ಗೋಡೆಯನ್ನೇ ಸೀಳಿ ಒಳನುಗ್ಗಿದ್ರೂ ಟಾಟಾ ನೆಕ್ಸಾನ್ ಅದೇ ಖದರ್... ಡ್ಯಾಮೇಜ್ ಆದ ಸುಳಿವೇ ಇಲ್ಲ!

ಟಾಟಾ ನೆಕ್ಸಾನ್ ಕಾರೊಂದು ಗೋಡೆಯೊಂದಕ್ಕೆ ಡಿಕ್ಕಿ ಹೊಡೆದು ಒಳ ನುಗ್ಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಘಟನೆ ಕುರಿತು ಯಾವುದೇ ಮಾಹಿತಿ ಹೊರಬಂದಿಲ್ಲವಾದರೂ ಗುಣಮಟ್ಟದಲ್ಲಿ ಮತ್ತದೇ ಖದರ್ ಅನ್ನು ಟಾಟಾ ಕಾರು ಸಾಭೀತುಪಡಿಸಿದೆ. ಆದ್ರೆ ಇಲ್ಲಿ ತಿಳಿಯಬೇಕಾದ ವಿಷಯ ಬೇರೆಯೇ ಇದೆ.

ನಮಗೆ ತಿಳಿದಿರುವಂತೆ ಕಾರು ನಿಯಂತ್ರಣ ಕಳೆದುಕೊಂಡ ಕಾರಣ ಈ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಕಾರು ಡಿಕ್ಕಿ ಹೊಡೆದಿರುವುದು ಸಾಮಾನ್ಯ ಗೋಡೆಗೆ ಎಂಬುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ನೆಕ್ಸಾನ್ ಗೋಡೆಯ ಮೂಲಕ ಇನ್ನೊಂದು ಬದಿಗೆ ಹೋಗಿ ಸಿಲುಕಿಕೊಂಡಿರುವುದನ್ನು ನೋಡಬಹುದಾಗಿದ್ದು, ನೆಕ್ಸಾನ್‌ಗೆ ಯಾವುದೇ ಹಾನಿ ಆಗಿಲ್ಲ ಎಂಬಂತೆ ಕಾಣುತ್ತಿದೆ.

tata-nexon

ಆದ್ರೆ ಇಂತಹ ಘಟನೆಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಈ ಅಪಘಾತದಲ್ಲಿ ಕಾರಿನ ಗುಣಮಟ್ಟಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಬಹುದು, ಆದ್ರೆ ಸಾಮಾನ್ಯ ಗೋಡೆಗೆ ಡಿಕ್ಕಿ ಹೊಡೆದಿರುವುದರಿಂದಲೇ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಕೂಡ ಗಮನಿಸಬೇಕು. ಅದೇ ಜಾಗದಲ್ಲಿ ಕಾಂಕ್ರೀಟ್ ಗೋಡೆ ಇದ್ದಿದ್ದರೇ ಕಥೆಯೇ ಬೇರ ಇರುತ್ತಿತ್ತು. ಇದು ಕೇವಲ ಕಾಂಪೌಂಡ್ ಗೋಡೆಯಾಗಿದ್ದು ಪ್ರಬಲವಾಗಿಲ್ಲ.

ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಟಾಟಾ ನೆಕ್ಸಾನ್ ಕಾಂಕ್ರೀಟ್ ಪಿಲ್ಲರ್ ಅನ್ನು ಕೆಲವೇ ಅಡಿಗಳಷ್ಟು ದೂರದಲ್ಲಿ ತಪ್ಪಿಸಕೊಂಡಿದೆ. ಒಂದು ವೇಳೆ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದರೆ ಕಂಡಿತ ಹಾನಿಯಾಗುತ್ತಿತ್ತು. ಇಲ್ಲಿ ಟಾಟಾ ಕಾರುಗಳ ಗುಣಮಟ್ಟವನ್ನು ವಿರೋಧಿಸುತ್ತಿಲ್ಲ ವಾಸ್ತವಗಳನ್ನು ಹೇಳುತ್ತಿದ್ದೇವೆ. ನಿಜಕ್ಕೆ ಭಾರತದಲ್ಲಿ ಟಾಟಾ ಕಾರುಗಳೇ ಗುಣಮಟ್ಟದಲ್ಲಿ ಟಾಪ್‌ನಲ್ಲಿವೆ ಎಂಬುದು ಎಲ್ಲರಿಗೂ ಗೊತ್ತು.

tata-nexon

ಆದ್ರೆ ಗೋಡೆಯ ಮೂಲಕ ಹಾದು ಹೋಗುವುದು ಯಾವುದೇ ಕಾರಿನ ಗುಣಮಟ್ಟವನ್ನು ಪ್ರಮಾಣೀಕರಿಸುವುದಿಲ್ಲ ಎಂಬುದನ್ನಷ್ಟೇ ಇಲ್ಲಿ ಹೇಳುತ್ತಿದ್ದೇವೆ. ಇನ್ನು ನೆಕ್ಸಾನ್ ಗುಣಮಟ್ಟದ ಬಗ್ಗೆ ಹೇಳುವುದಾದರೆ ಜಾಗತಿಕ NCAP ಕ್ರ್ಯಾಷ್ ಟೆಸ್ಟ್ ರೇಟಿಂಗ್‌ಗಳಲ್ಲಿ 5 ಸ್ಟಾರ್ ರೇಟಿಂಗ್ ಗಳಿಸಿದೆ. ಇದು ತನ್ನ ವಿಭಾಗದಲ್ಲಿಯೇ ಅತ್ಯಂತ ಸುರಕ್ಷಿತ ಕಾರು ಎಂಬ ಖ್ಯಾತಿಯನ್ನು ಸಹ ಗಳಿಸಿದೆ.

ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಮಾದರಿಯನ್ನು 2016 ರಲ್ಲಿ ಕ್ರ್ಯಾಷ್ ಟೆಸ್ಟ್‌ಗೆ ಕಳುಹಿಸಿದಾಗ ನಾಲ್ಕು-ಸ್ಟಾರ್ ರೇಟಿಂಗ್ ಅನ್ನು ಗಳಿಸಿತ್ತು. ಇದಾದ ಬಳಿಕ ಸಮಯ ತೆಗೆದುಕೊಂಡು ಕೆಲವು ಮಾರ್ಪಾಡುಗಳನ್ನು ಮಾಡಿದ ಬಳಿಕ ಸಂಪೂರ್ಣ 5 ಸ್ಟಾರ್ ರೇಟಿಂಗ್‌ನೊಂದಿಗೆ ಹೊರಹೊಮ್ಮಿತು. ಇದು ಭಾರತದಲ್ಲಿ ಈ ಮಟ್ಟದ ವ್ಯತ್ಯಾಸವನ್ನು ಸಾಧಿಸಿದ ಮೊದಲ ಕಾರು ಎಂದು ಕೂಡ ಜನಪ್ರಿಯವಾಯಿತು.

tata-nexon

ಟಾಟಾ ಮೋಟಾರ್ಸ್ ತನ್ನ ಅಸಾಧಾರಣ ನಿರ್ಮಾಣ ಗುಣಮಟ್ಟಕ್ಕೆ ಉತ್ತಮ ಮನ್ನಣೆಯನ್ನು ಗಳಿಸಿದೆ. ಟಾಟಾ ಮೋಟಾರ್ಸ್‌ನ ಯಾವುದೇ ಕಾರಾಗಿರಲಿ ಕನಿಷ್ಠ 4-ಸ್ಟಾರ್ ರೇಟಿಂಗ್ ಪಡೆದುಕೊಳ್ಳುವುದಂತೂ ಖಚಿತ ಎಂಬುದು ಈಗಿನ ಆಟೋ ವಲಯದ ಮಾತಾಗಿದೆ. ಆದ್ರೆ ಟಾಟಾ ಮಾತ್ರ ತನ್ನ ಭವಿಷ್ಯದ ವಾಹನಗಳಿಗೆ ಸಂಪೂರ್ಣ 5-ಸ್ಟಾರ್ ರೇಟಿಂಗ್‌ ಬರುವಂತೆ ಮಾಡಲು ಶ್ರಮಿಸುತ್ತಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Tuesday, May 30, 2023, 14:47 [IST]
English summary
Tata nexon survived terrible accident without damage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+