ಪಲ್ಟಿ ಹೊಡೆದರೂ ಒಳಗಿದ್ದವರ ಜೀವ ಉಳಿಸಿದ ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಕಾರು ಭಾರತದಲ್ಲಿರುವ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಇದಕ್ಕೆ ಪುಷ್ಟಿ ನೀಡುವಂತಹ ಹಲವು ಘಟನೆಗಳು ಈ ಹಿಂದೆ ನಡೆದಿವೆ. ಅಪಘಾತಕ್ಕೀಡಾಗಿದ್ದ ಟಾಟಾ ನೆಕ್ಸಾನ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದ ಹಲವು ಘಟನೆಗಳು ನಡೆದಿವೆ.

ಪಲ್ಟಿ ಹೊಡೆದರೂ ಒಳಗಿದ್ದವರ ಜೀವ ಉಳಿಸಿದ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಕಾರಿನಲ್ಲಿ ಹಲವಾರು ಸುರಕ್ಷತಾ ಫೀಚರ್'ಗಳನ್ನು ಅಳವಡಿಸಲಾಗಿದೆ. ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್'ನಲ್ಲಿ ಟಾಟಾ ನೆಕ್ಸಾನ್ ಕಾರು ಪೂರ್ಣ 5 ಸ್ಟಾರ್ ರೇಟಿಂಗ್ ಪಡೆದಿದ್ದು, ಪ್ರಯಾಣಕ್ಕೆ ಸುರಕ್ಷಿತ ವಾಹನವೆಂದು ಪ್ರಮಾಣಿಕರಿಸಲ್ಪಟ್ಟಿದೆ.

ಪಲ್ಟಿ ಹೊಡೆದರೂ ಒಳಗಿದ್ದವರ ಜೀವ ಉಳಿಸಿದ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಪಘಾತದಲ್ಲಿ ಪ್ರಾಣ ಉಳಿಸಿಕೊಂಡಿರುವ ಮತ್ತೊಂದು ಘಟನೆ ಈಗ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದ ಮತ್ತಷ್ಟು ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಪಲ್ಟಿ ಹೊಡೆದರೂ ಒಳಗಿದ್ದವರ ಜೀವ ಉಳಿಸಿದ ಟಾಟಾ ನೆಕ್ಸಾನ್

ರವಿರಾಜ್ ಸಿಂಗ್ ಎಂಬುವವರು ತಮ್ಮ ಟಾಟಾ ನೆಕ್ಸಾನ್ ಕಾರು ಅಪಘಾತಕ್ಕೀಡಾಗಿದ್ದ ಬಗ್ಗೆ ಟಾಟಾ ನೆಕ್ಸಾನ್ ಮಾಲೀಕರ ಗ್ರೂಪ್ ಮೂಲಕ ಮಾಹಿತಿ ನೀಡಿದ್ದಾರೆ. ಅವರು ಇತ್ತೀಚೆಗೆ ತಮ್ಮ ನೆಕ್ಸಾನ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.

ಪಲ್ಟಿ ಹೊಡೆದರೂ ಒಳಗಿದ್ದವರ ಜೀವ ಉಳಿಸಿದ ಟಾಟಾ ನೆಕ್ಸಾನ್

ದ್ವಿಚಕ್ರ ವಾಹನವೊಂದು ಅವರು ಚಲಿಸುತ್ತಿದ್ದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದಿದೆ. ಎರಡು ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ನೆಕ್ಸಾನ್ ಕಾರು ಪಲ್ಟಿ ಹೊಡೆದು ಹತ್ತಿರದಲ್ಲಿದ್ದ ಕೆರೆಯೊಳಗೆ ಬಿದ್ದಿದೆ.

ಪಲ್ಟಿ ಹೊಡೆದರೂ ಒಳಗಿದ್ದವರ ಜೀವ ಉಳಿಸಿದ ಟಾಟಾ ನೆಕ್ಸಾನ್

ಅದೃಷ್ಟವಶಾತ್ ಕಾರು ಸಂಪೂರ್ಣವಾಗಿ ಮುಳುಗದೆ ಕೆರೆಯ ಮೇಲೆ ನಿಂತಿದೆ. ಕೆರೆಯಲ್ಲಿ ನೀರು ಕಡಿಮೆಯಿದ್ದ ಕಾರಣ ಕಾರು ಮುಳುಗಿಲ್ಲ. ನೆಕ್ಸಾನ್ ಕಾರು ಸುರಕ್ಷಿತ ಫೀಚರ್'ಗಳನ್ನು ಹೊಂದಿರುವುದರಿಂದ ಅದು ಕಾರಿನೊಳಗಿದ್ದವರನ್ನು ರಕ್ಷಿಸಿದೆ.

ಪಲ್ಟಿ ಹೊಡೆದರೂ ಒಳಗಿದ್ದವರ ಜೀವ ಉಳಿಸಿದ ಟಾಟಾ ನೆಕ್ಸಾನ್

ದ್ವಿಚಕ್ರ ವಾಹನ ಹಾಗೂ ನೆಕ್ಸಾನ್ ಕಾರು ವೇಗವಾಗಿ ಚಲಿಸುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಯಾವುದೇ ಗಾಯಗಳಾಗದೇ ಪಾರಾಗಿದ್ದಾರೆ. ಟಾಟಾ ನೆಕ್ಸಾನ್ ಕಾರಿನ ಗುಣಮಟ್ಟ ಹಾಗೂ ಕಾರಿನಲ್ಲಿದ್ದ ಸುರಕ್ಷತಾ ಫೀಚರ್ ತಮ್ಮ ಜೀವ ಉಳಿಸಿದೆ ಎಂದು ಕಾರಿನ ಮಾಲೀಕರು ತಿಳಿಸಿದ್ದಾರೆ.

ಪಲ್ಟಿ ಹೊಡೆದರೂ ಒಳಗಿದ್ದವರ ಜೀವ ಉಳಿಸಿದ ಟಾಟಾ ನೆಕ್ಸಾನ್

ಆದರೆ ದ್ವಿಚಕ್ರ ವಾಹನ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಕಾರಣ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಕ್ಸಾನ್ ಕಾರು ಪಲ್ಟಿ ಹೊಡೆದರೂ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಲ್ಟಿ ಹೊಡೆದರೂ ಒಳಗಿದ್ದವರ ಜೀವ ಉಳಿಸಿದ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್'ನೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ಕಾರ್ ಅನ್ನು ಎಲೆಕ್ಟ್ರಿಕ್ ಮಾದರಿಯಲ್ಲಿಯೂ ಮಾರಾಟ ಮಾಡಲಾಗುತ್ತದೆ. ಇತ್ತೀಚೆಗೆ ಟಾಟಾ ನೆಕ್ಸಾನ್ ಕಾರಿನ ಹೊಸ ಡಾರ್ಕ್ ಎಡಿಷನ್ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ.

ಪಲ್ಟಿ ಹೊಡೆದರೂ ಒಳಗಿದ್ದವರ ಜೀವ ಉಳಿಸಿದ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.7.19 ಲಕ್ಷಗಳಾಗಿದೆ. ಈ ಕಾರಿನ ಗರಿಷ್ಠ ಬೆಲೆ ರೂ.11.29 ಲಕ್ಷಗಳಾಗಿದೆ. ಇನ್ನು ಡಾರ್ಕ್ ಎಡಿಷನ್ ಆವೃತ್ತಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10.39 ಲಕ್ಷಗಳಾದರೆ, ಎಲೆಕ್ಟ್ರಿಕ್ ಆವೃತ್ತಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.13.99 ಲಕ್ಷಗಳಾಗಿದೆ.

Article Published On: Tuesday, July 13, 2021, 12:32 [IST]
English summary
Tata Nexon saves life of passengers after falling into lake. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+