
ಚಾರ್ಜಿಂಗ್ ಆಯ್ಕೆ ಬಗ್ಗೆ ಹೇಳುವುದಾದರೆ, 3.3 kW ಎಸಿ ಚಾರ್ಜರ್ ಬಳಕೆಯಲ್ಲಿ 8.5 ಗಂಟೆಯಲ್ಲಿ ಈ ಕಾರಿನ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗುತ್ತದೆ. 50 kW ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಶೇಕಡ 80% ಬ್ಯಾಟರಿ ಚಾರ್ಜ್ ಆಗಲು 60 ನಿಮಿಷ ತೆಗೆದುಕೊಳ್ಳುತ್ತದೆ. ನೆಕ್ಸಾನ್ ಇವಿ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್ ಏರ್ ಬ್ಯಾಗ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಟಾಟಾ, ಲಾಂಗ್ ರೇಂಜ್ ಆವೃತ್ತಿ 'ನೆಕ್ಸಾನ್ ಇವಿ ಮ್ಯಾಕ್ಸ್' ಅನ್ನು ರೂ.17.74 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಇದು 40.5 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 437 km ರೇಂಜ್ ನೀಡಲಿದೆ. ಇನ್ನು, ಅಗ್ಗದ ಬೆಲೆಯ ಟಿಯಾಗೊ ಇವಿಯನ್ನು ಕಂಪನಿ ಮಾರಾಟ ಮಾಡುತ್ತಿದ್ದು, ರೂ.8.69 ಲಕ್ಷದಿಂದ ರೂ.11.99 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಫುಲ್ ಚಾರ್ಜ್ ನಲ್ಲಿ 250 km ರೇಂಜ್ ಕೊಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications