ಸಿಬ್ಬಂದಿಯಿಂದಲೇ ಹೊಸ ಕಾರು ಅಪಘಾತ: ಗಾಬರಿಗೊಂಡ ಮಾಲೀಕನಿಗೆ ದಿಲ್ ಖುಷ್ ಮಾಡಿದ ಡೀಲರ್‌!

ಇತ್ತೀಚೆಗೆ, ನೋಯ್ಡಾದ ಟಾಟಾ ಮೋಟಾರ್ಸ್ ಡೀಲರ್‌ಶಿಪ್‌ನಲ್ಲಿ ಹೊಚ್ಚಹೊಸ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಅನ್ನು ಡೀಲರ್‌ಶಿಪ್ ಸಿಬ್ಬಂದಿಯೊಬ್ಬರು ಓಡಿಸುವಾಗ ನಿಯಂತ್ರಣ ತಪ್ಪಿ ಗೋಡೆಗೆ ಅಪ್ಪಳಿಸಿದೆ. ಘಟನೆಯಿಂದ ಗಾಬರಿಗೊಂಡಿದ್ದ ನೆಕ್ಸಾನ್ ಮಾಲೀಕರಿಗೆ ಡೀಲರ್‌ಶಿಪ್ ತ್ವರಿತವಾಗಿ ಪ್ರತಿಕ್ರಿಯಿಸಿ ತಮ್ಮ ತಪ್ಪನ್ನು ಸರಿಪಡಿಸಿದ್ದು, ಮಾಲೀಕ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಅಪಘಾತ ಸಂಭವಿಸಿದಾಗ ತೆಗೆದ ಎರಡು ವಿಡಿಯೋಗಳನ್ನು ಟಾಟಾ ನೆಕ್ಸಾನ್ ಮಾಲೀಕರು X (ಟ್ವಿಟ್ಟರ್‌) ನಲ್ಲಿ ಹಂಚಿಕೊಂಡಿದ್ದರು. ಮೊದಲ ವೀಡಿಯೊದಲ್ಲಿ, ಕಾರು ಅಪಘಾತಕ್ಕೀಡಾದ ನಂತರ ಡೀಲರ್‌ಶಿಪ್ ಸಿಬ್ಬಂದಿ ಕಾರನ್ನು ಸುತ್ತವರಿದಿರುವುದನ್ನು ಕಾಣಬಹುದು. ಕಾರಿನ ಮುಂಭಾಗ ಸೇರಿದಂತೆ ಕೆಲ ಯಾಂತ್ರಿಕ ಭಾಗಗಳಿಗೆ ಹಾನಿಯಾಗಿರುವುದನ್ನು ಇದೇ ವಿಡಿಯೋದಲ್ಲಿ ನೋಡಬಹುದು.

tata-nexon-facelift-crashed-at-service-center-dealer-swift-response

ಘಟನೆಯಲ್ಲಿ ಹೊಸ ಟಾಟಾ ನೆಕ್ಸಾನ್ ಮುಂಭಾಗದ ಗ್ರಿಲ್ ತೀವ್ರವಾಗಿ ಹಾನಿಗೊಳಗಾಗಿದ್ದು, ಬಣ್ಣವು ಹೊರಬಂದಿದೆ. ಇದಲ್ಲದೆ ತುದಿಯಲ್ಲಿ ಮುಂಭಾಗದ ಬಲ ಚಕ್ರದಿಂದ ಸ್ವಲ್ಪ ಹೊಗೆ ಹೊರಬರುವುದನ್ನು ನಾವು ಗಮನಿಸಬಹುದು. ನಮ್ಮ ಪ್ರಕಾರ ಇದು ಮುರಿದ ರೇಡಿಯೇಟರ್ ಆಗಿರಬಹುದು. ಆದ್ರೆ ಇದು ಖಚಿತವಾಗಿಲ್ಲ, ನಮ್ಮ ಅನಿಸಿಕೆಯಷ್ಟೆ.

ಇದೇ ಘಟನೆಯ ಮತ್ತೊಂದು ಸಣ್ಣ ವೀಡಿಯೊವನ್ನು ಕೂಡ ಮಾಲೀಕ ಹಂಚಿಕೊಂಡಿದ್ದು, ಕಾರು ಹಾನಿಯಾಗಿರುವುದನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಾಗ ಡೀಲರ್‌ಶಿಪ್‌ ಸಿಬ್ಬಂದಿಯೊಬ್ಬರು ಕ್ಯಾಮೆರಾವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಚಿತ್ರೀಕರಣದ ಈ ಅಡಚಣೆ ಕಾನೂನುಬಾಹಿರ. ಏಕೆಂದರೆ ಒಂದು ವೇಳೆ ಈ ಪ್ರಕರಣ ಗ್ರಾಹಕ ನ್ಯಾಯಾಲಯದವರೆಗೆ ಹೋದರೆ ಈ ವಿಡಿಯೋಗಳು ಮಾಲೀಕರಿಗೆ ಪ್ರಮುಖ ಪುರಾವೆಗಳಾಗಿರುತ್ತವೆ.

tata-nexon-facelift-crashed-at-service-center-dealer-swift-response

ಟಾಟಾ ಮೋಟಾರ್ಸ್ ಪ್ರತಿಕ್ರಿಯೆ: ಈ ವೀಡಿಯೊವನ್ನು ನೆಕ್ಸಾನ್‌ನ ಮಾಲೀಕರು ಹಂಚಿಕೊಂಡ ನಂತರ, ಟಾಟಾ ಮೋಟಾರ್ಸ್ ತ್ವರಿತವಾಗಿ ಪ್ರತಿಕ್ರಿಯಿಸಿತು. ಹಾಯ್ ವಿಕಾಸ್, ನೀವು ಇಂತಹ ಪರಿಸ್ಥಿತಿ ಎದುರಿಸಿದಕ್ಕೆ ನಾವು ವಿಷಾದಿಸುತ್ತೇವೆ. ನಿಮಗೆ ಸಹಾಯ ಮಾಡಲು ಬಯಸುತ್ತೇವೆ. ದಯವಿಟ್ಟು ನಿಮ್ಮ ಪ್ರಾಥಮಿಕ ಮತ್ತು ಪರ್ಯಾಯ ಸಂಪರ್ಕ ಸಂಖ್ಯೆ, ಇಮೇಲ್ ಐಡಿ ಮತ್ತು ಡೀಲರ್ ಮಾಹಿತಿಯನ್ನು ಹಂಚಿಕೊಂಡರೆ ಹೆಚ್ಚಿನ ಸಹಾಯಕ್ಕಾಗಿ ನಿಮ್ಮೊಂದಿಗೆ ಸಂಪರ್ಕಿಸಬಹುದು ಎಂದು ಪ್ರತಿಕ್ರಿಯಿಸಿದೆ.

ಇದಕ್ಕೆ ಉತ್ತರಿಸಿದ ಕಾರಿನ ಮಾಲೀಕ, "ಸೇವಾ ಕೇಂದ್ರವು ಹಾನಿಗೊಳಗಾದ ಭಾಗಗಳನ್ನು ಅದೇ ದಿನ ಹೊಸ ಭಾಗಗಳೊಂದಿಗೆ ಬದಲಾಯಿಸಿ ಕೊಟ್ಟಿದೆ. ಜೊತೆಗೆ ನನಗೆ ಕಾಂಪ್ಲಿಮೆಂಟರಿ ಟೆಫ್ಲಾನ್ ಕೋಟಿಂಗ್ ಕೂಡ ಮಾಡಿಕೊಟ್ಟಿದೆ ಎಂದರು. ಮತ್ತೆ ಪ್ರತಿಕ್ರಿಯಿಸಿದ ಟಾಟಾ, "ನಿಮ್ಮ ಪ್ರತಿಕ್ರಿಯೆ ಕೇಳಲು ನಮಗೆ ಸಂತೋಷವಾಗಿದೆ. ನಿಮಗೆ ಯಾವುದೇ ಹೆಚ್ಚಿನ ಸಹಾಯ ಬೇಕಾದರೆ ನಮ್ಮನ್ನು ಸಂಪರ್ಕಿಸಿ, ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ ಎಂದು ಹೇಳಿದೆ.

ಮಾಲೀಕ ಖುಷಿ ಆದ್ರೆ ನೆಟ್ಟಿಗರು ಗರಂ: ಘಟನೆಯ ಕುರಿತು ಕೆಲವರು ಹೊಸ ಕಾರನ್ನು ಕೇಳಬಹುದಿತ್ತು, ನಮಗಾಗಿಯೇ ಗ್ರಾಹಕ ನ್ಯಾಯಾಲಯವಿದೆ ಎಂದರೆ, ಇನ್ನೂ ಕೆಲವರು ವಿಡಿಯೋ ಮಾಡುವಾಗ ಸಿಬ್ಬಂದಿ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟಾಟಾವನ್ನು ಪ್ರಶ್ನಿಸಿ ಇದು ಸರಿಯೇ? ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಘಟನೆ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 3, 2024, 17:13 [IST]
English summary
Tata nexon facelift crashed at service center dealer swift response
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+